Home Crime ಪ್ರೀತ್ಸೆ ಪ್ರೀತ್ಸೆ ಅಂತಾ ಯುವತಿ ಹಿಂದೆ ಓಡಾಡುತ್ತಿದ್ದ..! ಪ್ರೀತಿಸಲ್ಲ ಎಂದಿದ್ದಕ್ಕೆ ಮನನೊಂದು ಸೂಸೈಡ್ ಮಾಡಿಕೊಂಡ..! ಆಕೆ...

ಪ್ರೀತ್ಸೆ ಪ್ರೀತ್ಸೆ ಅಂತಾ ಯುವತಿ ಹಿಂದೆ ಓಡಾಡುತ್ತಿದ್ದ..! ಪ್ರೀತಿಸಲ್ಲ ಎಂದಿದ್ದಕ್ಕೆ ಮನನೊಂದು ಸೂಸೈಡ್ ಮಾಡಿಕೊಂಡ..! ಆಕೆ ಎದುರೇ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡ..!

2205
0
SHARE

ಈ ಹುಡುಗರಿಗೆ ಏನ್ ಆಗಿದ್ಯೋ ಗೊತ್ತಿಲ್ಲ. ಲವ್ ಫೈಲೂರ್ ಆದ್ರೆ ಸಾಕು ಪ್ರಾಣಕ್ಕೆ ಸಂಚಕಾರ ತಂದುಕೊಳ್ತಾರೆ. ಹೀಗೆ ಹೆಚ್ಎಸ್ಆರ್‌ ಲೇಔಟ್‌ನಲ್ಲಿ ಪಾಗಲ್ ಪ್ರೇಮಿಯೊಬ್ಬ ಒಂದ್ ಹುಡುಗಿ ಹಿಂದೆ ಬಿದ್ದಿದ್ದ. ಎಷ್ಟೇ ಸುತ್ತಿದರೂ ಆಕೆಯಂತೂ ಈತನ ಲವ್ ಪ್ರಪೋಸ್ ಒಪ್ಪಿಕೊಳ್ಳಲೇ ಇಲ್ಲ.ಅಂದಹಾಗೆ ಈ ಘಟನೆಗೆ ಸಾಕ್ಷಿಯಾಗಿದ್ದು ಎಚ್.ಎಸ್.ಆರ್.ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಐಟಿ ಕಂಪನಿ.

ಹೀಗೆ 5 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ರೋಷನ್. 23 ವರ್ಷದ ಈ ರೋಷನ್ ಇದೇ ಕಂಪನಿಯ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ. ಆದ್ರೆ, ಧರ್ಮ ಬೇರೆ ಆಗಿದ್ದರಿಂದ ಆ ಯುವತಿ ಪ್ರೀತಿಸಲು ನಿರಾಕರಿಸುತ್ತಿದ್ಲು. ಆದರೂ ಪ್ರೀತಿಸುವಂತೆ ಪ್ರತಿನಿತ್ಯವೂ ಬಲವಂತ ಮಾಡುತ್ತಿದ್ದ.ರೋಷನ್ ಕಿರುಕುಳ ಹೆಚ್ಚಾಗುತ್ತಿದ್ದಂತೆ ಯಾವತಿ ಆ ಕಂಪನಿ ತೊರೆದು ಅದೇ ಕಟ್ಟಡದಲ್ಲಿದ್ದ ಮತ್ತೊಂದು ಸಂಸ್ಥೆಗೆ ಸೇರಿದ್ಲು.

ಅಂದು ಕೆಲವೊಂದು ದಾಖಲೆ ಪಡೆಯಲು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಗೆ ಯುವತಿ ಬಂದಿದ್ದಾಳೆ. ಆಗ ಎದುರಿಗೆ ಸಿಕ್ಕ ರೋಷನ್ ಆಕೆಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಪ್ರೀತಿಗೆ ಒಪ್ಪದಿದ್ರೆ, ಸಾಯುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೂ ಆ ಯುವತಿ ಕ್ಯಾರೆ ಎಂದಿಲ್ಲ. ಇದ್ರಿಂದ ಬೇಸರಗೊಂಡ ರೋಷನ್ 5ನೇ ಮಹಡಿ ಮೇಲಿಂದ ಜಿಗಿದಿದ್ದಾನೆ.

ಆ ಯುವತಿ ಹಾಗೂ ಸೆಕ್ಯೂರಿಟಿ ಹೋಗಿ ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಷನ್ ಸ್ಥಳದಲ್ಲಿಯೇ ಮೃತಪಟ್ಟಿದ್ದ.ಹೆತ್ತ ತಂದೆ ತಾಯಿಯ ಪ್ರೀತಿಯನ್ನು ಮರೆತ ರೋಷನ್ ತಾನು ಪ್ರೀತಿಸಿದ ಹುಡುಗಿಯ ಪ್ರೀತಿ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡು ಪೋಷಕರು ಕಣ್ಣೀರಿಡುತ್ತಿದ್ದಾರೆ.

LEAVE A REPLY

Please enter your comment!
Please enter your name here