Home District ಪೊಲೀಸ್ ಠಾಣೆಯಲ್ಲಿ ನಡೆಯಿತು ಸೀಮಂತ ಕಾರ್ಯ.. ಮಹಿಳಾ ಪೇದೆಗೆ ಹಾರೈಸಿದ್ರು ಇಡೀ ಗ್ರಾಮಸ್ಥರು..

ಪೊಲೀಸ್ ಠಾಣೆಯಲ್ಲಿ ನಡೆಯಿತು ಸೀಮಂತ ಕಾರ್ಯ.. ಮಹಿಳಾ ಪೇದೆಗೆ ಹಾರೈಸಿದ್ರು ಇಡೀ ಗ್ರಾಮಸ್ಥರು..

521
0
SHARE

ಪೊಲೀಸ್ ಠಾಣೆಗಳೆಂದರೆ ಅಲ್ಲಿ ಲಾಟಿ ಬೂಟಿನೇಟುಗಳ ಸದ್ದು, ಅವಾಚ್ಯ ಶಬ್ದಗಳ ಬಳಕೆ ಎಂದೆಲ್ಲಾ ಕಲ್ಪನೆ ಮಾಡಿಕೊಳ್ಳುವ ಜನಸಾಮಾನ್ಯರಿಗೆ ಈ ಸ್ಚೋರಿ ಬೇರೆಯದ್ದೆ ಟ್ವಿಸ್ಟ್ ನೀಡುತ್ತೆ. ಯಾಕೆಂದರೆ ಠಾಣೆಗಳು ಇತ್ತಿಚ್ಚಿನ ದಿನಗಳಲ್ಲಿ ಜನಸ್ನೇಹಿಯಾಗುತ್ತಿರುವ ಜೊತೆಗೆ ಸಿಬ್ಬಂದಿ ನಡುವಿನ ಸಂಬಂಧದಲ್ಲೂ ಆತ್ಮೀಯತೆ ಎದ್ದು ಕಾಣುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಕುಂಸಿ ಠಾಣೆಯಲ್ಲಿ ನಡೆದ ಸೀಮಂತ ಕಾರ್ಯ.

ಕುಂಸಿ ಪೊಲೀಸ್ ಠಾಣೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಿಬ್ಬಂದಿಗಳು ಲವಲವಿಕೆಯಿಂದ ತಳಿರು ತೋರಣಗಳನ್ನು ಕಟ್ಟಿ ಸಿಂಗಾರ ಮಾಡಿದ್ರು. ಎಸ್ಸೈ ಜಗದೀಶ್ ಆ ಕಾರ್ಯಕ್ರಮದ ರುವಾರಿಯಾಗಿದ್ರು. ಹೌದು ಕುಂಸಿ ಠಾಣೆಯಲ್ಲಿ ಸೀಮಂತ ಕಾರ್ಯಕ್ಕೆ ಇಡೀ ಠಾಣೆಯ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಟೊಂಕಕಟ್ಟಿ ನಿಂತಿದ್ದರು. ಮಹಿಳಾ ಸಿಬ್ಬಂದಿ ಕವಿತಾರ ಸೀಮಂತಕ್ಕೆ ಠಾಣೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.

ಪೊಲೀಸ್ ಪೇದೆ ಕವಿತಾರಿಗೆ ಕೈಬಳೆ ತೊಡಿಸಿ ಹೂವಿನ ಮಾಲೆಯನ್ನು ಮುಡಿಸುವ ಮೂಲಕ ಸೀಮಂತ ಶಾಸ್ತ್ರ ನೆರವೇರಿಸಿದರು. ಗ್ರಾಮದ ಹಿರಿಯ ಮಹಿಳೆಯರು ಸೀಮಂತದ ಹಾಡು ಹಾಡಿದರು. ಈ ಸಂದರ್ಭದಲ್ಲಿ ಕವಿತಾ ಪತಿ ಶಿವಕುಮಾರ್ ಬಾವುಕರಾದರು.ಠಾಣೆಯ ಎಲ್ಲಾ ಸಿಬ್ಬಂದಿ ಹಾರೈಸಿದ ಪರಿಗೆ ಕವಿತಾ ಕೂಡ ಭಾವುಕರಾದ್ರು. ಮನೆಯಲ್ಲಿ ಸಿಗದ ಈ ರೀತಿಯ ಆತ್ಮೀಯತೆ. ಠಾಣೆಯಲ್ಲಿ ಸಿಕ್ಕಿದ್ದಕೆ ಖುಷಿ ಪಟ್ರು.

ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ಎಂದ್ರೆ ಒಂದು ಕಾಲದಲ್ಲಿ ಗ್ರಾಮಸ್ಥರು ಠಾಣೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಜಮೀನು ವಿವಾದಗಳಿಗೆ ಸಂಬಂಧಿಸಿದಂತೆ ಠಾಣೆ ಮೆಟ್ಟಲೇರುವ ಜನರಿಗೆ ಸಿಬ್ಬಂದಿ ಕಿರುಕುಳ ನೀಡಲಾಗುತ್ತೆ ಎಂದು ಗ್ರಾಮಸ್ಥರು ದೂರವಿದ್ರು. ಆದರೆ ಇತ್ತಿಚ್ಚಿನ ದಿನಗಳಲ್ಲಿ ಠಾಣೆಯ ವಾತಾವರಣ ಬದಲಾಗಿದೆ. ಠಾಣೆ ಜನಸ್ನೇಹಿಯಾಗಿದ್ದು,ಸಿಬ್ಬಂದಿ ಹಾಗು ಗ್ರಾಮಸ್ಥರ ನಡುವಿನ ಸ್ನೇಹ ಬಾಂದವ್ಯ ಗಟ್ಟಿಯಾಗಿ . ಇದಕ್ಕೆ ಸೀಮಂತ ಕಾರ್ಯ ಸಾಕ್ಷಿಯಾಗಿದೆ

LEAVE A REPLY

Please enter your comment!
Please enter your name here