Home Cinema ಪೈಲ್ವಾನ್ ಪಂಚ್‌ಗೆ ಕೆ.ಜಿ.ಎಫ್ ಕಿರೀಟ ನೆಲಕ್ಕುರುಳಿತಾ..ಇಲ್ಲವಾ..? ಪೈಲ್ವಾನ್ ಮುಚ್ಚಿಟ್ಟಿದ್ದ ಆ ಗುಟ್ಟು ಕೊನೆಗೂ ಆಯ್ತಲ್ಲ ರಟ್ಟು..?

ಪೈಲ್ವಾನ್ ಪಂಚ್‌ಗೆ ಕೆ.ಜಿ.ಎಫ್ ಕಿರೀಟ ನೆಲಕ್ಕುರುಳಿತಾ..ಇಲ್ಲವಾ..? ಪೈಲ್ವಾನ್ ಮುಚ್ಚಿಟ್ಟಿದ್ದ ಆ ಗುಟ್ಟು ಕೊನೆಗೂ ಆಯ್ತಲ್ಲ ರಟ್ಟು..?

2441
0
SHARE

ಪೈಲ್ವಾನ್ ತನ್ನ ಆರ್ಭಟವನ್ನ ತೋರಿಸುತ್ತಲೇ ಕೆಲವು ಗಲ್ಲಾಪೆಟ್ಟಿಗೆಯ ರೆಕಾರ್ಡ್‌ಗಳನ್ನ ಮುರಿಯೋಕೆ ಸಜ್ಜಾಗಿದ್ದನಾ ಎನ್ನುವ ಗುಸುಗುಸು ಗಾಂಧಿನಗರದಲ್ಲಿ ಹರಿದಾಡ್ತಿದೆ. ವಿಶ್ವದಾದ್ಯಂತ ೪೦೦೦ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಕರ್ನಾಟಕದಲ್ಲಿ ೩೫೦ ಕ್ಕೂ ಹೆಚ್ಚು ಥಿಯೆಟರ್‌ಗಳಲ್ಲಿ ಪೈಲ್ವಾನ್ ತನ್ನ ಪರಾಕ್ರಮ ಮೆರೆದಿರೋದ್ರಿಂದ ಸಹಜವಾಗಿಯೇ ಎಲ್ಲರಿಗೂ ಪೈಲ್ವಾನ್ ಗಳಿಕೆಯ ಮೇಲೆ ಕಣ್ಣಿತ್ತು. ಪೈಲ್ವಾನ್ ಚಿತ್ರರಂಗದಲ್ಲಿ ಏನೋ ಹೊಸ ಕಮಾಲ್ ಮಾಡಿ ಇತಿಹಾಸ ಸೃಷ್ಟಿಸುತ್ತಾನೆ ಎಂಬ ಕುತೂಹಲಕ್ಕೆ ಈಗ ಒಂದು ಸ್ಪಷ್ಟವಲ್ಲದ ಉತ್ತರ ಸಿಕ್ಕಿದೆ. ಇದು ನಿಜವೋ ಸುಳ್ಳೊ ಎನ್ನುವ ಗೊಂದಲದಲ್ಲೇ ಇಡೀ ಗಾಂಧಿನಗರ ತಲೆ ಕೆಡಿಸಿಕೊಂಡಿದೆ.

ಬೆಂಗಳೂರಿನಲ್ಲೇ ೭೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ಆಟ ಶುರುವಾಗಿದೆ. ಹಾಗಾಗಿಯೇ ನಿನ್ನೆ ಸಿಕ್ಕ ಭರ್ಜರಿ ಓಪನಿಂಗ್ ಆಧಾರದ ಮೇಲೆ ಪೈಲ್ವಾನ್ ಎಷ್ಟು ಕಮಾಯಿ ಮಾಡಿರಬಹುದು ಎಂಬ ಅಂದಾಜಿನ ಲೆಕ್ಕಚಾರ ದಕ್ಕಿದೆ. ಬಾಕ್ಸ್‌ಆಫೀಸ್ ಅನಾಲಿಸ್ಟ್ ಮೂಲಗಳ ಪ್ರಕಾರ ಪೈಲ್ವಾನ್ ಒಂದೇ ದಿನಕ್ಕೆ ಬರೋಬ್ಬರಿ ೧೮ ಕೋಟಿಯನ್ನ ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಕನ್ನಡದ ಪೈಲ್ವಾನ್ ಪಾಲೇ ಭರ್ತಿ ೧೦ ಕೋಟಿ ಎನ್ನುವುದು ವಿಶೇಷ. ತೆಲುಗುನೆಲದಲ್ಲೂ ಅಬ್ಬರಿಸಿರುವ ಪೈಲ್ವಾನ್ ೫ ಕೋಟಿಯನ್ನ ತೆಕ್ಕೆಗೆ ಹಾಕಿಕೊಂಡಿದೆ. ಟೋಟಲ್ಲಾಗಿ ೧೮ ಕೋಟಿ ಕಲೆಕ್ಷನ್ ಮಾಡಿರೋ ಪೈಲ್ವಾನ್ ಮುಂದಿನ ದಿನಗಳಲ್ಲೂ ತನ್ನ ನಾಗಾಲೋಟವನ್ನ ಮುಂದುವರೆಸುವ ಭರವಸೆ ಹುಟ್ಟಿಸಿದ್ದಾನೆ.

ಆದರೆ ಇಡೀ ಭಾರತೀಯ ಚಿತ್ರರಂಗವನ್ನೇ ತನ್ನ ಮಾಸ್ ಇಂಟ್ರಡಕ್ಷನ್‌ನಿಂದ ಅಲ್ಲಾಡಿಸಿಬಿಟ್ಟಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೈವೋಲ್ಟೆಜ್ ಸಿನಿಮಾ ಕೆ.ಜಿ.ಎಫ್ ಕೂಡ ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿತ್ತು. ಬೇರೆ ಭಾಷೆಗಳಲ್ಲೂ ಬಹಳ ದೊಡ್ಡಮಟ್ಟದಲ್ಲಿ ರೀಚ್ ಆಗಿದ್ದ ಕೆ.ಜಿ.ಎಫ್ ತನ್ನ ಫಸ್ಟ್‌ಡೇ ಕಲೆಕ್ಷನ್‌ನಿಂದ ಎಲ್ಲರ ಬಾಯಿ ಮುಚ್ಚಿಸಿತ್ತು.

ಮೊದಲದಿನವೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಭಾಷ್ಯಾ ಬರೆದ ಕೆ.ಜಿ.ಎಫ್ ೨೨ ಕೋಟಿ ಬಾಚಿಕೊಂಡಿತ್ತು. ಕನ್ನಡದಲ್ಲಿ ಅದೊಂದು ನಯಾ ರೆಕಾರ್ಡ್ ಬಿಡಿ. ಯಾಕಂದ್ರೆ ಯಾವ ಕನ್ನಡ ಚಿತ್ರವೂ ಫಸ್ಟ್‌ಡೇ ಈ ರೀತಿಯ ಗಳಿಕೆ ಕಂಡಿರಲಿಲ್ಲ. ಆದರೆ ಪ್ಯಾನ್ ಇಂಡಿಯಾ ಅಪ್ರೋಚ್ ಇಟ್ಕೊಂಡು ಬಂದ ಕುರುಕ್ಷೇತ್ರ ಹಾಗೂ ಪೈಲ್ವಾನ್ ಮೇಲೆ ಈ ಒತ್ತಡವಿತ್ತು.

ಪೈಲ್ವಾನ್ ಈ ದಾಖಲೆಯನ್ನ ಸೈಡ್‌ಗೆ ತಳ್ಳುತ್ತಾ ಎನ್ನುವ ಪ್ರಶ್ನೆಗೆ ಇನ್ನೂ ಕೂಡ ಅಧಿಕೃತವಾಗಿ ಗಳಿಕೆಯ ರಿರ್ಪೋಟ್ ಬರಬೇಕಿದೆ.ಕನ್ನಡದಲ್ಲಿ ಮಾತ್ರವಲ್ಲದೇ ಟಾಲಿವುಡ್ ನೆಲದಲ್ಲೂ ಪೈಲ್ವಾನನಿಗೆ ಜೈಕಾರ ಸಿಕ್ಕಿದೆ. ಸಿನಿಮಾ ನೋಡಿದ ತೆಲುಗು ಪ್ರೇಕ್ಷಕ ಸುದೀಪ್ ನಟನೆಯನ್ನ ಹೊಗಳೊದ್ರಲ್ಲಿ ಫುಲ್ ಬಿಜಿಯಾಗಿದ್ದಾನೆ. ಕಿಚ್ಚ ಆಕ್ಟಿಂಗ್ ಚಾಲಾ ಬಾಗುಂದಿ, ಸುದೀಪಣ್ಣ ಏಕ್ ನಂಬರ್ ಎನ್ನುವ ರೆಸ್ಪಾನ್ಸ್ ಬಂದಿದೆ. ಮಾಸ್ ಚಿತ್ರಗಳನ್ನ ಸದಾ ಪ್ರೋತ್ಸಾಹಿಸೋ ತೆಲುಗು ಅಡಿಯನ್ಸ್ ಪೈಲ್ವಾನ್ ಬಗ್ಗೆ ಹೇಳಿದ ಮಾತುಗಳೇನು ಅಂತ ನೀವೆ ಕೇಳಿಬಿಡಿ. ಇದರ ಮಧ್ಯೆ ಹಿಂದಿ ಅವತರಣಿಕೆಯ ಪೈಲ್ವಾನ್‌ಗೆ ಸೆನ್ಸಾರ್ ಸರ್ಟಿಫೀಕೇಟ್ ಆಗಿಲ್ಲ. ಈ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗಲ್ಲ ಎನ್ನುವ ಅಂತೆಕಂತೆಗಳು ಕಿಚ್ಚನ ಅಭಿಮಾನಿಗಳಿಗೆ ಆತಂಕ ತಂದಿತ್ತು.

ಆದರೆ ನಿರ್ದೆಶಕ ಕೃಷ್ಣ ಸೆನ್ಸಾರ್ ಕಾಪಿಯನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಎಲ್ಲಾ ಸುಳ್ಳು ಸುದ್ಧಿಗಳಿಗೆ ಬಿಗ್‌ಬ್ರೇಕ್ ಹಾಕಿಬಿಟ್ರು. ನಿರೀಕ್ಷೆಯಂತೆ ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಉತ್ತರದಲ್ಲಿ ಗಣೇಶ ವಿರ್ಸಜನೆಯಿರುವ ಕಾರಣ ಇಂದು ಸಿನಿಮಾ ರಿಲೀಸ್ ಆಗಿದೆ. ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಆಗಿರೋದು ಈ ಎಲ್ಲಾ ಕನ್‌ಫ್ಯೂಶನ್‌ಗಳಿಗೆ ತಿಲಾಂಜಲಿ ಇಟ್ಟಿದೆ.
ಗುರುವಾರದಂದು ತೆರೆಕಂಡ ಪೈಲ್ವಾನ್‌ಗೆ ಇನ್ನೂ ಹೊಸ ದಾಖಲೆಗಳನ್ನ ಸೃಷ್ಟಿಸುವ ಚಾನ್ಸ್‌ಗಳಿವೆ. ಯಾಕಂದ್ರೆ ಶುಕ್ರವಾರ,ಶನಿವಾರ ಹಾಗೂ ಭಾನುವಾರ ಗಳಿಕೆಯ ಗ್ರಾಫ್ ಏರುವ ಸಾಧ್ಯತೆಗಳೇ ಹೆಚ್ಚು. ಈಗ ಸಿಕ್ಕಿರೋ ಪ್ರತಿಕ್ರಿಯೆಗಳ ಪ್ರಕಾರ ಪೈಲ್ವಾನ್ ಪ್ರೇಕ್ಷಕನ ಮನಸ್ಸುಗಳನ್ನ ಗೆಲ್ಲೋದ್ರಲ್ಲಿ ಈಗಾಗಲೇ ಫಾರ್ವಡ್ ಸ್ಟೆಪ್ ತೆಗೆದುಕೊಂಡಿದ್ದಾನೆ.

ತಮಿಳು ರಾರ್ಕಸ್ ಪೈರಸಿ ಕಾಟಗಳ ಮಧ್ಯೆಯೂ ತನ್ನ ಜಾಗವನ್ನ ಭದ್ರಪಡಿಸಿಕೊಂಡಿದ್ದಾನೆ. ಹಿಂದಿಯಲ್ಲಿ ಸರ್ವವ್ಯಾಪಿಯಾಗಿ ರಿಲೀಸ್ ಆಗಿರೋ ಪೈಲ್ವಾನ್ ನೋಡಲು ಬಾಲಿವುಡ್ ಮಂದಿ ಕೂಡ ತುದಿಗಾಲಲ್ಲಿ ನಿಂತಿರೋದು ಸಿನಿಮಾದ ಹೈಪ್ ಹೆಚ್ಚಿಸಿದೆ. ಒಟ್ಟಿನಲ್ಲಿ ಬಾಕ್ಸ್‌ಆಫೀಸ್ ರೆಕಾರ್ಡ್‌ಗಳ ಈ ಬಿಸಿಬಿಸಿ ಚರ್ಚೆಗಳಿಗೆ ಒಂದು ಸೂಕ್ತ ತಾರ್ಕಿಕ ಅಂತ್ಯ ಕಾಣಬೇಕಾದ್ರೆ, ಸ್ವತಃ ಚಿತ್ರತಂಡವೇ ಮುಂದೆ ಬಂದು ಇಷ್ಟು ಗಳಿಕೆಯಾಗಿದೆ ಕಣ್ರಪ್ಪ ಎನ್ನುವ ಮಾಹಿತಿ ಕೊಡೊದು ಅನಿವಾರ್ಯವಾಗಿದೆ.

LEAVE A REPLY

Please enter your comment!
Please enter your name here