Home Crime ಪ್ರೀತಿಸಿ ಮದುವೆಯಾದ್ರು ತಪ್ಪದ ಜಾತಿ ಕಂಟಕ..! ಅನ್ಯ ಜಾತಿಯ ಯುವಕನ ವರಿಸಿದ್ದೆ ಈಕೆಗೆ ಶಾಪ..! ತನ್ನ...

ಪ್ರೀತಿಸಿ ಮದುವೆಯಾದ್ರು ತಪ್ಪದ ಜಾತಿ ಕಂಟಕ..! ಅನ್ಯ ಜಾತಿಯ ಯುವಕನ ವರಿಸಿದ್ದೆ ಈಕೆಗೆ ಶಾಪ..! ತನ್ನ ಸಮುದಾಯದಿಂದ ಈಕೆಗೆ ಕುಲ ಬಹಿಷ್ಕಾರ..!

785
0
SHARE

ಆಕೆ ಬಡ ಕುಟುಂಬದ ಹೆಣ್ಣು ಮಗಳು. ಕೂಲಿ ಮಾಡಿ ಕೊಂಡು ಬದುಕಿದ್ದ ಯುವತಿ. ಆದ್ರೆ ಆಕೆ ಬೇರೊಂದು ಜಾತಿಯ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದೆ ತಪ್ಪಾಯ್ತು. ಮನೆಯವರನ್ನ ಒಪ್ಪಿಸಿ ಮದುವೆಯಾದ್ರು, ಆಕೆಗೆ ಜನಾಂಗದವರು ಈಗ ಬಹಿಷ್ಕಾರ ಹಾಕಿದ್ದಾರೆ. ಗರ್ಭಿಣಿಯ ಪಾಡು ಈಗ ಹೇಳದಾಗಿದೆ.ಜನ ಎಷ್ಟೆ ಮುಂದುವರೆದ್ರು ಜಾತಿ ಅನ್ನೋ ಅನಿಷ್ಠ ಮಾತ್ರ ಹೋಗಲ್ಲ.

ಹೌದು ಇಲ್ಲೊಂದು ಕುಟುಂಬ ಈಗ ಕುಲಬಹಿಷ್ಕಾರಕ್ಕೆ ತುತ್ತಾಗಿ ಪರಿತಪಿಸುತ್ತಿದೆ. ಇಲ್ಲಿ ಯುವಕ ಅನ್ಯ ಜಾತಿಯವನಾದ್ರೂ ಹೆಂಡತಿಗೆ ಯಾವ ಸಮಸ್ಯೆ ಕೊಡದೆ ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾನೆ. ಈಕೆಯೂ ಸಹ ನೆಮ್ಮದಿಯಿಂದ ಪತಿಯ ಜೊತೆ ಸಂಸಾರ ನಡೆಸುತ್ತಿದ್ದಾಳೆ. ಆದ್ರೆ ಈಕೆ ನೆಮ್ಮದಿಯಾಗಿರೋದು ಈಕೆಯ ಜನಾಂಗದವರಿಗೆ ಬೇಡವಾಗಿದೆ.

ಹೌದು ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪುಟ್ಟಮಾಧು, ಸಣ್ಣಮ ದಂಪತಿಯ ಪುತ್ರಿ ಯಶೋಧ ಒಕ್ಕಲಿಗ ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ. ತಂದೆ ತಾಯಿಯ ವಿರೋಧವಿದ್ರು ಅವರನ್ನ ಒಪ್ಪಿಸಿಯೇ ಮದುವೆಯಾದ್ಲು. ಈಕೆಗೊಂದು ಮುದ್ದಾದ ಮಗುವು ಇದೆ. ಆದ್ರೆ ಯಶೋಧ ಈಗ ತಿಗಳ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ತಿಗಳ ಸಮುದಾಯವೀಗ ಇವರ ಕುಟುಂಬಕ್ಕೆ ಕುಲ ಬಹಿಷ್ಕಾರ ಹಾಕಿದೆ.

ಗ್ರಾಮದಲ್ಲಿ ವಾಸ ಮಾಡದಂತಾಗಿದೆ. ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.ತಿಗಳ ಸಮಾಜದ ಪ್ರಕಾರ ಯುವತಿ ಬೇರೆ ಜಾತಿಯ ಯುವಕನನ್ನ ಮದುವೆಯಾಗಬೇಕಾದ್ರೆ ಸಮಾಜದ ಮುಖಂಡರನ್ನ ಕೇಳಿ ಒಪ್ಪಿಗೆ ಪಡೆದು ಮದುವೆಯಾಗಬೇಕು. ಯುವತಿಯು ಸಹ ಸಮಾಜದ ಮುಖಂಡ ರ ಒಪ್ಪಿಗೆ ಪಡೆದು 5 ಸಾವಿರ ದಂಡ ಕಟ್ಟಿಯೇ ಮದುವೆಯಾಗಿದ್ದಾಳೆ. ಆದ್ರೆ ಸಮಾಜದ ಮುಖಂಡರು ಒಪ್ಪಿಗೆ ಪಡೆದು ಮದುವೆಯಾದ್ರು ಈಗ ಬಹಿಷ್ಕಾರ ಹಾಕಿದ್ದಾರೆ.

ಇನ್ನೂ ನೊಂದ ಯಶೋಧ ಕುಟುಂಬ ಗ್ರಾಮದಲ್ಲಿ ಓಡಾಡಲು ತೊಂದರೆಯಾಗಿದೆ . ಗ್ರಾಮದವರು ಅಸಗ್ಯವಾಗಿ ನಿಂದಿಸುತ್ತಿದ್ದಾರಂತೆ. ಹಲಗೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾ ಮಹಿಳಾ ಮಕ್ಕಳ ಕಲ್ಯಾಣಾಧಿ ಕಾರಿಗೆ ‌ದೂರು ನೀಡಿ ನ್ಯಾಯಕ್ಕೆ ಅಂಗಲಾಚಿದೆ.ಒಟ್ಟಾರೆ ಯುವತಿ ಯೊರ್ವಳು ತನ್ನ ಬಾಳ ಸಂಗಾತಿ ಆಯ್ಕೆ ಮಾಡಿ ಕೊಂಡಿದ್ದಕ್ಕೆ ಶಿಕ್ಷೆ ಅನುಭವಿಸುವಂತಾಗಿದೆ. ಸುಶಿಕ್ಷಿತ ಸಮಾಜದಲ್ಲಿ ಇಂತಃ ಘಟನೆ ನಡೆದಿರೋದು ಎಲ್ಲರೂ ತಲೆ ತಗ್ಗಿಸುವಂತಾಗಿದೆ.

LEAVE A REPLY

Please enter your comment!
Please enter your name here