Home Cinema ಲಂಡನ್ ಲಡ್ಕೀ ಆಮಿ ಮೇಲ್ಯಾಕೇ ಪ್ರೇಮ್‌ಗೆ ಸಿಟ್ಟು..!! ಪ್ರೇಮ್‌ಗೆ ಕೈ ಕೊಡುತ್ತಿದ್ದಾಳೆ ಗೊತ್ತಾ ರಿಲೀಸ್ ಟೈಂ...

ಲಂಡನ್ ಲಡ್ಕೀ ಆಮಿ ಮೇಲ್ಯಾಕೇ ಪ್ರೇಮ್‌ಗೆ ಸಿಟ್ಟು..!! ಪ್ರೇಮ್‌ಗೆ ಕೈ ಕೊಡುತ್ತಿದ್ದಾಳೆ ಗೊತ್ತಾ ರಿಲೀಸ್ ಟೈಂ ನಲ್ಲಿ ಆಮಿ ಜಾಕ್ಸನ್..?!

1794
0
SHARE

ದಿ ವಿಲನ್ ಬಿಡುಗಡೆಯ ದಿನ ಹತ್ತಿರ ಬರುತ್ತಿದೆ. ಇದೇ ವೇಳೆ..ಪ್ರೇಮ್, ಮುನಿಸಿಕೊಂಡಿದ್ದಾರೆ. ಅದು, ಆಮಿ ಜಾಕ್ಸನ್ ಮೇಲೆ.ಹೌದು, ಪ್ರೇಮ್ ಸಿಟ್ಟು ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣನೂ ಇದೆ. ನಿಮಗೆ ಗೊತ್ತಿರಲಿ ದಿ ವಿಲನ್ ಶುರುವಾದಾಗ, ಪ್ರೇಮ್.. ಕುಣಿದು ಕುಣಿದು ಬಾರೇ ಅನ್ನುವ ಹಾಡನ್ನ ಗುನುಗುತ್ತಾನೇ, ಆಮಿಯನ್ನ.. ಕನ್ನಡ ನೆಲಕ್ಕೆ ಕರೆದುಕೊಂಡು ಬಂದಿದ್ದರು. ಅದು, ತುಂಬು ಉತ್ಸಾಹ ಹಾಗೂ ಹುಮ್ಮಸ್ಸಿನೊಂದಿಗೆ.

ಪ್ರೇಮ್ ದಿ ವಿಲನ್‌ಗಾಗಿ ಅಪ್ರೋಚ್ ಮಾಡಿದಾಗ, ಆಮಿ ಕೂಡಾ ಯಾವದೇ ಅಳುಕಿಲ್ಲದೆ ಯಸ್ ಅಂದಿದ್ದರು. ಆಮಿ ಒಪ್ಪಿಕೊಳ್ಳಲು ಕಾರಣ ಇದು ದೊಡ್ಡ ಮಟ್ಟದ ಬಿಗ್ ಬಜೆಟ್ ಸಿನಿಮಾ ಅನ್ನೋದು ಒಂದ್ಕಡೆಯಾಗಿದ್ದರೆ, ಇನ್ನೊಂದು ಶಿವಣ್ಣ ಹಾಗೂ ಸುದೀಪ ಫ್ಲೇವರ್ ಕೂಡಾ ಕಾರಣವಾಗಿತ್ತು. ಇದೇ ಕಾರಣಕ್ಕೆ ಆರಂಭದಲ್ಲಿ ಖುಷಿ ಖುಷಿಯಾಗಿಯೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಆಮಿ, ದಿನಗಳು ಉರುಳಿದಂತೆ ಅವತ್ತೇ ಪ್ರೇಮ್‌ಗೆ ಹಾಗೂ ತಂಡಕ್ಕೆ ಕಾಡಲು ಶುರುವಿಟ್ಟುಕೊಂಡಿದ್ದರು.

ನಿಮಗೆ ಗೊತ್ತಿರಲಿ, ಆಮಿ ಜಾಕ್ಸನ್‌ಗಾಗಿ ಅಂಥನೇ ಚಿತ್ರದ ಚಿತ್ರೀಕರಣವನ್ನ ಅನೇಕ ಸಲ ಮುಂದೂಡಲಾಗಿತ್ತು. ಇದುವೇ.. ಚಿತ್ರ ತಡವಾಗಲು ಇರುವ ಕಾರಣಗಳಲ್ಲೂ ಮೊದಲನೇಯದ್ದು. ಖುದ್ದು, ಶಿವಣ್ಣ ಹಾಗೂ ಸುದೀಪ.. ತಮ್ಮ ಡೇಟ್‌ಗಳನ್ನ ಹೊಂದಾಣಿಕೆ ಮಾಡಿಕೊಂಡು ಆಮಿಯ ಡೇಟ್‌ಗಳು ಸಿಕ್ಕಾಗ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಇಲ್ಲಿದೆ.
ಹೀಗಿದ್ದೂ..

ಇಷ್ಟೆಲ್ಲಾ ಮಾಡಿದ್ಮೇಲೂ.. ಇದೀಗ ಆಮಿ ಜಾಕ್ಸನ್ ಮತ್ತೊಮ್ಮೆ ಪ್ರೇಮ್‌ಗೆ ಗುನ್ನ ಇಟ್ಟಿದ್ದಾರೆ. ಹೌದು, ಇಷ್ಟು ದೊಡ್ಡ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರೂ ಕೂಡಾ ಆಮಿ ಜಾಕ್ಸನ್ ಪ್ರಮೋಶನ್‌ಗೂ ತನಗೂ ಸಂಬಂಧವೇ ಇಲ್ಲದಂತಿದ್ದಾರೆ. ಇದೇ ಇದೀಗ ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡದ ಸಿಟ್ಟಿಗೆ ಕಾರಣವಾಗಿದೆ.ಅಸಲಿಗೆ, ದಿ ವಿಲನ್ ಚಿತ್ರೀಕರಣ ಮುಗಿಸಿಕೊಂಡು ಕಣ್ಮರೆಯಾದ ಆಮಿ ಮತ್ತೆ ಈ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ.

ಇತ್ತೀಚೆಗೆ ಸುದೀಪ್ ಅವರ ಜೊತೆಗೊಂದು ಹಾಡಿನ ಚಿತ್ರೀಕರಣಕ್ಕೆ ಹಾಜರಾಗಿದ್ದ ಆಮಿ ಲಕ್ಷಣವಾಗಿ ಅದನ್ನು ಮುಗಿಸಿ ಎದ್ದು ಹೋಗಿದ್ದರು. ಹೀಗೆ ಎದ್ದು ಹೋದ ಆಮಿ.. ನಂತರ ಕಂಡು ಬಂದಿದ್ದು ಆಡಿಯೋ ಬಿಡುಗಡೆ ಸಮಾರಂಭದಲ್ಲಿ. ಅದು, ದೂರದ ದುಬೈನಲ್ಲಿ.. ಅದು, ಕೊನೆಯ ಕ್ಷಣದಲ್ಲಿ.ಅವತ್ತು ದುಬೈನಲ್ಲಿ ತನ್ನ ಮುಖವನ್ನ ತೋರಿಸಿ ಹೋದ ಆಮಿ ಜಾಕ್ಸನ್, ಇಲ್ಲಿವರೆಗೂ ಪತ್ತೆಯಾಗಿಲ್ಲ. ಪ್ರೇಮ್ ಕೈಗೆ ಸಿಗುತ್ತಿಲ್ಲ. ಒಂದ್ವೇಳೆ ಸಂಪರ್ಕಕ್ಕೆ ಸಿಕ್ಕರೂ.. ಉತ್ತರ, ಇನ್ಯಾವಗೋ ಆಮಿರಿಂದ ಬಂದಿರುತ್ತೆ.

ಇನ್ನೂ.. ಇತ್ತೀಚಿಗಷ್ಟೇ ನಡೆದ ಮೊದಲ ಪತ್ರಿಕಾಗೋಷ್ಠಿಗಾದ್ರೂ ಆಮಿ ಬರ‍್ತಾಳೆ ಅಂತ ಕಾಯ್ತಿದ್ದ ಪ್ರೇಮ್‌ಗೆ, ಆಮಿ ಇಲ್ಲೂ.. ಕಾಗೆಯನ್ನ ತೋರಿಸಿದ್ದರು.ಪತ್ರಿಕಾಗೋಷ್ಠಿಗೆ ಬರಲಿಲ್ಲ. ಹೋಗಲಿ.. ಬರುವದು ಬೇಡ, ಆಟ್‌ಲಿಸ್ಟ್.. ತಮ್ಮ ಸಾಮಾಜಿಕ ಜಾಲತಾಣದಲ್ಲಾದ್ರೂ ದಿ ವಿಲನ್ ಬಗ್ಗೆ ಆಮಿ ಮಾತನಾಡ್ತಿದ್ದಾರಾ ಅಂದ್ರೆ ಅದು ಇಲ್ಲ. ಬಹುಶ, ರಜಿನಿಯ ೨.೦ ಮೇಲಿರುವ ಪ್ರೀತಿ ಕನ್ನಡದ ದಿ ವಿಲನ್ ಮೇಲೆ ಆಮಿಗೆ ಇದ್ದಂತಿಲ್ಲ.

ಹಾಗಾಗೇ, ಇದೆಲ್ಲ ಕಾರಣದಿಂದ ರೋಸಿ ಹೋದಂತಿರುವ ಪ್ರೇಮ್ ಇದೀಗ ಆಮಿ ವಿರುದ್ಧ ಬಹಿರಂಗವಾಗಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ.ಅದೇನೆ ಇರ‍್ಲಿ, ಪರಭಾಷಾ ನಟಿಯರು ತಮ್ಮ ಸಿನಿಮಾದಲ್ಲಿ ಬಣ್ಣ ಹಚ್ಚಿದ್ರೆ, ತಮ್ಮ ಸಿನಿಮಾದ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗುತ್ತೆ.. ಸಿನಿಮಾಗೊಂದು ಕಳೆ ಬರುತ್ತೆ.. ಚಿತ್ರ ನೋಡಲು ಚಿತ್ರರಸಿಕರು ಮುಗಿಬೀಳ್ತಾರೆ ಅನ್ನುವ ಭ್ರಮೆಯೊಂದಿಗೆ, ಪರಭಾಷಾ ನಟಿಯರ ಹಿಂದೆ ಬೀಳೋರಿಗೆ ಆಮಿ ಜಾಕ್ಸನ್ ಸದ್ಯ ಒಂದು ಪಾಠದಂತೆ ಕಾಣುತ್ತಿರೋದು ಸುಳ್ಳಲ್ಲ.

LEAVE A REPLY

Please enter your comment!
Please enter your name here