Home Cinema “ಪೊಗರಿ”ನಿಂದ ಮತ್ತೆ ತಾಯ್ನಾಡಿಗೆ ಬಂದ ರಶ್ಮಿಕಾ ಮಂದಣ್ಣ..! “ಧ್ರುವಾ ಸರ್ಜಾ ಜೊತೆ ರಶ್ಮಿಕಾ”..!?

“ಪೊಗರಿ”ನಿಂದ ಮತ್ತೆ ತಾಯ್ನಾಡಿಗೆ ಬಂದ ರಶ್ಮಿಕಾ ಮಂದಣ್ಣ..! “ಧ್ರುವಾ ಸರ್ಜಾ ಜೊತೆ ರಶ್ಮಿಕಾ”..!?

972
0
SHARE

ಅತ್ತ, ರಕ್ಷಿತ್ ಹಾಗೂ ಮೇಘನಾರ ಫೋಟೊ, ಮದುವೆ ವಿಚಾರಕ್ಕೆ ಕಾರಣವಾಗಿದ್ದರೆ, ಇತ್ತ, ರಕ್ಷಿತ್ ಎಕ್ಸ್ ಗರ್ಲ್‌ಫ್ರೆಂಡ್ ರಶ್ಮಿಕಾ.. ಕನ್ನಡವೇ ನನ್ನ ಅಮ್ಮ, ತೆಲುಗು ನನ್ನ ಚಿಕ್ಕಮ್ಮ ಅನ್ನುತ್ತಾ ಮತ್ತೇ ಗಾಂಧಿನಗರಕ್ಕೆ ಬರಲು ಸಿದ್ಧವಾಗಿದ್ದಾರೆ.ಹೌದು, ರಶ್ಮಿಕಾ.. ತೆಲುಗು ನಾಡಿನಿಂದ ಮತ್ತೆ ಬೆಂಗಳೂರು ಫೈಟ್ ಹಿಡಿದಿದ್ದಾರೆ.

ಅದು, ಧ್ರುವಾ ಸರ್ಜಾ ಪಕ್ಕ ನಕ್ಕು ನಲಿಯಲು. ಹೌದು, ಧ್ರುವಾ ಅಭಿನಯದ ಪೊಗರು ಸಿನಿಮಾದ ನಾಯಕಿಯಾಗಿ ರಶ್ಮಿಕಾ ಆಯ್ಕೆ ಆಗಿದ್ದಾರೆ. ಹಾಗ್ ನೋಡಿದ್ರೆ ಪೊಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣ ಇದೇ ನವೆಂಬರ್ ಇಪ್ಪತ್ತರಿಂದ ಶುರುವಾಗಲಿದೆ.

ಹಾಗಾಗಿ, ಚಿತ್ರೀಕರಣದಲ್ಲಿ ಭಾಗಿಯಾಗಲು ಕೊಡಗಿನ ಕಿನ್ನರಿ ಸಿದ್ಧವಾಗುತ್ತಿದ್ದಾರೆ. ನಂದ ಕಿಶೋರ್ ನಿರ್ದೇಶನದ ಪೊಗರುಗೆ ಬಿ.ಎನ್.ಗಂಗಾಧರ್ ಬಂಡವಾಳ ಹೂಡುತ್ತಿದ್ದಾರೆ. ಇನ್ನೂ ಕಥೆ ಗೀಚಿರೋದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ.ಅದೇನೆ ಇರ‍್ಲಿ, ಬ್ರೇಕ್ ಅಪ್ ಆಗಿ ಮೂರು ತಿಂಗಳು ಕಳೆಯುತ್ತಾ ಬಂದ್ರೂ ರಕ್ಷಿತ್, ರಶ್ಮಿಕಾ..

ನಾನಾ ರೀತಿಯಲ್ಲಿ ಸದ್ದು ಮಾಡ್ತಿದ್ದಾರೆ. ಇದೇ ಸದ್ದು ಗದ್ದಲದ ದುನಿಯಾಗೀಗ ಮೇಘನಾನೂ ಬಲಗಾಲಿಟ್ಟು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕಹಾನಿಯಲ್ಲಿ ಇನ್ಯಾವದಾದ್ರೂ ಟ್ವಿಸ್ಟ್ ಸಿಕ್ಕರೆ ಅಚ್ಚರಿ ಪಡುವಂಗಿಲ್ಲ. ಕಾರಣ, ಇದು ಬಣ್ಣದ ದುನಿಯಾ.

LEAVE A REPLY

Please enter your comment!
Please enter your name here