Home Crime ಪ್ರೇಮಿಗಳ ಕೈ-ಕಾಲು ಕಟ್ಟಿ ನದಿಗೆಸೆದ ಹುಡುಗಿಯ ತಂದೆ..!? ಪ್ರೇಮಿಗಳ ಕೊಲೆ ಶಂಕೆ ಪ್ರಕರಣಕ್ಕೆ ಸಿಕ್ತು ಮೇಜರ್...

ಪ್ರೇಮಿಗಳ ಕೈ-ಕಾಲು ಕಟ್ಟಿ ನದಿಗೆಸೆದ ಹುಡುಗಿಯ ತಂದೆ..!? ಪ್ರೇಮಿಗಳ ಕೊಲೆ ಶಂಕೆ ಪ್ರಕರಣಕ್ಕೆ ಸಿಕ್ತು ಮೇಜರ್ ಟ್ವಿಸ್ಟ್..!!

1018
0
SHARE

ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆಯಷ್ಟೇ ಶಿವನ ಸಮುದ್ರ ನಾಲೆಯಲ್ಲಿ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾಗಿದ್ದರು. ಕೊಲೆ ಮಾಡಿ ಎಸೆಯಲಾಗಿದೆ ಎಂದು ಶಂಕಿಸಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಕೊಲೆ ಪ್ರಕರಣಕ್ಕೆ ಮರ್ಯಾದಾ ಹತ್ಯೆ ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

ಹೊಸೂರು ತಾಲೂಕು ಚೂಡಗೌಂಡನಹಳ್ಳಿ ಗ್ರಾಮದ ನಂದೀಶ ಹಾಗೂ ಇದೇ ಗ್ರಾಮದ ಸ್ವಾತಿ ಕೊಲೆಗೀಡಾದವರು. ಇವರಿಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು ಎಂದು ತಿಳಿದು ಬಂದಿದೆ. ನಂದೀಶ ಹಾಗೂ ಸ್ವಾತಿ ಸುಮಾರು ಒಂದುವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಸುಮಾರು ಮೂರು ತಿಂಗಳ ಹಿಂದೆ ಕಾಲೇಜಿನಲ್ಲಿ ಟಿಸಿ ತರುವುದಾಗಿ ಹೇಳಿ ಹೋಗಿದ್ದ ಈಕೆ ವಾಪಸ್​ ಮನೆಗೆ ಬಾರದೆ ನಂದೀಶನ ಜೊತೆ ಓಡಿಹೋಗಿ ಮದುವೆಯಾಗಿದ್ದಳು.ಹೊಸೂರು ಸಮೀಪ ಹೇಗೋ ತಲೆಮೆರಸಿಕೊಂಡು ಜೀವನ ನಡೆಸುತ್ತಿದ್ದರು. ಆಕಸ್ಮಕವಾಗಿ ಕಾರ್ಯಕ್ರಮದಲ್ಲಿ ಸಂಬಂಧಿಕರು ನೋಡಿದಾಗ ತಂದೆ ತಿಳಿಸಿದ್ದಾರೆ.

ತಂದೆ ಸಂಬಂಧಿಕರ ಜೊತೆ ಸೇರಿ ರಾಜಿ ಮಾಡಿಕೊಳ್ಳೋಣ ಎಂದು ನಂಬಿಸಿ ಶಿವನ ಸಮುದ್ರದ ಹತ್ತಿರ ಕರೆತಂದು ಕೈ ಮತ್ತು ಕಾಲಿಗೆ ಬಟ್ಟೆ ಕಟ್ಟಿ ಇಬ್ಬರನ್ನು ನೀರಿಗೆ ಎಸೆದು ಕೊಲೆ ಮಾಡಿ ಹೋಗಿದ್ದಾರೆ.ಇನ್ನೂ ಹುಡುಗಿಯ ತಂದೆಯನ್ನು ಕೃಷ್ಣಗಿರಿ ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here