Home District ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯಲ್ಲಿ ಯಾವ ವಿಶೇಷವೂ ಇಲ್ಲ, ಉದ್ದೇಶವೂ ಇಲ್ಲ, ಕನ್ನಡಿಗರಿಗೆ ಗೌರವ ಕೊಡೋ...

ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯಲ್ಲಿ ಯಾವ ವಿಶೇಷವೂ ಇಲ್ಲ, ಉದ್ದೇಶವೂ ಇಲ್ಲ, ಕನ್ನಡಿಗರಿಗೆ ಗೌರವ ಕೊಡೋ ಸಂಸ್ಕೃತಿ ಕಾಂಗ್ರೆಸ್ ನವರಿಗಿಲ್ಲ ಎಂದ H.D.ದೇವೇಗೌಡರು

501
0
SHARE

ನಿನ್ನೆ ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿದ್ದರು. ಇಂದು ದೇವೇಗೌಡರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ದೇವೇಗೌಡರು, ಮೋದಿ ಯಾವುದೇ ರಾಜ್ಯಕ್ಕೆ ಹೋದಾಗ ಆ ರಾಜ್ಯದ ಬಗ್ಗೆ ತಿಳಿದುಕೊಂಡಿರ್ತಾರೆ ಎಂದಿದ್ದಾರೆ…

ಹಾಸನಕ್ಕೆ ಬಂದಾಗ ರಾಹುಲ್ ಗಾಂಧಿ ‘ಕಮ್ ಕ್ಲೀನ್’ ಎಂದಿದ್ರು. ಇದನ್ನೆಲ್ಲ ದೇಶದ ಪ್ರಧಾನಿ ತಿಳಿದುಕೊಂಡಿರ್ತಾರೆ. ಕರ್ನಾಟಕಕ್ಕೆ ಬಂದಾಗ ಏನು ಮಾತನಾಡಬೇಕು ಎಂದು ಅರಿತಿರ್ತಾರೆ. ಮಾಜಿ ಪ್ರಧಾನಿಗೆ ಕಾಂಗ್ರೆಸ್ ಏನ್ ಮಾತಾಡಿದೆ ಎಂದು ತಿಳಿದುಕೊಂಡಿರ್ತಾರೆ. ಅದನ್ನೇ ನಿನ್ನೆ ಹೇಳಿದ್ದಾರೆ…

ಆದರೆ ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ, ವಿಶೇಷವೂ ಇಲ್ಲ ಎಂದಿದ್ದಾರೆ. ಇನ್ನು ರಾಹುಲ್ ಬಗ್ಗೆ ಮಾತಾಡಲ್ಲ, ಇನ್ನೂ ಚಿಕ್ಕವರು, ಅವರು ರಾಜಕೀಯವಾಗಿ ಇ್ನೂ ಬೆಳೀಬೇಕು ಎಂದಿದ್ದಾರೆ. ಜಿ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ನನ್ನ ಫೋಟೋವನ್ನು ವಿಧಾನಸೌಧದಲ್ಲಿ ಹಾಕಿಸಿದ್ರು…

ಆದ್ರೆ ಆದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಅದನ್ನ ತೆಗೆಸಿದ್ರು.ಕನ್ನಡಿಗರಿಗೆ ಗೌರವ ಕೊಡೋ ಸಂಸ್ಕೃತಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರಿಗಿಲ್ಲ ಎಂದು ಕಿಡಿಕಾರಿದ್ದಾರೆ…

LEAVE A REPLY

Please enter your comment!
Please enter your name here