Home Cinema ನಿಮಗೆ ಗೊತ್ತಿರದ ಪುಟ್ಟಣ್ಣ,ಅಂಬಿಯ ಕಥೆ..! ಗುರು ಶಿಷ್ಯರ ನಡುವಿದ್ದ ಭಾವನಾತ್ಮಕ ನಂಟೇನು ಗೊತ್ತೇ..!

ನಿಮಗೆ ಗೊತ್ತಿರದ ಪುಟ್ಟಣ್ಣ,ಅಂಬಿಯ ಕಥೆ..! ಗುರು ಶಿಷ್ಯರ ನಡುವಿದ್ದ ಭಾವನಾತ್ಮಕ ನಂಟೇನು ಗೊತ್ತೇ..!

367
0
SHARE

ಅಂಬರೀಶ್ ಯಾಕೆ ಕನ್ನಡದ ಪ್ರಮುಖ ನಟ ಎಂಬ ಪ್ರಶ್ನೆಯ ಬೆನ್ನತ್ತಿ ಹೊರಟಾಗ ‘ಅಂತ‘, ‘ಚಕ್ರವ್ಯೂಹ‘, ‘ಏಳುಸುತ್ತಿನ ಕೋಟೆ‘, ‘ಇಂದ್ರಜಿತ್‘, ‘ಮಸಣದ ಹೂವು‘, ‘ಒಲವಿನ ಉಡುಗೊರೆ‘, ‘ಹೃದಯ ಹಾಡಿತು‘, ‘ಮಣ್ಣಿನ ದೋಣಿ‘, ‘ಸೋಲಿಲ್ಲದ ಸರದಾರ‘, ‘ಸಪ್ತಪದಿ‘, ‘ಮಂಡ್ಯದ ಗಂಡು‘ ತರಹದ ಚಿತ್ರಗಳು ಉತ್ತರವಾಗಿ ಸಿಗುತ್ತವೆ. ಈ ಬಗೆಯ ಚಿತ್ರಗಳನ್ನು ಜ್ಞಾಪಿಸಿಕೊಂಡು ಅಂಬರೀಶ್ ಅವರ ಬಗ್ಗೆ ಆಲೋಚಿಸಿದಾಗ ಒಂದು ವಿಸ್ಮಯಕಾರಿ ಜಗತ್ತು ಕಣ್ಣೆದುರು ನಿಲ್ಲುವುದು ಸುಳ್ಳಲ್ಲ. ಆ ಜಗತ್ತಿನಲ್ಲಿ ಇರೋದೇ ಪುಟ್ಟಣ್ಣ ಕಣಗಾಲ್ ಎಂಬ ವಿಶೇಷ ನಿರ್ದೇಶಕ…

ಮಂಡ್ಯದ ಗಂಡು.. ಕರುನಾಡ ಕರ್ಣ.. ರೆಬೆಲ್ ಸ್ಟಾರ್.. ಕನ್ವರ್ ಲಾಲ್.. ಹೀಗೆ ನಾನಾ ಬಿರುದುಗಳಿಂದ ಗೌರವಿಸಲ್ಪಟ್ಟ, ಕರೆಯಲ್ಪಟ್ಟ ಅಂಬರೀಶ್.. ನಿಜ ಜೀವನದಲ್ಲಿ ಮರೆಯಲಾಗದ ಸಿನಿಮಾ ಅಂದ್ರೆ ಅದು ನಾಗರಹಾವು. & ಅಫ್ ಕೋರ್ಸ್ ಇನ್ನೊಂದು ನಿರ್ದೇಶಕ ಪುಟ್ಟಣ್ಣ ಕಣಗಾಲ್.ಹೌದು, ಅದು.. ಕನ್ನಡ ಚಿತ್ರರಂಗದ ಸುವರ್ಣಕಾಲ. ೭೦ರ ದಶಕದಲ್ಲಿ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸುವ ಪಣದೊಂದಿಗೆ, ಪುಟ್ಟಣ್ಣ ಕಣಗಾಲ್ ನಾಗರಹಾವು ಚಿತ್ರವನ್ನ ಆರಂಭ ಮಾಡುತ್ತಿದ್ದರು. ಇದೇ ಚಿತ್ರದಲ್ಲಿನ ಚಿಕ್ಕದಾದ ಪಾತ್ರಕ್ಕೆ ಕಲಾವಿದನ ಹುಡುಕಾಟ ನಡೆಸಿದ್ದರು ಪುಟ್ಟಣ್ಣ.ಅಂದಿನ ದಿನಗಳಲ್ಲಿ ಚಿಕ್ಕ ಪಾತ್ರದ ಹುಡುಕಾಟ ನಡೆಸಿದ್ದ ಪುಟ್ಟಣ್ಣ, ಮೊದಲು ನಾಗರಹಾವು ಚಿತ್ರದಲ್ಲಿ ರಜಿನಿ ಕಾಂತ್ ಅವ್ರನ್ನ ಆಯ್ಕೆ ಮಾಡುವ ತೀರ್ಮಾನಕ್ಕೆ ಬಂದಿದ್ದರು. ಬಟ್, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ.

ಹೀಗಿದ್ದಾಗ್ಲೇ ಪುಟ್ಟಣ್ಣ ಕಣ್ಗಾಲ್ ಕಣ್ಣಿಗೆ ಬಿದ್ದಿದ್ದು ಅಮರ್ ನಾಥ್ ಅಲಿಯಾಸ್ ಅಂಬರೀಶ್.ಯಸ್, ಹೀಗೆ ಸ್ಟೈಲಿಶ್ ಆಗಿ ಸಿಗರೇಟ್ ಬಾಯಲಿಟ್ಟುಕೊಂಡು, ಹೋಗಮ್ಮಾ ಹೋಗು ಈ ಜಲೀಲ ಬಲೆ ಬೀಸಿದ ಮೇಲೆ ಬೀಳದೇ ಇರೇ ಹಕ್ಕಿನೇ ಇಲ್ಲಾ ಕಣಮ್ಮಾ ಅಂತ ಜಬರದಸ್ಥ್ ಡೈಲಾಗ್ ಹೇಳ್ಕೊಂಡು ಬೆಳ್ಳಿಪರದೆಗೆ ಎಂಟ್ರಿಕೊಟ್ಟ ಅಮರನಾಥ ಅನ್ನೋ ೨೦ರ ಯುವಕ ರೆಬೆಲ್ ಸ್ಟಾರ್ ಆಗಿ ಬೆಳೆದ ಕಥೆ ಇದೆಯಲ್ಲಾ, ಅದು ಅಂಬಿಯ ಸಿನಿಮಾಗಳಂತೆಯೇ ರೋಚಕ, ರೋಮಾಂಚಕ.ಹೌದು, ನಿಮಗೆ ಗೊತ್ತಿರಲಿ ನಾಗರಹಾವು ಸಿನಿಮಾದಲ್ಲಿನ ಜಲೀಲ ಪಾತ್ರಕ್ಕೆ ಪುಟ್ಟಣ್ಣ ಹೊಸ ಕಲಾವಿದನನ್ನ ಹುಡುಕುತ್ತಿದ್ದರಲ್ಲಾ.. ಆಗ, ಅಂಬರೀಶ್ ಅವರ ಅತ್ಯಾಪ್ತ ಸ್ನೇಹಿತ ಸಂಗ್ರಾಮ್ ಅಂಬರೀಶ್ ಹೆಸರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸೂಚಿಸುತ್ತಾರೆ. ಆದರೆ, ಬಣ್ಣ ಹಚ್ಚಲು ಒಪ್ಪದ ಅಂಬರೀಶ್ ಸ್ಕ್ರೀನ್ ಟೆಸ್ಟ್ ದಿನದಂದು ಕಾಣೆಯಾಗಿಬಿಡುತ್ತಾರೆ.

ಕೊನೆಗೂ ಹಾಗೂ ಹೀಗೂ ಸ್ನೇಹಿತ ಸಂಗ್ರಾಮ್ ಅಂಬಿಯನ್ನ ಹುಡುಕಿ ಕರೆ ತರುತ್ತಾರೆ. ಮೈಸೂರು ಪ್ರಿಮೀಯರ್ ಸ್ಟುಡಿಯೋದಲ್ಲಿ ಬಲವಂತಾಗಿಯೇ ಸ್ಕ್ರೀನ್ ಟೆಸ್ಟ್ ಕೊಟ್ಟಿರ‍್ತಾರೆ ಅಂಬಿ.ಇನ್ನೂ ಸ್ಕ್ರೀನ್ ಟೆಸ್ಟ್‌ನಲ್ಲಿ ಒಲ್ಲದ ಮನಸಿನಿಂದ,ಅಳುಕಿನಿಂದನೇ ಭಾಗಿಯಾಗ್ತಾರೆ. ಮುಖಕ್ಕೆ ಬಣ್ಣ ಬಳೆದುಕೊಳ್ತಾರೆ. ಆಗ, ಇದು ಕಾಲೇಜು ಹುಡುಗಿಯನ್ನು ರೇಗಿಸುವ ಸಣ್ಣ ಮತ್ತು ಅತ್ಯಂತ ಪ್ರಭಾವಶಾಲಿ ಪಾತ್ರ ಎಂದು ಪುಟ್ಟಣ್ಣ ಕಣಗಾಲ್ ವಿವರಿಸಿ ಹೇಳುತ್ತಾರೆ. ಅಂಬರೀಶ್ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಅದೇ ಚಿತ್ರದಲ್ಲಿ ವಿಷ್ಣುವರ್ದನ್ ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುತ್ತಾರೆ. ಈ ಚಿತ್ರ ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತದೆ.ಅಂಬರೀಶ್ ಅಂದು ಆ ಚಿತ್ರದಲ್ಲಿ ನಟಿಸಿದ್ದ ಪಾತ್ರದ ಹೆಸರು ’ಜಲೀಲ’. ಈ ಒಂದು ಸಣ್ಣ ಪಾತ್ರದ ಮೂಲಕ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರದಲ್ಲಿ ಹೊಸ ಟ್ರೆಂಡ್‌ಅನ್ನೇ ಸೃಷ್ಟಿ ಮಾಡಿದ್ದರು. ಇದೇ ಚಿತ್ರ ಹಿಂದಿಗೆ ರೀಮೇಕ್ ಆದಾಗಲೂ ಆ ಪಾತ್ರವನ್ನು ಅಂಬರೀಶ್ ಅವರೇ ಜಲೀಲಾ ಪಾತ್ರ ಮಾಡಿದ್ದರು.

ಬಹುಶಃ ಅದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಹಿಂದಿಯಲ್ಲಿ ನಟಿಸಿದ್ದರು.ಇನ್ನೂ ಜಲೀಲ ಪಾತ್ರದ ಮೂಲಕ, ತನ್ನ ವಿಶೇಷ ಮ್ಯಾನರಿಸಂ ಮೂಲಕ ಅಂದಿನ ದಿನಗಳಲ್ಲಿ ಕನ್ನಡಿಗರ ಮನಸಿನಲ್ಲಿ ಗಟ್ಟಿಯಾದ ಸ್ಥಾನ ಪಡೆದುಕೊಂಡ ಮೇಲೆ, ಅಂಬರೀಶ್ ಹಿಂತಿರುಗಿ ನೋಡಿದ ಉದಾಹರಣೆಗಳಿಲ್ಲ. ಇಂಟ್ರೆಸ್ಟಿಂಗ್ ಅಂದ್ರೆ ನಾಗರಹಾವಿನ ಮೂಲಕ ಖ್ಯಾತಿಯ ತುತ್ತ ತುದಿಯನ್ನೂ ಅಂಬಿ ತಲುಪಿದ ಮೇಲೂ.. ಅಂಬಿ ಪುಟ್ಟಣ್ಣ ಅವ್ರನ್ನ ಮರೆಯಲಿಲ್ಲ. ಪುಣ್ಣಟ್ಟ ಅಂಬಿಯನ್ನೂ ಕೈ ಬಿಡಲಿಲ್ಲ. ಇದೇ ಸಂಬಂಧ, ಅನುಬಂಧ.. ಪುಟ್ಟಣ್ಣ ಸಿನಿಜೀವನದಲ್ಲೂ ಸ್ಪೆಷಲ್ ಆಗಿ ಕಾಣ್ಸುತ್ತೆ. ಅಂಬಿಯ ಲೈಫ್ ಜರ್ನಿಯಲ್ಲಿ ಪುಟ್ಟಣ್ಣ ನಿರ್ದೇಶನದ ಸಿನಿಮಾಗಳೇ ಕಳಶ ಅನ್ನುವಂತೆ ಕಾಣಿಸುತ್ವೆ.ಅಂಬರೀಶ್ ಯಾರಿಗೆ ತಾನೇ ಗೊತ್ತಿಲ್ಲ? ಇವರದೇ ಒಂದು ಇಮೇಜ್. ನಿರ್ದೇಶಕ ರೂಪಿಸಿದ ಪಾತ್ರವೇ ತಾವಾಗಿ ಜನರೆದುರು ತಮ್ಮೊಳಗಿನ ಕಲಾವಿದನನ್ನು ತೆರೆದುಕೊಳ್ಳುವುದು ಇವರ ಗುರಿಯಾಗಿತ್ತು; ಎಲ್ಲಾ ಬಗೆಯ ಪಾತ್ರಗಳಿಗೂ ಒಗ್ಗಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದ ಅಂಬರೀಶ್ ಸ್ವೀಕರಿಸುತ್ತಾನೇ ಬಂದಿದ್ದರು. ವಿಶೇಷ ಅಂದ್ರೆ ಇವ್ರ ಸಾಮರ್ಥ್ಯವನ್ನ ಒರೆಗಲ್ಲಿಗೆ ಹಚ್ಚಿದ್ದು ಪುಟ್ಟಣ್ಣ ಕಣ್‌ಗಾಲ್ ಸಿನಿಮಾಗಳೇ.

ರೆಬೆಲ್ ಸ್ಟಾರ್ ಅಂಬರೀಶ್, ಇನ್ನೂರಕ್ಕೂ ಹೆಚ್ಚಿನ ಸಿನಿಮಾಗಳನ್ನ ಮಾಡಿರಬಹುದು. ಬಟ್, ಅಂಬಿಯ ಹೃದಯಕ್ಕೆ ಹತ್ತಿರವಾಗಿದ್ದು ನಾಗರಹಾವು ಸಿನಿಮಾ ಮಾತ್ರ. ಹಾಗಾಗಿ, ನಾಗರಹಾವು ಮರು ಬಿಡುಗಡೆಯಾಯ್ತಲ್ಲ. ಆಗ, ಅಕ್ಷರಶ ಮಗುವಿನಂತೆ ಸಂಭ್ರಮಿಸಿದ್ದರು ಅಂಬಿ. ಅಷ್ಟೇ ಅಲ್ಲ ನಾಗರಹಾವು ಸಿಕ್ಕಿದ್ದೇಗೆ ಅನ್ನುವದನ್ನೂ ಹೇಳಿದ್ದರು. ಹಳೆಯ ನೆನಪುಗಳಿಗೆ ಜಾರಿದ್ದರು. ವಿಷ್ಣು ಮೊದಲ ಭೇಟಿಯಾದ ಕ್ಷಣಗಳನ್ನ ಮೆಲುಕು ಹಾಕಿಕೊಂಡಿದ್ದರು.ಇನ್ನು, ನಾಗರಹಾವು ಹಿಂದಿಗೆ ರಿಮೇಕ್ ಆಗಿತ್ತಲ್ಲಾ.. ಆಗ್ಲೂ ಹಿಂದಿಯಲ್ಲೂ ಜಲೀಲನ ಪಾತ್ರವನ್ನ ಅಂಬಿನೇ ಮಾಡಿದ್ದರು. ಅದೇ ದಿನಗಳನ್ನ ನೆನಪು ಮಾಡಿಕೊಂಡಿದ್ದ ಅಂಬಿ ಪುಟ್ಟಣ್ಣ ಕಣಗಾಲ್, ರಾಜ್ ಕಪೂರ್ ರೆಡ್ ಕಾರ್ಪೇಟ್ ಹಾಕಿದ್ದನ್ನ ರೀಕಾಲ್ ಮಾಡಿಕೊಂಡಿದ್ದರು. ಪುಟ್ಟಣ್ಣ ಇಸ್ ಬೆಸ್ಟ್ ಡೈರೆಕ್ಟರ್ ಅನ್ನುವ ಮೂಲಕ ತಮ್ಮ ಗುರುಗಳನ್ನ ನೆನೆಸಿಕೊಂಡಿದ್ದರು ಅಂಬಿ.

ಅಂದಹಾಗೇ ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. ಅದುವೇ ಅಂಬರೀಶ್ ಹಾಗೂ ಪುಟ್ಟಣ್ಣ ನಡುವಿದ್ದ ಭಾವತಾತ್ಮಕ ಸಂಬಂಧ. ಹೌದು, ಆಗ್ಲೇ ಹೇಳಿದಂತೆ ಅಂಬಿಯ ಸಿನಿಜೀವನದ ತಿರುವಿಗೆ ಪುಟ್ಟಣ್ಣ ಬಹುಮುಖ್ಯ ಕಾರಣ. ಇದನ್ನ ಮೊದಲಿಂದನೂ ಒಪ್ಪಿಕೊಳ್ತಿದ್ದ ಅಂಬರೀಶ್, ತಮ್ಮ ಗುರುಗಳಾದ ಪುಟ್ಟಣ್ಣಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು ಅನ್ನೋದು ಬಹುತೇಕರಿಗೆ ಗೊತ್ತಿರದ ವಿಚಾರ.ಹೌದು, ಸಾಲು ಸಾಲು ಹಿಟ್ ಸಿನಿಮಾ ನೀಡಿ, ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದ ಪುಟ್ಟಣ್ಣ, ವ್ಯಯಕ್ತಿಕ ಜೀವನದ ಸಮಸ್ಯೆಗಳಿಂದ ಹೈರಾಣಾಗಿದ್ದರು. ಇನ್ನೂ ಆರ್ಥಿಕ ಪರಿಸ್ಥಿತಿನೂ ಹೇಳಿಕೊಳ್ಳುವಂಗಿರಲಿಲ್ಲ. ಆಗ, ಇದೇ ವಿಚಾರ ಅಂಬರೀಶ್ ಕಿವಿಗೆ ಬೀಳುತ್ತೆ. ಅಷ್ಟರಲ್ಲಾಗ್ಲೇ ಅಂಬಿ ಚಿತ್ರರಂಗದಲ್ಲಿ ಭದ್ರ ನೆಲೆಯೂರಿರುತ್ತಾರೆ.

ಹಾಗಾಗಿ, ತನ್ನ ಗುರುಗಳಿಗೆ ನೆರವಾಗುವ ಮನಸು ಮಾಡಿದ್ದ ಅಂಬಿ ಆರ್ಥಿಕ ಸಹಾಯವನ್ನೂ ಮಾಡ್ತಾರೆ. ಮತ್ತೊಂದು ಸಿನಿಮಾ ಮಾಡೋಣ ಅನ್ನುವ ಮೂಲಕ ಧೈರ್ಯ ತುಂಬುತ್ತಾರೆ.ಇನ್ನು ಪುಟ್ಟಣ್ಣ ಕಣಗಾಲ್ ವ್ಯಯಕ್ತಿಕ ಜೀವನದ ವಿಚಾರದಲ್ಲಿ ಆರತಿ ವಿಚಾರ ಬಂದಾಗ್ಲೂ ಅಂಬಿ ಅನೇಕ ಸಲ ಮಾತನಾಡಿದ್ದರು. ಅನೇಕರ ಬಾಯಿಗೆ ಬೀಗನೂ ಜಡಿದಿದ್ದರು. ಇನ್ನೂ ಹೊಸ ನಿರ್ದೇಶಕರನ್ನೆಲ್ಲಾ ಪುಟ್ಟಣ್ಣ ಕಣಗಾಲ್ ಅವ್ರನ್ನ ಹೋಲಿಸುವಂತ ಕೆಲ್ಸಗಳೂ ಆದಾಗ್ಲೂ ಅಂಬಿ ಗುಡುಗಿದ್ದರು. ಪುಟ್ಟಣ್ಣಗೆ ಪುಟ್ಟಣ್ಣನೇ ಸಾಟಿ ಅಂದಿದ್ದರು.ಏನೆ ಇರ‍್ಲಿ, ಅಂಬಿ ಇಂದು ನಮ್ಮೊಂದಿಗಿಲ್ಲ. ಆದ್ರೆ ಅಂಬಿಯ ನೆನಪುಗಳು ಸದಾ ಜೀವಂತ. ತಮ್ಮ ಸಿನಿಮಾಗಳಿಂದ.. ವ್ಯಕ್ತಿತ್ವದಿಂದ.. ಎಲ್ಲರಿಗೂ ಮಾದಿಯಾಗಿ ನಿಂತಿದ್ದ ಅಂಬಿಯನ್ನ ಕರುನಾಡು ಸದಾ ಕಾಲ ನೆನಪಿನಲ್ಲಿಟ್ಟುರುತ್ತೆ.

LEAVE A REPLY

Please enter your comment!
Please enter your name here