Home District ಪ್ರಜ್ವಲ್ ಗೆ ಹಾಸನ ಬಿಟ್ಟು ಕೊಟ್ಟ ದೇವೇಗೌಡ! ವೇದಿಕೆಯಲ್ಲೇ ಅಪ್ಪ-ಮಗ-ಮೊಮ್ಮಗನ ಕಣ್ಣೀರು!

ಪ್ರಜ್ವಲ್ ಗೆ ಹಾಸನ ಬಿಟ್ಟು ಕೊಟ್ಟ ದೇವೇಗೌಡ! ವೇದಿಕೆಯಲ್ಲೇ ಅಪ್ಪ-ಮಗ-ಮೊಮ್ಮಗನ ಕಣ್ಣೀರು!

286
0
SHARE

ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೊಳೆನರಸೀಪುರದಲ್ಲಿ ಘೋಷಿಸಿದ್ದಾರೆ… ನಾನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಬುಧವಾರ ಅಧಿಕೃತವಾಗಿ ಘೋಷಿಸುವ ಮೂಲಕ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.

ದೇವೇಗೌಡ್ರು ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಡುವಾಗ ಕಣ್ಣೀರಿಟ್ಟರು.. ಇದನ್ನು ನೋಡಿದ ಮಗ ರೇವಣ್ಣ, ಮೊಮ್ಮಗ ಪ್ರಜ್ವಲ್ ಕೂಡ ಕಣ್ಣೀರಿಟ್ಟರು.ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರ ಮೂರನೇ ತಲೆಮಾರು ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ… ಹೌದು, ಎಲ್ಲರು ನಿರೀಕ್ಷೆ ಮಾಡಿದಂತೆ ದೇವೇಗೌಡ್ರ ಮೊಮ್ಮಗ, ಸಚಿವ ಹೆಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ..

ಅದು ತಾತಾ ದೇವೇಗೌಡ್ರು ಸ್ಪರ್ಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ಈ ಬಾರಿ ಕಣಕ್ಕಿಳಿದಿದ್ದಾರೆ.ನಾನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬುಧವಾರ ಅಧಿಕೃತವಾಗಿ ಘೋಷಿಸುವ ಮೂಲಕ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ನನ್ನ ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ. ಇನ್ನು ನಿಮ್ಮ ಮಡಿಲಿಗೆ ಪ್ರಜ್ವಲ್​ನನ್ನು ಹಾಕಿದ್ದೇನೆ.

ನಿಮ್ಮ ಅನುಮತಿ ಪಡೆದೆ ನಾನು ಪ್ರಜ್ವಲ್​ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇನೆ. ನಿಮ್ಮ ಆಶೀರ್ವಾದ ಪ್ರಜ್ವಲ್​ ಮೇಲೆ ಇರಲಿ ಎಂದು ದೇವೇಗೌಡರು ಕಣ್ಣೀರಿಟ್ಟರು.ವೇದಿಕೆಯ ಮೇಲೆ ತಂದೆ ಕಣ್ಣೀರು ಸುರಿಸುತ್ತಿರುವುದನ್ನು ನೋಡಿ ಸಚಿವ ರೇವಣ್ಣ ಕೂಡ ಕಣ್ಣೀರ ಧಾರೆ ಹರಿಸಿದರು. ತನ್ನ ತಾತ ಮತ್ತು ತಂದೆ ಅಳುತ್ತಿರುವುದನ್ನು ನೋಡಿ ಪ್ರಜ್ವಲ್ ರೇವಣ್ಣಗೆ ಅಳು ತಡೆಯಲಾಗಲಿಲ್ಲ.ಇನ್ನೂ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿರುವುದಾಗಿ ದೇವೇಗೌಡ್ರು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಹಾಸನ ಬಿಟ್ಟು ಬೆಂಗಳೂರು ಉತ್ತರ ಇಲ್ಲವೇ ಮೈಸೂರು ಕ್ಷೇತ್ರದಿಂದ ದೇವೇಗೌಡ್ರು ಸ್ಪರ್ಧಿಸುತ್ತಾರೆ ಎಂಬ ಮಾತಿತ್ತು.ಪ್ರಜ್ವಲ್ ಅಭ್ಯರ್ಥಿ ಎಂದು ಘೋಷಿಸುವ ಮುನ್ನ ಹಾಸನದ ಮೂಡಲಹಿಪ್ಪೆ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯಕ್ಕೆ ದೇವೇಗೌಡ್ರು, ಮೊಮ್ಮಗ ಪ್ರಜ್ವಲ್ ರೇವಣ್ಣ, ಪುತ್ರ ರೇವಣ್ಣ, ಸೊಸೆ ಭವಾನಿ ರೇವಣ್ಣ ಜೊತೆ ಆಗಮಿಸಿ ನಾಮಪತ್ರವನ್ನು ಇಟ್ಟು ಪೂಜೆ ಸಲ್ಲಿಸಿದರು.

ಅಲ್ಲಿಂದ ಸಮಾವೇಶದ ವೇದಿಕೆ ತನಕ ತೆರದ ವಾಹನದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಅಭ್ಯರ್ಥಿ ಪ್ರಜ್ವಲ್, ರೇವಣ್ಣ ದಂಪತಿ ಪ್ರಚಾರ ನಡೆಸಿದರು.ದೇವೇಗೌಡ್ರು ಹಾಸನ ಕಣದಿಂದ ಹಿಂದೆ ಸರಿದಿದ್ದಾರೆ.. ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಬಂದಿದ್ದಾರೆ… ಆದ್ರೆ ದೇವೇಗೌಡ್ರಿಗೆ ಸಿಕ್ಕ ಜನಬೆಂಬಲ ಪ್ರಜ್ವಲ್ ಗೆ ಸಿಗುತ್ತಾ ಅನ್ನೋದನ್ನ ತಿಳಿಯಬೇಕಾದ್ರೆ ಚುನಾವಣೆ ವರೆಗೂ ಕಾಯಬೇಕು…

LEAVE A REPLY

Please enter your comment!
Please enter your name here