ಭೀಮಾ ನದಿಯ ಪ್ರವಾಹಕ್ಕೆ ಸಿಲುಕಿ ಕಲಬುರಗಿ ಜಿಲ್ಲೆಯ ಜನರ ಬದುಕು ಬೀದಿಗೆ ಬಿದ್ದಿದೆ.. ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡವರ ರಕ್ಷಣೆಗಾಗಿ ಇಡಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹಗಲು ರಾತ್ರಿ ಶ್ರಮ ವಹಿಸಿದೆ..ಆದ್ರೆ ಇಲ್ಲೊಬ್ಬ ಪಿಎಸ್ಐ ಮಾತ್ರ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಮೇಕೆ ಮರಿಗಳನ್ನ ರಕ್ಷಣೆ ಮಾಡಿರೋದಾಗಿ ದೊಡ್ಡ ಬಿಲ್ಡಪ್ ಕೊಟ್ಟು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೊಳಕಾಲುದ್ದದ ನೀರಿನಲ್ಲಿ ತೆಪ್ಪದ ಮೇಲೆ ನಿಂತಿರುವ ಪಿಎಸ್ಐ…ಹೀಗೆ ಪಿಎಸ್ಐ ನಿಂತುಕೊಂಡಿರುವ ತೆಪ್ಪವನ್ನ ತಳ್ಳಿಕೊಂಡು ಹೋಗುತ್ತಿರುವ ಗ್ರಾಮಸ್ಥರು…ಬರುವಾಗ ದೊಡ್ಡದಾಗಿ ಮೇಕೆಗಳನ್ನ ರಕ್ಷಣೆ ಮಾಡಿರೋದಾಗಿ ಬಿಲ್ಡಪ್ ಕೊಟ್ಟು ವಿಡಿಯೋ ಮಾಡಿಸಿರುವ ಪೊಲೀಸಪ್ಪ……ಅಷ್ಟಕ್ಕು ಇಂತಹೊಂದು ದೃಶ್ಯ ಕಂಡು ಬಂದಿರೋದು ಭೀಮಾ ನದಿಯ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ ಕಲಬುರಗಿ ಜಿಲ್ಲೆಯಲ್ಲಿ.
ಪ್ರವಾಹದಿಂದ ಕಂಗೆಟ್ಟಂತಹ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ, ನೇಲೋಗಿ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಣ್ಣ ಯಲಗೋಡ ಪ್ರವಾಹದ ಸಂದರ್ಭದಲ್ಲಿ ಹುಚ್ಚಾಟ ಮೆರೆದಿದ್ದಾರೆ. ಪ್ರವಾಹಕ್ಕೆ ಸಿಲುಕಿ ಕೂಡಲಗಿ ಗ್ರಾಮ ಮುಳಗಡೆಯಾಗಿದ್ದರಿಂದ ಗ್ರಾಮಸ್ಥರು ಯಾರಾದ್ರು ಸಿಕ್ಕಿ ಹಾಕಿಕೊಂಡಿದ್ದರೆ ಅವರನ್ನ ರಕ್ಷಣೆ ಮಾಡುವಂತಹ ಕೆಲಸ ಮಾಡಬೇಕಿತ್ತು.ಆದ್ರೆ ಅದೆಲ್ಲ ಬಿಟ್ಟು ಮೊಳಕಾಲುದ್ದದ ನೀರಲ್ಲಿ ತಾನು ತೆಪ್ಪದ ಮೇಳೆ ನಿಂತಕೊಂಡು ಗ್ರಾಮಸ್ಥರಿಂದ ಅದನ್ನ ತಳ್ಳಿಸಿಕೊಂಡು ಹೋಗಿ ಮೇಕೆಯೊಂದನ್ನ ಹಿಡಿದುಕೊಂಡು ಬಂದು ಅದನ್ನೆ ದೊಡ್ಡದಾಗಿ ರಕ್ಷಣೆ ಮಾಡಿರುವಂತೆ ಗ್ರಾಮಸ್ಥರಿಂದಲೆ ವಿಡಿಯೋ ಮಾಡಿಸಿ ಶಹಬ್ಬಾಸ್ ಗಿರಿ ಪಡೆದು ತಾವೆ ಸಾಮಾಜೀಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ಇದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಪ್ರವಾಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಗಲು ರಾತ್ರಿ ಎನ್ನದೆ ತಮ್ಮ ಪ್ರಾಣವನ್ನ ಪ್ರಣಕ್ಕಿಟ್ಟು ಜನರನ್ನ ರಕ್ಷಣೆ ಮಾಡಿದ್ದರು.ಇದೀಗ ಪಿಎಸ್ಐ ಮಲ್ಲಣ್ಣ ಗೌಡ ಯಲಗೋಡ ಪ್ರವಾಹ ಸಂದರ್ಭದಲ್ಲಿ ಬಿಲ್ಡಪ್ ಕೊಟ್ಟಿರೋದು ಪೊಲೀಸರೇ ಜನರ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ. ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ವಿಡಿಯೋವನ್ನು ತರಿಸಿಕೊಂಡು ನೋಡಿದ್ದಾರೆ. ವಿಡಿಯೋಗಳ ಕುರಿತು ಮಲ್ಲಣ್ಣಗೌಡ ಯಲಗೋಡ ವಿರುದ್ಧ ವಿಚಾರಣೆ ನಡೆಸೋದಕ್ಕೆ ಆದೇಶ ನೀಡಿದ್ದಾರೆ.
ಭೀಮಾ ನದಿಯ ಪ್ರವಾಹದಲ್ಲಿ ಇಡಿ ಪೊಲೀಸ್ ಇಲಾಖೆ ಸಾಕಷ್ಟು ಜನಪರ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಿದ್ದರು..ಆದ್ರೆ ಮಲ್ಲಣ್ಣ ಯಲಗೋಡ ಮಾಡಿರುವ ಈ ವಿಡಿಯೋಗಳಿಂದ ಇದೀಗ ಪೊಲೀಸ್ ಇಲಾಖೆ ಮುಜುಗರ ಪಡುವಂತಾಗಿದೆ.