Home Crime ಪ್ರೀತಿಯ ನಾಟಕದಲ್ಲಿ ಅವನದ್ದು ಒಂದು ಕಡೆ ಲವ್ ಇನ್ನೊಂದು ಕಡೆ ರೊಮ್ಯಾನ್ಸ್ …! ದೇಹ ಸೌಂದರ್ಯ...

ಪ್ರೀತಿಯ ನಾಟಕದಲ್ಲಿ ಅವನದ್ದು ಒಂದು ಕಡೆ ಲವ್ ಇನ್ನೊಂದು ಕಡೆ ರೊಮ್ಯಾನ್ಸ್ …! ದೇಹ ಸೌಂದರ್ಯ ಅನುಭವಿಸಲೇ ಬೇಕೆಂದು ಆಕೆಯ ಮೇಲೆ ಹಾಕಿದ್ದ ಕಣ್ಣು…! ತೀಟೆ ತೀರಿದ ಬಳಿಕ ಅವನಿಗೆ ಬೇಡವಾಗಿತ್ತು ಹಳೆಯ ಹುಡ್ಗಿ ಕನೆಕ್ಷನ್! ಲವ್ ಸೆಕ್ಸ್ ಔರ್ ದೋಖಾ…!

2349
0
SHARE

ಪ್ರೇಮಿಗಳ ದಿನ ಮುಗಿದು ಹೋಯ್ತು. ಅವತ್ತು ಅದೆಷ್ಟು ಜನ ಪ್ರೀತಿಯಲ್ಲಿ ಬಿದ್ರೋ ಲೆಕ್ಕವಿಲ್ಲ. ಅದೆಷ್ಟು ಜನ ಅವತ್ತು ತಮ್ಮ ಸರ್ವಸ್ವವನ್ನ ಕಳೆದುಕೊಂಡ್ರೋ ಅದಕ್ಕೂ ಬ್ಯಾಲೆನ್ಸ್ ಶೀಟ್ ಇಲ್ಲ. ಒಂದು ಟೈಂನಲ್ಲಿ ಖುಷಿಯಿಂದ ಇದ್ದವರು, ಅವತ್ತು ಎಲ್ಲವನ್ನ ಕಳೆದುಕೊಂಡಿದ್ರು.

ಲೈಫ್ ಹಾಗೆ ರೊಟೆಟ್ ಆಗುತ್ತಲೇ ಇರುತ್ತೆ. ಅಲ್ಲಿ ಯಾವಾಗ ಏನು ಆಗುತ್ತೆ ಅನ್ನೋದನ್ನ ಹೇಳೋದಕ್ಕೆ ಆಗೋದಿಲ್ಲ. ಅದ್ರಲ್ಲೂ ಲವ್ ಲೈಫ್ ಇದೆಯಲ್ಲಾ ಅದಕ್ಕೆ ವ್ಯಾಲಿಡಿಟಿನೇ ಇಲ್ಲ. ಲವ್ ಅನ್ನೋದು ಒಂಥರಾ ಜುಗಾರಿ ಆಟವಿದ್ದ ಹಾಗೆ ಸಿಕ್ಕಿದವನಿಗೆ ಸೀರುಂಡೆ, ಕಳೆದುಕೊಂಡವರಿಗೆ ಗೊತ್ತೇ ಇದೆ ಅಲ್ವಾ ಏನಾಗುತ್ತೆ ಅಂತ. ಫೆಬ್ರವರಿ 14 ಒಂದಿಷ್ಟು ಜನರ ಬಾಯಿಗೆ ಲಾಡು ಬಿದ್ದಿರುತ್ತೆ. ಆದ್ರೆ ಅವತ್ತು ಒಂದಿಷ್ಟು ಜನರ ಬಾಯಿಗೆ ಮಣ್ಣು ಬಿದ್ದಿರುತ್ತೆ.

ಜಗತ್ತಲ್ಲಿ ಯಾವ ಏಜೆನ್ಸಿಯು ಇಲ್ಲ ಅನ್ಸುತ್ತೆ. ಲವ್ ನಲ್ಲಿ ಫೆಲ್ಯೂರ್ ಆದವರ ಬಗ್ಗೆ ಲೆಕ್ಕ ಹಾಕೋದಕ್ಕೆ. ಹಾಗೇನಾದ್ರು ಸರ್ವೇ ಮಾಡೋ ಏಜೆನ್ಸಿಗಳು ಇದ್ದಿದ್ರೆ ಖಂಡಿತವಾಗಿಯು ಒಂದು ಲೆಕ್ಕ ಸಿಕ್ತಿತ್ತು. ಹೀಗೆ ಫೆಬ್ರವರಿ 14 ಅನ್ನೋ ಪ್ರೇಮಿಗಳ ದಿನ ಯುವತಿಯೊಬ್ಬಳ ಪಾಲಿಗೆ ಕರಾಳ ದಿನವಾಗಿತ್ತು. ಒಂದು ವರ್ಷದ ಹಿಂದೆ ಇದೇ ದಿನ ಸಂಭ್ರಮಪಟ್ಟವಳು ಅವತ್ತು ಸಾವಿನ ಮನೆಯೊಳಗೆ ಕಾಲಿಟ್ಟಿದ್ಲು. ಟೈಂ ಬದಲಾಗಿತ್ತು, ಒಂದು ಕಾಲದಲ್ಲಿ ನೀನೇ ನನ್ನ ಜೀವ, ನೀನೇ ನನ್ನ ಪ್ರಾಣ ಅಂತಿದ್ದವನು ಈಗ ಅವಳು ಜೀವ ಕಳೆದುಕೊಳ್ಳೋದಕ್ಕೆ ಕಾರಣವಾಗಿತ್ತು.

ಫೋಟೋದಲ್ಲಿರೋ ಹುಡುಗಿಯ ಹೆಸರು ದೀಪಾ ಅಂತ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಬಿಎ ವ್ಯಾಸಾಂಗ ಮಾಡ್ತಿದ್ಲು. ಇವಳದ್ದು ಮೂಲರ ಕೋಲಾರದ ಚಿಂತಾಮಣಿ. ಕೆಲವು ವರ್ಷಗಳ ಹಿಂದೆ ಆಕೆಯ ಅಪ್ಪ ಅಮ್ಮ ತೀರಿಕೊಂಡಿದ್ರು. ಹೀಗಾಗಿ ಆಕೆಯನ್ನ ಆಕೆಯ ದೊಡ್ಡಮ್ಮ ತಮ್ಮ ಮನೆಗೆ ಕರ್ಕೊಂಡು ಬಂದು ಸಾಕ್ತಿದ್ರು. ಅಪ್ಪ ಅಮ್ಮ ಇಲ್ಲ ತಬ್ಬಲಿ ಅಂತ ಸ್ವಲ್ಪ ಹೆಚ್ಚಿನ ಪ್ರೀತಿಯನ್ನ ತೋರಿಸ್ತಿದ್ರು. ಯಾಕಂದ್ರ ಅಪ್ಪ ಅಮ್ಮ ಇಲ್ಲ ಅನ್ನೋ ಕೊರಗು ಕಾಡಬಾರದು ಅಂತ ಆಕೆಯನ್ನ ಚೆನ್ನಾಗಿ ನೋಡಿಕೊಳ್ತಿದ್ರು. ಅಲ್ಲದೆ ಚಿಕ್ಕಬಳ್ಳಾಪುರದ ಬಾಬೂಜಿ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಓದೋದಕ್ಕೆ ಕಳುಹಿಸ್ತಿದ್ರ.

ಲವ್ ಅನ್ನೋದೆ ಹಾಗೆ ಅದು ಕದ್ದು ಮುಚ್ಚಿಯೇ ಶುರುವಾಗೋದು. ಲವ್ ಒಂಥರಾ ಕಳ್ಳ ವ್ಯವಹಾರ ಇದ್ದ ಹಾಗೆ ಅದು ಲೈಮ್ ಲೈಟ್ ನಲ್ಲಿ ನಡೆಯೋದಕ್ಕಿಂತ ಹೆಚ್ಚಾಗಿ ಕತ್ತಲಲ್ಲಿ ನಡೆಯೋದೇ ಜಾಸ್ತಿ. ಇವಳು ಕೂಡಾ ತನ್ನ ಸಂಬಂಧಿ ಹಾಗೂ ತನ್ನ ಮನೆಯ ಹತ್ತಿರದಲ್ಲೇ ಇದ್ದ ಸುರೇಶ್ ಅನ್ನೋ ಹುಡುಗನನ್ನ ಪ್ರೀತಿಸ್ತಿದ್ಲು. ಅವನು ಕೂಡಾ ಈಕೆಯನ್ನ ಪ್ರೀತಿಸ್ತಿದ್ದ. ಆತನೇ ದೀಪಾಳಿಗೆ ಪ್ರಪೋಸ್ ಮಾಡಿದ್ದ. ಇವಳು ಕೂಡಾ ಅದನ್ನ ಒಪ್ಪಿದ್ಲು. ಒಂದಿಷ್ಟು ದಿನ ಇಬ್ಬರು ಪ್ರೀತಿಯ ಅಮಲಿನಲ್ಲಿ ಅಲ್ಲಿ ಇಲ್ಲಿ ಅಂತ ಸುತ್ತಾಡಿದ್ದಾರೆ. ಬೇಕು ಬೇಡಗಳನ್ನ ಹಂಚಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬಿಟ್ಟು ಇರಲಾರದಷ್ಟು ಅವ್ರು ಹಚ್ಚಿಕೊಂಡಿದ್ರು. ಆದ್ರೆ ಲವ್ ಇದೆಯಲ್ಲ ಅದು ನಿಂತಲ್ಲಿ ನಿಲ್ಲೋದಿಲ್ಲ.

ಇವತ್ತು ಒಬ್ರು ಇಷ್ಟ ಆದ್ರೆ, ನಾಳೆ ಇನ್ನೊಬ್ಬರ ಮೇಲೆ ಶುರುವಾಗಿರುತ್ತೆ. ಇದೇ ಕಾರಣಕ್ಕೆ ಅದಕ್ಕೆ ವ್ಯಾಲಿಡಿಟಿ ಕಡಿಮೆ ಅಂತ ಹೇಳೋದು.ಹೀಗೆ ಇವರಿಬ್ಬರು ಲವ್ ಒಂದು ರೇಂಜ್ ನಲ್ಲಿ ಚೆನ್ನಾಗಿ ನಡೆಯುತ್ತಿದೆ ಅಂತ ಅನಿಸಿದಾಗ್ಲೇ ಅದೆಲ್ಲೋ ಕೈಕೊಡೋದಕ್ಕೆ ಶುರುವಾಗಿತ್ತು. ಯಾವುದು ಬದುಕನ್ನ ನಿರ್ಧರಿಸಬೇಕಿತ್ತೋ ಅದೇ ಕೈಕೊಡೋದಕ್ಕೆ ಶುರು ಮಾಡಿತ್ತು. ದೀಪಾಳಿಗೆ ಇದ್ಯಾವುದು ಅರ್ಥವೇ ಆಗಿರಲಿಲ್ಲ. ಯಾಕಂದ್ರೆ ಆಕೆ ಪ್ರೀತಿಯಲ್ಲಿ ಅಷ್ಟು ಮುಳುಗಿ ಹೋಗಿದ್ಲು. ಅಲ್ಲದೆ ಆತನನ್ನ ಅಷ್ಟೊಂದು ನಂಬಿದ್ಲು. ಪ್ರೀತಿಗೆ ನಂಬಿಕೆಯೇ ಜೀವಾಳ. ಹೀಗಾಗಿ ಅಲ್ಲಿ ಆಕೆಯ ನಂಬಿಕೆ ಜೀವ ಕಳೆದುಕೊಂಡಿತ್ತು. ಸುರೇಶ್ ದೀಪಾಳ ಜೊತೆ ಲವ್ ಡವ್ವು ಅಂತ ಅಂದುಕೊಂಡು ಅತ್ತ ಇನ್ನೊಂದು ಹೂವಿನ ಮಕರಂದ ಹೀರೋದಕ್ಕೆ ಶುರುಮಾಡಿದ್ದ.

ಪಾಪಾ ದೀಪಾಳಿಗೆ ಇದೆಲ್ಲಾ ಗೊತ್ತೇ ಇರಲಿಲ್ಲ. ದಿನಕ್ಕೆ ನಾಲ್ಕು ಸಾರಿ ಆತ ಫೋನ್ ಮಾಡಿ ಲವ್ ಯು ಅಂತ ಹೇಳೋದನ್ನೇ ಆತ ಲವ್ ಅಂತ ಅಂದುಕೊಂಡಿದ್ಲು. ಆತ ಆಗಾಗ ಸಿಕ್ಕಿ ಚಾಕಲೇಟ್ ಕೊಡಿಸಿ ಮುತ್ತು ಕೊಡೋದನ್ನ ನಿಜ ಅಂತ ಅಂದುಕೊಂಡಿದ್ಲು. ಆದ್ರೆ ಸುರೇಶ ತನ್ನ ಜೀವನದ ಜೊತೆ ಆಟವಾಡ್ತಿದ್ದಾನೆ ಅನ್ನೋದು ಆಕೆಗೆ ಗೊತ್ತೇ ಆಗಲಿಲ್ಲ. ಅವಳು ಓದು ಮುಗಿಸಿದ ತಕ್ಷಣ ಸುರೇಶನ ಜೊತೆ ಮದುವೆಯಾಗಿ ಸೆಟ್ಲ್ ಆಗೋಣ ಅಂತ ಅಂದುಕೊಂಡಿದ್ಲು. ಆದ್ರೆ ಅವೆಲ್ಲಾ ನನ್ನ ಭ್ರಮೆ ಅನ್ನೋದು ಒಂದು ದಿನಕ್ಕ ಆಕೆಗೆ ಅನಿಸಿರಲಿಲ್ಲ. ನಾನೆಲ್ಲೋ ಮೋಸ ಹೋಗ್ತಿದ್ದೀನಿ, ಸುರೇಶ ಅನ್ನೋ ಕಿರಾತಕನಿಂದ ನಾನು ವಂಚನೆಗೊಳಗಾಗ್ತಿದ್ದೀನಿ ಅನ್ನೋದು ಕೂಡಾ ಅರ್ಥವಾಗಲಿಲ್ಲ. ಅದು ಅರ್ಥವಾಗುವ ಹೊತ್ತಿಗೆ ಟೈಂ ಮೀರಿ ಹೋಗಿತ್ತು.

ಸುರೇಶ್ ಮತ್ತು ದೀಪಾಳ ಮನೆ ದೂರವೇನು ಇರಲಿಲ್ಲ. ಇಬ್ಬರು ಹತ್ತಿಪ್ಪತ್ತು ಮೀಟರ್ ದೂರದ ಮನೆ. ಅಲ್ಲದೆ ಸಂಬಂಧಿಯೂ ಕೂಡಾ ಆಗಿದ್ರು. ಈ ಸುರೇಶ್ ಓದನ್ನ ಅರ್ಧಕ್ಕೆ ಬಿಟ್ಟು ಡ್ರೈವಿಂಗ್ ಕೆಲಸ ಮಾಡ್ತಿದ್ದ. ಅಲ್ಲದೆ ಅಲ್ಲಿ ಇಲ್ಲಿ ಅಂತ ಕೆಲಸ ಮಾಡ್ಕೊಂಡು ಹಣ ಸಂಪಾದನೆ ಮಾಡ್ತಿದ್ದ.ದೀಪಾ ನೋಡೋದಕ್ಕೆ ಚನ್ನಾಗಿದ್ದ ಕಾರಣ ಆಕೆಯ ಹಿಂದೆ ಬಿದ್ದು ಆಕೆಯನ್ನ ಪ್ರೀತಿಸಿದ್ದ. ಆದ್ರೆ ಒಂದೇ ವರ್ಷಕ್ಕೆ ತನ್ನ ಪ್ರೀತಿ ಮುರಿದು ಬೀಳುತ್ತೆ ಅಂತ ಆಕೆ ಅಂದುಕೊಂಡಿರಲಿಲ್ಲ. ಆಕೆಗೆ ಹ್ಯಾಗೂ ನಾನು ಡಿಗ್ರಿ ಮುಗಿಸ್ತಾ ಇದ್ದೀನಿ. ಇವತ್ತಲ್ಲಾ ನಾಳೆ ಒಳ್ಳೇ ಕೆಲಸಕ್ಕೆ ಹೋಗ್ತೀನಿ. ಆಗ ನಾವಿಬ್ರು ಚೆನ್ನಾಗಿ ಬದುಕಬಹುದು ಅಂತ ಅಂದುಕೊಂಡಿದ್ಲು. ಅಲ್ಲದೆ ನಾನು ಪ್ರೀತಿಸ್ತಿರೋ ಹುಡುಗ ಜಾಸ್ತಿ ಓದಿಲ್ಲ ಅನ್ನೋ ಬೇಸರವು ಆಕೆಗೆ ಇರಲಿಲ್ಲ. ಇಬ್ಬರು ಚೆನ್ನಾಗಿ ಬದುಕಿದ್ರೆ ಅದೇ ಖುಷಿ ಅಂತ ಇದ್ಲು.

ಪ್ರೀತಿ ಅಂದ ಮೇಲೆ ಅಲ್ಲಿ ಸಣ್ಣಪುಟ್ಟ ತಪ್ಪುಗಳು, ಜಗಳಗಳು ಕಾಮನ್ ಆಗಿ ಇರತ್ತೆ. ಯಾವಾಗ ಪ್ರೀತಿ ಹೊಗೆ ಹಾಕಿಸಿಕೊಳ್ಳೋದು ಅಂದ್ರೆ ಅದು ನಂಬಿಕೆ ಕಳೆದುಕೊಂಡಾಗ. ಈ ಕೆಲಸವನ್ನ ಸುರೇಶ ಮಾಡೋದಕ್ಕೆ ಶುರುಮಾಡಿದ್ದ. ಆದ್ರೆ ಪಾಪ ಆಕೆಗೆ ಇವನು ಡಬಲ್ ಗೇಮ್ ಮಾಡ್ತಿದ್ದಾನೆ ಅಂತ ಅನಿಸಿಯೇ ಇರಲಿಲ್ಲ. ಈಕೆಗೆ ಒಂದು ಗಟ್ಟಿಯಾದ ನಂಬಿಕೆಯಿತ್ತು. ಆ ನಂಬಿಕೆ ಸಾಯುವಂತಹ ಕೆಲಸ ಆತ ಮಾಡ್ತಿದ್ರು ಈಕೆಗೆ ಗೊತ್ತಾಗಲಿಲ್ಲ. ಆದ್ರು ಏನಾದ್ರು ಆಗಲಿ ಅಂತ ಆಕೆ ಅವನನ್ನ ಪ್ರೀತಿಸ್ತಾನೆ ಇದ್ಲು. ಹೀಗೆ ಅವತ್ತು ಫೆಬ್ರವರಿ 14ನೇ ತಾರೀಖು ಪ್ರೇಮಿಗಳ ದಿನದಂದು ಆತನಿಗೆ ಸ್ಪೆಷಲ್ ಆಗಿ ಏನಾದ್ರು ಗಿಫ್ಟ್ ಕೊಡಬೇಕು ಅಂತ ಆಕೆ ಅಂದುಕೊಂಡಿದ್ಲು. ಅಲ್ಲದೆ ಅವತ್ತು ಪೂರ್ತಿ ಆತನ ಮಡಿಲಲ್ಲಿ ಮಲಗಿ ಆ ದಿನವನ್ನ ಕಳೆಯಬೇಕು ಅಂತ ಅಂದುಕೊಂಡಿದ್ಲು.

ಪ್ರೇಮಿಗಳ ದಿನಕ್ಕಾಗಿ ದೀಪಾ ಒಂದಿಷ್ಟು ತಯಾರಿ ಮಾಡಿಕೊಂಡಿದ್ದಾಳೆ. ಅಂದ್ರೆ ಒಂದಿಷ್ಟು ಚಾಕಲೇಟ್ ಗಳನ್ನ ತಂದಿಟ್ಟುಕೊಂಡಿದ್ಲು, ಅಲ್ಲದೆ ಒಂದಿಷ್ಟು ಗಿಫ್ಟ್ ಗಳನ್ನ ಕೂಡಾ ಪ್ಯಾಕ್ ಮಾಡಿಸಿಕೊಂಡು ಬಂದಿದ್ಲು. ನಾಳೆ ಇದನ್ನೆಲ್ಲಾ ಅವನಿಗೆ ಕೊಟ್ಟು ಅವನ ಜೊತೆ ಇರಬೇಕು ಅಂತ ಅಂದುಕೊಂಡಿದ್ಲು. ಆದ್ರೆ ಅವತ್ತೇ ಆತನ ನನಗೆ ಮೋಸ ಮಾಡ್ತಾನೆ ಅನ್ನೋದು ಮಾತ್ರ ಆಕೆಗೆ ಗೊತ್ತಿರಲಿಲ್ಲ. ಇತ್ತ ದೀಪಾ ಪ್ರೀತಿಯನ್ನ ವ್ಯಕ್ತಪಡಿಸೋದಕ್ಕೆ ತಯಾರಿ ನಡೆಸ್ತಿದ್ರೆ ಅತ್ತ ಸುರೇಶ ಬೇರೆಯದ್ದೇ ಮಾಡಿದ್ದ. ಅದಾಗ್ಲೇ ಆತ ಸಾಕಷ್ಟು ದಿನಗಳಿಂದ ಆಕೆಯನ್ನ ದೂರುವಿರಿಸಿದ್ದ. ನಾಲ್ಕೈದು ದಿನಗಳಿಂದ ಅವಳ ಜೊತೆ ಜಗಳ ಮಾಡ್ತಿದ್ದ.ಆಕೆಗೂ ಅನುಮಾನ ಬಂದಿತ್ತು ಅಂತ ಅನಿಸುತ್ತೆ ಅದೇ ಕಾರಣಕ್ಕೆ ಆಕೆ ಅವನ ಜೊತೆ ಕಿತ್ತಾಡಿದ್ದಾಳೆ. ನನ್ನ ಲೈಫ್ ಜೊತೆ ಆಟವಾಡಬೇಡ ಅಂತ ಹೇಳಿದ್ದಾಳೆ.

ನಾಲ್ಕೈದು ದಿನಗಳ ಜಗಳ ಎಲ್ಲವನ್ನ ಸರಿ ಮಾಡುತ್ತೆ ಅಂತ ದೀಪಾ ಅಂದುಕೊಂಡಿದ್ಲು. ಆದ್ರೆ ಆತ ಮಾತ್ರ ತಾನು ಏನು ಮಾಡಬೇಕು ಅನ್ನೋದನ್ನ ಮೊದಲೇ ನಿರ್ಧರಿಸಿಕೊಂಡಿದ್ದ. ಅವನಿಗೆ ದೀಪಾಳ ಪ್ರೀತಿ ಸಾಕಾಗಿತ್ತು. ಯಾಕಂದ್ರೆ ಅವನು ಇನ್ನೊಂದು ಹುಡುಗಿಯನ್ನ ಪ್ರೀತಿಸ್ತಿದ್ದ. ಈ ವಿಚಾರ ಗೊತ್ತಾದ ಮೇಲೆಯೇ ದೀಪಾ ಆತನ ಜೊತೆ ಜಗಳವಾಡಿದ್ದಾಳೆ. ಆದ್ರೆ ಅವನು ಅವಳು ಜಗಳವಾಡಿದಾಗ ಸರಿ ಏನೋ ಸರಿ ಮಾಡಿಕೊಳ್ಳೋಣ ಅಂತ ಹೇಳಿದ್ದ. ಆದರೆ ಅವನಿಗೆ ಹೇಗಾದ್ರು ಮಾಡಿ ಇವಳಿಂದ ತಪ್ಪಿಸಿಕೊಂಡ್ರೆ ಸಾಕಾಗಿತ್ತು. ಅವನಿಗೆ ಇವಳ ಹಳೆ ಪ್ರೀತಿ ಹಳಸಿಹೋಗಿತ್ತು. ಹೊಸ ಪ್ರೀತಿ ಸಿಕ್ಕಿದ ಮೇಲೆ ಇವಳನ್ನ ಅವೈಡ್ ಮಾಡೋದಕ್ಕೆ ಶುರುಮಾಡಿದ್ದ.

ಇದೇ ವಿಚಾರಕ್ಕೆ ನಾಲ್ಕು ದಿನಗಳಿಂದ ಇವರಿಬ್ಬರು ಕಿತ್ತಾಡಿಕೊಳ್ಳುತ್ತಲೇ ಇದ್ರು. ಅವರಿಗೆ ಇದು ಇನ್ನು ಸರಿಯಾಗೋದಿಲ್ಲ ಅಂತ ಅನಿಸಿತ್ತು. ಆದ್ರೆ ಸರಿ ಮಾಡಿಕೊಳ್ಳಬೇಕು ಅನ್ನೋದು ದೀಪಾಳಿಗೆ ಇತ್ತು. ಹೀಗಾಗಿ ಆಕೆ ಕಣ್ಣೀರು ಹಾಕಿ ಆತನನ್ನ ಬೇಡಿಕೊಂಡಿದ್ಲು. ಆದ್ರೆ ಆತ ಮಾತ್ರ ಅದನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಅವನು ಇತ್ತ ಇವಳಿಗೆ ಕೈ ಕೊಟ್ಟು ಇನ್ನೊಬ್ಬಳ ಕೈ ಹಿಡಿಯೋದಕ್ಕೆ ಶುರುಮಾಡಿದ್ದ. ಅಲ್ಲದೆ ತನ್ನ ಮದುವೆಗೆ ಬೇಕಾದ ತಯಾರಿಯನ್ನ ನಡೆಸ್ತಿದ್ದ. ಊರಲ್ಲಿ ಯಾರಿಗೂ ಗೊತ್ತಾಗದ ಹಾಗೆ ತಾನು ಪ್ರೀತಿಸ್ತಿದ್ದ ಹುಡುಗನನ್ನ ಮದುವೆಯಾಗಿ ಪರಾರಿಯಾಗೋದಕ್ಕೆ ತಯಾರಿ ನಡೆಸಿದ್ದ. ಇನ್ನೊಂದು ಕಡೆ ಇವಳಿಗೆ ಎಲ್ಲಾ ಸರಿ ಮಾಡಿಕೊಳ್ಳೋಣ ಅಂತ ಹೇಳ್ತಿದ್ದ.

ಪಾಪ ದೀಪಾಗೆ ಎಲ್ಲಾ ಸರಿ ಆಗಬಹುದು ನಾನು ಪ್ರೀತಿಸಿದ ಹುಡುಗ ನನಗೆ ಸಿಗ್ತಾನೆ ಅನ್ನೋ ಆಸೆಯಲ್ಲಿ ಅವತ್ತು ಎಲ್ಲಾ ಗಿಫ್ಟ್ ಗಳನ್ನ ರೆಡಿ ಮಾಡಿಕೊಂಡಿದ್ಲು. ಎಲ್ಲಾ ಲವ್ವರ್ಸ್ ಗಳ ಹಾಗೆ ನಮ್ಮದು ಸಣ್ಣ ಪುಟ್ಟ ಜಗಳ ಅಂತ ಆಕೆ ಅಂದುಕೊಂಡಿದ್ಲು. ಆದ್ರೆ ನಮ್ಮ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದು ಆಕೆಗೆ ಗೊತ್ತಿರಲಿಲ್ಲ. ಹೇಗಾದ್ರು ಮಾಡಿ ತನ್ನ ಪ್ರೀತಿಯನ್ನ ಉಳಿಸಿಕೊಳ್ಳಲೇ ಬೇಕು ಅಂತ ಆಕೆ ಒದ್ದಾಡ್ತಿದ್ಲು. ಅಷ್ಟೇ ಅಲ್ಲ ಇಲ್ಲಿಯವರೆಗೆ ಪ್ರೀತಿ ಪ್ರೇಮದ ಬಗ್ಗೆ ಮನೆಯವರಲ್ಲಿ ಗುಟ್ಟು ಬಿಟ್ಟುಕೊಡದ ದೀಪಾ ಈಗ ಧೈರ್ಯ ಮಾಡಿ ತನ್ನ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಿದ್ರು. ಅಲ್ಲದೆ ಆತನ ನವರಂಗಿ ನಾಟಕವನ್ನ ಕೂಡಾ ಮನೆಯರಲ್ಲಿ ಹೇಳಿದ್ರು. ಆಗ ಮನೆಯವರಿಗೆ ಏನು ಮಾಡಬೇಕು ಅನ್ನೋದು ಗೊತ್ತೇ ಆಗಲಿಲ್ಲ.

ಯಾಕಂದ್ರೆ ಅವರಿಗೆ ಮಗಳು ಎಲ್ಲಿ ಹೆಚ್ಚು ಕಡಿಮೆ ಮಾಡಿಕೊಳ್ತಾಳೋ, ಅಪ್ಪ ಅಮ್ಮ ಇಲ್ಲದ ಹುಡುಗಿಯ ಬದುಕು ಏನಾಗುತ್ತೋ ಅನ್ನೋ ಆತಂಕ ಶುರುವಾಗಿತ್ತು.ಅವತ್ತು ಫೆಬ್ರವರಿ 13ರ ರಾತ್ರಿ ದೀಪಾ ತನ್ನ ಇನಿಯ ಸುರೇಶನಿಗೆ ಫೋನ್ ಮಾಡಿದ್ದಾಳೆ. ಒಂದಷ್ಟು ಮಾತನಾಡಿ ಜಗಳ ಮಾಡಿದ್ದಾಳೆ. ನನ್ನನ್ನ ನಡುನೀರಿನಲ್ಲಿ ಕೈಬಿಡಬೇಡ ಅಂತ ಹೇಳಿ ಅವನಿಗೆ ಬೇಡಿಕೊಂಡಿದ್ದಾಳೆ. ಆದ್ರೆ ಆತ ಅದ್ಯಾವುದಕ್ಕೂ ಮಣಿಯಲೇ ಇಲ್ಲ. ನಾನು ನಿನಗೆ ಆಮೇಲೆ ಫೋನ್ ಮಾಡ್ತೀನಿ ಅಂತ ಹೇಳಿ ಫೋನ್ ಕಟ್ ಮಾಡಿದ್ದ. ಆದ್ರೆ ರಾತ್ರಿ ಎಷ್ಟು ಹೊತ್ತಾದ್ರು ಆತ ಕಾಲ್ ಮಾಡಲೇ ಇಲ್ಲ.

ಇತ್ತ ದೀಪಾ ಮನೆಯವರು ಊಟಕ್ಕೆ ಕರೆದ್ರು ಹೋಗಲಿಲ್ಲ. ನನಗೆ ಹಸಿವು ಇಲ್ಲ ಅಂತ ಹೇಳಿ ರೂಂಗೆ ಒಳಗೆ ಹೋಗಿ ಬಾಗಿಲು ಹಾಕ್ಕೊಂಡಿದ್ದಾಳೆ. ನಂತ್ರ ಒಂದು ವರ್ಷ ತಾವಿಬ್ರು ಎಲ್ಲೆಲ್ಲಿ ಸುತ್ತಿದ್ದೀವಿ, ಹೇಗೆಲ್ಲಾ ಓಡಾಡಿದ್ವಿ ಅನ್ನೋದನ್ನ ಫೋನ್ ನಲ್ಲಿ ನೋಡಿ ಕಣ್ಣೀರು ಹಾಕಿದ್ದಾಳೆ. ಇದರ ಮಧ್ಯೆ ಆಗಾಗ ಆತನಿಗೆ ಫೋನ್ ಟ್ರೈ ಮಾಡಿದ್ದಾಳೆ.  ಆದ್ರೆ ಆತ ಮಾತ್ರ ಫೋನ್ ಸ್ವಿಚ್ ಆಫ್ ಮಾಡಲೇ ಇಲ್ಲ. ಅವತ್ತು ರಾತ್ರಿ ಪೂರ್ತಿ ಅವಳು ನಿದ್ದೆಗೆಟ್ಟಿದ್ದಾಳೆ. ಅವಳಿಗೆ ಏನು ಮಾಡಬೇಕು ಅನ್ನೋದು ಕೂಡಾ ಗೊತ್ತೇ ಆಗಲಿಲ್ಲ. ಯಾಕಂದ್ರೆ ಅದಾಗ್ಲೇ ಆತ ಇನ್ನೊಂದು ಮದುವೆಯಾಗಿ ಊರು ಬಿಟ್ಟು ಹೋಗಿದ್ದ. ಹೀಗಾಗಿ ಆತ ಇವಳ ಫೋನ್ ಅನ್ನ ರಿಸಿವ್ ಮಾಡ್ತಿರಲಿಲ್ಲ. ಅವನೇ ನಾನು ಇನ್ನೊಂದು ಮದುವೆಯಾಗಿದ್ದೀನಿ ಅಂತ ಹೇಳಿದ್ದ. ಹೀಗಾಗಿ ಆಕೆಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಆಗಿತ್ತು.

ಇವನು ಇನ್ನು ನನಗೆ ಸಿಗೋದಿಲ್ಲ. ನನ್ನ ಕನಸುಗಳೆಲ್ಲಾ ಹಾಳಾಗಿ ಹೋಯ್ತು ಅಂತ ಆಕೆ ಅಂದುಕೊಂಡಿದ್ಲು. ರಾತ್ರಿ ಪೂರ್ತಿ ಇದನ್ನೇ ಯೋಚನೆ ಮಾಡಿದ್ದಾಳೆ. ಇನ್ನು ನಾನು ಬದುಕಿದ್ರು ಪ್ರಯೋಜನವಿಲ್ಲ. ಆತನಿಲ್ಲದೆ ನಾನು ಬದುಕೋದಕ್ಕೆ ಸಾಧ್ಯವೇ ಇಲ್ಲ ಅಂತ ಅಂದುಕೊಂಡಿದ್ದಾಳೆ. ಪ್ರತಿದಿನ ಮುಂಜಾನೆ 5ಗಂಟೆಗೆ ಮನೆಯವರೆಲ್ಲಾ ಕೆಲಸಕ್ಕೆ ಅಂತ ಮನೆಯಿಂದ ಹೊರಗೆ ಹೋಗ್ತಾರೆ. ಆಗ ಅವರು ಹೊರಗೆ ಹೋಗೋದನ್ನೆ ಅವಳು ಕಾದಿದ್ದಾಳೆ. ಅವರೆಲ್ಲಾ ಮನಯಿಂದ ಹೊರಗೆ ಹೋಗ್ತಿದ್ದ ಹಾಗೆ ಇವಳು ತನ್ನ ರೂಂ ಸೇರಿಕೊಂಡು ಬಾಗಿಲು ಲಾಕ್ ಮಾಡಿಕೊಂಡಿದ್ದಾಳೆ. ನಂತ್ರ ತನ್ನ ಡೈರಿಯಲ್ಲಿ ಆಕೆ ತನ್ನ ಪ್ರೀತಿಯ ಪ್ರತಿಯೊಂದು ವಿಚಾರವನ್ನ ಕೂಡಾ ಅದರಲ್ಲಿ ಬರೆದಿದ್ದಾಳೆ. ನಂತ್ರ ಆ ಡೈರಿಯನ್ನ ತನ್ನ ಹಾಸಿಗೆಯ ಮೇಲೆ ಇಟ್ಟು ತನ್ನ ವೇಲ್ ನಿಂದ ರೂಂನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

LEAVE A REPLY

Please enter your comment!
Please enter your name here