Home Crime ಪೊಲೀಸ್ ಇಲಾಖೆಯಲ್ಲಿ ಇನ್ನೂ ಆರ್ಡರ್ಲಿ ಪದ್ಧತಿ ಜೀವಂತ..! ಪೊಲೀಸ್ ತರಬೇತಿ ಶಾಲೆಯಲ್ಲಿ ದರ್ಪ ಪ್ರದರ್ಶನ..!

ಪೊಲೀಸ್ ಇಲಾಖೆಯಲ್ಲಿ ಇನ್ನೂ ಆರ್ಡರ್ಲಿ ಪದ್ಧತಿ ಜೀವಂತ..! ಪೊಲೀಸ್ ತರಬೇತಿ ಶಾಲೆಯಲ್ಲಿ ದರ್ಪ ಪ್ರದರ್ಶನ..!

392
0
SHARE

ಪೋಲಿಸ್ ಇಲಾಖೆಯಲ್ಲಿ ಶಿಸ್ತು ಮತ್ತು ಆಜ್ಞೆ ಪಾಲನೆಯ ಹೆಸರಲ್ಲಿ ಕೆಳಹಂತದ ಪೋಲಿಸರನ್ನು ಅಮಾನವೀಯತೆಯಿಂದ ನಡೆಸಿಕೊಳ್ಳುವುದು ಎಲ್ಲೆಡೆ ಕಂಡು ಬರುತ್ತದೆ. ಕೆಳಹಂತದಲ್ಲಿರುವ ಪೋಲಿಸರೂ ಸಹ ಮೇಲಾಧಿಕಾರಿಗಳ ಆಜ್ಞೆಗಳನ್ನು ದಿಕ್ಕರಿಸಲಾಗದೇ ಒದ್ದಾಡುತ್ತ ಸಂಕಟ ಅನುಭವಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ತಮ್ಮ ಕೆಳಹಂತದಲ್ಲಿರುವ ಪೊಲೀಸರಿಂದ ಮನೆ ಕೆಲಸ, ಬಟ್ಟೆ ತೊಳೆಯುವುದು ಅಷ್ಟೇ ಅಲ್ಲದೆ ಶೇವಿಂಗ್ ಕೂಡ ಮಾಡಿಸಿಕೊಂಡಿದ್ದಾರೆ.

ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಇನ್ನೂ ಜೀವಂತ- ಕೊಪ್ಪಳದ ತರಬೇತಿ ಶಾಲೆಯಲ್ಲಿ ನರಕ ದರ್ಶನ-ಹಿರಿಯ ಅಧಿಕಾರಿಗಳಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಭರವಸೆ.ಒಂದೆಡೆ ಬಟ್ಟೆ ಒಗೆಯುತ್ತಿರುವ ಪೊಲೀಸರು, ಮತ್ತೊಂದೆಡೆ ಶೇವಿಂಗ್ ಮಾಡುತ್ತಿರುವ ಪೇದೆ ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿರುವ ಪೋಲಿಸ್ ತರಬೇತಿ ಶಾಲೆಯಲ್ಲಿ .

ಇಲ್ಲಿ ಕೆಳ ಹಂತದ ಪೋಲಿಸರನ್ನು ಮೇಲಾಧಿಕಾರಿಗಳು ತಮಗೆ ಬೇಕಾದಂತೆ ಬಟಾಬಯಲಾಗಿದೆ. ಕೆಳ ಹಂತದ ಅಧಿಕಾರಿಗಳು ಆರ್ಡರ್ಲಿ ಪದ್ಧತಿಯನ್ನು ಪ್ರಶ್ನಿಸಲಾಗದೆ ಹಿರಿಯ ಅಧಿಕಾರಿಗಳ ಸೇವೆ ಮಾಡಿದ್ದಾರೆ. ಕೊಪ್ಪಳ ಮುನಿರಾಬಾದ್ ಪೊಲೀಸ್ ತರಬೇತಿ ಕೇಂದ್ರದ ಮುಖ್ಯ ಪೇದೆ ಹನುಮಂತಪ್ಪ ತನ್ನ ಸೇವೆ ಮಾಡಲು ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುನಿರಾಬಾದ್ ನ ಐಆರ್‌ಬಿ ಮತ್ತು ಪೋಲಿಸ್ ಟ್ರೇನಿಂಗ್ ಸೆಂಟರ್ ನಲ್ಲಿ ಕೆಳ ಹಂತದ ಪೋಲಿಸರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದರ ಕುರಿತು ಈ ಮೊದಲೂ ಸಹ ಹಲವಾರು ದೂರುಗಳು ಬಂದಿದ್ದವು. ಕೆಳಹಂತದ ಪೋಲಿಸರು ಮೇಲಾಧಿಕಾರಿಗಳಿಗೆ ಹೆದರಿ ದೂರು ನೀಡಲೂ ಮುಂದಾಗಿರಲಿಲ್ಲ. ದೂರು ಕೊಟ್ಟವರ ಮೇಲೆಯೇ ಅಶಿಸ್ತಿನ ವರ್ತನೆ ಹೆಸರಲ್ಲಿ ಕ್ರಮಕೈಗೊಳ್ಳಲಾಗಿದೆ. ಹೀಗಾಗಿ ದೂರು ಕೊಡಲು ಹೆದರುತ್ತಿದ್ರು.

ಈಗ ವಿಡಿಯೋ ವೈರಲ್ ಆದ ಮೇಲೆ ಸೂಕ್ತ ತನಿಖೆ ನಡಿಸಿ ಕ್ರಮ ಕೈಗೊಳ್ಳುವುದಾಗಿ ಮೇಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಹಿಂದೆ ಶಿಕ್ಷೆಗೊಳಗಾದವರೇ ಈ ರೀತಿ ಕೆಲಸ ಮಾಡಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.ಸದ್ಯ ವೈರಲ್ ಆಗಿರುವ ವಿಡಿಯೋ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದ್ರೂ ಇಂತಹ ಅನಿಷ್ಟ ಆರ್ಡರ್ಲಿ ಪದ್ಧತಿಗೆ ಬ್ರೇಕ್ ಬೀಳಬೇಕಿದೆ.

LEAVE A REPLY

Please enter your comment!
Please enter your name here