Home Crime ಪ್ರೀತಿ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ಮೇಲೆ ಗುಂಡಿನ ದಾಳಿ..! ಶಾಲೆಗೆ ಹೋಗುತ್ತಿದ್ದಾಗ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ...

ಪ್ರೀತಿ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ಮೇಲೆ ಗುಂಡಿನ ದಾಳಿ..! ಶಾಲೆಗೆ ಹೋಗುತ್ತಿದ್ದಾಗ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣು .

766
0
SHARE

ಕೇವಲ ಇನ್ನು ಹತ್ತೇ ಹತ್ತು ನಿಮಿಷ ಕಳೆದಿದ್ರೆ ಸಾಕಾಗಿತ್ತು ಆ ಶಿಕ್ಷಕಿ ಸೇಫಾಗಿ ಶಾಲೆ ಸೇರ್ತಿದ್ರು. ಆದ್ರೆ ಕಾಫಿ ತೋಟದೊಳೊಗಿಂದ ನುಗ್ಗಿ ಬಂದಿದ್ದ ಯಮಸ್ವರೂಪಿ ಗುಂಡೊಂಡು ಆಕೆಯ ಎದೆಗೆ ಹಕ್ಕಿ ಅವರನ್ನ ಮಸಣ ಸೇರಿಸಿತ್ತು. ಕಾಫಿ ತೋಟದಿಂದ ಶಿಕ್ಷಕಿಗೆ ಗುಂಡು ಹಾರಿಸಿದ್ದ ಪಾಪಿ ಕೂಡ ಮಸಣ ಸೇರಿದ್ದಾನೆ. ಒಂದೇ ಕ್ಷಣದಲ್ಲಿ ಎರಡೆರಡು ಜೀವಗಳು ಹಾರಿಹೋಗಿವೆ . ಏನಿದು ಮರ್ಡರ್ ಮಿಸ್ಟರಿ ಅಂತ ಯೋಚಿಸ್ತಿದ್ದೀರಾ..?

ಹೀಗೆ ನೋಡೋಕೆ ತೆಳ್ಳಗೆ ಬೆಳ್ಳಗೆ ಕಾಣ್ತಾ ಇರೋ ಇವರ ಹೆಸರು ಆಶಾ ಕಾವೇರಮ್ಮ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಮದವ್ರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಆಶಾ ಕಾವೇರಮ್ಮ ಬಾಳೆಲೆಯ ತೋಟದ ಒಬ್ಬಂಟಿಯಾಗಿ ನೆಲೆಸಿದ್ರು. ಹಲವು ವರ್ಷಗಳ ಹಿಂದಷ್ಟೇ ಪತಿಯನ್ನ ಕಳೆದುಕೊಂಡಿದ್ದ ಕಾವೇರಮ್ಮ. ಗೋಣಿಕೊಪ್ಪಲಿನ ಲಯನ್ಸ್ ಸ್ಕೂಲಿನಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ರು. ಇದ್ದ ಇಬ್ಬರು ಹೆಣ್ಣು ಮಕ್ಕಳು‌ ದೂರದ ಬೆಂಗಳೂರಿನಲ್ಲೇ ನೆಲೆಸಿದರೆ ಇವರು ಮಾತ್ರ ತನ್ನ ತೋಟ ನೊಡ್ಕೊಂಡು ಶಿಕ್ಷಕಿ ವೃತ್ತಿ ಮಾಡ್ತಾ ಸುಖವಾಗಿಯೇ ಇದ್ರು. ಆದ್ರೆ ಆಶಾ ಕಾವೇರಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟ ಈ ಪಾಪಿ ಆಕೆಯನ್ನ ತುಂಬಾ ಕಾಡಿಬಿಟ್ಟಿದ್ದ, ಆತನೇ ಈ ಜಗದೀಶ್.

ಮೂಲತಃ ವಿರಾಜಪೇಟೆ ತಾಲೂಕಿನ ಬಲ್ಯಮಂಡೂರಿನಲ್ಲಿ ನಿವಾಸಿಯಾಗಿದ್ದ ಜಗದೀಶ್ ತನ್ನೇಲ್ಲ ತೋಟ ಮಾರಿ ಪೊನ್ನಂಪೇಟೆಯಲ್ಲಿ ನೆಲೆಸಿದ್ದ. ಆದ್ರೆ ಶಿಕ್ಷಕಿಯನ್ನ ಆಗಾಗ್ಗೆ ಗಮನಿಸುತ್ತಿದ್ದ.ಆಶಾ ಕಾವೇರಮ್ಮ ಯಾವಾಗ ಒಬ್ಬಂಟಿ ಅಂತಾ ಗೊತ್ತಾಯ್ತು ಅದಾಗ್ಲೇ ಜಗದೀಶ್ ಕಾವೇರಮ್ಮನ ಹಿಂದೆ ಬಿದ್ದಿದ್ದ. ಒಂಟಿಯಾಗಿದ್ದ ಈ ಶಿಕ್ಷಕಿ ಕಾವೇರಮ್ಮನನ್ನ ಆಗಾಗ್ಗೆ ಹಿಂಬಾಲಿಸುತ್ತಾ ಆಕೆಗೆ ಕೊಡಲಾರದ ಹಿಂಸೆ ಕೊಡ್ತಿದ್ದ. ಈತನ ಹಿಂಸೆ ತಾಳಲಾರದೆ ಶಿಕ್ಷಕಿ ಆಶಾ ಕಾವೇರಮ್ಮ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಲೈಂಗಿಕ ಕಿರುಕುಳದ ಕಂಪ್ಲೇಟ್ ಕೂಡ ಕೊಟಿದ್ರು. ಈ ಪ್ರಕರಣ ಸಂಬಂಧ ಜಗದೀಶ್ ಗೆ 2 ತಿಂಗಳ ಜೈಲುವಾಸ ಕೂಡ ಅನುಭವಿಸಿ ಹೊರ ಬಂದಿದ್ದ.

ಈ ಪಾಪಿ ಆಕೆಯನ್ನ ಕೊಲ್ಲೋಕೆ ಸ್ಕೇಚ್ ಹಾಕಿದ್ದ. ಕಾವೇರಮ್ಮ ಗೋಣಿಕೊಪ್ಪಲಿನ ತನ್ನ ಶಾಲೆಗೆ ಹೋಗೋಕೆ ಹೋರ ಬಂದಿದ್ರು. ಮನೆಯ ಮುಂಭಾಗದಲ್ಲೇ ಪೊನ್ನಂಪೇಟೆ ಪೊಲೀಸ್ ಉಪ ಠಾಣೆ ಮುಂಭಾಗದ ರಸ್ತೆಯಲ್ಲಿ ನಿಂತಿದ್ರು. ಇನ್ನೇನು ಐದು ನಿಮಿಷ ಇದ್ದಿದ್ದರೆ ಸಾಕಾಗಿತ್ತು. ಆಶಾ ಕಾವೇರಮ್ಮ ತನ್ನ ಶಾಲೆ ಸೇರ್ತಾ ಇದ್ರು. ಆದ್ರೆ ಅದಾಗ್ಲೇ ಈ ಕಾಫಿ ತೋಟದಲ್ಲಿ ಅಡಗಿ ಕುಳಿತಿದ್ದ ಈ ಜಗದೀಶ ಮೊದಲೇ ಪ್ಲಾನ್ ಮಾಡಿದ್ದಂಗೆ ತನ್ನ ಬಂದೂಕಿನ ನಳಿಕೆಯಿಂದ ಗುಂಡು ತೂರಿಬಿಟ್ಟಿದ್ದ. ಕಾವೇರಮ್ಮ ಸತ್ತಿದ್ದಾರೆ ಅಂತಾ ತಿಳಿದ ಈ ಜಗದೀಶ್ ನಾನು ಬದುಕಿದ್ದರೆ ತಾನೇ ಜೈಲಿಗೋಗೋದು ಅಂತಾ ತಿಳಿದು ತನ್ನ ಬಂದೂಂಕಿನಿಂದಲೇ ಗುಂಡು ಹಾರಿಸಿಕೊಂಡು ಜೀವ ಬಿಟ್ಟಿದ್ದಾನೆ.

ಒಟ್ಟಿನಲ್ಲಿ, ಜಗದೀಶ್ ಆಸ್ತಿ ಆಸೆಗೋ, ಆಕೆಯ ಮೇಲಿನ ಮೋಹಕ್ಕೋ ಏನೊ ಕೋಪದ ಕೈಗೆ ಬುದ್ದಿ ಕೋಟ್ಟ ಈ ಪಾಪಿ ಶಿಕ್ಷಕಿಯನ್ನ ಕೊಂದು ಹಾಕಿದ್ದಾನೆ. ಇತ್ತ ಮದುವೆ ವಯಸ್ಸಿಗೆ ಬಂದ , ಅಪ್ಪನಿಲ್ಲ ಅಮ್ಮನ ಆಸರೆಯಲ್ಲಿ ಬೆಳೆಯ ಇಬ್ಬರು ಮಕ್ಕಳು ತಬ್ಬಲಾಗಿದ್ದಾರೆ.

LEAVE A REPLY

Please enter your comment!
Please enter your name here