Home Cinema ಪ್ರೇಮ್ ದಿ ವಿಲನ್ ಚಿತ್ರದ “ಬಾಸ್” ಕಾಂಟ್ರವರ್ಸಿಗೆ ಶಿವಣ್ಣ ಟ್ವೀಟ್..?! ಅಷ್ಟಕ್ಕೂ ಹಾಟ್ರಿಕ್ ಹೀರೋ ಹೇಳಿದ್ದೇನು...

ಪ್ರೇಮ್ ದಿ ವಿಲನ್ ಚಿತ್ರದ “ಬಾಸ್” ಕಾಂಟ್ರವರ್ಸಿಗೆ ಶಿವಣ್ಣ ಟ್ವೀಟ್..?! ಅಷ್ಟಕ್ಕೂ ಹಾಟ್ರಿಕ್ ಹೀರೋ ಹೇಳಿದ್ದೇನು ಗೊತ್ತಾ..?!

765
0
SHARE

ಜೋಗಿ ಪ್ರೇಮ್ ವಿಲನ್ ಚಿತ್ರಕ್ಕೆ ಬರೆದಿರುವ ಹಾಡು ಈಗ ಕಾಂಟ್ರವರ್ಸಿಗೆ ಒಳಗಾಗಿದೆ.. ಪ್ರೇಮ್ ದಿ ವಿಲನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಸುದೀಪ್ ಹಾಗು ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ….ಶಿವರಾಜ್‌ಕುಮಾರ್‌ಗಾಗಿ ಪ್ರೇಮ್ ಬರೆದಿರುವ ಹಾಡು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ..ನಿನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ ಎಂಬ ಸಾಲುಗಳು ದರ್ಶನ್ ಹಾಗೂ ಯಸ್ ಫ್ಯಾನ್ಸ್‌ಗಳಿಗೆ ಕೋಪ ತರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಇಬ್ಬರ ಫ್ಯಾನ್ಸ್‌ಗಳು ಕಿತ್ತಾಟ ನಡೆಸುತ್ತಿದ್ದಾರೆ..ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್‌ಕುಮಾರ್ ದಿ ವಿಲನ್ ಚಿತ್ರದ ಹಾಡಿನ ಕಾಂಟ್ರವರ್ಸಿ ಬಗ್ಗೆ ನನಗೆ ಗೊತ್ತಿಲ್ಲ..ನಾವೆಲ್ಲರೂ ಒಂದೇ ಎಲ್ಲಾ ನಟರು ಬಾಸ್..ಅವರವರ ಮನೆಗೆ ಅವರವರೆ ಬಾಸ್ ಎಂದು ಶಿವಣ್ಣ ಹೇಳಿದ್ದಾರೆ..ಇನ್ನು ದರ್ಶನ್ ಬಾಸ್ ಆದ್ರೂ ಖುಷಿನೇ, ಯಶ್ ಬಾಸ್ ಆದ್ರೂ ಖುಷಿನೇ ಒಟ್ನಲ್ಲಿ ಕನ್ನಡ ಚಿತ್ರರಂಗ ಬೆಳೆಯಬೇಕು ಅನನೋದು ಮಾತ್ರ ನಮ್ಮ ಆಸೆ ಎಂದಿದ್ದಾರೆ…ದಿ ವಿಲನ್ ಚಿತ್ರದ ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿನ್ನೆ ಹಾಡಿನ ಸಾಲುಗಳನ್ನು ಬರೆದು ಮಾಸ್ ಹಾಡಿನ ಶೂಟಿಂಗ್ ಮುಗಿದಿದೆ.ಶಿವಣ್ಣ ಯಂಗ್ ಎಂಡ್ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ಧಾರೆ ಎಂದು ಟ್ವೀಟ್ ಮಾಡಿಕೊಂಡಿದ್ದರು…

LEAVE A REPLY

Please enter your comment!
Please enter your name here