Home Cinema ಪ್ರಿನ್ಸ್ ಮಹೇಶ್ ಬಾಬು ತಮ್ಮ ಬರ್ತ್‌ಡೇ ದಿನ ಕೊಟ್ರು ಬರ್ಜರಿ ಗಿಫ್ಟ್..?! ರಿವೀಲ್ ಹಾಯ್ತು ಮಹೇಶ್...

ಪ್ರಿನ್ಸ್ ಮಹೇಶ್ ಬಾಬು ತಮ್ಮ ಬರ್ತ್‌ಡೇ ದಿನ ಕೊಟ್ರು ಬರ್ಜರಿ ಗಿಫ್ಟ್..?! ರಿವೀಲ್ ಹಾಯ್ತು ಮಹೇಶ್ 25ನೇ ಚಿತ್ರ..?!

865
0
SHARE

ಮಹೇಶ್ ಬಾಬು. ಟಿ ಟೌನ್‌ನ ಬ್ಯುಸಿನೆಸ್ ಮ್ಯಾನ್. ಅಭಿಮಾನಿಗಳ ಪಾಲಿನ ಪ್ರಿನ್ಸ್. ತಮ್ಮ ಅಭಿನಯದಿಂದ ಅಭಿಮಾನಿಗಳ ಮನಸು ತಣಿಸುತ್ತಾನೇ ಬಂದಿರುವ ಮಹೇಶ್ ಬಾಬುಗಿಂದು ಹುಟ್ಟುಹಬ್ಬದ ಸಂಭ್ರಮ.ಇವತ್ತು ಟಿಟೌನ್ ಪ್ರಿನ್ಸ್ ಬರ್ತ್‌ಡೇ. ಹಾಗಂತ, ಅಭಿಮಾನಿಗಳ ಅಭಿಮಾನದ ಉತ್ಸವ ಇವತ್ತೇ ನಡೆದಿಲ್ಲ. ಬದಲಿಗೆ ಕಳೆದೊಂದು ವಾರದಿಂದ ಆಂದ್ರದ ಗಲ್ಲಿಗಳಲ್ಲಿ ಸಂಭ್ರಮ ಸಡಗರ ನಡೆಯುತ್ತಾನೇ ಬಂದಿದೆ. ಇದೇ ಸಂಭ್ರಮ..

ಹೆಚ್ಚಾಗಿದ್ದು ಮಹೇಶ್ ಬಾಬು ಇಪ್ಪತ್ತದೈನೇ ಸಿನಿಮಾದ ಮೊದಲ ಝಲಕ್, ಬರ್ತ್‌ಡೇ ದಿನ ಅಂದ್ರೆ ಇವತ್ತು ರಿವೀಲಾಗುತ್ತೆ ಅನ್ನುವ ಸಂಗತಿ ಹೊರಬಿದ್ದಾಗ. ಲೋಗೋ ರಿವೀಲಾದಾಗ.ಮಹೇಶ್ ಬಾಬು ತಮ್ಮ ಇಪ್ಪತೈದನೇ ಸಿನಿಮಾದ ಮಾಹಿತಿ ಅಭಿಮಾನಿಗಳಿಗಾಗಿ ಹಂಚಿಕೊಂಡಾಗ, ಇದೇ ಅಭಿಮಾನಿ ವಲಯದಲ್ಲೊಂದು ಚರ್ಚೆ ಶುರುವಾಗಿತ್ತು. ಅದೇ, ಪ್ರಿನ್ಸ್ ೨೫ನೇ ಸಿನಿಮಾದ ಟೈಟಲ್ ಏನು ಅನ್ನೋದು.

ಇದೇ ಚರ್ಚೆ ಹಾಗೂ ಕೂತುಹಲವನ್ನ ಮತ್ತಷ್ಟು ಹೆಚ್ಚಿಸಿದ್ದ ಮಹೇಶ್ ಬಾಬು & ಡೈರೆಕ್ಟರ್ ವಂಶಿ ಪೈಡಿಪಲ್ಲಿ ಚಿತ್ರದ ಟೈಟಲ್‌ನ ಒಂದೊಂದೇ ಅಕ್ಷರವನ್ನ, ಅನಾವರಣಗೊಳಿಸುತ್ತಾ ಬಂದಿದ್ದರು. ಇದೇ ವೇಳೆ ಮಹೇಶ್ ಬಾಬುರ ಇಬ್ಬರು ಮುದ್ದಾದ ಪುತ್ರಿಯರು ಅನಾವರಣ ಮಾಡಿದ ಅಕ್ಷರಗಳ ವಿಡಿಯೋ ವೈರಲ್ ಕೂಡಾ ಆಗಿತ್ತು. ಚಿತ್ರದ ಶೀರ್ಷಿಕೆ ಏನಿರಬಹುದು ಅನ್ನುವ ಚರ್ಚೆನೂ ಜೋರಾಗಿತ್ತು.ಹೀಗೆ ಅಭಿಮಾನಿ ವಲಯದಲ್ಲೇ ಅತೀವ ಕೂತುಹಲ ಕೆರಳಿಸಿ, ಚರ್ಚೆಗೆ ಕಾರಣವಾಗಿದ್ದ ಮಹೇಶ್ ಬಾಬು, ಫೈನಲಿ..

ತಮ್ಮ ೨೫ನೇ ಸಿನಿಮಾದ ಸಿಕ್ರೇಟ್ ರಿವೀಲ್ ಮಾಡಿದ್ದಾರೆ. ಟೈಟಲ್ ಅನಾವರಣಗೊಳಿಸಿದ್ದಾರೆ. ರಿಶಿ ರೂಪದಲ್ಲಿ ಮಹರ್ಷಿಯಾಗಿದ್ದಾರೆ.ಮಹರ್ಷಿ.. ಮಹೇಶ್ ಬಾಬು ಅಭಿಮಾನಿಗಳಿಗೆ ಅಭಿಮಾನದಿಂದ ಕೊಟ್ಟಿರುವ ಬರ್ತ್‌ಡೇಯ ರಿಟರ್ನ್ ಗಿಫ್ಟ್. ಹಾಗಂತ, ಗಿಫ್ಟ್ ಬರೀ ಬರೀ ಫಸ್ಟ್ ಲುಕ್‌ಗಷ್ಟೇ ಸೀಮಿತನಾ.. ಅನ್ನಂಗಿಲ್ಲ. ಅಭಿಮಾನಿಗಳು ನಿರಾಸೆಯಾಗಲ್ಲ. ಕಾರಣ, ಮಹೇಶ್ ಬಾಬು ಫಸ್ಟ್ ಲುಕ್ ಜೊತೆ ಇನ್ನೊಂದು ಉಡುಗೊರೆಯನ್ನೂ ನೀಡಿದ್ದಾರೆ. ಅದುವೇ ಮಹರ್ಷಿಯ ಟೀಸರ್.ಇದು, ಮಹರ್ಷಿಯ ಮೊದಲ ಟೀಸರ್.

ಅಭಿಮಾನಿಗಳ ಅತೀವವಾದ ಸಂತಸ ಹಾಗೂ ಸಂಭ್ರಮಕ್ಕೆ ಕಾರಣವಾಗಿರುವ ಟೀಸರ್‌ನಲ್ಲಿ, ಮಹೇಶ್ ಬಾಬುರನ್ನ ನೋಡೋದೇ ಕಣ್ಣಿಗೆ ಹಬ್ಬ. ತಮ್ಮ ಎಂದಿನ ಚಾರ್ಮ್‌ನೊಂದಿಗೆ.. ತಮ್ಮ ಮುದ್ದಾದ ಸ್ಮೈಲ್‌ನೊಂದಿಗೆ ಇಲ್ಲಿ ಕಾಣಸಿಕ್ಕಿರುವ ಮಹೇಶ್ ಬಾಬು, ಆಸ್ ಎ ಕಾಲೇಜ್ ಸ್ಟುಡೆಂಟ್ ಸೂಪರೋ ಸೂಪರ್. ಇದು ನಮ್ಮ ಮಾತಲ್ಲ ಬದ್ಲಿಗೆ ಅಭಿಮಾನಿಗಳು ಅಭಿಮಾನದಿಂದ.. ಇನ್ನುಳಿದವ್ರ ಬಳಿ ಹೇಳಿಕೊಳ್ತಿರುವ ಮಾತುಗಳು.

ಅಭಿಮಾನಿಗಳ ಮಾತಿಗೆ ಸಾಕ್ಷಿ ಅನ್ನುವಂತೆ ಮಹರ್ಷಿಯ ಟೀಸರ್ ಸೊಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ ಹಾಗೇ ಮಹೇಶ್ ಬಾಬು ೨೫ನೇ ಸಿನಿಮಾ ಮಹರ್ಷಿಯಲ್ಲಿ ನಾಯಕಿಯಾಗಿ, ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಸೌಥ್ ಸಿನಿದುನಿಯಾದ ಸೆನ್ಸೇಶನಲ್ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್ ಸಂಗೀತ ಮಹರ್ಷಿಯ ಮಹಿಮೆಯನ್ನ ಮತ್ತಷ್ಟು ಜೋರಾಗಿ ಸಾರಿ ಸಾರಿ ಹೇಳಲಿದೆ.

ಅದೇನೆ ಇರ‍್ಲಿ. ಸದ್ಯ.. ಮಹರ್ಷಿಯ ಟೀಸರ್ ರಿವೀಲಾಗಿದೆ. ಅಭಿಮಾನಿಗಳಲ್ಲಿದ್ದ ಒಂದು ಹಂತದ ಕೂತುಹಲನೂ ತಣ್ಣಗಾಗಿದೆ. ಇನ್ನೇನಿದ್ದರೂ ಉಳಿದಿರೊದು ಮಹರ್ಷಿಯಲ್ಲಿನ ರಿಶಿಯನ್ನ ಕಣ್ತುಂಬಿಕೊಳ್ಳೋದಷ್ಟೇ. ಆನಿ ವೇಸ್ ಓನ್ಸ್ ಅಗೈನ್ ಹ್ಯಾಪಿ ಬರ್ತ್‌ಡೇ ರಿಶಿ ಉರ್ಫ್ ಮಹರ್ಷಿ.

LEAVE A REPLY

Please enter your comment!
Please enter your name here