Home District ಪ್ರತಾಪ್ ಸಿಂಹಗೆ BJP ಮುಖಂಡನಿಂದಲೇ ಕ್ಲಾಸ್..! BJP ಶಾಸಕರ ಮುಂದೆ ತೀವ್ರ ಮುಜುಗರಕ್ಕೀಡಾದ ಸಂಸದ ಪ್ರತಾಪ್...

ಪ್ರತಾಪ್ ಸಿಂಹಗೆ BJP ಮುಖಂಡನಿಂದಲೇ ಕ್ಲಾಸ್..! BJP ಶಾಸಕರ ಮುಂದೆ ತೀವ್ರ ಮುಜುಗರಕ್ಕೀಡಾದ ಸಂಸದ ಪ್ರತಾಪ್ ಸಿಂಹ..?!

1655
0
SHARE

ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೊಳಗಾದ ಸ್ಥಳಗಳ ವೀಕ್ಷಣೆ ವೇಳೆ ಕೇಂದ್ರ ಸರ್ಕಾರದ ತಂಡಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಅಂತ ಆರೋಪಿಸಿ ಬಿಜೆಪಿ ಹಿರಿಯ ಮುಖಂಡರೊಬ್ಬರು ಸಂಸದ ಪ್ರತಾಪ ಸಿಂಹ ಅವರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ನಿನ್ನೆಯಿಂದ ಕೊಡಗಿನಲ್ಲಿ ಬೀಡು ಬಿಟ್ಟಿರೋ ಕೆಂದ್ರದ ಸಮಿತಿ ಕೊಡಗಿನಲ್ಲಿ ಜಲಪ್ರಳಯದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮಹಾ ಜಲಪ್ರಳಯಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ಮುಳುಗಿತ್ತು, ಈ ಹಿನ್ನೆಲೆಯಲ್ಲಿ ಇಂದು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ನಷ್ಟ ಹಾಗೂ ಪ್ರಕೃತಿ ವಿಕೋಪಕ್ಕೆ ಕಾರಣದ ಕುರಿತಾಗಿ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಕೊಡಗಿಗೆ ಆಗಮಿಸಿರುವ ಅಧಿಕಾರಿಗಳ ತಂಡ ಇಂದು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿತ್ತು.

ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಸಂಸದ ಪ್ರತಾಪ ಸಿಂಹ ಅಲ್ಲಿನ ಕೆಲ ಭಾಗಗಳಲ್ಲಿ ಖಾಸಗಿಯವರು ಭೂಪರಿವರ್ತನೆ ಮಾಡಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ರು. ಇದರಿಂದ ಗರಂ ಆದ ಅಲ್ಲಿನ ಬಿಜೆಪಿ ಮುಖಂಡ ಎಂ.ಬಿ ದೇವಯ್ಯ, ಪ್ರತಾಪ ಸಿಂಹ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದಲ್ಲದೇ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು.

ನಾವು ಆರಿಸಿ ಕಳುಹಿಸಿದ ಸಂಸದರು ನೀವು ನಮ್ಮ ಬಳಿ ಮಾಹಿತಿ ಪಡೆಯದೇ ತಪ್ಪು ಮಾಹಿತಿಯನ್ನ ನೀಡುತ್ತಿದ್ದೀರ. ತಲ ತಲಾಂತರಗಳಿಂದ ಇಲ್ಲಿ ಬದುಕುತ್ತಿರುವ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದ್ದೀರಿ ಅಂತ ಸಕತ್ ಕ್ಲಾಸ್ ತೆಗೆದುಕೊಂಡ್ರು. ಇದ್ರಿಂದ ಇರುಸು ಮುರುಸುಗೊಂಡ ಪ್ರತಾಪ ಸಿಂಹ ಮುಜುಗರಗೊಂಡು ಸ್ಥಳದಿಂದ ಕಾಲ್ಕಿತ್ತರು.

ಸ್ಥಳೀಯರೊಂದಿಗೆ ಚರ್ಚಿಸಿ ಅಲ್ಲಿನ ನೈಜ್ಯ ಸಮಸ್ಯೆಯನ್ನಯ ಅರಿಯದೇ ಅಧಿಕಾರಿಗಳಿಗೆ ಮಾಹಿತಿ ನೀಡಲು ಮುಂದಾಗಿದ್ದ ಪ್ರತಾಪ್ ಸಿಂಹ ಓಪನ್ ಆಗಿಯೇ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.ನಿನ್ನೆ ಕೆಲವು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರದ ಸಮಿತಿ ಇಂದು ಮಡಿಕೇರಿ ವ್ಯಾಪ್ತಿಯ ಮೊಣ್ಣಂಗೇರಿ, ಹೆಬ್ಬಟ್ಟಗೇರಿ, ಕಾಲೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಲ್ಲದೇ ಸಂಪೂರ್ಣ ಹಾನಿಗೊಳಗಾಗಿರುವ ಮಂಗಳೂರು ರಸ್ತೆಗೂ ತೆರಳಿ ವೀಕ್ಷಣೆ ನಡೆಸಿದ್ರು. ಇಂದು ಮಡಿಕೇರಿಯಿಂದ ತೆರಳಲಿರುವ ಸಮಿತಿಯ ಸದಸ್ಯರು ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಉಂಟಾಗಿರುವ ಹಾನಿಯ ಬಗ್ಗೆ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.ಇನ್ನು ಹಾಸನ ಜಿಲ್ಲೆಯ ಅತಿವೃಷ್ಠಿ ಪೀಡಿತ ಪ್ರದೇಶಗಳಿಗೂ ಕೇಂದ್ರ ತಂಡ ಭೇಟಿ ಶಿರಾಡಿಘಾಟ್, ಹತ್ತೂರು, ಬಿಸಿಲೇಘಾಟ್ ಸೇರಿ 10ಕ್ಕೂ ಹೆಚ್ಚು ಪ್ರದೇಶಗಳಿಗಲ್ಲಿ ಅಧ್ಯಯನ ನಡೆಸಿ ನಾಳೆ ಸರ್ಕಾರಕ್ಕೆ ವರದಿ ನೀಡಲಿದೆ.

LEAVE A REPLY

Please enter your comment!
Please enter your name here