Home Crime ಶವದ ಜೊತೆ 37ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಟ!

ಶವದ ಜೊತೆ 37ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಟ!

2521
0
SHARE

ಕಲಬುರಗಿಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮೃತದೇಹ ತೆಲಂಗಾಣದಲ್ಲಿ ಪತ್ತೆಯಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಗೊತ್ತಾಗಿದ್ದು ಬೆಚ್ಚಿ ಬೀಳಿಸುವ ಮಾಹಿತಿ. ಹೆಣದ ಜೊತೆ 37 ಗಂಟೆ ಸುತ್ತಾಡಿದ್ದ ಪ್ರೀಯಕರನ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ..

ಅಜ್ಞಾತ ಸ್ಥಳದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ವಿದ್ಯಾರ್ಥಿನಿ ಹೆಸರು ಶಿಬಾರಾಣಿ ಅಂತ. ಕಲಬುರಗಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಆರ್ಟ್ಸ್ ಓದುತ್ತಿದ್ದ ಈಕೆ, ರವಿ ಪೂಜಾರಿ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದಿದ್ಲು. ಅನೇಕ ಸ್ಥಳದಲ್ಲಿ ಸುತ್ತಾಡಿದ್ದ ಜೋಡಿ ಎಲ್ಲೇ ಮೀರಿ ನಡೆದುಕೊಂಡಿದ್ರು. ಇದರ ಪ್ರತಿಫಲವಾಗಿ ವಿದ್ಯಾರ್ಥಿನಿ ಗರ್ಭಿಣಿಯಾದಳು. ಇನ್ನೂ ಯಾವಾಗ ಹುಡುಗಿ ಮದುವೆಯಾಗು ಎಂದು ದುಂಬಾಲು ಬಿದ್ಲೋ ಆಗ ಆರೋಪಿ ರವಿ ಪೂಜಾರಿ ಮದುವೆ ಆಗುವ ಭರವಸೆ ನೀಡಿದ್ದ.

ಇನ್ನೂ ಹೇಗಿದ್ರು ಮದ್ವೆ ಆಗ್ತಾನೆ ಎಂದು ನಂಬಿದ್ದ ರಾಣಿ ಆತ ಕರೆದಾಗ ಹೋದಾಗ ಆಕೆಗೆ ತಾನು ಸಾಯುವ ಅರಿವೇ ಆಗಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಕರೆದೊಯ್ದ ರವಿಪೂಜಾರಿ ಆಕೆಗೆ ಗರ್ಭಪಾತ ಮಾಡಿಸಲು ಹೋದಾಗ. ಆಸ್ಪತ್ರೆಯವರು ಹೆವಿ ಡೋಸೇಜ್ ಇಂಜೆಕ್ಷನ್ ಕೊಟ್ಟಾಗ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಯಾರಿಗೂ ಡೌಟ್ ಬಾರದು ಅಂತ ಕೊಲೆಗಡುಕ ರವಿಪೂಜಾರಿ, ತನ್ನ ಪ್ರೇಯಸಿ ಶವವನ್ನ ಕಾರಿನಲ್ಲಿ ಇಟ್ಟುಕೊಂಡು 37 ಗಂಟೆಗಳ ಕಾಲ ಸುತ್ತಾಡಿದ್ದ. ಕೊನೆಗೆ ಕರ್ನಾಟಕ- ತೆಲಂಗಾಣ ಗಡಿಯಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ.ಸೆಪ್ಟಂಬರ್ 3ರಂದು ಕಾಲೇಜಿಗೆ ಹೋದ ಮಗಳು ಮನೆಗೆ ಬಂದಿಲ್ಲವೆಂದು. ಪೋಷಕರು ಬ್ರಹ್ಮಪುರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ರು.

ಇದೀಗ ಬೆಂದ ಸ್ಥಿತಿಯಲ್ಲಿ ಶಿಬಾರಾಣಿ ಶವವಾಗಿ ಪತ್ತೆಯಾಗಿದ್ದಾಳೆ. ಪ್ರಿಯಕರ ರವಿ ಪೂಜಾರಿ, ಹೆವಿ ಡೋಸೇಜ್ ಇಂಜೆಕ್ಷನ್ ನೀಡಿದ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜಗುರಿಸುತ್ತೇವೆ ಅಂತ ಎಸ್ಪಿ ತಿಳಿಸಿದ್ದಾರೆ.ಘಟನೆ ಬಳಿಕ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ‘ಜಸ್ಟೀಸ್ ಫಾರ್ ಶಿಬಾ ರಾಣಿ’ ಹೆಸರಿನಲ್ಲಿ ಪ್ರತಿಭಟನೆ ಆರಂಭವಾಗಿವೆ.

ಪ್ರಕರಣದ ತನಿಖೆ ಮುಂದುವರೆದಿದ್ದು,ತೆಲಂಗಾಣದಲ್ಲೂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಪ್ರೀತಿಸಿದ ತಪ್ಪಿಗೆ ಹೆಣವಾದ ಮಗಳನ್ನು ನೆನೆದು ಪೋಷಕರು ಕಣ್ಣೀರಿಡುವಂತಾಗಿದೆ.

LEAVE A REPLY

Please enter your comment!
Please enter your name here