Home District ಪ್ರಿಯಾಂಕ್ ಖರ್ಗೆ “ಬಚ್ಚಾ ಅಲ್ಲಾ ಲುಚ್ಚಾ”..!!! ಗುತ್ತೇದಾರ್ ಖರ್ಗೆಗೆ ಡೈರೆಕ್ಟ್ ಟಾಂಗ್…

ಪ್ರಿಯಾಂಕ್ ಖರ್ಗೆ “ಬಚ್ಚಾ ಅಲ್ಲಾ ಲುಚ್ಚಾ”..!!! ಗುತ್ತೇದಾರ್ ಖರ್ಗೆಗೆ ಡೈರೆಕ್ಟ್ ಟಾಂಗ್…

487
0
SHARE

ಸಚಿವ ಪ್ರೀಯಾಂಕ್ ಖರ್ಗೆನನ್ನ ಬಚ್ಚಾ ಅಂತಾ ಕರೆಯ ಬಾರದಂತೆ.. ಹೀಗಾಗಿ ಪ್ರೀಯಾಂಕ್ ಖರ್ಗೆರನ್ನ ಲೂಚ್ಛಾ ಅಂತಾ ಕರೆದಿದ್ದಾರೆ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್.. ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಇಂದು ನಡೆದ ಕೈ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿರ ಗುತ್ತೇದಾರ್,

ಬಚ್ಚಾ ಇದಾನೆ ಬಚ್ಚಾ ಅಂತಾ ಕರಿತಿದೆನೆ.. ಆದರೆ ಬಚ್ಚಾ ಅಂತಾ ಯಾಕೆ ಕರಿತಿರಿ ಅಂತಾರೆ ಪ್ರೀಯಾಂಕ್ ಖರ್ಗೆ.. ಸರಿ ಇನ್ಮೂಂದೆ ಲುಚ್ಚಾ ಅಂತಾನೆ ಕರಿತಿನಿ ಅಂತಾ ಪ್ರೀಯಾಂಕ್ ವಿರುದ್ದ ಗುತ್ತೇದಾರ್ ಕಿಡಿಕಾರಿದ್ದಾರೆ‌..

ಕಲಬುರಗಿಯಲ್ಲಿ ಖರ್ಗೆ ಹಾಗೂ ಧಮ್೯ಸಿಂಗ್ ಸಂಗ್ಯಾಬಾಳ್ಯಾ ಇದ್ದಂಗೆ ಇದ್ದರು..

ಒಬ್ಬರಿಗೆ ಮಂತ್ರಿ ಸ್ಥಾನ ಕೊಟ್ಟರೆ ಮತ್ತೊಬ್ರಿಗೆ ಹಾಟ್೯ ಅಟ್ಯಾಕ್ ಆಗ್ತಿತ್ತು ಅಂತಾ ವ್ಯಂಗ್ಯವಾಡಿದರು.

ಸಚಿವ ಸ್ತಾನಕ್ಕಾಗಿ ಬಂಗಾರಪ್ಪ ಸಿಎಂ ಆಗಿದ್ದಾಗ ಮಲ್ಲಿಕಾರ್ಜುನ್ ಖರ್ಗೆ ನಮ್ಮ ಮನೆ ಬಾಗಿಲೆಗೆ ಬಂದಿದ್ದ, ನಮ್ಮ ತಂದೆ ಖರ್ಗೆ ಮುಖ ನೋಡಿ ಅವರಿಗೆ ಸಚಿವ ಸ್ಥಾನ ಕೊಡಿಸಿದ್ದರು ಎಂದರು. ಈ ಮಾತು ಸುಳ್ಳೆಂದರೆ ಕಲಬುರಗಿಯ ಬುದ್ದ ವಿಹಾರಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಅಂತಾ ಖರ್ಗೆಗೆ ಗುತ್ತೇದಾರ್ ಬಹಿರಂಗ ಸವಾಲು ಹಾಕಿದರು..

ರಾಮಯಣದಲ್ಲಿ ಸಿತೇ ಹದಿನಾಲ್ಕು ವರ್ಷ ವನವಾಸ ಅನುಭವಿಸಿದ್ದರೆ,ನಾನು ಅವರಿಗಿಂತ ಎರಡು ವರ್ಷ ಜಾಸ್ತಿ ಕಾಂಗ್ರೆಸ್‌ನಲ್ಲಿ ವನವಾಸ ಅನುಭವಿಸಿದ್ದೆನೆ ಅಂತಾ ಹೇಳಿದರು.. ದೆಹಲಿಯಲ್ಲಿ ಕೈ ನಾಯಕರು ಟಿಕೆಟ್ ಲಿಸ್ಟ್ ರಿಲಿಸ್ ಮಾಡೋದಕ್ಕೆ ಸರ್ಕಸ್ ನಡೆಸುತ್ತೀದ್ದಾರೆ..

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷ ಸ್ಥಾನವೆ ಕಟ್ಟಿಟ್ಟ ಬುತ್ತಿ ಎಂದರು.

LEAVE A REPLY

Please enter your comment!
Please enter your name here