ಅಪ್ಪಟ ಕನ್ನಡಿಗರೇ ನಿರ್ಮಿಸಿ ನಿರ್ದೇಶಿಸುತ್ತಿರುವ ತೆಲುಗು ಹಾಗೂ ಕನ್ನಡದಲ್ಲಿ ತಯಾರಾಗುತ್ತಿರುವ ಡಾರ್ಲಿಂಗ್ ಪ್ರಭಾಸ್ ನಟನೆಯ ಬಿಗ್ ಬಜೆಟ್ ಚಿತ್ರ ಸಲಾರ್ ಇಂದು ಹೈದ್ರಾಬಾದ್ ನಲ್ಲಿ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮ ನಡೆಯಿತು.ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣದ ಪ್ರಭಾಸ್ ನಟಿಸುತ್ತಿರುವ ಚಿತ್ರದ ಮುಹೂರ್ತಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಭಾಗಿಯಾಗಿದ್ದು ಈಗ ಎಲ್ಲರಿಗೂ ಕುತೂಹಲದ ಸಂಗತಿಯಾಗಿದೆ.
ಯಶ್ ಹಾಗೂ ಪ್ರಭಾಸ್ ಇಬ್ಬರೂ ಭಾರತ ಚಿತ್ರರಂಗದ ಬಹು ದೊಡ್ಡ ನಟರು ಇಂತಹ ನಟರು ಸಂಗಮವಾಗುವ ಎಂದರೆ ಅದು ಸುಮ್ಮನೆ ಮಾತಾ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಕೆಜಿಎಫ್ ಹಾಗೂ ಸಲಾರ್ ಈ ಎರಡು ಚಿತ್ರಗಳು ಭಾರತದ ಚಿತ್ರರಂಗದಲ್ಲಿ ಬಹು ಬಜೆಟ್ನ ಚಿತ್ರಗಳು. ಕೆಜಿಎಫ್ ಭಾಗ-1 ಮತ್ತು ಎರಡರಲ್ಲಿ ಯಶ್ ನಟಿಸಿದ್ದರೆ ಸಲಾರ್ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಪ್ರಭಾಸ್ ನಟಿಸಿದ್ದಾರೆ 2 ಚಿತ್ರಕ್ಕೂ ಬಂಡವಾಳ ಹೂಡಿರುವುದು ವಿಜಯ್ ಕಿರಗಂದೂರು ಆಗಿದ್ದರೆ . ನಿರ್ದೇಶನದ ಹೊಣೆ ಹೊತ್ತಿರುವುದು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್.
ಇಂದು ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಪ್ರಭಾಸ್ ಜೊತೆ ರಾಕಿಂಗ್ ಸ್ಟಾರ್ ಯಶ್ ಕೂಡ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು ಚಿತ್ರಪ್ರೇಮಿಗಳಿಗೆ ಕುತೂಹಲಕ್ಕೆ ಕಾರಣವಾಗಿದೆ ದಕ್ಷಿಣ ಭಾರತದ ಖ್ಯಾತ ಚಿತ್ರನಟರ ಸಂಗಮ ತಲೆ ಮೇಲೆ ನೋಡಬಹುದು ಎಂಬ ಆಸೆಗಣ್ಣಿನಿಂದ ಈಗ ಎಲ್ಲರೂ ಕೂಡ ಪ್ರಭಾಸ ಚಿತ್ರದ ಕಡೆ ಮುಖ ಮಾಡಿದ್ದಾರೆ ಕೆಜಿಎಫ್ 2 ಟ್ರೈಲರ್ ಇತಿಹಾಸ ನಿರ್ಮಿಸಿದ್ದು ರಾಕಿಂಗ್ ಸ್ಟಾರ್ ಯಶ್ ರನ್ನ ಒಂದು ಹಂತಕ್ಕೆ ಕೊಂಡೊಯ್ದಿದೆ ಈಗ ಪ್ರಭಾಸ್ ಜೊತೆ ರಾಕಿಂಗ್ ಸ್ಟಾರ್ ಯಶ್ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅಂತೂ ಎಲ್ಲರಿಗೂ ಸಂತೋಷದ ವಿಚಾರವಾಗಿ ಕಾಣುತ್ತಿದೆ ಸಂದರ್ಭದಲ್ಲಿ ಈ ಚಿತ್ರಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸ್ವತ: ಭಾಗವಹಿಸಿ ಶುಭಕೋರಿದ್ದಾರೆ ಅಂದಹಾಗೆ ಅಶ್ವತ್ ನಾರಾಯಣ್ ನಿರ್ಮಾಪಕ ವಿಜಯ್ ಕಿರಗಂದುರ್ ಅವರ ಅಣ್ಣ.
ಸಲಾರ್ ಚಿತ್ರದ ಮೋಷನ್ ಪೋಸ್ಟರ್ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿತ್ತು ಈಗ ಕೆಜಿಎಫ್ 2 ಟ್ರೈಲರ್ ಹೊರಬಂದ ನಂತರ ಇಡೀ ಭಾರತದ ಚಿತ್ರರಂಗ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕವನ್ನು ಕೊಂಡಾಡುತ್ತಿದೆ. ಈಗ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶನ ಕೈಗೆತ್ತಿಕೊಂಡಿರುವ ಪ್ರಶಾಂತ್ ನೀಲ್ ಮತ್ತೆ ಯಾವಾಗ ಕೈಚಳಕ ಮಾಡುತ್ತಾರೆ ಎಂದು ಇಡೀ ಚಿತ್ರರಂಗ ಕಾದು ನೋಡುತ್ತಿದೆ