Home District ಪ್ರತಾಪ್ ಸಿಂಹ ವಿರುದ್ಧ ಅಖಾಡಕ್ಕಿಳಿಯೋರು ಯಾರು..? ಮೈಸೂರು-ಕೊಡಗು ಕ್ಷೇತ್ರಕ್ಕಾಗಿ ದೋಸ್ತಿಗಳ ಹಗ್ಗಜಗ್ಗಾಟ..! ಹೆಚ್.ಡಿ.ದೇವೇಗೌಡರು, ವಿಜಯಶಂಕರ್ ನಡುವೆ...

ಪ್ರತಾಪ್ ಸಿಂಹ ವಿರುದ್ಧ ಅಖಾಡಕ್ಕಿಳಿಯೋರು ಯಾರು..? ಮೈಸೂರು-ಕೊಡಗು ಕ್ಷೇತ್ರಕ್ಕಾಗಿ ದೋಸ್ತಿಗಳ ಹಗ್ಗಜಗ್ಗಾಟ..! ಹೆಚ್.ಡಿ.ದೇವೇಗೌಡರು, ವಿಜಯಶಂಕರ್ ನಡುವೆ ಪೈಪೋಟಿ..!

431
0
SHARE

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ತಲ್ಲಣ ಶುರುವಾಗಿದೆ. ದೋಸ್ತಿ ಪಕ್ಷಗಳಲ್ಲಿ ಸೀಟು ಹಂಚಿಕೆ ಗೊಂದಲ ಮುಂದಿವರೆದಿದ್ದು, ಮೈಸೂರು- ಕೊಡಗು ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುಗೆ ಹಗ್ಗ ಜಗ್ಗಾಟ ಮುಂದುವರಿದೆ.

ಜೆಡಿಎಸ್‌ನವರು ಮೈಸೂರು ಬಿಡಲು ತಯಾರಿಲ್ಲ, ಇನ್ನೊಂದೆಡೆ ಸಿದ್ದರಾಮಯ್ಯ ಕೂಡ ನಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಿರುವಾಗ ಹಾಲಿ ಸಂಸದ ಪ್ರತಾಪ್ ಸಿಂಹ ವಿರುದ್ದ ಸೆಣಸಾಡೋರು ದೊಡ್ಡಗೌಡರಾ….? ಇಲ್ಲ ವಿಜಯಶಂಕರಾ…? ಅನ್ನೋ ಕುತೂಹಲ ಎಲ್ಲೆಡೆ ಮೂಡಿದೆ.ಲೋಕಸಭಾ ಚುನಾವಣಾ ಕಣ ರಂಗಾಗುತ್ತಿದ್ದು, ಮೈಸೂರು – ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಗೊಂದಲಮಯವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತೆ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ.

ಆದ್ರೆ, ಸಿಂಹ ವಿರುದ್ಧ ಸೆಣಸಾಡೋಕೆ ಮೈತ್ರಿ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಖರವಾಗಿಲ್ಲ. ತವರು ಕ್ಷೇತ್ರವನ್ನು ಕಾಂಗ್ರೆಸ್ ಹಿಡಿತದಲ್ಲಿಯೇ ಇಟ್ಟುಕೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆ ಹರಸಾಹಸ ಪಡುತ್ತಿದ್ದರೆ, ಇತ್ತ ಮೈಸೂರು ನಮಗೇ ಬೇಕು ಎಂದು ಜೆಡಿಎಸ್ ನ ದೊಡ್ಡಗೌಡರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎರಡೂ ಪಕ್ಷದ ಸ್ಥಳೀಯ ಮುಖಂಡರು ಕನ್‌ಫ್ಯೂಸ್ ನಲ್ಲಿದ್ದಾರೆ. ಹಾಸನ ಕ್ಷೇತ್ರವನ್ನು ಮೊಮ್ಮೊಗನಿಗೆ ಬಿಟ್ಟು ಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು, ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರಕ್ಕಿಂತ ಮೈಸೂರು ಸೇಫ್ ಅಂತ ಭಾವಿಸಿದ್ದಾರೆ..

ಆದ್ರೆ, ಈಗಾಗಲೇ ಟಿಕೆಟ್ ಕೊಡುವ ಭರವಸೆ ನೀಡಿ ಬಿಜೆಪಿಯಿಂದ ಕಾಂಗ್ರೆಸ್ ಗೆ ವಿಜಯಶಂಕರ್ ರನ್ನು ಸಿದ್ದರಾಮಯ್ಯ ಕರೆತಂದಿದ್ದು, ನುಡಿದಂತೆ ನಡೆದುಕೊಳ್ಳಲು ಮೈಸೂರನ್ನು ಕಾಂಗ್ರೆಸ್ ತಕ್ಕೆಗೆ ಪಡೆಯಲು ಪಟ್ಟು ಹಿಡಿದಿದ್ದಾರೆ. ಗುರು-ಶಿಷ್ಯನ ನಡುವಿನ ಜಟಾಪಟಿಯಿಂದಾಗಿ ಆಕಾಂಕ್ಷಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.ಈ ನಡುವೆ ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ಮತ್ತೆ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಆದ್ರೆ, ಸಿಂಹ ಮತ್ತೆ ಸ್ಪರ್ಧೆ ಮಾಡೋಕೆ ಬಿಜೆಪಿ ಒಳಗೇ ಸಾಕಷ್ಟು ವಿರೋಧ ಇದೆ ಎಂಬುದು ಸುಳ್ಳಲ್ಲ.

ಈ ನಡುವೆ ಒಂದು ವೇಳೆ ದೇವೇಗೌಡರೇ ದೋಸ್ತಿ ಅಭ್ಯರ್ಥಿ ಆದರೆ, ಬಿಜೆಪಿ ಕೂಡ ಸ್ಟ್ಯಾಟಜಿ ಬದಲಾಯಿಸುವ ಸಲುವಾಗಿ ಪ್ರತಾಪ್ ಸಿಂಹ ಬದಲಾಗಿ ಬೇರೊಬ್ಬರನ್ನು ಕಣಕ್ಕಿಳಿಸಿದರೂ ಆಶ್ಚರ್ಯ ಪಡುವಂತಿಲ್ಲ.ಇನ್ನು ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಿದ್ದು, 4 ಕ್ಷೇತ್ರದಲ್ಲಿ ಬಿಜೆಪಿ, 3 ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಬಿಜೆಪಿಗೆ 8 ರಲ್ಲಿ 4 ಕ್ಷೇತ್ರದಲ್ಲಿ ಅಧಿಕಾರದಲ್ಲಿರುವುದು ಫ್ಲಸ್ ಆಗುತ್ತೆ.

ಇನ್ನೂ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇರೋದು ದೇವೇಗೌಡರು ಅಭ್ಯರ್ಥಿ ಆದ್ರೆ ಫ್ಲಸ್. ಆದ್ರೆ, ಈ ಕ್ಷೇತ್ರದಲ್ಲಿ ಇದುವರೆಗೂಜೆಡಿಎಸ್ ಗೆದ್ದೇ ಇಲ್ಲ. ಹಾಗಾಗಿ ಕ್ಷೇತ್ರ ನಮಗೆ ಇರಲಿ ಅನ್ನೋದು ಕಾಂಗ್ರೆಸ್ ವಾದವಾಗಿದೆ.ತವರು ಜಿಲ್ಲೆಯ ಟಿಕೆಟ್ ಪಡೆಯುವಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸುತ್ತಾರಾ… ಇಲ್ಲವೇ ಶಿಷ್ಯನಿಗೆ ಸೆಡ್ಡು ಹೊಡೆದು ಗೌಡರು ಎಂಟ್ರಿ ತೆಕೋತಾರಾ ಎಂಬುದು ಸಧ್ಯದ ಕುತೂಹಲ…

LEAVE A REPLY

Please enter your comment!
Please enter your name here