Home Cinema ಪೈಲ್ವಾನ್ ಅಖಾಡಕ್ಕೆ ಕಿಂಗ್ ಖಾನ್ ಎಂಟ್ರಿ.. ಹಿಪ್ ಹಿಪ್ ಹುರ್ರೇ..! ಸುದೀಪ – ಶಾರುಖ್ ಜೊತೆಯಾಗಿದ್ದು...

ಪೈಲ್ವಾನ್ ಅಖಾಡಕ್ಕೆ ಕಿಂಗ್ ಖಾನ್ ಎಂಟ್ರಿ.. ಹಿಪ್ ಹಿಪ್ ಹುರ್ರೇ..! ಸುದೀಪ – ಶಾರುಖ್ ಜೊತೆಯಾಗಿದ್ದು ನೂರಕ್ಕೆ ನೂರು ಖರೇ..!

1929
0
SHARE

ಈ ಸುದ್ಧಿ ಮಾತ್ರ ಖರೇ ಐತ್ರಿ. ಯಾವ ಕನ್‌ಫ್ಯೂಶನ್ನೂ ಬೇಡವೇ ಬೇಡ. ಅಭಿನಯ ಚಕ್ರವರ್ತಿಗೆ ಕಿಂಗ್ ಖಾನ್ ಸಾಥ್ ಸಿಕ್ಕಿರುವ ವಿಷಯ ಇಡೀ ಸ್ಯಾಂಡಲ್‌ವುಡ್‌ನ್ನೇ ಆಶ್ಚರ್ಯದ ಕಡಲಿನಲ್ಲಿ ತೇಲೊ ಹಾಗೇ ಮಾಡಿಬಿಟ್ಟಿದೆ. ಶಾರುಕ್ ಹಾಗೂ ಸುದೀಪ್ ಹಳೇ ಫ್ರೆಂಡ್ಸ್. ಇಬ್ಬರೂ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡ್ತಾರಾ ಎನ್ನುವ ನಿರೀಕ್ಷೆಯಂತೂ ಸದ್ಯಕ್ಕೆ ಬೇಡ. ಶಾರುಕ್ ಕಿಚ್ಚನ ಸಿನಿಮಾದಲ್ಲಿ ಭಾಗಿಯಾಗ್ತಿರೋದು ಸಿನಿಮಾದ ಒಂದು ಪ್ರಮುಖ ಭಾಗವಾಗಿ. ಅಂದ್ರೆ ಸುದೀಪ್ ಅಭಿನಯದ ಹೈವೋಲ್ಟೆಜ್ ಸಿನಿಮಾ ಪೈಲ್ವಾನ್‌ಗೆ ಹೊಸ ಕಿಚ್ಚು ಹಚ್ಚಲು ಶಾರುಕ್ ರೆಡಿಯಾಗಿದಾರೆ.

’ಪೈಲ್ವಾನ್’ ಸುದೀಪ್ ಸಿನಿಜೀವನದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಚಿತ್ರ ಅಂತ ಕಣ್ಮುಚ್ಚಿಕೊಂಡು ಹೇಳಬಹುದು. ದಿನೇದಿನೇ ತನ್ನ ಪ್ರೆಸೆಂಟೆಶನ್ ಹಾಗೂ ಮೇಕಿಂಗ್‌ನಿಂದಲೇ ಗಾಂಧಿನಗರದಲ್ಲಿ ನ್ಯೂಸ್ ಆಗ್ತೀರೋ ಪೈಲ್ವಾನನಿಗೆ ಶಾರುಕ್ ಮಾಲೀಕ್ವತದ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕೆಲಸ ಮಾಡಲಿದೆ. ಈ ಸಂತೋಷದ ವಿಷಯವನ್ನ ಈಗ ರಿವೀಲ್ ಮಾಡಿರೋದು ಖುದ್ದು ನಿರ್ದೇಶಕ ಕೃಷ್ಣ. ಪೈಲ್ವಾನ್ ಚಿತ್ರದ ಗ್ರಾಫಿಕ್ ವರ್ಕ್ ಹಾಗೂ ವಿಶುಯಲ್ ಎಫೆಕ್ಟ್ ಕೆಲಸಗಳಿಗೆ ’ರೆಡ್ ಚಿಲ್ಲಿಸ್’ ಸಂಸ್ಥೆ ಕೈಜೋಡಿಸ್ತಿರೋದು ಸಿನಿಮಾದ ಶ್ರೀಮಂತಿಕೆ ಮುಗಿಲು ಮುಟ್ಟಲಿದೆ. ಯಾಕಂದ್ರೆ ಬಾಲಿವುಡ್‌ನಲ್ಲಿ ರೆಡ್ ಚಿಲ್ಲಿಸ್ ಸಂಸ್ಥೆ ಸಾಧನೆಯೇ ಅಂತದ್ದು, ದೊಡ್ಡದೊಡ್ಡ ಹೈ ಬಜೆಟ್ ಚಿತ್ರಗಳಿಗೆ ಮಾತ್ರ ಕೆಲಸ ಮಾಡೋ ರೆಡ್ ಚಿಲ್ಲಿಸ್ ಈಗ ಪೈಲ್ವಾನನ್ನ ತಬ್ಬಿಕೊಂಡಿರೋದು ಸಿನಿಮಾದ ಹೈಪ್ ಹೆಚ್ಚಿಸಿದೆ.’ಪೈಲ್ವಾನ್’ ಸಿನಿಮಾದ ಬರೋಬ್ಬರಿ ಒಂದು ಘಂಟೆ ಸಮಯದ ಬಾಕ್ಸಿಂಗ್ ಹಾಗೂ ಅಡಿಯನ್ಸ್ ಸೀನ್‌ಗಳಿಗೆ ರೆಡ್ ಚಿಲ್ಲಿಸ್ ವಿ.ಎಫ್.ಎಕ್ಸ್ ಒದಗಿಸಲಿದೆ. ಈ ಮೂಲಕ ಪೈಲ್ವಾನ್‌ಗೆ ರಾಯಲ್ ಟಚ್ ಸಿಕ್ಕಿದೆ. ರೆಡ್ ಚಿಲ್ಲಿಸ್ ಇಂತಹ ಸೀಕ್ವೆನ್ಸ್‌ಗಳಿಗೆ ಎಫೆಕ್ಟ್ ಕೋಡೊದ್ರಲ್ಲಿ ಎತ್ತಿದ ಕೈ. ಸಿನಿಮಾದ ಕ್ವಾಲಿಟಿ ಮೇಕಿಂಗ್‌ಗೆ ಹೆಸರುವಾಸಿಯಾದ ರೆಡ್ ಚಿಲ್ಲಿಸ್ ಪೈಲ್ವಾನ್ ಜೊತೆಗೂಡಿರುವುದು ಕಿಚ್ಚನ ಅಭಿಮಾನಿಗಳಿಗಂತೂ ಬಾಯಿಗೆ ಸಕ್ಕರೆ ಹಾಕಿದಂತಾಗಿದೆ.’ರೆಡ್ ಚಿಲ್ಲಿಸ್’ ತುಂಬಾ ದುಬಾರಿಯಾದ್ರೂ ಕೂಡ ಸಿನಿಮಾದ ಗುಣಮಟ್ಟವನ್ನ ಎತ್ತಿಹಿಡಿಯುತ್ತೆ. ಇಡೀ ವಿಶ್ವದಲ್ಲೇ ಈ ಸಂಸ್ಥೆಗೆ ಒಳ್ಳೆ ಹೆಸರಿದೆ. ಚಿತ್ರದ ಪ್ರತಿಯೊಂದು ನಿಮಿಷದ ವಿ.ಎಫ್.ಎಕ್ಸ್‌ಗೂ ೨೦ ಲಕ್ಷ ರೂಪಾಯಿ ಖರ್ಚಾಗಲಿದೆ. ’ಆದರೆ ನಮಗೆ ಇದರ ಚಿಂತೆಯಿಲ್ಲ. ಪೈಲ್ವಾನ್ ಪ್ರಾಡೆಕ್ಟ್ ಚೆನ್ನಾಗಿ ಬರುತ್ತೆ ಎನ್ನುವ ನಂಬಿಕೆಯ ಜೊತೆಗೆ ಈ ನಿರ್ಧಾರವನ್ನ ತೆಗೆದುಕೊಂಡಿದ್ದೇವೆ’ ಅಂತಾರೆ ನಿರ್ದೇಶಕ ಕೃಷ್ಣ.

ಅಲ್ಲದೇ, ಚಿತ್ರದ ಕ್ಲೈಮಾರ್ಕ್ಸ್ ಸೀನ್‌ಗಳು ರಿಂಗ್ ಸೆಟ್‌ನಲ್ಲಿ ನಡೆಯುವುದರಿಂದ ಸ್ಟೇಡಿಯಂ ಹಾಗೂ ಕ್ರೌಡ್ ದೃಶ್ಯಗಳನ್ನ ರಿಚ್ ಆಗಿ ತೋರಿಸುವ ಪ್ಲಾನ್ ಪೈಲ್ವಾನ್ ಚಿತ್ರತಂಡದ್ದು.ಹಾಗಾಗಿಯೇ ’ರೆಡ್ ಚಿಲ್ಲಿಸ್’ ಈ ಸ್ಪೆಷಲ್ ಸೀನ್‌ಗಳಿಗೆ ಜೀವ ತುಂಬಲಿದೆ. ಸದ್ಯಕ್ಕೆ ಬೇರೆ ಭಾಷೆಗಳಲ್ಲಿ ಪೈಲ್ವಾನ್ ಚಿತ್ರದ ಡಬ್ಬಿಂಗ್ ಕೆಲಸಗಳು ಬಹಳ ಬಿರುಸಿನಿಂದ ಸಾಗ್ತಿದೆ. ಎಡಿಟಿಂಗ್ ಕೂಡ ಪ್ರಗತಿಯಲ್ಲಿದೆಯಂತೆ. ಎಲ್ಲವೂ ಅಂದುಕೊಂಡತೇ ಅದ್ರೆ ಈ ವರಮಹಾಲಕ್ಷ್ಮೀಗೆ ಕಿಚ್ಚನ ಅಭಿಮಾನಿಗಳಿಗೆ ಹಬ್ಬದ ಗಿಫ್ಟ್ ಸಿಗೋದಂತೂ ಗ್ಯಾರಂಟಿ. ಬಿಗ್‌ಬಜೆಟ್ ಸಿನಿಮಾ ಅನ್ನೋ ಹಣೆಪಟ್ಟಿಯನ್ನ ಪಕ್ಕಕ್ಕಿಟ್ಟು ಕ್ವಾಲಿಟಿ ಬೇಸಡ್ ಸಿನಿಮಾ ಎನಿಸಿಕೊಳ್ಳೊಕೆ ಪೈಲ್ವಾನ್ ಪಣ ತೊಟ್ಟೀರೊ ಹಾಗಿದೆ. ಚಿತ್ರದ ಆಡಿಯೋ ಲಾಂಚ್ ದಿನಾಂಕವನ್ನ ಸದ್ಯದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ.ಅಂತೂ ಈ ವರ್ಷದ ಸೌಂಡ್ ಬ್ರೇಕಿಂಗ್ ಸಿನಿಮಾ ಎನಿಸಿಕೊಂಡಿರೋ ಪೈಲ್ವಾನ್ ಬಿಡುಗಡೆಗೆ ದಿನಗಣನೆ ಶುರುವಾಗಿಬಿಟ್ಟಿದೆ. ಈಗ ರೆಡ್ ಚಿಲ್ಲಿಸ್ ಸಂಸ್ಥೆ ಬೇರೆ ಪೈಲ್ವಾನ್ ಜೊತೆ ಸೇರಿಕೊಂಡಿರೋದ್ರಿಂದ ಸಿನಿಮಾದ ಬಜೆಟ್ ಯಾವ ಹಂತಕ್ಕೆ ಹೋಗಿಮುಟ್ಟುತ್ತೆ ಎನ್ನುವ ಲೆಕ್ಕಚಾರದಲ್ಲಿ ಗಾಂಧಿನಗರ ಮುಳುಗಿಹೋಗಿದೆ. ಒಟ್ಟಿನಲ್ಲಿ ಇಷ್ಟುವರ್ಷಗಳ ಸಿನಿಮಾ ಇತಿಹಾಸದಲ್ಲಿ ಅತೀಹೆಚ್ಚು ಖರ್ಚು ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ’ಪೈಲ್ವಾನ್’ ಸೇರ್ಪಡೆಯಾದ್ರೂ ಆಶ್ಚರ್ಯ ಬೇಡ.

LEAVE A REPLY

Please enter your comment!
Please enter your name here