Home Cinema ಪುನೀತ್ ಇನ್ಮುಂದೆ ಡೈರೆಕ್ಟರ್..! ಅಪ್ಪು ಕಣ್ಣಲ್ಲಿ ಶಂಕರ್‌ನಾಗ್ ಕಾಣ್ತಿದ್ದಾರಂತೆ ರಾಘಣ್ಣರಿಗೆ..? ರಾಘಣ್ಣ ಹೇಳಿದ್ದೇಕೆ ಹೀಗೆ ಗೊತ್ತಾ..?

ಪುನೀತ್ ಇನ್ಮುಂದೆ ಡೈರೆಕ್ಟರ್..! ಅಪ್ಪು ಕಣ್ಣಲ್ಲಿ ಶಂಕರ್‌ನಾಗ್ ಕಾಣ್ತಿದ್ದಾರಂತೆ ರಾಘಣ್ಣರಿಗೆ..? ರಾಘಣ್ಣ ಹೇಳಿದ್ದೇಕೆ ಹೀಗೆ ಗೊತ್ತಾ..?

1838
0
SHARE

ವಾರೆ.ವಾ. ಪವರ್‌ಸ್ಟಾರ್ ಪುನೀತ್‌ರ ನಿಜವಾದ ಪವರ್ ಏನು ಅಂತ ಈಗ ಎಲ್ಲರ ಕಣ್ಣಮುಂದೆ ಬಂದಿದೆ. ’ನಟಸಾರ್ವಭೌಮ’ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲ್ತೀರೊ ಪುನೀತ್ ಈಗ ತಮ್ಮ ಅಭಿಮಾನಿಗಳಿಗೆ ನಂಬಲಾಗದ ಹ್ಯಾಪಿ ನ್ಯೂಸ್ ಕೊಟ್ಟಿದಾರೆ.

ಸ್ಯಾಂಡಲ್‌ವುಡ್‌ನ ಯುವರತ್ನ ಹೊಸ ಕೆಲಸಕ್ಕೆ ಕೈ ಹಾಕಿದಾರೆ ಕಣ್ರೀ. ಈ ಕೆಲಸದಿಂದ ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕರು ಗಡಗಡ ನಡುಗೋ ಪರಿಸ್ಥಿತಿ ಬಂದಿದೆ. ಅಂತೂ ಇಂತೂ ಅಪ್ಪು ಡೈರೆಕ್ಟರ್ ಕ್ಯಾಪ್ ಹಾಕಿಕೊಳ್ಳೊ ಐಡಿಯಾ ಮಾಡಿದಾರೆ. ತಮ್ಮ ನಟನೆಯಿಂದ ಕನ್ನಡ ಚಿತ್ರರಸಿಕರಿಗೆ ಪೈಸಾವಸೂಲ್ ಎಂಟರ್‌ಟೈನ್‌ಮೆಂಟ್ ಕೊಡ್ತಿದ್ದ ಅಪ್ಪು ಇನ್ಮೇಲೆ ಕೈಯಲ್ಲಿ ಮೈಕ್ ಹಿಡ್ಕೊಂಡು ಆಕ್ಷನ್-ಕಟ್ ಹೇಳ್ತಾರಂತೆ. ಶಿವಣ್ಣಗೆ ಡೈರೆಕ್ಟ್ ಮಾಡೋಕೆ ನನಗೆ ಇಷ್ಟ ಎಂದು ಅಪ್ಪು ತಾವು ನಿರ್ದೆಶಕರಾಗುವ ಗ್ರೀನ್‌ಸಿಗ್ನಲ್ ಕೊಟ್ಟಿದಾರೆ.

ಸೋ, ಅಪ್ಪು ಈಸ್ ಬಿಕಮಿಂಗ್ ಡೈರೆಕ್ಟರ್ ನವ್.ಇಷ್ಟೆಲ್ಲ ಸಂಭ್ರಮಗಳಿಗೆ ಸಾಕ್ಷಿಯಾಗಿದ್ದು ನಿನ್ನೆ ನಡೆದ ಕವಲುದಾರಿ ಆಡಿಯೋ ಬಿಡುಗಡೆ ಸಮಾರಂಭ. ಪುನೀತ್ ಕೆಲವು ಸೃಜನಶೀಲ ಕಥೆಗಳಿಗೆ ಸಿನಿಮಾರೂಪ ಕೊಡುವ ಒಂದು ಒಳ್ಳೆ ಉದ್ದೇಶದಿಂದ ತಮ್ಮ ಪತ್ನಿ ಅಶ್ವಿನಿ ಜೊತೆಗೂಡಿ ಪಿ.ಆರ್.ಕೆ ನಿರ್ಮಾಣ ಸಂಸ್ಥೆ ತೆಗೆದಿದ್ದಾರೆ. ಇದರ ಮೊದಲ ಕೂಸು ಎನ್ನುವಂತೆ ಹೇಮಂತ್ ರಾವ್ ನಿರ್ದೇಶನದಲ್ಲಿ ಕವಲುದಾರಿ ಹುಟ್ಟಿಕೊಂಡಿದೆ. ಚಿತ್ರದ ಪೋಸ್ಟರ್‌ಗಳಲ್ಲೇ ಗಮನ ಸೆಳೆದಿದ್ದ ಕವಲುದಾರಿ ’ನಿಗೂಢ ನಿಗೂಢ’ ಎನ್ನುವ ಸ್ಪೆಷಲ್ ಸಾಂಗ್‌ನಿಂದ ಸೌಂಡ್ ಮಾಡ್ತಿದೆ.

ಸ್ಯಾಂಡಲ್‌ವುಡ್‌ನ ಯಂಗ್ ಮಾಸ್ಟರ್‌ಪೀಸ್ ಎನಿಸಿಕೊಂಡಿರುವ ಸಂಜೀತ್ ಹೆಗಡೆ ವಾಯ್ಸ್‌ನಲ್ಲಿ ನಿಗೂಢ ಸಾಂಗ್ ಮೂಡಿಬಂದಿದ್ದು ಚರಣ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ ಕಥೆಯ ಎಳೆಯನ್ನೇ ಓಪನ್ ಮಾಡ್ತೀರೊ ಈ ನಿಗೂಢ ಹಾಡಿನಲ್ಲಿ ಅಂತಹುದ್ದೇನಿದೆ ಅಂತ ನಿವೋಮ್ಮೆ ಕೇಳಲೆಬೇಕು.’ಕವಲುದಾರಿ’ ಗಟ್ಟಿ ಸಬ್ಜೆಕ್ಟ್ ಇಟ್ಕೊಂಡು ಕರ್ಮಾಶಿಯಲ್ ಸೂತ್ರಗಳನ್ನ ಪ್ರೆಸೆಂಟ್ ಮಾಡ್ತೀರೊ ಸಿನಿಮಾವಂತೆ. ಈ ಸಿನಿಮಾದ ಸ್ಟಾರ್ ಕಾಸ್ಟ್ ನೋಡ್ತಿದ್ರೆ ಇದು ಇತ್ತೀಚಿನ ವಿಭಿನ್ನ ಚಿತ್ರಗಳ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಿಕೊಳ್ಳೊದ್ರಲ್ಲಿ ಅನುಮಾನ ಬೇಡ.

ಕವಲುದಾರಿಯಲ್ಲಿ ಕನ್ನಡ ಚಿತ್ರರಂಗದ ಆಕ್ಟಿಂಗ್ ಬುಕ್ ಅನಂತ್ ನಾಗ್ ಆಕ್ಟ್ ಮಾಡಿರೋದೆ ಚಿತ್ರದ ಮೈನ್ ಅಟ್ರಾಕ್ಷನ್. ಅನಂತ್‌ನಾಗ್ ತಮ್ಮ ಪಾತ್ರದ ಬಗ್ಗೆ ಮಾತನಾಡುವುದರ ಜೊತೆಗೆ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದು ವಿಶೇಷವಾಗಿತ್ತು.ಇನ್ನು ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದ ರಾಘವೇಂದ್ರ ರಾಜ್‌ಕುಮಾರ್ ಅಪ್ಪುಗೆ ಒಳ್ಳೆ ಸಾಥ್ ನೀಡಿದ್ರು. ’ಕವಲುದಾರಿ’ ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕನಾಗಿರುವ ಅಪ್ಪುಗೆ ತಮ್ಮದೇ ಸ್ಟೈಲ್‌ನಲ್ಲಿ ಕಂಗ್ರಾಟ್ಸ್ ಹೇಳಿದ್ರು. ಪುನೀತ್ ಸಿನಿಮಾ ಬಗ್ಗೆ ಫ್ಯಾಶನ್ ಇರೋ ವ್ಯಕ್ತಿ. ಟೆಕ್ನಿಕಲಿ ಚಿತ್ರಗಳ ನಿರ್ಮಾಣದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ.

ನಾನು ಅಪ್ಪು ಮುಖದಲ್ಲಿ ’ಶಂಕರ್‌ನಾಗ್’ ಹೊಳಪನ್ನ ನೋಡ್ತೀನಿ. ಪುನೀತ್ ಸಿನಿಮಾ ಡೆಡಿಕೆಶನ್ ನಿಜಕ್ಕೂ ಮೆಚ್ಚುವಂತಾದ್ದು ಎಂದು ಹೊಗಳಿಕೆಯ ಸರಮಾಲೆಯನ್ನೇ ಪುನೀತ್ ಕೊರಳಿಗೆ ಹಾಕಿಬಿಟ್ರು ರಾಘಣ್ಣ.ಇನ್ನು ಕವಲುದಾರಿಯ ಮೂಲಕ ನಾಯಕಿಯರಾಗಿ ಚಿತ್ರರಂಗಕ್ಕೆ ಪರಿಚಿತರಾಗ್ತೀರೋ ರೋಶನಿ ಪ್ರಕಾಶ್ ಹಾಗೂ ಸಮನ್ವಿತಾ ಶೆಟ್ಟಿ ಸಕತ್ ಜೋಶ್‌ನಲ್ಲಿದ್ರು. ಮೊದಲ ಸಿನಿಮಾವಾದ್ರೂ ತಮ್ಮತಮ್ಮ ಕ್ಯಾರೆಕ್ಟರ್‌ಗಳಿಗೋಸ್ಕರ ಸಿಕ್ಕಾಪಟ್ಟೆ ವರ್ಕ್ ಮಾಡಿದ್ದಾರಂತೆ.

ಕವಲುದಾರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರುವ ಭರವೆಸೆ ಈ ಇಬ್ಬರೂ ನಾಯಕಿಯಾರದ್ದು. ಆಡಿಶನ್ ಮೂಲಕ ಆಯ್ಕೆಯಾದ ಈ ನಾಯಕಿಯರು ಕವಲುದಾರಿಯ ಅನುಭವಗಳನ್ನ ತೆರೆದಿಟ್ಟಿದ್ದು ಹೀಗೆ.ಇನ್ನು ಕವಲುದಾರಿಯ ನಾಯಕನಟ ರಿಷಿ ಫುಲ್ ಬಿಂದಸಾಗಿ ತಮ್ಮ ಎಕ್ಸ್‌ಪಿರಿಯನ್ಸ್ ಹಂಚಿಕೊಂಡ್ರು. ಇದೇ ಮೊದಲಬಾರಿಗೆ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಿಷಿ ಸಿನಿಮಾ ಬಗ್ಗೆ ತುಂಬಾ ವಿಶ್ವಾಸ ಇಟ್ಕೊಂಡಿದಾರೆ. ’ಸಿನಿಮಾ ಡಿಫ್‌ರೆಂಟ್ ಅಲ್ಲ, ಆದರೆ ಕಥೆಯೇ ಸಿನಿಮಾದ ಆಧಾರಸ್ತಂಭ.

ಕವಲುದಾರಿ ಹಲವು ಸರ್‌ಪ್ರೈಸ್‌ಗಳ ಜೊತೆಗೆ ಗಾಂಧಿನಗರಕ್ಕೆ ಎಂಟ್ರಿ ಕೊಡಲಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್‌ರ ಪ್ರೊಡಕ್ಷನ್‌ನಲ್ಲಿ ಗುರುತಿಸಿಕೊಳ್ಳೊಕೆ ತುಂಬಾನೇ ಖುಷಿಯಿದೆ’ ಎಂದ್ರು ಹೀರೊ ರಿಷಿ.ಕವಲುದಾರಿ ನಿರ್ದೆಶಕ ಹೇಮಂತ್ ರಾವ್ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಲ್ಲಿ ಒಬ್ಬರು ಅಂತ ಹೇಳಬಹುದು. ಯಾಕಂದ್ರೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮಾಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದು ಇದೇ ಹೇಮಂತ್ ರಾವ್. ಸಿನಿಮಾ ಗೆದ್ದೇ ಗೆಲುತ್ತೆ ಎನ್ನುವ ಆತ್ಮವಿಶ್ವಾಸದಲ್ಲಿರುವ ಹೇಮಂತ್ ಪ್ರತಿವಾರಕ್ಕೊಂದು ಸಾಂಗ್ ರಿಲೀಸ್ ಮಾಡುವ ಪ್ಲಾನ್ ಹಾಕಿಕೊಂಡಿದಾರೆ.

ಇನ್ನು ಕವಲುದಾರಿಯ ಸೃಷ್ಟಿಗೆ ಕಾರಣರಾದ ಎಲ್ಲರಿಗೂ ಥ್ಯಾಂಕ್ಸ್ ಹೇಳೊಕೆ ಹೇಮಂತ್ ಮರಿಲಿಲ್ಲ ಬಿಡಿ.ಒಟ್ಟಾರೆಯಾಗಿ ಒಂದು ಒಳ್ಳೆ ಸ್ಟೋರಿಲೈನ್ ಹೊಂದಿರೋ ಸಿನಿಮಾ ಎಲ್ಲರಿಗೂ ಸೂಕ್ತವಾದ ರೀತಿಯಲ್ಲಿ ರೀಚ್ ಆಗಬೇಕು ಎನ್ನುವ ಪುನೀತ್ ಕಳಕಳಿಗೆ ಚಿತ್ರತಂಡ ಹಾಟ್ಸ್‌ಆಫ್ ಹೇಳಿದೆ. ಸ್ಯಾಂಡಲ್‌ವುಡ್ ಹಿರಿಮೆಯನ್ನ ಹೆಚ್ಚಿಸುವ ಸಿನಿಮಾಗಳು ಬೆಳಿಯಬೇಕು ಎನ್ನುವ ಕಾರಣದಿಂದಲೇ ಪಿ.ಆರ್.ಕೆ ನಿರ್ಮಾಣ ಸಂಸ್ಥೆ ಹುಟ್ಟುಕೊಂಡಿರೋದು. ಸೆನ್ಸಾರ್‌ನಿಂದ ಯೂ ಎ ಸರ್ಟಿಫಿಕೆಟ್ ಪಡೆದುಕೊಂಡಿರೋ ಕವಲುದಾರಿ ಸದ್ಯದಲ್ಲೇ ತೆರೆಮೇಲೆ ಬಂದು ಎಲ್ಲರನ್ನ ಮನರಂಜಿಸಲಿದೆ.

ಪುನೀತ್ ಸಿನಿಮಾ ನಿರ್ಮಾಣದ ಜೊತೆಗೆ ನಿರ್ದೆಶಕನಾಗೋಕು ಕೈ ಹಾಕಿರೋದು ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿದೆ. ಅಂತೂ ಸ್ಯಾಂಡಲ್‌ವುಡ್‌ನಲ್ಲಿ ಕವಲುದಾರಿಯ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿರೋದು ಚಿತ್ರದ ಹೈಪ್ ದಿನೇದಿನೇ ರೈಸ್ ಆಗ್ತಿದೆ. ಅತ್ತ ಕರ್ಮಾಶಿಯಲ್ಲೂ ಅಲ್ಲದ, ಇತ್ತ ಕಲಾತ್ಮಕ ಚಿತ್ರವೂ ಅಲ್ಲದ, ಈ ಪ್ರಯೋಗತ್ಮಕ ಸಿನಿಮಾ ಕವಲುದಾರಿ ಪ್ರೇಕ್ಷಕಪ್ರಭುವಿನ ಮನಸ್ಸನ್ನ ಗೆದ್ದು ಯಶಸ್ವಿಯಾಗುತ್ತಾ ಎನ್ನುವ ನಿರೀಕ್ಷೆ ಮಾತ್ರ ಎಲ್ಲರದ್ದು.

LEAVE A REPLY

Please enter your comment!
Please enter your name here