Home Crime ಪ್ರೀತಿಸಿ ವಿವಾಹವಾಗಿ ಗರ್ಭಿಣಿ ಮಾಡಿ ಕೈಕೊಟ್ಟ ಪತಿರಾಯ..! ಫೇಸ್‌ಬುಕ್ ಪರಿಚಯದ ವಿವಾಹ ತಂತು ಪಜೀತಿ…

ಪ್ರೀತಿಸಿ ವಿವಾಹವಾಗಿ ಗರ್ಭಿಣಿ ಮಾಡಿ ಕೈಕೊಟ್ಟ ಪತಿರಾಯ..! ಫೇಸ್‌ಬುಕ್ ಪರಿಚಯದ ವಿವಾಹ ತಂತು ಪಜೀತಿ…

467
0
SHARE

ಅವ್ರಿಬ್ಬರೂ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಎರಡು‌ ವರ್ಷಗಳ ಕಾಲ ಸುತ್ತಾಡಿ ಪ್ರೀತಿಸಿ ಮದುವೆಯಾದವ್ರು..ಆ ಇಬ್ಬರ ಸಂಸಾರಕ್ಕೆ ಆ ಹುಡುಗಿ ಗರ್ಭಿಣಿ ಸಹ ಆದವಳು..ಎಲ್ಲವೂ ಸರಿಯಾಗಿ ನಡೆದಿದ್ರೇ ಇವತ್ತು ಆ ಇಬ್ಬರು ಸುಖ ಸಂಸಾರ‌ ಮಾಡ್ಬೇಕಿತ್ತು..ಆದರೆ ಆ ಭಂಡ ಗಂಡನ ಮನಸ್ಸಿನಲ್ಲಿ ಬೇರೆಯದ್ದೇ ಇತ್ತು..ಹೊಟ್ಟೆಯಲ್ಲಿದ್ದ ಮಗು ಕಣ್ಣು ಬಿಡೋಕು ಮುಂಚೆಯೇ ಚಿವುಟಿ ಹಾಕಿ ಕೈತೊಳೆದುಕೊಳ್ಳೋ ಪ್ಲಾನ್ ಅವನ್ನದ್ದಾಗಿತ್ತು..

ಇದ್ದಕ್ಕೆ ಒಪ್ಪದ ಆಕೆ ಇಂದು‌ ಬೀದಿಗೆ ಬಿದ್ದಿದ್ದಾಳೆ.. ಫೇಸ್ ಬುಕ್ ಮೂಲಕ ಪರಿಚಯವಾಗಿ ಯುವಕನಿಂದ ಲವ್, ಸೆಕ್ಸ್ ಅಂತೆಲ್ಲಾ ಮೋಸ ಹೋದ ಯುವತಿ ಇದೀಗ ನ್ಯಾಯಕ್ಕಾಗಿ ಯುವಕನ ಮನೆ ಮುಂದೆಯೇ ಧರಣಿ ಕುಳಿತಿದ್ದಾಳೆ..ಫೇಸ್ ಬುಕ್ ಪರಿಚಯದಿಂದ ಪ್ರೀತಿಸಿ,ಆತನ ಬಣ್ಣದ ಮಾತಿಗೆ ಮರುಳಾಗಿ ಆತನನ್ನೇ ಮದುವೆಯಾಗಿ, ಗರ್ಭಿಣಿಯಾಗಿ ಇದೀಗ ಯುವತಿಯೋರ್ವಳು ಬೀದಿಗೆ ಬಿದ್ದಿದ್ದಾಳೆ..

ಗರ್ಭಿಣಿಯಾದ ಮೇಲೆ ಕುಟುಂಬದವರಿಗೆ ಹೆದರಿ ಕೈಕೊಟ್ಟ ಭಂಡ ಗಂಡನಿಗಾಗಿ ಆತನ ಮನೆ ಮುಂದೆ ಹೆಂಡ್ತಿ ಧರಣಿ ನಡೆಸಿದ್ದಾಳೆ..ತುಮಕೂರು‌ ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳಸಂದ್ರದ ದೊಡ್ಡಯ್ಯ ಎನ್ನವರ ಮಗ ಸಿದ್ದಲಿಂಗಪ್ಪ ಎನ್ನುವಾತ ಯುವತಿಯನ್ನ ನಂಬಿಸಿ ವಂಚಿಸಿದ್ದಾನೆ..ಕಳೆದ ಎರಡು ವರ್ಷದ ಹಿಂದೆ ಚನ್ನಪಟ್ಟಣ ಮೂಲದ ಸರಸ್ವತಿ ಎನ್ನುವರನ್ನ ಫೇಸ್‌ಬುಕ್ ನಲ್ಲಿ ಪ್ರೀತಿಸಿ, ಆ ಬಳಿಕ ಆಕೆಯ ಮದುವೆ ತಪ್ಪಿಸಿ ಕರೆತಂದು ಬೆಂಗಳೂರಿನಲ್ಲಿ ಮದುವೆಯಾಗಿದ್ದಾನೆ‌..

ಗರ್ಭಿಣಿಯಾದ ಬಳಿಕ ಸರಸ್ವತಿಯನ್ನ ಮಧುಗಿರಿಗೆ ಕರೆತಂದು ಗರ್ಭಪಾತ ಮಾಡಿಸಲು ಯತ್ನಿಸಿದ್ದು ಒಪ್ಪದಿದ್ದಾಗ ಪತ್ನಿಯನ್ನ ಅಲ್ಲೇ ಬಿಟ್ಟು ಸಿದ್ದಲಿಂಗಪ್ಪ ಪರಾರಿಯಾಗಿದ್ದಾನೆ.ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿದ್ದಲಿಂಗಪ್ಪ ಕೆಲಸ ಮಾಡುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಯಾರಿಗೂ ಸಿಗದೇ ನಾಪತ್ತೆಯಾಗಿದ್ದಾನೆ.. ನಾಪತ್ತೆಯಾದ ಗಂಡನಿಗಾಗಿ ಗರ್ಭಿಣಿ ಪತ್ನಿ ಒಂದು ತಿಂಗಳಿನಿಂದ ಕಾದುಕುಳಿತಿದ್ದು,,

ಇದೀಗ ಗಂಡನ ಮನೆ ಮುಂದೆಯೇ ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾಳೆ…ಕುಟುಂಬಸ್ಥರಿಗೆ ಈ ಮದುವೆ ಇಷ್ಟವಿಲ್ಲದ್ದರಿಂದ ಸಿದ್ದಲಿಂಗಪ್ಪಗೆ ಬೇರೆ ಮದುವೆ ಮಾಡಲು ಆತನ ಕುಟುಂಬಸ್ಥರೇ ಆತನನ್ನ ಬಚ್ಚಿಟಿದ್ದಾರೆ ಅನ್ನೋ ಆರೋಪ ಸಹ ಸರಸ್ವತಿ ಮಾಡಿದ್ದಾಳೆ..ಆದರೇ ಸರಸ್ವತಿಯ ಆರೋಪವನ್ನ‌ ತಳ್ಳಿಹಾಕಿರೋ ಸಿದ್ದಲಿಂಗಪ್ಪ ತಂದೆ ದೊಡ್ಡಯ್ಯ, ನಮಗೇನು ಗೊತ್ತಿಲ್ಲ, ನನ್ನ ಮಗ ಎಲ್ಲಿದ್ದಾನೆ ಗೊತ್ತಿಲ್ಲ ಅಂತಾ ಜಾರಿಕೊಳ್ತಿದ್ದಾರೆ..

ಮದುವೆಯಾದ ಮೇಲೆ ಒಂದು ಬಾರಿ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ದೊಡ್ಡಯ್ಯ ಆ ಬಳಿಕ ನಾನು ಅವನನ್ನ ನೋಡೇ ಇಲ್ಲಾ ಅಂದಿದ್ದಾರೆ..ಸದ್ಯ ಸರಸ್ವತಿ ನ್ಯಾಯಕ್ಕಾಗಿ ಕಾನೂನಿ‌ನ ಮೊರೆಹೋಗಿದ್ದು, ಬೆಂಗಳೂರಿನ ಅಕ್ಕೂರು ಪೊಲೀಸ್ ಠಾಣೆ ಹಾಗೂ ಮಧುಗಿರಿಯ ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ..ಏನೇ ಆದ್ರೂ ಫೇಸ್‌ಬುಕ್ ಮೂಲಕ ಶುರುವಾದ ಪ್ರೀತಿ ತನ್ನ ಹೊಟ್ಟೆಯಲ್ಲಿರೋ‌ ಮಗುವಿಗೆ ತಂದೆ ಇಲ್ಲದಂತೇ ಮಾಡಿರೋದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here