Home Crime ಪ್ರೀತಿಗಾಗಿ ವಿಷ ಕುಡಿದಿದ್ದಳು ಆ ಯುವತಿ..! ಆದರೆ ಇದು ಆತ್ಮಹತ್ಯೆಯಲ್ಲಿ ಕೊಲೆ..?! ಮರ್ಯಾದೆಗೆ ಅಂಜಿ ಮಾಡಿದ್ದೇನು...

ಪ್ರೀತಿಗಾಗಿ ವಿಷ ಕುಡಿದಿದ್ದಳು ಆ ಯುವತಿ..! ಆದರೆ ಇದು ಆತ್ಮಹತ್ಯೆಯಲ್ಲಿ ಕೊಲೆ..?! ಮರ್ಯಾದೆಗೆ ಅಂಜಿ ಮಾಡಿದ್ದೇನು ಗೊತ್ತಾ ಹೆತ್ತ ಅಪ್ಪ, ಸ್ವಂತ ಅಜ್ಜಿ..? “ಮರವಂಜಿ ಮರ್ಯಾದ ಹತ್ಯೆ”…

284
0
SHARE

ಹರೆಯದ ಹುಮ್ಮಸ್ಸಿನಲ್ಲಿ ತಮ್ಮದೇ ಒಂದು ಲೋಕವನ್ನ ಸೃಷ್ಟಿಸಿಕೊಂಡು ಬಿಟ್ಟಿರ್ತಾರೆ. ಇದಕ್ಕೆ ಯಾರಿಂದಲೂ ತೊಂದರೆಯಾದರೂ ಅವರು ಸಹಿಸೋದಿಲ್ಲ. ಹೆತ್ತವರೇ ಆಗಲೀ, ನೆರೆ ಹೊರೆಯವರೇ ಆಗಲೀ. ಅವರಿಗೆ ಬುದ್ದಿ ಹೇಳೋಕೆ ಹೋದ್ರೆ ಕಾದು ಕೆಂಡವಾಗಿ ಬಿಡ್ತಾರೆ. ಆದರೆ, ಮುಂದೆ ಯಾವುದೋ ಒಂದು ಆಘಾತವೋ, ಅನಾಹುತವೋ ನಡೆದಾಗ ಜೀವನವನ್ನೇ ಹಾಳು ಮಾಡ್ಕೊಂಡುಬಿಡ್ತಾರೆ. ಅದೆಷ್ಟೋ ಸಲ ಜೀವವನ್ನೇ ಕಳೆದುಕೊಂಡು ಬಿಡ್ತಾರೆ. ಸೋ.. ಅಂತಹದೊಂದು ಕೆಟ್ಟ ನಿರ್ಧಾರಕ್ಕೆ ಬಂದು ಜೀವವನ್ನೇ ಕಳೆದುಕೊಂಡಿದ್ದಳು ಇಲ್ಲಿ ಹೆಣವಾಗಿ ಮಲಗಿರೋ ಹೆಣ್ಮಗಳು.ಹೇಳದೆ ಕೇಳದೆ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಅಥಾರ್ತ್ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದಾಳೆ ಪೂಜಾ…

ಅದಕ್ಕೆ ಕಾರಣ.. ಅವಳ ಹದಿ ಹರೆಯದ ಪ್ರೀತಿ ಪ್ರೇಮ.ಪೂಜಾಳ ಸಾವಿನ ಹಿಂದೆ ಅವಳ ಲವ್ ಸ್ಟೋರಿ ಇದದ್ದು ಸತ್ಯಾನೇ. ಅಟ್ ದಿ ಸೇಮ್ ಟೈಮ್ ಆ ಸಾವಿನ ಹಿಂದೆ ಒಂದು ಮಿಸ್ಟ್ರಿ ಕೂಡ ಇದೇ ಅಂದ್ರೆ ಅಚ್ಚರಿಯಾಗುತ್ತೆ. ಯಾಕಂದ್ರೆ, ಮನೆಬಿಟ್ಟು ಹೋಗಿದ್ದ ಮಗಳನ್ನ ಹುಡುಕಿಕೊಡಿ ಅಂತ ಕಣ್ಣೀರಾಕಿದ್ದ ಪರಮೇಶ್ವರಪ್ಪ ಹಾಗೂ ಪೂಜಾಳ ಅಜ್ಜಿಯನ್ನ ಚೆನ್ನಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಕಣ್ರಿ. ಯಾಕಂದ್ರೆ ಪೂಜಾ ಆತ್ಮಹತ್ಯೆ ಮಾಡ್ಕೊಂಡಿಲ್ಲ ಆಕೆಯದು ಕೊಲೆ.ಹೆತ್ತವರ ಮುದ್ದಿನ ಮಗಳು ಪೂಜಾ ಇಂದು ನೆನಪು ಮಾತ್ರ. ಓದೋ ವಯಸ್ಸಲ್ಲಿ ಅದೂ ಕೂಡ ಹದಿಹರೆಯದ ವಯಸ್ಸಲ್ಲಿ ಮನಸ್ಸು ಚಂಚಲವಾಗೋದು ಸಾಮಾನ್ಯ. ಅದನ್ನೆ ಸ್ವಲ್ಪ ಹದ್ದು ಬಸ್ತಿನಲ್ಲಿಟ್ಟಿದಿದ್ದರೆ ಅವೊತ್ತು ಮುದ್ದಿನ ಮಗಳಾಗೇ ಇರ್ತಿದ್ದಳು.  ಆದರೆ, ಏನ್ ಮಾಡೋದು ಹರೆಯದ ಕರೆಗೆ ಓ ಗೊಟ್ಟಿದ್ದಳು…

ಅಂದ್ರೆ ಪ್ರೀತಿ ಅಂದರೆ ಏನೂ ಅಂತ ತಿಳಿಯದ ವಯಸ್ಸಲ್ಲಿ ಪ್ರೀತಿಗೆ ಬಿದ್ದಿದ್ದಳು. ಮನೆಬಿಟ್ಟು ಓಡಿ ಹೋಗಿ ಬಂದವಳು ಸಾವಿನ ಮನೆ ಕದ ತಟ್ಟಿದ್ದರೆ.. ಅವಳನ್ನ ತಡೆಯೋದು ಬಿಟ್ಟು ಬಾಗಿಲು ತೆರೆದು ಸಾವಿನ ಕೂಪಕ್ಕೆ ನೂಕಿಬಿಟ್ಟಿದದ್ರು ಆಕೆಯ ಜನ್ಮಕೊಟ್ಟ ತಂದೆ, ಎತ್ತಾಡಿಸಿದ್ದ ಅಜ್ಜಿ ದ್ರಾಕ್ಷಾಯಣಮ್ಮ. ಅಂದ್ರೆ ಈ ತಾಯಿ ಮಗ ಇಬ್ಬರೂ ಸೇರಿ ಪೂಜಾಳನ್ನ ಕಥೆ ಮುಗಿಸೇಬಿಟ್ಟಿದ್ರು. ಅಥಾರ್ತ್ ಪೂಜಾಳ ಸಾವು ಅದೊಂದು ಮರ್ಯಾದಾ ಹತ್ಯೆ.ಹೀಗಿರ್ಬೇಕಾದ್ರೆ. ದಿನದಿಂದ ದಿನಕ್ಕೆ ರೂಪದ ಕಟ್ಟೆಯ ಪ್ರವೀಣ್ ಹಾಗೂ ಪೂಜಾ ಪ್ರೀತಿ ಗಾಢವಾಗಿ ಹೋಗಿತ್ತು. ಅದ್ಯಾವ ಧೈರ್ಯದಿಂದಾನೋ ಏನೋ.. ಇಬ್ಬರು ಮದುವೆ ಮಾಡಿಕೊಳ್ಳೋ ತೀರ್ಮಾನಕ್ಕೂ ಬಂದುಬಿಟ್ಟಿದ್ರಂತೆ. ಆದರೆ, ಪ್ರೇಮಿ ಪ್ರವೀಣ್ ಮತ್ತು ಬಾಲಕಿ ಜಾತಿ ಬೇರೆ ಬೇರೆ ಅದೇ ಅವರಿಗೆ ದೊಡ್ಡ ಸವಾಲಾಗಿತ್ತು. ಪೂಜಾ ಇನ್ನೂ ಮೈನರ್ . ಈಗಷ್ಟೆ 16 ವರ್ಷ ಕಳೆದು 17ಕ್ಕೆ ಕಾಲಿಟ್ಟಿದ್ದಳು…

ಹೀಗಾಗಿ, ಈಗಲೇ ಮದುವೆ ಮಾಡಿಕೊಳ್ಳುವುದು ಕಷ್ಟ. ಹೀಗೆ ಊರಲ್ಲಿ ಇರೋದಕ್ಕೆ ಆಗಲ್ಲ, ಇನ್ನೇನು ಮಾಡೋದು ಅಂತ ಪ್ರವೀಣ್ ಮತ್ತು ಬಾಲಕಿ ತಲೆಕೆಡೆಸಿಕೊಂಡಿದ್ದರು. ಆಗ ನೆನಪಾಗಿದ್ದೇ ಇಬ್ಬರು ಮನೆ ಬಿಟ್ಟು ಓಡಿ ಹೋಗೋ ಐಡಿಯಾ. ಸೋ.. ಪ್ಲಾನ್ ಮಾಡಿ ಎಲ್ಲವನ್ನು ಸಿದ್ಧತೆ ಮಾಡಿಕೊಂಡು ಅಂದುಕೊಂಡಂತೆ ಇಬ್ಬರು ಕಳೆದ ಮೂರು ತಿಂಗಳ ಹಿಂದೆಯೇ ಹೆತ್ತವರನ್ನು ಬಿಟ್ಟು ಓಡಿ ಹೋಗಿದ್ರು.ಮಕ್ಕಳು ಏನೇ ಮಾಡಿದರೂ ಕ್ಷಮಿಸಿ ಬುದ್ದಿ ಹೇಳುವ ಸಂಪ್ರದಾಯ ನಮ್ಮ ತಂದೆ ತಾಯಿಗಳು ಹಾಗೂ ಹಿರಿಯರದ್ದು. ಆದರೆ, ಇವರಿಗೆ ಆಕೆಯನ್ನ ಕೊಲ್ಲುವ ಮನಸ್ಸಾದರೂ ಹೇಗೆ ಬಂತೋ ಏನೋ. ಬಹುಷ ಇಲ್ಲಿ ಜಾತಿ ಪ್ರತಿಷ್ಠೆ ಎದ್ದು ಕಾಣುತ್ತಿದೆ. ಹೌದು, ಪೂಜಾ ನನಗೆ ಪ್ರವೀಣ್ ಬೇಕೆ ಬೇಕು ಅಂತ ಪಟ್ಟು ಹಿಡಿದಿದ್ದಳು…

ಅಲ್ಲದೇ, ಏನೇ ಆದರೂ ಆತನನ್ನೇ ಮದುವೆಯಾಗುತ್ತೇನೆ ಎಂದು ಹಠ ಮಾಡಿದ್ದಳು. ಇದರಿಂದ ಹೆತ್ತವರಿಗೆ ಸಂಕಟ ಮತ್ತು ಜಾತಿ ಪ್ರತಿಷ್ಠೆ ಮುಖ್ಯವಾಗಿತ್ತು. ಯಾರು ಏನೇ ಹೇಳಿದರೂ ಕೇಳುವ ಮನಸ್ತಿತಿಯಲ್ಲಿ ತಂದೆ ತಾಯಿ ಇರಲಿಲ್ಲ. ಹೀಗಾಗಿ, ಆಕೆಯ ಮಾತಿಗೆ ಮನೆಯವರು ಸೊಪ್ಪು ಹಾಕಿರಲಿಲ್ಲ. ಹೀಗಾಗಿ, ಪೂಜಾಗೆ ಇನ್ನೇನು ಪ್ರವೀಣ್ ತನಗೆ ಸಿಗುವುದಿಲ್ಲ ಅಂತ ನಿರ್ಧರಿಸಿದ್ದಳೋ ಏನೋ. ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ ಒಂದು ದಿನ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದಾಳೆ. ಅಂದು ಜೂನ್ 26ನೇ ತಾರೀಕು. ಅಮ್ಮ ಪಾರ್ವತಿ ಜಮೀಗೆ ಹೋಗಿದ್ದರೆ, ಅಪ್ಪ ಪರಮೇಶ್ವರಪ್ಪ ಚಿಕಿತ್ಸೆಗೆ ಅಂತ ಮಣಿಪಾಲದ ಆಸ್ಪತ್ರೆಗೆ ಹೋಗಿದ್ದರು. ಪೂಜಾ ಅಜ್ಜಿ ದ್ರಾಕ್ಷಾಯಣಮ್ಮ ಹಾಗೂ ಪೂಜಾ ಮಾತ್ರ ಮನೆಯಲ್ಲಿದ್ದರು. ಇದೇ ಸಾಯುವುದಕ್ಕೆ ಇದೇ ಸೂಕ್ತ ಸಮಯ ಅಂದುಕೊಂಡಿದ್ದ ಪೂಜಾ ಸ್ನಾನದ ನೆಪವೊಡ್ಡಿ ಬಚ್ಚಲು ಮನೆಗೆ ಹೋಗಿದ್ದಳು…

ಅಲ್ಲದೇ, ಮನೆಯಲ್ಲಿದ್ದ ವಿಷದ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದಳು. ಬಚ್ಚಲು ಮನೆಗೆ ಹೋದವಳೆ ಏಕಾಏಕಿ ವಿಷ ಸೇವಿಸಿ ಒದ್ದಾಡುತ್ತಿದ್ದಳು. ಹೀಗೆ ಆಕೆಯ ಒದ್ದಾಟ, ಕಿರುಚಾಟ ಹೆಚ್ಚಾಗುತ್ತಿದ್ದಂತೆ ಬಂದು ನೋಡಿದ ಅಜ್ಜಿ ದ್ರಾಕ್ಷಾಯಣಮ್ಮ,ಕೂಡಲೇ ಪರಮೇಶ್ವರಪ್ಪನಿಗೆ ಪೋನ್ ಮೂಲಕ ವಿಷಯ ತಿಳಿಸಿದ್ದಳು. ಮಗಳು ಆತ್ಮಹತ್ಯೆ ಯತ್ನಿಸಿದ್ದಾಳೆ ಎನ್ನೋ ವಿಷಯ ಕೇಳಿ ಪರಮೇಶ್ವರಪ್ಪ ಆಘಾತಗೊಂಡು ಬಿಟ್ಟಿದ್ದ. ಈಗ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂತ ಅಜ್ಜಿ ಹೇಳಿದಾಗ, ಏನು ಬೇಡ. ಆಕೆ ಇದ್ದರೂ ಅಷ್ಟೆ, ಹೋದರೂ ಅಷ್ಟೆ, ನಮ್ಮ ಮನೆ ಮಾನ ಕಳೆಯುತ್ತಿದ್ದಾಳೆ, ಆಕೆಯನ್ನೇನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ನಮ್ಮ ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ಇದೇ ತಕ್ಕ ಸಮಯ, ಆಕೆಯನ್ನ ಕೊಂದು ಬಿಡು ಎಂದು ಪರಮೇಶ್ವರಪ್ಪ ತನ್ನ ತಾಯಿ ದ್ರಾಕ್ಷಾಯಣಮ್ಮಗೆ ಸೂಚನೆ ನೀಡಿದ್ದ…

ಮಗನ ಮಾತು ಕೇಳಿ ದ್ರಾಕ್ಷಾಯಣಮ್ಮನ ಕರುಳ್ ಕೂಡ ಚುರ್ ಅಂದಿದೆ, ಅಲ್ಲದೇ, ಮನೆಯ ಮಾನ ಉಳಿಯಬೇಕಾದರೆ ಬೇರೆ ದಾರಿಯೇ ಇಲ್ಲ ಎಂದುಕೊಂಡು ಆಕೆಯೂ ಆಕೆಯನ್ನ ಕೊಲ್ಲೋದಕ್ಕೆ ರೆಡಿಯಾಗಿದ್ದಳು. ಪರಮೇಶ್ವರಪ್ಪ ಅಷ್ಟು ಹೇಳುವುದೇ ತಡ ಅಜ್ಜಿಗೆ ಮನಸ್ಸಾದರೂ ಹೇಗೆ ಬಂತೋ ಏನೋ. ಮನೆಯಲ್ಲಿದ್ದ ಹಗ್ಗ ತೆಗೆದುಕೊಂಡು ಬಂದು ವಿಷ ಕುಡಿದು ಒದ್ದಾಡುತ್ತ ಬಿದ್ದಿದ್ದ ಪೂಜಾಳ ಕುತ್ತಿಗೆಗೆ ಬಿಗಿದು ಬಿಟ್ಟಿದ್ದಳು. ಮೊದಲೇ ಕುಡಿದ ವಿಷವೆಲ್ಲ ಮೈಎಲ್ಲ ಏರಿದ್ದರಿಂದ ನಿತ್ರಾಣವಾಗಿತ್ತು. ಇನ್ನು, ಅಜ್ಜಿ ಕುತ್ತಿಗೆ ಬಿಗಿದಿದ್ದರಿಂದಾಗಿ ಉಸಿರು ನಿಂತು ಹೋಗಿ ಕ್ಷಣಾರ್ಧದಲ್ಲಿ ಪ್ರಾಣವನ್ನು ಬಿಟ್ಟಿದ್ದಳು ಪೂಜಾ. ಇಷ್ಟಾದ ಮೇಲೆ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಊರಲ್ಲೆಲ್ಲ ಸುದ್ದಿ ಹಬ್ಬಿಸಿದ್ದರು…

ಇನ್ನು ನಿಯಮಾನುಸಾರ ಪೊಲೀಸರಿಗೂ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಚನ್ನಗಿರಿ ಠಾಣೆ ಪಿಎಸ್ ಐ ವೀರಬಸಪ್ಪ ಕುಸಲಾಪುರ ಪಂಚನಾಮೆ ಮಾಡಿ ಪೂಜಾ ಶವವನ್ನ ಪರೀಕ್ಷೆ ಒಳಪಡಿಸಿದ್ದರು. ಇಲ್ಲೆ ಇರುವುದು ಹೆತ್ತವರು ಮಾಡಿದ ಘನಂಧಾರಿ ಕೆಲಸದ ಕರಾಮತ್ತು. ಪೂಜಾಳ ಶವವನ್ನ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಕುತ್ತಿಗೆ ಮೇಲೆ ಗಾಯದು ಗುರುತುಗಳು ಕಂಡು ಬಂದಿವೆ. ಈ ಬಗ್ಗೆ ಡೌಟ್ ಬಂದು ಪೊಲೀಸರು ಮನೆಯವರನ್ನ ವಿಚಾರಿಸಿದಾಗ ಉತ್ತರ ಹೇಳೋದಕ್ಕು ತಡಬಡಾಯಿಸಿದ್ದಾರೆ. ಇನ್ನು, ಇದರಿಂದ ಮತ್ತಷ್ಟು ಕೆರಳಿದ ಪೊಲೀಸರು ಅವರ ಮೇಲೆಯೇ ಅನುಮಾನ ಮೂಡಿತ್ತು. ಬಳಿಕ, ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಿಸಿದಾಗ ನಡೆದ ಸತ್ಯ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ…

ಅಲ್ಲದೇ, ಮನೆಯ ಮಾನ ಮರ್ಯಾದೆ ಉಳಿಸಿಕೊಳ್ಳಲು ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹೆತ್ತ ಮಗಳನ್ನೆ ಕೊಂದು ಆತ್ಮಹತ್ಯೆ ಕತೆ ಕಟ್ಟಿ ಪಾರಾಗಲು ಯತ್ನಿಸಿದ್ದ ಅವರ ಪ್ಲಾನ್ ಪೊಲೀಸರಿಗೂ ಭಯ ಹುಟ್ಟಿಸುವಂತೆ ಮಾಡಿತ್ತು. ಆತ್ಮಹತ್ಯೆ ಪ್ರಕರಣ ಬದಲಾಗಿ ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಚನ್ನಗಿರಿ ಪೊಲೀಸರು ಮಗಳನ್ನು ಕೊಲೆ ಮಾಡಲು ಸೂಚನೆ ನೀಡಿರುವ ತಂದೆ ಪರಮೇಶ್ವರಪ್ಪ ಹಾಗೂ ಹೆತ್ತಾಡಿಸಿದ ಮೊಮ್ಮಗಳನ್ನೆ ಕೊಂದ ಅಜ್ಜಿಯನ್ನ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಮಾಡಿದ ತಪ್ಪಿಗೆ ಇಂದು ಮನನೊಂದುಕೊಳ್ಳುತ್ತಿರುವ ಆಕೆಯ ಹೆತ್ತವರು ಜೈಲಲ್ಲಿ ಕೂತು ಇಂದು ಪೂಜಾ ಪೂಜಾ ಅಂತ ಕನವರಿಸುತ್ತಿದ್ದಾರೆ. ಇವರ ಮರ್ಯಾದೆ ಮತ್ತು ಪ್ರತಿಷ್ಠೆಯಿಂದಾಗಿ ಸಾವು ತಂದುಕೊಂಡ ಪೂಜಾ, ಇತ್ತ ತನ್ನ ಭವಿಷ್ಯವೂ ಇಲ್ಲ, ಅತ್ತ ತಾನಂದುಕೊಂಡಂತೆ ಪ್ರೇಮಿಯೂ ಸಿಗಲಿಲ್ಲ ಅಂತ ಅತೃಪ್ತಿಯಿಂದಲೇ ಇಹಲೋಕ ತ್ಯಜಿಸಿದ್ದಾಳೆ. ಹೀಗಾಗಿ, ಇದು ಮರ್ಯಾದಾ ಹತ್ಯೆಯಲ್ಲದೇ ಮತ್ತೇನು…

LEAVE A REPLY

Please enter your comment!
Please enter your name here