Home Crime ಪ್ರೀತಿಸಿದವಳಿಗೆ ಪಾಪಿ ಪತಿಯಿಂದ ನಿತ್ಯ ಕಿರುಕುಳ..! ನನಗೆ ಗಂಡನಿಂದ ವಿಮುಕ್ತಿಕೊಡಿಸಿ ಎಂದ ಪತ್ನಿ..!

ಪ್ರೀತಿಸಿದವಳಿಗೆ ಪಾಪಿ ಪತಿಯಿಂದ ನಿತ್ಯ ಕಿರುಕುಳ..! ನನಗೆ ಗಂಡನಿಂದ ವಿಮುಕ್ತಿಕೊಡಿಸಿ ಎಂದ ಪತ್ನಿ..!

1159
0
SHARE

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ರು, ಆತನಿಗೆ ಮಡದಿಯ ಪ್ರೀತಿ ಮದುವೆಯಾದ ಎರಡೇ ವರ್ಷಕ್ಕೆ ಸಾಕಾಗಿ ಹೋಗಿತ್ತು. ನಿತ್ಯವೂ ಕೊಡುತ್ತಿದ್ದ ಗಂಡನ ಚಿತ್ರಹಿಂಸೆಗೆ ಬೇಸತ್ತ ಆಕೆ ತವರು ಮನೆ ಬಂದು ಸೇರ್ಕೋಂಡ್ಲು, ಹೆಂಡತಿ ತವರು ಮನೆಗೆ ದಾರಿ ಹಿಡುತ್ತಿದ್ದಂತೆ ಮತ್ತೊಂದು ಮದುವೆಯಾಗಿ ಬಿಟ್ಟ. ಆಕೆಗೆ ತನ್ನ ಪತಿ ಮದುವೆಯಾದ ವಿಷಯ ತಿಳಿಯುತ್ತಿದ್ದಂತೆ ಗಂಡನ ಮನೆಯೆದುರು ಗಲಾಟೆ ಮಾಡಿದ್ಲು.

ನನಗೆ ನ್ಯಾಯ ಬೇಕು ಅಂತಾ ಗಂಡನ ಮನೆಯೆದುರು ಪ್ರತಿಭಟನೆ ನಡೆಸಿದ್ರು, ನನಗೆ ಚಿತ್ರ ಹಿಂಸೆ ನೀಡೋ ಗಂಡನಿಂದ ವಿಚ್ಚೇದನ ಬೇಕು, ನನಗೆ ಗಂಡ ಬೇಡಾ ಅಂತಾ ಕಣ್ಣೀರಿಡ್ತಿದ್ದಾಳೆ.ಹಾಸನದ ಆದರ್ಶ ನಗರದಲ್ಲಿರೋ ಹೀನಾ ಕೌಸರ್ ಎಂಬಾಕೆ ಪ್ರೀತಿಸಿ ಮದುವೆಯಾಗಿದ್ಲು, ಇದೀಗ ಪ್ರೀತಿಸಿದನಿಂದ ಮೋಸ ಆಗಿದೆ ಅಂತಾ ಗಂಡನ ಮನೆಯ ಮುಂದೆ ಪ್ರತಿಭಟನೆ ಮಾಡ್ತಿದ್ದಾಳೆ. ಕಳೆದ ಆರು ವರ್ಷದ ಹಿಂದೆ ಹಾಸನ ನಗರದ ಹುಣಸಿನಕೆರೆ ನಿವಾಸಿಯಾಗಿರೋ ಸೋಹಿಲ್ ಅಹಮ್ಮದ್ ನೊಂದಿಗೆ ಪ್ರೇಮಾಂಕುರವಾಗಿ ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ರು.

ಮದುವೆಯಾಗಿ ಒಂದು ಮಗುವಿನೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದ ಕೆಲವೇ ವರ್ಷಗಳ ನಂತರ ಗಂಡ ನಿತ್ಯವೂ ಕಿರುಕುಳ ಕೊಡೋದಕ್ಕೆ ಶುರುಮಾಡಿದ್ದ. ಅಲ್ಲದೇ ಡ್ರಗ್ಸ್ ಹಾಗೂ ಮದ್ಯ ಸೇವಿಸಿ ದೈಹಿಕವಾಗಿಯೂ ಕೂಡಾ ಹಿಂಸೆ ಕೊಡುತ್ತಿದ್ದನಂತೆ. ಇದ್ರಿಂದ ಬೇಸತ್ತ ಹೀನಾಕೌಸರ್ ಗಂಡನನ್ನು ಬಿಟ್ಟು ತವರು ಮನೆ ಬಂದು ಸೇರ್ಕೊಂಡಿದ್ದಾಳೆ. ಆಕೆ ತವರು ಮನೆ ಸೇರ್ಕೋಳ್ಳುತ್ತಿದ್ದಂತೆ ಇತ್ತ ಸೋಹಿಲ್ ಅಹಮ್ಮದ್ ಮತ್ತೊಂದು ಮದುವೆಯಾಗಿದ್ದಾನೆ.

ಹೀನಾ ಕೌಸರ್ ಹಾಗೂ ಸಂಬಂಧಿಕರು ಮನೆಯೆದುರು ಗಲಾಟೆ ಮಾಡಿದ್ರೂ, ಗಂಡ ಸೋಹಿಲ್ ಅಹಮ್ಮದ್ ಮನೆಯಲ್ಲಿಯೇ ಇದ್ದರೂ ಕೂಡಾ ಬಾಗಿಲು ತೆರೆಯಲೇ ಇಲ್ಲ, ಸೋಹಿಲ್ ಸಂಬಂಧಿಕರೂ ಕೂಡಾ ಗಲಾಟೆ ಮಾಡಿ ಅವರನ್ನು ವಾಪಸ್ಸು ಕಳಿಸಿದ್ರು. ಲವ್ ಮ್ಯಾರೇಜ್ ಆದ್ರೆ ಅವರು ಕೊಟ್ಟ ಕಷ್ಟವನ್ನೆಲ್ಲಾ ಸಹಿಸಿಕೊಂಡು ಇರೋದಕ್ಕೆ ಆಗುತ್ತಾ ಅಂತಾ ಕೌಸರ್ ಕಣ್ಣೀರಿಡುತ್ತಿದ್ದಾಳೆ.

ಬೇಕಾದಷ್ಟು ಹಣ, ಒಡವೆಗಳನ್ನು ಕೊಟ್ಟು ಮದುವೆ ಮಾಡಿದ್ದೇವೆ, ನನ್ನ ಮಗಳ ಬಾಳು ಹಾಳಾಗೋಯ್ತು ಅಂತಾ ಪೋಷಕರೂ ಕೂಡಾ ಕಣ್ಣೀರು ಹಾಕುತ್ತಿದ್ದಾರೆ.ಒಟ್ನಲ್ಲಿ, ಪ್ರೀತಿ ಮಾಡಿ ನಾನು ತಪ್ಪು ಮಾಡಿದ ಅಂತಾ ಹೀನಾ ಕೌಸರ್ ಕಣ್ಣೀರು ಹಾಕ್ತಿದ್ದಾಳೆ. ಇದೀಗ ನನಗೆ ಗಂಡ ಬೇಡ, ಗಂಡನಿಂದ ಡಿವೋರ್ಸ್ ಮಾತ್ರ ಬೇಕು ಅಂತಾ ಒತ್ತಾಯ ಮಾಡ್ತಿರೋ ಅಕೆಗೆ ಪೊಲೀಸರು ಯಾವ ರೀತಿ ನ್ಯಾಯ ಕೊಡಿಸ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here