Home Crime ಪುರುಷರಿಗೂ ಸೇಫ್ ಇಲ್ವಾ ಸಿಲಿಕಾನ್ ಸಿಟಿ..! ರಾತ್ರಿಯಾಯ್ತು ಅಂದ್ರೆ ಇಲ್ಲಿ ಮಹಿಳೆಯರದೇ ದರ್ಬಾರ್..!

ಪುರುಷರಿಗೂ ಸೇಫ್ ಇಲ್ವಾ ಸಿಲಿಕಾನ್ ಸಿಟಿ..! ರಾತ್ರಿಯಾಯ್ತು ಅಂದ್ರೆ ಇಲ್ಲಿ ಮಹಿಳೆಯರದೇ ದರ್ಬಾರ್..!

2326
0
SHARE

ಸಿಲಿಕಾನ್ ಸಿಟಿ, ಸುರಕ್ಷಿತ ನಗರ ಅನ್ನಿಸಿಕೊಳ್ಳೋ ಬೆಂಗಳೂರು ಆಗಾಗ ನೆಡಿತಿರೋ ಕೆಲ ದುರ್ಘಟನೆಗಳಿಂದ ಮಹಿಳೆಯರಿಗೆ ಎಷ್ಟು ಸೇಫ್ ಅನಿಸಿದೆ…

ಆದ್ರೆ ಇತ್ತೀಚೆಗೆ ಮಹಿಳೆಯರು ಮಾತ್ರವಲ್ಲ, ಪುರುಷರಿಗೂ ಕೂಡಾ ಸೇಫ್ ಅಲ್ಲಾ ಅಂತಾ ಸಾಬೀತಾಗಿದೆ.ಹೀಗೊಂದು ಅನುಮಾನ ಕಾಡೋಕೆ ಕಾರಣ, ಶುಕ್ರವಾರ ಮಧ್ಯ ರಾತ್ರಿ ನಗರದ ಹೃದಯಭಾಗ ಮೆಜೆಸ್ಟಿಕ್ ನಲ್ಲಿ ನೆಡೆದಿರೋ ಘಟನೆ.

ಮೆಜೆಸ್ಟಿಕ್ ಹೇಳಿ ಕೇಳಿ ದಿನದ ಇಪ್ಪತ್ನಾಲ್ಕು ಗಂಟೆಯೂ ಅ್ಯಕ್ಟೀವ್ ಇರೋ ಜಾಗ, ಬೇರೆ ಬೇರೆ ಊರಿನಿಂದ ಬರುವವರು, ಹೋಗುವವರು ಲಕ್ಷಾಂತರ ಜನ್ರು ಇಲ್ಲಿ ಸಂಚರಿಸ್ತಾರೆ. ಅದೇ ರೀತಿ ಮೊನ್ನೆ ರಾತ್ರಿ 12 ಗಂಟೆ ಸುಮಾರಿಗೆ ಮಣಿಕಂಠ ಎಂಬ ಯುವಕ ತನ್ನ ಊರಿಗೆ ಹೋಗುವ ಸಲುವಾಗಿ ಕೆಎಸ್ಆರ್ಟಿಸಿ ಟರ್ಮಿನಲ್ 2 ಬಳಿ ಕಾಯುತ್ತಿದ್ದಾಗ ಎದುರಾದ ಮಹಿಳೆಯರಿಬ್ರೂ ಆತನೊಂದಿಗೆ ಅಸಭ್ಯವಾಗಿ ವರ್ತಿಸಿ ಕೈಲಿದ್ದದ್ದನ್ನೆಲ್ಲಾ ದೋಚಿ ಪರಾರಿಯಾಗಿದ್ದಾರೆ.

ಒಬ್ಬನೇ ಬಸ್ಸಿಗಾಗಿ ಕಾಯ್ತಿದ್ದ ಮಣಿಕಂಠನ ಬಳಿ ಬಂದ ಇಬ್ಬರು ಮಧ್ಯ ವಯಸ್ಕ ಮಹಿಳೆಯರು ಮೊದಲು ಆತನನ್ನ ವಿಚಿತ್ರವಾಗಿ ನೋಡಿದ್ದಾರೆ. ಬಳಿಕ ಹತ್ತಿರ ಬಂದು 500ರೂ ಕೈಗಿಟ್ಟು ತಮ್ಮೊಡನೆ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ. ಇದರಿಂದ ಭಯಗೊಂಡ ಮಣಿಕಂಠ ಅಲ್ಲಿಂದ ಹೊರಡಲು ಮುಂದಾಗಿದ್ದಾನೆ. ಆದ್ರೆ ಅಷ್ಟೊತ್ತಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಿದ್ರಿಂದ ಇಬ್ಬರೂ ಮಹಿಳೆಯರು ಆತನನ್ನ ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಹಣ ಕೊಡು ಇಲ್ಲವಾದ್ರೆ ನೀನು ನಮ್ಮನ್ನ ಅತ್ಯಾಚಾರ ಮಾಡ್ತಿದ್ದೀಯಾ ಅಂತಾ ಕಿರುಚಿ ಎಲ್ರನ್ನ ಕರೀತೀವಿ ಅಂತಾ ಹೆದರಿಸಿದ್ದಾರೆ.

ಇತ್ತ ಮರ್ಯಾದೆಗೆ ಅಂಜಿದ ಮಣಿಕಂಠ ಹಣ ಹೋದ್ರೂ ಪರವಾಗಿಲ್ಲ ಮಾನ ಉಳಿದ್ರೆ ಸಾಕಪ್ಪಾ ಅಂತಾ ಕೈಲಿದ್ದ ಹಣವನ್ನೆಲ್ಲಾ ಕೊಟ್ಟು ಸೀದಾ ಬಂದು ಉಪ್ಪಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾನೆ.ಸದ್ಯ ಇಬ್ಬರು ಅಪರಿಚಿತ ಮಹಿಳೆಯರ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರೋ ಉಪ್ಪಾರಪೇಟೆ ಪೊಲೀಸರು ತನಿಖೆ ನೆಡೆಸ್ತಿದ್ದಾರೆ. ಅದೇನೆ ಇರಲಿ ಇಷ್ಟು ದಿನ ಮಹಿಳೆಯರ ಮೇಲೆ ನೆಡೀತಿದ್ದ ದೌರ್ಜನ್ಯ ಪ್ರಕರಣಗಳು ಈಗ ಪುರುಷರ ಮೇಲೂ ಶುರುವಾಗಿರೋದು ಆತಂಕಕಾರಿಯೇ ಸರಿ.

LEAVE A REPLY

Please enter your comment!
Please enter your name here