Home District ಪ್ರೀತಿಸಿ ಮದುವೆಯಾಗಿದ್ದಕ್ಕೆ 30 ಸಾವಿರ ದಂಡ..?! ಹಣ ಕಟ್ಟಲಾಗದ್ದಕ್ಕೆ ಊರಿಂದಲೇ ಬಹಿಷ್ಕಾರ..?!

ಪ್ರೀತಿಸಿ ಮದುವೆಯಾಗಿದ್ದಕ್ಕೆ 30 ಸಾವಿರ ದಂಡ..?! ಹಣ ಕಟ್ಟಲಾಗದ್ದಕ್ಕೆ ಊರಿಂದಲೇ ಬಹಿಷ್ಕಾರ..?!

927
0
SHARE

ಅವರಿಬ್ಬರು ಒಂದೇ ಊರಿನ ಯುವ ಜೋಡಿ. ಕಳೆದ ಮೂರು ವರ್ಷಗಳಿಂದ ಪರಸ್ಪರಪ್ರೀತಿಸುತ್ತಿದ್ರು, ಮದುವೆಯಾಗ ಬೇಕೆಂದು ತೀರ್ಮಾನಿಸಿದ್ದರಿಂದ ತಮ್ಮಮನೆಗಳಲ್ಲಿ ಹೇಳಿಕೊಂಡ್ರು. ಮೊದಲು ನಿರಾಕರಿಸಿದ ಹುಡುಗಿ ಮನೆಯವರು ಒಂದೆ ಜಾತಿಯಾಗಿದ್ದ ಕಾರಣ ನಂತ್ರ ಒಕೆ ಅಂದ್ರು. ಆದ್ರೆ ಗ್ರಾಮದ ಮುಖಂಡರು ಮಾತ್ರ ಪ್ರೇಮಿಗಳ ಕುಟುಂಬದವರಿಗೇ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬ್ಯಾನರ ಹಿಡಿದು ನಿಂತಿರುವ ಹುಡುಗ ಮತ್ತು ಹುಡುಗಿ ಮೂಲತಹ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೊಕು ನಗುನಳ್ಳಿಯ ಸ್ಪೂರ್ತಿ ಮತ್ತು ಮನೋಜ್ ಪರಸ್ಪರ ಪ್ರೀತಿಸಿ ಮದುವೆಯಾದವರು ಕಳೆದ ವಾರವಷ್ಟೇ ಮದುವೆ ಯಾಗಿರುವ ಜೋಡಿ ಕತ್ತಿನಲ್ಲಿ ಕಟ್ಟಿರುವ ಅರಿಶಿನದಾರದ ಅರಿಶಿನ ಇನ್ನು ಆರಿಲ್ಲ ಅದ್ರೆ ಆಗಲೇ ಬ್ಯಾನರ್ ಹಿಡಿದು ಬೀದಿಯಲ್ಲಿ ನಿಂತು ಪ್ರತಿಭಟಿಸ್ತಾ ಇದ್ದಾರೆ..

ಇದಕ್ಕೆ ಕಾರಣ ಇವರ ಊರಲ್ಲಿ ಪ್ರೇಮ ವಿವಾಹ ವಾಗೋದು ನಿಷೇದವಂತೆ ಅದಕ್ಕೆ ಇಬ್ಬರಿಗೂ ತಲಾ 30 ಸಾವಿರ ದಂಡ ವಿದಿಸಲಾಗಿದೆ ನೀಡಲ್ಲ ಅಂದಿದ್ದಕ್ಕೆ ಇವರ ಸಂಬಂದಿಕರು ಸೇರಿದಂತೆ ಸುಮಾರು 5 ಕುಟುಂಬಗಳನ್ನ ಊರಿಂದ ಭಹಿಷ್ಕಾರ ಹಾಕಲಾಗಿದೆ. ಪ್ರೇಮವಿವಾಹಕ್ಕೆ ಅಡ್ಡಬಂದಿದ್ದು ಆಲ್ಲದೇ ದಂಡ ನೀಡುವಂತೆ ಹೇಳಿದ ಗ್ರಾಮಸ್ಥರ ವಿರುದ್ದ ತಿರುಗಿ ಬಿದ್ದ ಯುವಜೋಡಿ ಮತ್ತು ಅವರ ಮನೆಯವರನ್ನ ಈಗ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಗ್ರಾಮದಲ್ಲಿ ತಮಟೆ ಬಡಿದು ಸಾರಲಾಗಿದ್ದು ಮೊನ್ನೆ ಗಣಪತಿ ಉತ್ಸವ ಮನೆ ಮುಂದೆ ಬಂದಾಗ ಪೂಜೆಮಾಡಿಸಲು ಹೊದ್ರೆ ಈ ಜೋಡಿ ಮತ್ತು ಇವರ ಸಂಬಂದಿಕರಿಗೆ ಅಲ್ಲಿ ಅವಕಾಶ ಕೊಡದೆ ಪೂಜೆ ತಟ್ಟೆಯನ್ನ ಬಿಸಾಡಿದ್ದಾರೆ.

ದೊಡ್ಡ ಯಜಮಾನ –ಚಿಕ್ಕಮಾದಯ್ಯ, ಚಿಕ್ಕಯಜಮಾನಚಲುವಯ್ಯ, ಸೇರಿದಂತೆ ಒಟ್ಟು 9 ಜನ ಯಜಮಾನರ ಆಜ್ನೆಯನ್ನ ಪಾಲಿಸುತ್ತಿರುವುದಾಗಿ ಗ್ರಾಮದ ಕೆಲವರು ಹೇಳಿದ್ದಾರೆ.ತಮಗಾಗಿರುವ ತೊಂದ್ರೆ ಬಗೆ ಶ್ರೀರಂಗ ಪಟ್ಟಣ ಗ್ರಾಮಾಂತರ ಪೋಲೀಸ್ ಯಲ್ಲಿ ದೂರುದಾಖಲಿಸಿದ್ರೆ ಯಾವುದೆ ಕ್ರಮಕೈ ಗೊಂಡಿಲ್ಲ. ಯಾಕೆ ಅಂತ ಕೇಳಿದ್ರೆ ಇದು ನಿಮ್ಮೂರಿನ ವಿಶ್ಯ ಗ್ರಾಮದಲ್ಲಿ ನಡೆದ ಪಂಚಾಯತಿಗೆ ನಾವು ಜವಾಬ್ದಾರಿಯಲ್ಲ ಅಲ್ಲೆ ತಿರ್ಮಾನ ಮಾಡಿಕೊಳ್ಳಿ ಅಂತ ಪಿಎಸೈ ಹೇಳಿದ್ದಾರೆ.

ಅದ್ರೆ ಗ್ರಾಮಸ್ಥರು ಇವರ ಮೇಲೆ ಕೊಟ್ಟ ದೂರನ್ನ ತೆಗೆದುಕೊಂಡು ಬಹಿಷ್ಕಾರಕ್ಕೆ ಒಳಗಾದವರನ್ನ ಬಂದಿಸಲು ಮುಂದಾಗಿದ್ದಾರೆ. ತಮಗಾದ ನೋವನ್ನು ಎಸ್ಪಿ ಬಳಿ ತೋಡಿಕೊಂಡರೂ ಪ್ರಯೊಜವಾಗದಿದ್ದಾಗ ಜಿಲ್ಲಾದಿಕಾರಿಗೆ ಮನವಿ ನೀಡಿದ್ದು ಪೋಲೀಸ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಆದ್ರೂ ಗಾಢ ಮೌನದಲ್ಲಿದ್ದ ಅಧಿಕಾರಿಗಳು ಇಂದು ಬೆಳಿಗ್ಗೆ ಪ್ರಜಾಟಿವಿಯಲ್ಲಿ ವರದಿ ಪ್ರಸಾರ ವಾಗುತ್ತಿದ್ದಂತೆ ನಗುನಳ್ಳಿ ಗ್ರಾಮಕ್ಕೆ ದೌಡಾಯಿಸಿ ಒಟ್ಟು 9 ಮಂದಿಯನ್ನ ಠಾಣೆಗೆ ಕರೆಕೊಂಡು ಹೊಗಿ ವಿಚಾರಣೆ ನಡೆಸುತ್ತಿದ್ದು ಬಾರಿ ಒತ್ತಡವಿರುವ ಕಾರಣ ಬಹಿಕ್ಷಾರಕ್ಕೆ ಒಳಗಾಗಿ ನೊಂದವರ ವಿರುದ್ದ ಕೇಸು ದಾಖಲಿಸಲು ಮುಂದಾಗಿದ್ದಾರೆ ಇಂದು ಕೂಡಾ ಪ್ರೇಮ ವಿವಾಹವಾದವರನ್ನ ಗ್ರಾಮದಿಂದ ಭಹಿಷ್ಕಾರ ಹಾಕುವ ನೀಚ ಪದ್ದತಿ ಚಾಲ್ತಿಯಲ್ಲಿರುವುದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿ.

LEAVE A REPLY

Please enter your comment!
Please enter your name here