Home Crime ಪ್ರೀತಿ ಪ್ರೀತಿ ಅಂತ 15 ವರ್ಷದ ಬಾಲಕಿಯ ಹಿಂದೆ ಬಿದ್ದಿದ್ದ 30 ವರ್ಷದ ಪಾಗಲ್ ಪ್ರೇಮಿ,...

ಪ್ರೀತಿ ಪ್ರೀತಿ ಅಂತ 15 ವರ್ಷದ ಬಾಲಕಿಯ ಹಿಂದೆ ಬಿದ್ದಿದ್ದ 30 ವರ್ಷದ ಪಾಗಲ್ ಪ್ರೇಮಿ, ಪ್ರೀತಿಸಲು ಒಲ್ಲೆಯೆಂದಿದ್ದಕ್ಕೆ ನಡುರಸ್ತೆಯಲ್ಲೆ ಕೊಚ್ಚಿ ಕೊಂದ ಭೂಪ.

3746
0
SHARE

ಪ್ರೀತಿ ಪ್ರೀತಿ ಅಂತ ಪ್ರೀತಿಗೋಸ್ಕರ ತ್ಯಾಗ ಮಾಡಿದವರು, ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಮಂದಿಯನ್ನ ನಾವು ತೋರಿಸಿದ್ವಿ,ನೀವು ನೋಡಿದ್ರಿ. ಆದ್ರೆ ಅದೇ ಪ್ರೀತಿಯಂತ ಹತ್ತನೆ ತರಗತಿ ವಿದ್ಯಾರ್ಥಿನಿ ಹಿಂದೆ ಬಿದ್ದ ಪಾಗಲ್ ಪ್ರೇಮಿಯೊಬ್ಬ, ಪ್ರೀತಿಸಲು ನಿರಾಕರಿಸಿದ್ಲು ಅಂತ ಮಾಡಬಾರದ ಕೆಲಸವೊಂದನ್ನ ಮಾಡಿ ಬಿಟ್ಟಿದ್ದಾನೆ.

ಅದು ರೇಷ್ಮೇ ಮಗ್ಗಗಳ ತವರು ಅಂತಾನೆ ಖ್ಯಾತಿ ಪಡೆದಿರೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿರೂ ದೊಡ್ಡಬಳ್ಳಾಪುರಕ್ಕೆ ಪ್ರತಿನತ್ಯ ನೂರಾರು ಜನ ಬೆಂಗಳೂರು ಸೇರಿದಂತೆ ಹಲವಡೆ ಸಂಚರಿಸುತ್ತಾರೆ. ಅದೇ ರೀತಿ ಇಂದು ಸಹ ಬೆಳ್ಳಂ ಬೆಳಗ್ಗೆ ನಗರದ ಸಿಎಂಸಿ ಬಡಾವಣೆಯ ಜನರು ಸಹ ತಮ್ಮ ಕೆಲಸಗಳ ನಿಮಿತ್ತ ಮನೆಯಿಂದ ಹೊರಡಲು ಸಜ್ಜಾಗಿದ್ರು. ಆದ್ರೆ ಅಷ್ಟೋತ್ತಿಗಾಗಲೆ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರೋ ಸಿಎಂಸಿ ಬಡಾವಣೆಯ ಊರ್ದು ಸ್ಕೂಲ್ ಬಳಿ ಕ್ಷಣಾರ್ದದಲ್ಲೆ ನಡೆಯಬಾರದ ಅಮಾನವೀಯ ಘಟನೆಯೊಂದು ನಡೆದು ಹೋಗಿತ್ತು.

ಏರಿಯಾದ ಜನ ಒಂದು ಕ್ಷಣ ಏನಾಗುತ್ತಿದೆ ಅನ್ನೂದನ್ನ ತಿಳಿದುಕೊಳ್ಳುವಷ್ಟರಲ್ಲಿ ರಸ್ತೆಯ ತುಂಬಾ ರಕ್ತದ ನೆತ್ತರು ಕೋಡಿಯಂತೆ ಹರಿದಿತ್ತು. ನಡು ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಯಾರಪ್ಪ ಅಂತ ಸ್ಥಳಕ್ಕೋಗಿ ನೋಡಿದ ಸ್ಥಳಿಯರಿಗೆ ಮತ್ತೊಂದು ಶಾಕ್. ಯಾಕೇಂದ್ರೆ ಅಲ್ಲಿ ಅಪರಿಚಿತ ವ್ಯಕ್ತಿಯ ಮಚ್ಚಿನ ರಕ್ಕಸಕ್ಕೆ ಸಿಕ್ಕು ಕ್ಷಣಾರ್ದದಲ್ಲೆ ಪ್ರಾಣ ಕಳೆದುಕೊಂಡಿದ್ದು, ಯಾವುದೂ ಬ್ಯುಸಿನೆಸ್ ಮ್ಯಾನ್ ಅಲ್ಲ, ರೌಡಿ ಶೀಟರ್ ಅಲ್ಲ ಬದಲಾಗಿ ಜೀವನದಲ್ಲಿ ಸಾಕಷ್ಟು ಆಸೆಗಳನ್ನ ಹೊತ್ತು ಶಾಲೆಗೆ ಹೋಗುತ್ತಿದ್ದ, ಹತ್ತನೆ ತರಗತಿಯ ಬಾಲಕಿ.

ಅಪರಿಚಿತನಿಂದ ಗಂಬೀರವಾಗಿ ಗಾಯಗೊಂಡು ನಡು ರಸ್ತೆಯಲ್ಲೆ ತೀವ್ರ ರಕ್ತ ಸಾವ್ರದಿಂದ ನರಳಾಡುತ್ತಿದ್ದ ವಿದ್ಯಾರ್ಥೀನಿಯನ್ನ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋಣಾ ಅಂತ ಸ್ಥಳಿಯರು ಮುಂದಾಗುವಷ್ಟರಲ್ಲೆ ಬಾಲಕಿಯ ಪ್ರಾಣ ಪಕ್ಷಿ ಹಾರಿಹೋಗಿದೆ.ಹೀಗಾಗಿ ಕೂಡಲೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ಮಾಹಿತಿ ಕರೆ ಮಾಡಿದ್ದ ಸ್ಥಳಿಯರು ಸರ್ ನಗರದ ಸಿಎಂಸಿ ಬಡಾವಣೆಯ ಶಾಲಾ ವಿದ್ಯಾರ್ಥಿನಿಯನ್ನ ಅಪರಿಚಿತ ನೊರ್ವ ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ ಅನ್ನೂ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧೀಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಕೊಲೆಯಾದ ವಿದ್ಯಾರ್ಥಿನಿ ಯಾರು, ಯಾವ ಕಾರಣಕ್ಕೆ ಕೊಲೆ ಮಾಡಿದ್ರು ಅನ್ನೂದರ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

ಆದ್ರೆ ಅಷ್ಟೋತ್ತಿಗಾಗಲೆ ಕಾಡ್ಗಿಚ್ಚಿನಂತೆ ದೊಡ್ಡಬಳ್ಳಾಪುರ ತುಂಬಾ ಬಾಲಕಿಯ ಮರ್ಡರ್ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೆ ಬೆಳ್ಲಂ ಬೆಳ್ಳಗ್ಗೆ ಬಾಲಕಿಯನ್ನ ಕೊಚ್ಚಿ ಕೊಂದಿದ್ದಾರೆ ಅನ್ನೂ ವಿಚಾರ ತಿಳಿದು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಯಾರಪ್ಪ ಆ ಬಾಲಕಿ ಅಂತ ಕೊಲೆಯಾದ ಸ್ಥಳಕ್ಕೆ ಜನ ಬರಲಾರಂಬಿಸಿದ್ದು, ಜನರನ್ನ ಕಂಡ ಪೊಲೀಸರ ಬಾಲಕಿಯ ಮೃತದೇಹವನ್ನ ದೊಡ್ಡಬಳ್ಳಾಪುರ ದ ಶವಾಗಾರಕ್ಕೆ ರವಾನಿಸಿ ಬಾಲಕಿಯ ಗುರುತು ಪತ್ತೆಗೆ ಮುಂದಾಗ್ತಾರೆ.

ಈ ವೇಳೆ ಕೊಲೆಯಾದ ಬಾಲಕಿಯ ಪಕ್ಕದಲ್ಲೆ ರಕ್ತದ ಮಡುವಿನಲ್ಲಿದ್ದ ಬ್ಯಾಗ್ ಅನ್ನ ವಶಕ್ಕೆ ಪಡೆದ ಪೊಲೀಸರು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನೋಡಿದಾಗ ಕೊಲೆಯಾದ ಬಾಲಕಿ ನಗರದ ಬಿಎಸ್‌ಎ ಶಾಲೆ ವಿದ್ಯಾರ್ಥಿನಿ ಕೀರ್ತನಾ ಅನ್ನೂದು ಗೊತ್ತಾಗಿದೆ. ಹೀಗಾಗಿ ಕೂಡಲೆ ಶಾಲೆ ಬಳಿಗೆ ಪೊಲೀಸರನ್ನ ಕಳಿಸಿ ವಿಚಾರಿಸಿದಾಗ ಕೊಲೆಯಾದ ವಿದ್ಯಾರ್ಥಿನಿ ನಗರದ ಬಸವೇಶ್ವರ ನಗರ ನಿವಾಸಿ ನಂಧೀಶ್ ಮತ್ತು ಲಲಿತಾ ದಂಪತಿ ಪುತ್ರಿ ಕೀರ್ತಾನ ಅನ್ನೂದು ಖಚಿತ ಪಡಿಸಿದ್ದಾರೆ. ಇನ್ನೂ ೧೦ ಗಂಟೆ ಸುಮಾರಿಗೆ ನಗರದ ತುಂಬಾ ಕೊಲೆ ವಿಚಾರ ಹಬ್ಬುತ್ತಿದ್ದಂತೆ ಜೀವನೋಪಾಯಕ್ಕಾಗಿ ಟೀ ಅಂಗಡಿ ನಡೆಸುತ್ತಿದ್ದ ವಿದ್ಯಾರ್ಥಿನಿ ತಾಯಿ ಲಲಿತಾ ಶಾಲೆ ಬಳಿಗೆ ಓಡೋಡಿ ಬಂದಿದ್ದಾಳೆ.

ಮಗಳ ಸಾವಿನ ಸುದ್ದಿ ತಿಳಿದು ಶಾಲೆಯಲ್ಲೆ ಮೃತಳ ತಾಯಿ ಮತ್ತು ತಂಗಿಯ ಆಕ್ರಂದನ ಮುಗಿಲು ಮಟ್ಟಿದ್ದು ಮಗಳನ್ನ ಕಾಣಲು ದಿಕ್ಕು ತೋಚದೆ ತಾಯಿಯ ಪರದಾಡುತ್ತಿದ್ದ ದೃಶ್ಯ ನೋಡುಗರ ಮನ ಕಲುಕುತ್ತಿತ್ತು.ಮಗಳನ್ನ ಯಾರೋ ಅಪರಿಚಿತರು ನಡು ರಸ್ತೆಯಲ್ಲಿ ಕೊಲೆ ಮಾಡಿ ಹೋಗಿದ್ದಾರೆ ಅನ್ನೂ ವಿಚಾರ ತಿಳಿದು ಮುಗಿಲು ಮುಟ್ಟಿದ್ದ ಆಕ್ರಂದನದ ನಡುವೆಯೆ ತಾಯಿಯ ಬಾಯಲ್ಲಿ ಒಂದು ಹೆಸರು ಕೆಳಿ ಬರ್ತಿದ್ದು, ಅವನೆ ನನ್ನ ಮಗಳನ್ನ ಕೊಲೆ ಮಾಡಿದ್ದಾನೆ ಅಂತ ಖಚಿತವಾಗಿ ಹೇಳ್ತಿದ್ಲು. ಅದು ಯಾರಪ್ಪ ಅಂದ್ರೆ ಕಳೆದ ಕೆಲ ತಿಂಗಳುಗಳಿಂದಷ್ಟೆ ಮೃತ ವಿದ್ಯಾರ್ಥಿನಿಯ ಅಕ್ಕನನ್ನ ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗಿದ್ದ ಬಾವನ ಅಣ್ಣ ನವೀನ್.

ಅಂದಹಾಗೆ ನವೀನನ ತಮ್ಮ ಪ್ರವೀಣ್ ಮೃತ ಕೀರ್ತನಾಳ ಅಕ್ಕನನ್ನ ಪ್ರೀತಿಸಿ ಮದುವೆಯಾಗಿದ್ದು, ಅಂತರಜಾತಿಯ ಪ್ರೇಮ ವಿವಾಹವಾದ್ರು ಮಗಳು ಇಷ್ಟಪಟ್ಟಿದ್ಲು ಅಂತ ಹಿರಿ ಮಗಳ ಮದುವೆಗೆ ಒಪ್ಪಿದ್ರಂತೆ. ಅಂದಿನಿಂದ ಇವರ ಮನೆಗೆ ಬರ್ತಿದ್ದ ಪ್ರವೀಣನ ಅಣ್ಣಾ ಕಿರಾತಕ ನವೀನ ಇನ್ನೂ ಹತ್ತನೆ ತರಗತಿ ಓದುತ್ತಿದ್ದ ಕೀರ್ತಾನಳ ಹಿಂದೆ ಬಿದ್ದಿದ್ದು, ಪ್ರೀತಿ ಮಾಡು ಅಂತ ಕಳೆದ ಒಂದು ವರ್ಷದಿಂದ ಟಾರ್ಚರ್ ಕೊಡುತ್ತಿದ್ನಂತೆ. ಆದ್ರು ಏನೂ ಅಕ್ಕನ ಗಂಡನ ಅಣ್ಣನಲ್ವಾ ಅಂತ ಎಲ್ಲಾವನ್ನು ಸಹಿಸಿಕೊಂಡು ಸುಮ್ಮನಿದ್ದ ಬಾಲಕಿ ಕೀರ್ತನಾಳಿಗೆ ದಿನದಿಂದ ದಿನಕ್ಕೆ ನವೀನನ ಉಟಪಳ ಹೆಚ್ಚಾಗಿದ್ದು, ಮನೆಯವರಿಗೆ ವಿಷಯ ತಿಳಿಸಿದ್ರಂತೆ. ಹೀಗಾಗಿ ಅಂದು ಕೀರ್ತನಾಳ ಮನೆಯವರು ಹಿರಿಯರನ್ನ ಸೇರಿಸಿ ಖಧೀಮ ನವೀನನಿಗೆ ಬುದ್ದಿವಾದ ಹೇಳಿದ್ದು, ಬಾಲಕಿಯ ಹಿಂದೆ ಬೀಳದಂತೆ ವಾರ್ನಿಂಗ್ ಸಹ ನೀಡಿದ್ದಾರೆ.

ಆದ್ರು ಅದನೆಲ್ಲ ಕೇರ್ ಮಾಡದ ೩೫ ವರ್ಷದ ನವೀನ ಪ್ರತಿನಿತ್ಯ ಶಾಲೆಗೆ ಹೋಗಿ ಬರ್ತಿದ್ದ ವೇಳೆ ರಸ್ತೆ ಮಧ್ಯೆ ಕಾದು ಕುಳಿತುಕೊಂಡು ಟಾರ್ಚರ್ ಮಾಡುತ್ತಿದ್ದ ನವೀನನಿಂದ ಬೇಸತ್ತ ಕೀರ್ತನಾ ನಾನು ಶಾಲೆಗೆ ಹೊಗಲ್ಲ ಅಂತ ಮನೆಯಲ್ಲೆ ಹಠ ಮಾಡಿ ಕುಳಿತುಕೊಂಡಿದ್ಲಂತೆ. ಹೀಗಾಗಿ ಅಂದು ರಸ್ತೆ ಮಧ್ಯೆ ಬಾಲಕಿಗೆ ಕಾಟ ಕೊಡ್ತಿದ್ದ ನವೀನನ್ನ ಹಿಡಿದುಕೊಂಡು ನಾಲ್ಕು ಬಾರಿಸಿ ಬುದ್ದಿವಾದ ಹೇಳಿದ್ದ ಕೀರ್ತನಾಳ ಪೋಷಕರು ಮತ್ತೆ ಬಾಳಕಿಯ ತಂಟೆಗೆ ಬಂದ್ರೆ ಹುಷಾರ್ ಅಂತ ಖಡಕ್ ವಾರ್ನಿಂಗ್ ನೀಡಿದ್ರಂತೆ.

ಇನ್ನೂ ಬೆಳಗ್ಗೆ ಒಂಟಿಯಾಗಿ ಶಾಲೆಗೆ ತೆರಳುತ್ತಿದ್ದ ಕೀರ್ತನಾಳನ್ನ ನೋಡಿದ ಪಾಪಿ ನವೀನ ಹೊಂಚು ಹಾಕಿ ಮಚ್ಚೋಂದನ್ನ ಜೊತೆಯಲ್ಲಿಟ್ಟುಕೊಂಡು ಹಿಂದೆ ಬಿದ್ದು ಮತ್ತೆ ಲವ್ ಮಾಡುವಂತೆ ಒತ್ತಾಯಿಸಿದ್ನಂತೆ. ಹೀಗಾಗಿ ಪದೇ ಪದೇ ಟಾರ್ಚರ್ ಕೊಡುತ್ತಿದ್ದ ನವೀನನ ಉಪಟಳದಿಂದ ಬೇಸತ್ತಿದ್ದ ಕೀರ್ತನಾ ಇಂದು ಖಡಕ್ ಆಗಿ ನವೀನನಿಗೆ ವಾರ್ನಿಂಗ್ ಮಾಡಿ ಮತ್ತೆ ಹಿಂದೆ ಬಿದ್ರೆ ಮನೆಯವರಿಗೆ ಹೇಳಿ ಕಂಪ್ಲೇಂಟ್ ಕೊಡೋದಾಗಿ ವಾರ್ನ್ ಮಾಡಿದ್ದಾಳೆ. ಹೀಗಾಗಿ ಮೊದಲೆ ಮನೆಯವರ ವಾರ್ನಿಂಗ್ ನಿಂದ ಬೇಸತ್ತಿದ್ದ ಪಾಗಲ್ ಪ್ರೇಮಿ ನವೀನ ಹೊಂಚು ಹಾಕಿ ತಂದಿದ್ದ ಮಚನ್ನ ತೆಗೆದಿದ್ದು, ನೋಡ ನೋಡುತ್ತಿದ್ದಂತೆ ಕ್ಷಣಾರ್ದದಲ್ಲೆ ಕೀರ್ತಾನಳ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಮುಖಾಂತರ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಆರೋಪಿಯ ಬಂಧನಕ್ಕೆ ತಂಡ ರಚನೆ ಮಾಡಿಕೊಂಡು ತೆರಳಿದ ಪೊಲೀಸರು ಬಂದಿಸೂಕ್ಕೆ ಬರುವ ಮುನ್ನವೆ ಆರೋಪಿ ನವೀನ ಹೊಸ ವರಸೆ ಶುರುಮಾಡಿಕೊಂಡಿದ್ದು, ಹೊಸ ಹೈಡ್ರಾಮ ಮಾಡುವ ಮುಖಾಂತರ ಪೊಲೀಸರಿಗೆ ಶಾಕ್ ನೀಡಿದ್ದಾನೆ.ಹೌದು ಕೊಲೆ ಮಾಡಿದ ನಂತರ ತಲೆ ಮರಿಸಿಕೊಳ್ಳಲು ಪರಾರಿಯಾಗಿರುತ್ತಾರೆ ಅಂತ ತಿಳಿದುಕೊಂಡು ವಿಚಾರಣೆಗಿಳಿದ ದೊಡ್ಡಬಳ್ಳಾಪುರ ಪೊಲೀಸರಿಗೆ ಕೊಲೆ ಆರೋಪಿ ನವೀನ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗೆ ಅಂತ ತಾಲೂಕು ಸರ್ಕಾರಿ ಆಸ್ವತ್ರೆಗೆ ಬಂದಿದ್ದಾನೆ ಅನ್ನೋಮಾಹಿತಿ ಸಿಕ್ಕಿದೆ. ಹೀಗಾಗಿ ಕೂಡಲೆ ತಡ ಮಾಡದೆ ಸರ್ಕಾರಿ ಆಸ್ವತ್ರೆಗೆ ದೌಡಾಯಿಸಿ ಬಂದ ಪೊಲೀಸರು, ಸರ್ ನಾನು ವಿಷ ಕುಡಿದಿದ್ದೇನೆ ನನಗೆ ಚಿಕಿತ್ಸೆ ಕೊಡಿ ಅಂತ ಬಂದಿದ್ದ ಆರೋಪಿಯನ್ನ ವಶಕ್ಕೆ ಪಡೆದುಕೊಂಡು ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇನ್ನೂ ಮೂವತೈದು ವರ್ಷದ ಕೊಲೆ ಆರೋಪಿ ನವೀನ ಕೇವಲ ೧೬ ವರ್ಷದ ಕೀರ್ತನಳನ್ನ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದು, ಪ್ರೀತಿ ಮಾಡಿಲ್ಲ ಅನ್ನೋ ಕಾರಣಕ್ಕೆ ಆಕೆಯನ್ನ ನಡು ರಸ್ತೆಯಲ್ಲಿ ಕೊಚ್ಚಿ ಕೊಚ್ಚಿ ಕೊಂದಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೂ ದೊಡ್ಡಬಳ್ಳಾಪುರ ಪೊಲೀಸರು ತನಿಖೆ ಮುಂದುವರೆಸಿದ್ದು, ಕೊಲೆ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮುಖಾಂತರ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಕಾರ್ಯ ಮಾಡಬೇಕಿದೆ.

LEAVE A REPLY

Please enter your comment!
Please enter your name here