Home Crime ಪ್ರೀತ್ಸೆ ಅಂತಾ ಬಾಲಕಿಯ ಹಿಂದೆ ಬಿದ್ದ ಪಾಗಲ್ ಪ್ರೇಮಿ..?! ಒಪ್ಪದಿದ್ದಕ್ಕೆ ಕತ್ತು ಸೀಳಿದ ಕಿರಾತಕ ಪ್ರೇಮಿ..!?

ಪ್ರೀತ್ಸೆ ಅಂತಾ ಬಾಲಕಿಯ ಹಿಂದೆ ಬಿದ್ದ ಪಾಗಲ್ ಪ್ರೇಮಿ..?! ಒಪ್ಪದಿದ್ದಕ್ಕೆ ಕತ್ತು ಸೀಳಿದ ಕಿರಾತಕ ಪ್ರೇಮಿ..!?

1985
0
SHARE

ವಯ್ಯಸಲ್ಲದ ವಯ್ಯಸಿನಲ್ಲಿ ಪ್ರೀತಿ ಪ್ರೇಮ ಅಂತ ಮಾಡೋಕೆ ಹೋಗಿ ಇಲ್ಲದ ಇಕ್ಕಟ್ಟಿನಲ್ಲಿ ಸಿಲುಕಿ ತಮ್ಮ ಜೀವನವನ್ನೇ ಕತ್ತಲೆ ಮಾಡಿಕೊಳ್ಳೋರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಅದೇ ರೀತಿ ಇಲ್ಲೊಬ್ಬ ಯುವಕ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದು ಬಾಲಕಿ ಆತನ ಪ್ರೇಮ ನಿವೇದನೆಯನ್ನು ಒಪ್ಪದಿದ್ದಕ್ಕೆ ಆಕೆಯನ್ನು ಹತ್ಯೆ ಮಾಡಲು ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೀಗೆ ಪೊಲೀಸರ ವಶದಲ್ಲಿ ಇರೋನು ಗಿರೀಶ್ ಅಂತ ಈತ ಬೆಂಗಳೂರಿನ ಬೆಳ್ಳಂದೂರು ನಿವಾಸಿಯಾಗಿದ್ದು ಇಂದು ಬೆಳಿಗ್ಗೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿನ ಅಪ್ರಾಪ್ತ ಬಾಲಕಿಯನ್ನು ಕುತ್ತಿಗೆ ಕುಯ್ದು ಕೊಲೆ ಮಾಡಲು ಯತ್ನಿಸಿದ್ದ. ಗಿರೀಶ್ ಆನೇಕಲ್ ಪಟ್ಟಣದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದು ನಿತ್ಯ ಆಕೆ ಕಾಲೇಜಿಗೆ ಹೋಗುವಾಗ ಬರುವಾಗ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ…

ಇನ್ನು ಗಿರೀಶನ ಪ್ರೇಮವನ್ನು ಬಾಲಕಿ ನಿರಾಕರಿಸಿದ್ದಯಿಂದ ಕೋಪಗೊಂಡ ಗಿರೀಶ್ ಇಂದು ಬೆಳಿಗ್ಗೆ ಆನೇಕಲ್ ಪಟ್ಟಣಕ್ಕೆ ಬಂದು ಆಕೆ ಮನೆಯವರು ಹೊರಹೋಗುವುದನ್ನೇ ಕಾಯ್ದು ಮನೆಗೆ ನುಗ್ಗಿ ಬಾಲಕಿಯ ಕತ್ತನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ.ಇನ್ನು ಬಾಲಕಿ ಕಿರುಚಿಕೊಂಡಿದ್ದರಿಂದ ಗಿರೀಶ್ ಪರಾರಿಯಾಗಿದ್ದನು.ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಆನೇಕಲ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ರು. ಆರೋಪಿಗಾಗಿ ಹುಡುಕಾಟ ನಡೆಸುತ್ತಾ ಇದ್ದಾಗ ಕಿರಾತಕ ಪ್ರೇಮಿ ಬೆಂಗಳೂರಿನ ಎಚ್.ಎಸ್.ಆರ್.ಬಡಾವಣೆ ಸಮೀಪ ಸಿಕ್ಕಿಬಿದ್ದಿದ್ದಾನೆ.4 ಗಂಟೆ ಅವಧಿಯಲ್ಲಿ ಆರೋಪಿ ಗಿರಿಶನನ್ನು ಬಂಧಿಸಿದ್ದಾರೆ.ಒಟ್ನಲ್ಲಿ ಅಪ್ರಾಪ್ತೆಯ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತ ತಿರುಗಿದ್ದ ಗಿರೀಶ್ ಕೋಪದ ಕೈಗೆ ಬುದ್ದಿಕೊಟ್ಟು ಪಾಗಲ್ ಪ್ರೇಮಿಯಾಗಿ ಇದೀಗ ಪರಪ್ಪನ ಅಗ್ರಹಾರ ಪಾಲಾಗಿದ್ದಾನೆ.

LEAVE A REPLY

Please enter your comment!
Please enter your name here