Home Crime ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಪೋಷಕರೇ ವಿಲನ್.! ಮದುವೆಯಾಗಿ ಬಂದ ಮನೆ ಮಗಳಿಗೆ ಕೊಲೆ ಬೆದರಿಕೆ..!? ರಕ್ಷಣೆ...

ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಪೋಷಕರೇ ವಿಲನ್.! ಮದುವೆಯಾಗಿ ಬಂದ ಮನೆ ಮಗಳಿಗೆ ಕೊಲೆ ಬೆದರಿಕೆ..!? ರಕ್ಷಣೆ ಕೋರಿ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ ನವಜೋಡಿ.

736
0
SHARE

ಪ್ರೀತಿ ಕೂಡ ಒಂದು ಮಾದಕ ದ್ರವ್ಯದಂತೆ. ಪ್ರಪಂಚವನ್ನೇ ಮರೆಸುವ ಶಕ್ತಿ ಪ್ರೀತಿಗೆ ಇದೆ ಅಂತಾರೆ. ಹೀಗಾಗಿ ಪ್ರೀತಿಯಲ್ಲಿ ಬಿದ್ದಿರೋರು ಯಾರು ಏನು ಹೇಳಿದರೂ ಕೇಳಿಸಿಕೊಳ್ಳೋದಿಲ್ಲ. ಪ್ರೀತಿ ಪಡೆಯಲು ಜಾತಿ ಮರೆತು ತನ್ನವರನ್ನೇ ಎದುರು ಹಾಕಿಕೊಳ್ಳುತ್ತಾರೆ. ಇದೇ ರೀತಿ ಪೋಷಕರನ್ನೇ ಎದುರು ಹಾಕಿ ಪ್ರೀತಿ ಮಾಡಿದವರು ಈಗ ರಕ್ಷಣೆ ಕೋರಿ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ.

ಪ್ರೀತಿಸಿ ಮದುವೆಯಾದ ಪ್ರೇಮಿಗಳು ಬೇರೆ ಬೇರೆ ಜಾತಿಯವರು ಎಂಬ ಕಾರಣಕ್ಕೆ, ಪೋಷಕರೇ ಆ ಪ್ರೇಮಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ನಿವಾಸಿ ಸಿಂಧು ಮತ್ತು ಹಂಗಾರಹಳ್ಳಿ ನಿವಾಸಿ ಜಗದೀಶ್ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ರು. ಈ ವೇಳೆ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿದ್ದಾರೆ.

ಮಗಳು ಸಿಂಧುಗಾಗಿ ಪೋಷಕರು ಗಂಡು ಹುಡುಕಲು ಮುಂದಾಗಿದ್ರು. ಈ ವಿಷಯ ಜಗದೀಶ್‌ಗೆ ತಿಳಿಸಿ, ಇಬ್ಬರು ಮೇಜರ್ ಆಗಿದ್ದ ಕಾರಣ ಬೆಂಗಳೂರಿನ ದೇವಸ್ಥಾನದಲ್ಲಿ ಮದುವೆಯಾಗಿ, ಯಲಹಂಕದಲ್ಲಿ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಆದರೆ, ಇದೀಗ ಸಿಂಧು ಪೋಷಕರು ಕೋಪಗೊಂಡು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವುದು ಸಿಂಧು ಆರೋಪ.

ಇನ್ನು ಸಿಂಧು ಪೋಷಕರು ಜಾತಿ ಬೇರೆಬೇರೆಯಾಗಿರೋದಕ್ಕೆ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ. ನಾವಿಬ್ಬರೂ ಎರಡು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ . ಮದುವೆಯಾಗದಿದ್ರೆ ಬದುಕೋದಿಲ್ಲ ಅಂತ ಸಿಧು ಹೇಳಿದ್ದಳು. ಹಾಗಾಗಿ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ಈಗ ಆಕೆಯ ಪೋಷಕರು ನನ್ನ ಮನೆಯವರಿಗೆ ತೊಂದರೆ ನೀಡ್ತಿದ್ದು, ನನ್ನ ವಿರುದ್ದ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.

ಹೀಗಾಗಿ ತಮಗೆ ರಕ್ಷಣೆ ಕೊಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ.ಒಟ್ಟಿನಲ್ಲಿ ಜಾತಿ ಭೇದದ ಎಲ್ಲೆ ಮೀರಿದ ಪ್ರೀತಿಗೆ, ಪೋಷಕರೆ ಈಗ ಕಂಟಕವಾಗಿದ್ದಾರೆ. ಇನ್ನು ಪ್ರೇಮಿಗಳಿಗೆ ಸ್ಪಂದಿಸುವಂತೆ ಹಿರಿಯ ಅಧಿಕಾರಿಗಳು ಕುಣಿಗಲ್ ಪೊಲೀಸರಿಗೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here