Home District ಪ್ರಜ್ವಲ್ ರೇವಣ್ಣ ಬೆಂಬಲಿಸಲು ಕೈ ಕಾರ್ಯಕರ್ತರು ನಕಾರ.! ಜಂಟಿ ಸಭೆಯಲ್ಲಿ ಕುರ್ಚಿಗಳನ್ನು ಎಸೆದು ಆಕ್ರೋಶ..!

ಪ್ರಜ್ವಲ್ ರೇವಣ್ಣ ಬೆಂಬಲಿಸಲು ಕೈ ಕಾರ್ಯಕರ್ತರು ನಕಾರ.! ಜಂಟಿ ಸಭೆಯಲ್ಲಿ ಕುರ್ಚಿಗಳನ್ನು ಎಸೆದು ಆಕ್ರೋಶ..!

1118
0
SHARE

ಹಾಸನದಲ್ಲಿ ಮೈತ್ರಿ ಪಕ್ಷಗಳ ನಡುವಿನ ಮುನಿಸನ್ನು ಶಮನ ಮಾಡಲು ಉಭಯ ಪಕ್ಷಗಳ ನಾಯಕರು ನಿರಂತರ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದೆಡೆ ಕೈ ಕಾರ್ಯಕರ್ತರು ಹಾಗೂ ಮುಖಂಡರು ಮಾತ್ರ ಬಂಡಾಯದ ಬಾವುಟ ಹಾರಿಸುತ್ತಲೇ ಇದ್ದಾರೆ.

ನಿನ್ನೆ ಅರಸೀಕೆರೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕೆಲವರು ನಮ್ಮ ಬಿಜೆಪಿಗೆ ಎಂದಿದ್ದರು. ಬೇಲೂರಿನಲ್ಲಿ ನಡೆದ ಸಭೆಯಲ್ಲೂ ಜೆಡಿಎಸ್ ವಿರುದ್ಧ ಅಸಮಾಧಾನ ಹೊರ ಹಾಕಿದ ಪ್ರಸಂಗ ನಡೆಯಿತು. ಈ ವೇಳೆ ರೊಚ್ಚಿಗೆದ್ದ ಕೆಲವರು, ಚೇರ್ ಎಸೆದಿದ್ದಲ್ಲದೇ, ಮುರಿದು ಹಾಕಿ ದಳಪತಿಗಳ ವಿರುದ್ಧ ಘೋಷಣೆ ಕೂಗಿದರು.ಬಿಜೆಪಿಯ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ತಾಯಿ ಭವಾನಿ ಹಾಗೂ ಸ್ಥಳೀಯ ಶಾಸಕರ ಜೊತೆಗೂಡಿ ಪ್ರಜ್ವಲ್ ರೇವಣ್ಣ ಹಾಸನ ಹಾಗೂ ಕಡೂರಿನಲ್ಲಿ ಮತಯಾಚನೆ ಮಾಡಿದ್ದಾರೆ. ಆದ್ರೆ ಹಾಸನದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಸಿಟ್ಟು ಕಡಿಮೆ ಮಾಡಲು ಉಭಯ ಪಕ್ಷಗಳ ನಾಯಕರು ಕಸರತ್ತು ನಡೆಸುತ್ತಿದ್ದರೆ, ತಳಮಟ್ಟದ ಕಾರ್ಯಕರ್ತರು ಮಾತ್ರ ಜೆಡಿಎಸ್ ವಿರುದ್ಧ ಬಂಡಾಯದ ಬಾವುಟ ಹಾರಿಸುತ್ತಲೇ ಇದ್ದಾರೆ. ಶುಕ್ರವಾರ ಅರಸೀಕೆರೆಯ ಕಾಂಗ್ರೆಸ್ ಸಭೆಯಲ್ಲಿ ಕೆಲವರು ನಮ್ಮ ಮತ ಜೆಡಿಎಸ್ಗಲ್ಲ, ಬಿಜೆಪಿಗೆ ಎಂದು ನೇರವಾಗಿಯೇ ಹೇಳಿದ್ದರು.

ಬೇಲೂರಿನಲ್ಲಿ ನಡೆದ ಬ್ಲಾಕ್ ಮತ್ತು ಯೂತ್ ಕಾಂಗ್ರೆಸ್ ಸಭೆಯಲ್ಲೂ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಇಂದು ನಡೆದ ಸಭೆಯಲ್ಲಿ ಜೆಡಿಎಸ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ ಕೆಲ ಕೈ ಕಾರ್ಯಕರ್ತರು, ಚೇರ್ ಎಸೆದಾಡಿ, ಮುರಿದು ಧಿಕ್ಕಾರ ಕೂಗಿದ್ದರಿಂದ ಕೆಲಹೊತ್ತು ಗದ್ದಲ ಗೊಂದಲ ಏರ್ಪಟ್ಟಿತ್ತು.ಇದಕ್ಕೂ ಮುನ್ನ ಹಾಸನದಲ್ಲಿ ಸಾಮೂಹಿಕ ಪತ್ರಿಕಾಗೋಷ್ಟಿ ನಡೆಸಿದ ಜಿಲ್ಲಾ ಕಾಂಗ್ರೆಸ್ ನಾಯಕರು, ಬಿಜೆಪಿ ಹಾಗೂ ಆ ಪಕ್ಷದ ಅಭ್ಯರ್ಥಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಮಾತನಾಡಿ, ಮಂಜು ಪಕ್ಷ ಬಿಟ್ಟು ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದರು. ಅವರು ಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿರಲಿಲ್ಲ. ವ್ಯಕ್ತಿಯಿಂದ ಪಕ್ಷ ಇಲ್ಲ. ಸಿದ್ದರಾಮಯ್ಯ ಅವರನ್ನು ಮಂತ್ರಿ ಮಾಡಿದ್ರೂ, ಜಿಲ್ಲೆಯಲ್ಲಿ ಅವರೂ ಗೆಲ್ಲಲಿಲ್ಲ. ಬೇರೆಯವರನ್ನೂ ಗೆಲ್ಲಿಸಲಿಲ್ಲ. ಅವರು ಬಿಜೆಪಿಗೆ ಹೋಗಿರುವುದು ಮೋದಿ ಪ್ರಧಾನಿ ಮಾಡಲು ಅಲ್ಲ.

ಅವಕಾಶಕ್ಕಾಗಿ ಎಂದು ಕಿಡಿ ಕಾರಿದರು. ಬಿಜೆಪಿಯವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ. ಬಿಜೆಪಿಗೆ ಓಟು ಹಾಕಿದ್ರೆ, ಅಂಥ ನತದೃಷ್ಟರು ಯಾರೂ ಇಲ್ಲ ಎಂದರು. ಏನೇ ಮ್ಯಾಜಿಕ್ ಇದ್ರೂ, ಪ್ರಜ್ವಲ್ ರೇವಣ್ಣ ಗೆಲುವು ನಿಶ್ಚಿತ ಎಂದರು.ಅಲ್ಪಸಂಖ್ಯಾತರ ಮತಗಳ ಸೆಳೆಯುತ್ತಾರೆಂಬ ಬಿಜೆಪಿ ಆರೋಪದ ಹಿನ್ನೆಲೆಯಲ್ಲಿ ಹಾಸನ ಡಿಸಿ ಅಕ್ರಮ್ ಪಾಷಾ ವರ್ಗಾವಣೆಗೊಂಡಿದ್ದಾರೆ.

ಅಕ್ರಮ್ ಪಾಷಾ ಜಾಗಕ್ಕೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೂತನ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಭಯ ಪಕ್ಷಗಳ ಫ್ರಂಟ್ ಲೈನ್ ನಾಯಕರು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ, ಸ್ಥಳೀಯ ಮಟ್ಟದಲ್ಲಿ ಆಂತರೀಕ ಬೇಗುದಿ ಸ್ಫೋಟಿಸುತ್ತಲೇ ಇರುವುದು ದಳಪತಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ.

LEAVE A REPLY

Please enter your comment!
Please enter your name here