Home Crime ಪೊಲೀಸ್ ಏಟಿಗೆ ನೆಲಕ್ಕೆ ಬಿದ್ದ ಬೈಕ್ ಸವಾರನ ಬ್ರೈನ್ ಡೆಡ್..! ಕರ್ತವ್ಯದ ನೆಪದಲ್ಲಿ ಪೊಲೀಸರು ಮಾಡಿದ್ರು...

ಪೊಲೀಸ್ ಏಟಿಗೆ ನೆಲಕ್ಕೆ ಬಿದ್ದ ಬೈಕ್ ಸವಾರನ ಬ್ರೈನ್ ಡೆಡ್..! ಕರ್ತವ್ಯದ ನೆಪದಲ್ಲಿ ಪೊಲೀಸರು ಮಾಡಿದ್ರು ದೊಡ್ಡದೊಂದು ಅನಾಹುತ..! ಕಾಲಿನಿಂದ ಒದ್ದು ತಿರುಗಿ ನೋಡದೆ ಹೋದೆ ಪೊಲೀಸರೇ ಇದು ಸರೀನಾ..??

9594
0
SHARE

ಅವ್ರೆಲ್ಲಾ ಇನ್ನೂ ಬಾಳಿ ಬದುಕಬೇಕಾದ ಯುವಕರು. ಆದ್ರೆ ಆವತ್ತು ಅವರು ಮಾಡಿದ ಯಡವಟ್ಟೊ ಪೊಲೀಸ್ರ ದೌಲತ್ತೊ ಜೀವನ್ಮರಣ ಹೋರಾಟ ಮಾಡ್ತಾ ಇದ್ದಾರೆ.

ಗಣೇಶನ ಉತ್ಸವಕ್ಕೆ ಶಾಸಕರೊಬ್ಬರಿಗೆ ಇನ್ವೈಟ್ ಮಾಡೋಕೆ ಬೈಕ್ ಏರಿ ಹೊರಟಿದ್ರು ಅಷ್ಟರಲ್ಲೇ ದೊಡ್ಡದೊಂದು ಅನಾಹುತ ನಡೆದೋಯ್ತು ಹೀಗೆ ಆಸ್ಪತ್ರೆಯ ಬೆಡ್ ಮಲಗಿ ಜೀವನ್ಮರಣ ಹೋರಾಟ ಮಾಡುತ್ತಿರುವ ಈ ಹುಡುಗರು ಇದೆ ಸಿಲಿಕಾನ್ ಸಿಟಿಯ ಹೆಬ್ಬಾಳ ನಿವಾಸಿಗಳು.

ಹೆಸ್ರು ಕಿರಣ್, ಚೇತನ್ ಹಾಗೂ ವಿನಯ್ ಅಂತಾ. ಮೂರು ದಿನಗಳ ಹಿಂದೆ ತಮ್ಮ ಏರಿಯಾದ ಗಣೇಶನ ಉತ್ಸವಕ್ಕೆ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ರನ್ನ ಇನ್ವೈಟ್ ಮಾಡೋಕೆ ಬೈಕ್ ಏರಿ ಹೊರಟಿದ್ರು.. ಈ ವೇಳೆ ಹೆಲ್ಮೇಟ್ ಇಲ್ಲ ಅಂತಾ ಹೆಣ್ಣೂರು ಜಂಕ್ಷನ್ ಬಳಿ ಪೊಲೀಸ್ರು ಕರ್ತವ್ಯದ ನೆಪದಲ್ಲಿ ಅಡ್ಡಗಟ್ಟಲು ಹೋಗಿ ಬೈಕ್ ಸವಾರನ ಪ್ರಾಣವನ್ನೇ ಬಲಿಪಡೆದಿದ್ದಾರೆ.

ಹೀಗೆ, ಗಣೇಶ ಇನ್ವಿಟೇಷನ್ ಹಿಡಿದು ಹೊರಟ ಮೂವರನ್ನ ಹೆಣ್ಣೂರು ಜಂಕ್ಷನ್ ಬಳಿ ಹೆಣ್ಣೂರು ಲಾ ಅಂಡ್ ಆರ್ಡರ್ ಠಾಣೆಯ ಪೊಲೀಸ್ರು ಅಡ್ಡ ಹಾಕಿದ್ದಾರೆ. ಬೈಕ್ ಸವಾರರು ಯಾವಾಗ ಪೊಲೀಸ್ರನ್ನ ನೋಡಿದ್ರೊ ಗಾಬರಿಯಲ್ಲಿ ಗಾಡಿ ಮುಂದೆ ಬಿಟ್ಟಿದ್ದಾರೆ. ಆದ್ರೆ ಇದನ್ನೆ ನೆಪ ಮಾಡಿಕೊಂಡ ಪೊಲೀಸ್ರು ಮೂವರನ್ನ ಚೇಸ್ ಮಾಡಿ ಕಾಲಿನಿಂದ ಒದ್ದಿದ್ದಾರೆ.

ಪೊಲೀಸ್ರು ಒದ್ದ ಏಟಿಗೆ ಚಲಿಸುತ್ತಿದ್ದ ಗಾಡಿಯಿಂದ ಹೈ ವೇ ಗೆ ಮೂವರು ಬಿದ್ದಿದ್ದಾರೆ.. ಈ ವೇಳೆ ಟಾಟಾ ಏಸ್ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಷ್ಟಾದ್ ಮೇಲೆ ತಿರುಗಿ ನೋಡದ ಹೆಣ್ಣೂರು ಪೊಲೀಸ್ರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.ಗಂಭೀರವಾಗಿ ಗಾಯಗೊಂಡ ಮೂವರನ್ನ ಕೂಡಲೇ ನಗರದ ಬ್ಯಾಫಿಸ್ಟ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿತ್ತು. ಆದ್ರೆ, ಚೇತನ್ ಎಂಬಾತನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆತನ ಬ್ರೈನ್ ಡೆಡ್ ಆಗಿದೆ.

ಮತ್ತಿಬ್ಬರು ಕಿರಣ್ ಮತ್ತೆ ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಚೇತನ್ ಸಾವಿನ ಸುದ್ದಿಯನ್ನ ಖಚಿತಪಡಿಸುವುದೊಂದೆ ಬಾಕಿ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಹೆಣ್ಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದ ಪೋಷಕರಿಗೆ ಪೊಲೀಸ್ರು ಸ್ಪಂದಿಸದ ಕಾರಣ, ನಗರದ ಪೊಲೀಸ್ ಆಯುಕ್ತರಿಗೆ ಪೋಷಕರು ದೂರು ನೀಡಿದ್ದಾರೆ.

ಕರ್ತವ್ಯದ ನೆಪದಲ್ಲಿ ಪೊಲೀಸ್ರು ಈ ರೀತಿ ಮಾಡಿದ್ದು ಎಷ್ಟು ಸರಿ.. ಅಡ್ಡಗಟ್ಟೋದೇನೋ ಓಕೆ, ಚೇಸ್ ಮಾಡಿ ಒದ್ದದ್ದು ಯಾಕೆ ಅಂತಾ ಸ್ಥಳೀಯರು ಪ್ರಶ್ನೇ ಮಾಡ್ತಿದ್ದಾರೆ.. ಅದೇನೋ ಮಾಡಲು ಹೋಗಿ ಅಮಾಯಕನ ಪ್ರಾಣವನ್ನೇ ಬಲಿ ಪಡೆದಿದ್ದಾರೆ ಪೊಲೀಸ್ರು..

LEAVE A REPLY

Please enter your comment!
Please enter your name here