Home Cinema ಪುನೀತ್ ರಾಜ್‌ಕುಮಾರ್ @43 …ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಬಂದದ್ದ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ..??!

ಪುನೀತ್ ರಾಜ್‌ಕುಮಾರ್ @43 …ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಬಂದದ್ದ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ..??!

176
0
SHARE

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕನ್ನಡಿಗರ ಪ್ರಿತಿಯ ಅಪ್ಪು, ಸ್ಯಾಂಡಲ್‌ವುಡ್‌ನ ರಾಜರತ್ನ. ಅಭಿಮಾನಿಗಳು ಆರಾದಿಸೋ.. ರಾರಾಜಿಸೊ ರಾಜಕುಮಾರಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. 43ನೇ ವಸಂತಕ್ಕೆ ಕಾಲಿಟ್ಟ ಅಪ್ಪು ಸಾವಿರಾರು ಅಭಿಮಾನಿಗಳ ನಡುವೆ ಅಪ್ಪು ಕೇಕ್ ಕತ್ತರಿಸಿ ಹಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ರು..

ರಾತ್ರಿಯಿಂದಲೆ ಪುನೀತ್ ಮನೆಮುಂದೆ ಜಮಾಯಿಸಿರೊ ಅಭಿಮಾನಿಗಳು ಅಪ್ಪುನ ನೋಡಿ ಶುಭಹಾರೈಸಿ ಸಂತಸ ಪಟ್ಟಿದ್ದಾರೆ.. ಸದಾಶಿವ ನಗರದಲ್ಲಿರೊ ಪುನೀತ್ ರಾಜ್ ಕುಮಾರ್ ಮನೆಮುಂದೆ ಅಭಿಮಾನಿಗಳು ರಾತ್ರಿಇಂದಲೆ ಜಮಾಯಿಸಿದ್ದಾರೆ.. ಮನೆಮುಂದೆ ಕಟೌಟ್,ಬ್ಯಾನರ್‌ಗಳು ರಾರಾಜಿಸುತ್ತಿವೆ.. 24ಅಡಿ ಎತ್ತರದ ಅಪ್ಪು ಕಟೌಟ್ ಅಭಿಮಾನಿಗಳ ಕಣ್ಣುಕ್ಕುವಂತಿದೆ.. ಇನ್ನು ರಾಜ್ಯದ ಮೂಲೆ ಮೂಲೆ ಯಿಂದ ಬಂದಿರೊ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಹಾರೈಸಿ ಸಂತಸ ಪಟ್ಟಿದ್ದಾರೆ….

ಇನ್ನು,ಹುಟ್ಟುಹಬ್ಬದ ಪ್ರಯುಕ್ತವಾಗಿ ಪುನೀತ್ ಅಭಿನಯದ ಹೊಸ ಸಿನಿಮಾ ನಟಸಾರ್ವಭೌಮ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ..ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟಸಾರ್ವಭೌಮ ಚಿತ್ರದ ಪೋಸ್ಟರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ..ಇದ್ರ ಜೊತೆಗೆ ರಾಜಕುಮಾರ ಚಿತ್ರತಂಡ ಸಹ ಪೊಸ್ಟರ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ..

LEAVE A REPLY

Please enter your comment!
Please enter your name here