Home Crime ಪ್ರೊ ಕಬ್ಬಡಿ ರೀತಿ ಪೊಲೀಸ್ ಕಬ್ಬಡಿ ಆಡಬೇಕಾಗುತ್ತೆ..! ತುಮಕೂರು ಎಸ್ಪಿ ರೌಡಿಶೀಟರ್ಗಳಿಗೆ ಖಡಕ್ ಎಚ್ಚರಿಕೆ..

ಪ್ರೊ ಕಬ್ಬಡಿ ರೀತಿ ಪೊಲೀಸ್ ಕಬ್ಬಡಿ ಆಡಬೇಕಾಗುತ್ತೆ..! ತುಮಕೂರು ಎಸ್ಪಿ ರೌಡಿಶೀಟರ್ಗಳಿಗೆ ಖಡಕ್ ಎಚ್ಚರಿಕೆ..

616
0
SHARE

ತುಮಕೂರು ನಗರದಲ್ಲಿ ರೌಡಿಗಳ ಚಟುವಟಿಕೆ ತಲೆ ಎತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಎಸ್‍ಪಿ ಕೋನವಂಶೀ ಕೃಷ್ಣ ಅವರು ರೌಡಿಶೀಟರ್ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಪ್ರೊ ಕಬ್ಬಡಿ ರೀತಿ ಪೊಲೀಸ್ ಕಬ್ಬಡಿ ಆಡಬೇಕಾಗುತ್ತೆ ಅಂತಾ ತುಮಕೂರು ಎಸ್ಪಿ ಡಾ. ಕೋನಾ ವಂಶಿಕೃಷ್ಣ ಅವರು ರೌಡಿಶೀಟರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಇಂದು ಬೆಳ್ಳಂ ಬೆಳಗ್ಗೆ ನಗರದ ಚಿಲುಮೆ ಕಲ್ಯಾಣ ಮಂಟಪದಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಪೊಲೀಸ್ ಠಾಣೆಗಳಲ್ಲಿನ ಸುಮಾರು 249 ರೌಡಿ ಶೀಟರ್ಗಳನ್ನು ಕರೆಸಿದ್ದರು.

ಈ ವೇಳೆ ಮಾತನಾಡಿದ ಎಸ್‍ಪಿ, ಚುನಾವಣೆ ಬರುತ್ತಿದೆ. ನಿಮ್ಮ ಎಲ್ಲಾ ಆಟ ನಿಲ್ಲಿಸಬೇಕು. ಇಲ್ಲಾ ಅಂದರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡಬೇಕಾಗುತ್ತದೆ. ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಕೋನವಂಶೀ ಕೃಷ್ಣ ಅವರು ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಅವರ ಪೂರ್ವಪರ ಮತ್ತು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿ ಪಡೆದರು. ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದ್ರೆ ಗಡಿಪಾರುವ ಮಾಡುವುದಾಗಿ ಎಚ್ಚರಿಸಿದ್ದಾರೆ.ನಾನು ಮತ್ತೆ ಮತ್ತೆ ಕರೆದು ವಾರ್ನಿಂಗ್ ಮಾಡುವುದಿಲ್ಲ.ಇದೇ ಫಸ್ಟ್ ಆ್ಯಂಡ್ ಲಾಸ್ಟ್.

ಜೈಲಿನಲ್ಲಿರುವ ಕ್ರಿಮಿನಲ್ ಗಳ ಜೊತೆ ಮೊಬೈಲ್ ಸಂಪರ್ಕ ಇಟ್ಟುಕೊಳ್ಳಬಾರದು. ಒಂದು ವೇಳೆ ಅವರ ಅಣತಿಯಂತೆ ನಡೆದುಕೊಳ್ಳುವುದು ಗೊತ್ತಾದ್ರೆ,ಮುಂದೆ ಏನಾದ್ರೂ ಬಾಲ ಬಿಚ್ಚಿದ್ರೆ ಕಟ್ ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ..

LEAVE A REPLY

Please enter your comment!
Please enter your name here