ಪ್ರಿಯಾಂಕ ಉಪೇಂದ್ರ. .ಚಂದನವನದ ಚಂದದ, ಸೌಮ್ಯ ಸ್ವಭಾವದ, ಪ್ರಿತಿ ಪಾತ್ರ ನಟಿ. ಹೂವೇ ಹೂವೇ ಎಂದು ಚಂದನವನದಲ್ಲಿ ಚಂದದ ನಗೆ ಬೀರಿ ಕನ್ನಡಿಗರ ಮನಸ್ಸನ್ನ ಗೆದ್ದವರು. ಅಂದಿನಿಂದ ಇಂದಿನವರಗೂ ವಿಭಿನ್ನ ಪಾತ್ರ, ಚಿತ್ರಗಳ ಮೂಲಕ ರಂಜಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಧರ್ಮ ಪತ್ನಿ.ಹಬ್ಬ,ಹರಿ ದಿನ ಅಂದ್ರೆ ಪ್ರಿಯಾಂಕಗೆ ಇನ್ನಿಲ್ಲದ ಪ್ರೀತಿ.ಭಕ್ತಿ?.
ದೀಪಾವಳಿ, ಗಣೇಶ ಹಬ್ಬ, ವರಮಹಾಲಕ್ಷ್ಮಿ ಯಾವುದೇ ಹಬ್ಬ ಇರಲಿ ಪ್ರಿಯಾಂಕ ಉಪೇಂದ್ರ ಮನೆಯಲ್ಲಿ ಹಬ್ಬದ ಸಡಗರ ಸಂಭ್ರದ ವಾತಾವರಣ ಯಾವಾಗಲು ಹೆಚ್ಚೇ ಕಳೆಗಟ್ಟಿರುತ್ತದೆ..ಇಡೀ ಕುಟುಂಬ, ಸ್ನೇಹಿತರು ಸೇರಿ ಅಲ್ಲಿ ಸಂಭ್ರಮ ವಾತಾವರಣ ಮನೆ ಮಾಡಿರುತ್ತದೆ… ಹಾಗೆಯೇ ಇವತ್ತು ವರಮಹಾಲಕ್ಷ್ಮಿ ಹಬ್ಬ..ಆದ್ರಿವತ್ತು ಪ್ರಿಯಾಂಕ ಮನೆಯಲ್ಲಿ ಹಬ್ಬದ ಕಳೆಯಿಲ್ಲ..ಹಬ್ಬವನ್ನೂ ಆಚರಿಸುತ್ತಿಲ್ಲ. ಕಾರಣ ಯೋಧರ ನಾಡಲ್ಲಾದ ಜಲಪ್ರಳಯ.
ಹೌದು,,ಪ್ರಿಯಾಂಕ ಉಪೇಂದ್ರ ಮನೆಯಲ್ಲಿ ಈ ಬಾರಿ ಲಕ್ಷ್ಮಿಯ ಆರಾಧನೆ ಮಾಡ್ತಿಲ್ಲ. ಕೊಡಗಿನಲ್ಲಾದ ಅತಿವೃಷ್ಟಿ, ಅನಾವೃಷ್ಟಿಗೆ ಪ್ರಿಯಾಂಕ ಮನಸ್ಸು ಮರುಗಿದೆ. ಅಲ್ಲಿನ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ಧಾರೆ..
ತನ್ನವರನ್ನ ಕಳೆದುಕೊಂಡ ನೋವಿನಲ್ಲಿದ್ದಾರೆ..ಅವರೆಲ್ಲ ನೋವಿನಲ್ಲಿರುವಾಗ ನಾವಿಲ್ಲಿ ಹಬ್ಬ ಆಚರಣೆ ಮಾಡಿ ಸಂಭ್ರಮ ಪಟ್ರೆ ಅದು ಶೋಭೆಯಲ್ಲ.. ಇದೇ ಕಾರಣಕ್ಕೆ ಪ್ರಿಯಾಂಕ ಉಪೇಂದ್ರ ಮನೆಯಲ್ಲಿ ಈ ಬಾರಿ ಹಬ್ಬದ ಕಳೆಯಿಲ್ಲ, ಲಕ್ಷ್ಮಿಯನ್ನು ಕೂರಿಸುತ್ತಿಲ್ಲ..ನಿಮ್ಗೆ ಗೊತ್ತಿರಲ್ಲಿ ಅತೀವ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಕೊಡಗಿನ ಸಂತ್ರಸ್ತರ ನೆರವಿಗೆ ನೋವಿಗೆ ಜೊತೆಯಾಗಿ ಇಡೀ ಕರುನಾಡೇ ಒಂದಾಗಿದೆ ಹೆಗಲು ಕೊಟ್ಟಿದೆ.
ಅಷ್ಟೇ ಅಲ್ಲ ಕನ್ನಡ ಚಿತ್ರರಂಗ ಕೂಡ ನೆರವಿನ ಹಸ್ತ ನೀಡಿದ್ದು, ನಟ ನಟಿಯರು ಕೂಡ ಸಹಾಯ ಹಸ್ತ ನೀಡಿದ್ದಾರೆ. ಇದೇ ಕಾರ್ಯವನ್ನ ಮುಂದುವರೆಸಿರುವ ರಿಯಲ್ ಸ್ಟಾರ್ ಪತ್ನಿ ಹಬ್ಬವನ್ನು ಆಚರಿಸದೇ ಮನೆಯಲ್ಲೂ ಸುಮ್ಮನೇ ಕೂರದೆ ಕೊಡಗಿನ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಿದ್ದಾರೆ..ಅವ್ರ ಕಷ್ಟಕ್ಕೆ ಮಿಡಿದಿದ್ದಾರೆ..
ಪ್ರಿಯಾಂಕ ಉಪೇಂದ್ರ ನಿನ್ನೆಯೇ ಉಪ್ಪಿ ಪೌಂಡೇಶನ್ ಅಡಿಯಲ್ಲಿ ಸಂತ್ರಸ್ತರಿಗೆ ಬೇಕಾದ ಆಹಾರ, ಬಟ್ಟೆ ಬರೆ,ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಕೊಡಗಿಗೆ ಭೇಟಿ ಕೊಟ್ಟಿದ್ದಾರೆ. ಅನೇಕ ಕಾಳಜಿ ಕೇಂದ್ರಗಳಲ್ಲಿರುವ ಜನರನ್ನ ಭೇಟಿಯಾಗಿದ್ದಾರೆ. ನಿರಾಶ್ರಿತ ತಾಣಗಳಲ್ಲಿರುವ ನೊಂದ ಜನರನ್ನು ಮಾತನಾಡಿಸಿ ಆತ್ಮ ಸ್ಥೈರ್ಯ ತುಂಬೋ ಕೆಲಸ ಮಾಡ್ತಿದ್ದಾರೆ. ಸಂತ್ರಸ್ತರ ಅಳಲನ್ನು ಕೇಳುತ್ತಾ ನೆರವಿಗೆ ನಿಲ್ಲೋ ಭರವಸೆ ನೀಡಿದ್ದಾರೆ..
ಇನ್ನು ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಿಯಾಂಕ ಸಂತ್ರಸ್ತರ ಬದುಕನ್ನ ಮತ್ತೆ ಕಟ್ಟಿಕೊಡಲು ಎಲ್ಲರು ನೆರವಾಗಿ ಎಂದು ಮನವಿಯನ್ನು ಮಾಡಿಕೊಂಡಿದ್ಧಾರೆ..”ಇಲ್ಲಿನ ಜನರು ಮನೆ, ಆಸ್ತಿ, ಕೆಲಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ನಿಮ್ಮ ಸಹಾಯ ಬೇಕಿದೆ. ಮತ್ತೆ ಅವರ ಹೊಸ ಜೀವನ ಶುರು ಆಗಲು ಎಲ್ಲರೂ ಸಹಾಯ ಮಾಡಿ”-ಪ್ರಿಯಾಂಕ ಉಪೇಂದ್ರ…
ಹೂ ಮನಸಿನ ಪ್ರಿಯಾಂಕ ಈ ಕಾರ್ಯ ಸೋಶಿಯಲ್ ಮೀಡಿಯಾದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ?ಇನ್ನು ರಿಯಲ್ ಸ್ಟಾರ್ ಉಪೇಂದ್ರ ಕೂಡ ಪ್ರಜಾಕೀಯದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದು, ಅವ್ರ ಹೊಸ ಚಿಂತನೆಗಳು,ಬಡವರ ಪರ ದನಿಗೆ ಪತ್ನಿಯೂ ಕೂಡ ಬೆನ್ನೆಲುಬಾಗಿ ನಿಂತಿದ್ದು ಎಲ್ಲರಿಗೂ ಗೊತ್ತಿದೆ..ಇದೀಗ ಸ್ವತಃ ಪ್ರಿಯಾಂಕ ಸಂತ್ರಸ್ತರ ಬದುಕು ಕಟ್ಟಿಕೊಡಲು ನಿಂತಿರುವುದು ಅವ್ರ ಅಭಿಮಾನಿ ಬಳಗದಲ್ಲಿ ಉಪ್ಪಿ ಕುಟುಂಬದ ಮೇಲಿನ ಅಭಿಮಾನ ದುಪ್ಪಟ್ಟಾಗುವಂತೆ ಮಾಡಿದೆ..