Home KARNATAKA ಪ್ಲೇ-ಆಫ್ ಟೆನ್ಶನ್‌ನಲ್ಲಿರುವ ತಂಡಗಳಿಗೆ ಮತ್ತೊಂದು ಬಿಗ್ ಶಾಕ್..?! ಸ್ಟಾರ್ ಆಟಗಾಗರು ಐಪಿಎಲ್‌ನಿಂದ ಔಟ್..!!!

ಪ್ಲೇ-ಆಫ್ ಟೆನ್ಶನ್‌ನಲ್ಲಿರುವ ತಂಡಗಳಿಗೆ ಮತ್ತೊಂದು ಬಿಗ್ ಶಾಕ್..?! ಸ್ಟಾರ್ ಆಟಗಾಗರು ಐಪಿಎಲ್‌ನಿಂದ ಔಟ್..!!!

1055
0
SHARE

ಐಪಿಎಲ್ ನಿಂದ ಹೊರಹೋಗಲಿದ್ದಾರೆ ಇಂಗ್ಲೆಂಡ್ ಸ್ಟಾರ್ಸ್.
ಕೆಲವು ತಂಡಗಳಿಗೆ ಎದುರಾಗಲಿದೆ ಬಿಗ್ ಶಾಕ್. ಐಪಿಎಲ್ ಸೀಸನ್ 11 ಭಾರಿ ರೋಚಕ ಹಾಗೂ ಕುತೂಹಲ ಘಟ್ಟದಲ್ಲಿ ಸಾಗ್ತಿದೆ. ಇನ್ನೇನು ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದು ಪ್ಲೇ ಆಫ್ ಪಂದ್ಯಗಳು ಶುರುವಾಗಲಿವೆ. ಆದ್ರೆ ಇದೇ ವೇಳೆ ಸ್ಟಾರ್ ಆಟಗಾರರು ಐಪಿಎಲ್ ತಂಡಗಳಿಂದ ಮಿಸ್ ಆಗುತ್ತಿದ್ದು, ದೊಡ್ಡ ಹೊಡೆತ ಬೀಳುತ್ತಿದೆ…

ಐಪಿಎಲ್ ನಲ್ಲಿ ಆಡ್ತಿರೋ ತಂಡಗಳಲ್ಲಿ ಯಾವೆಲ್ಲಾ ಇಂಗ್ಲೆಂಡ್ ಆಟಗಾರರು ಇದ್ದಾರೋ ಅವರು ಇದೀಗ ತವರಿಗೆ ಮರಳಲಿದ್ದಾರೆ. ಭರ್ಜರಿ ಫಾರ್ಮ್ ನಲ್ಲಿದ್ದ ಕೆಲವು ಇಂಗ್ಲೆಂಡ್ ಆಟಗಾರರ ಸೇವೆ ಆಯಾ ತಂಡಗಳಿಗೆ ಇನ್ನು ಸಿಗೋದಿಲ್ಲ . ಹೀಗಾಗಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನ ನೀಡಬೇಕೆಂಬ ತಂಡಗಳಿಗೆ ಬಿಗ್ ಶಾಕ್ ಎದುರಾಗಿದೆ…

ರಾಜಸ್ತಾನ ತಂಡಕ್ಕಿಲ್ಲ ಬಟ್ಲರ್ –ಸ್ಟೋಕ್ಸ್ ಸೇವೆ…
ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ರಾಯಲ್ಸ್ ತಂಡದ ಪ್ರಬಲ ಆಟಗಾರರಾದ ಜಾಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ತಮ್ಮ ತವರಾದ ಇಂಗ್ಲೆಂಡ್ ಗೆ ಹೊರಟು ನಿಂತಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಾಕಿಸ್ಥಾನ ಟೆಸ್ಟ್ ಸೀರೀಸ್ ಗಾಗಿ ತಂಡವನ್ನು ಪ್ರಕಟಿಸಿದ್ದು, ಆಯ್ಕೆ ಸಮಿತಿಯು ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಬ್ಯಾಟ್ಸ್ಮನ್-ವಿಕೆಟ್ ಕೀಪರ್ ಜಾಸ್ ಬಟ್ಲರ್ ಮರಳಿ ತಂಡಕ್ಕೆ ಸೇರಿಕೊಳ್ಳುವಂತೆ ಸೂಚಿಸಿದೆ…

ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಮೇ 24ರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಇಂಗ್ಲೆಂಡ್ ತಂಡವನ್ನು ಬಟ್ಲರ್, ಸ್ಟೋಕ್ಸ್ ಸೇರಿಕೊಳ್ಳಬೇಕಾಗಿದೆ. ಸದ್ಯ ಇಬ್ಬರೂ ರಾಜಸ್ಥಾನ್ ತಂಡದಲ್ಲಿ ಆಡುತ್ತಿರುವುದರಿಂದ ರಾಜಸ್ಥಾನ್ ತಂಡಕ್ಕೆ ನಿಜಕ್ಕೂ ಇದು ದೊಡ್ಡ ಹೊಡೆತ ನೀಡಿದೆ…

ಜಾಸ್ ಬಟ್ಲರ್ ರಾಜಸ್ತಾನ್ ತಂಡದ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದರು. ಸತತ ಸೋಲಿಗಳಿಂದ ಕಂಗೆಟ್ಟಿದ್ದ ರಹಾನೆ ಪಡೆಯಲ್ಲಿ ಸಿಡಿದೆದ್ದ ಬಟ್ಲರ್ ಗ್ರೇಟ್ ಪರ್ಫಾಮರ್ ಆಗಿ ಮಿಂಚುತ್ತಿದ್ದಾರೆ. ಅಲ್ಲದೇ ಪ್ರಮುಖ ಪಂದ್ಯಗಳಲ್ಲಿ ರನ್ ಹೊಳೆ ಹರಿಸೋದ್ರ ಜೊತೆ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಇವರಲ್ಲದೇ ಆಲ್ರೌಂಡರ್ ಸ್ಟೋಕ್ಸ್ ಕೂಡ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು…
ಇನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ವಿರುದ್ಧದ ಪಂದ್ಯದ ಬಳಿಕ ಸ್ಟೋಕ್ಸ್, ಬಟ್ಲರ್ ಇಬ್ಬರಿಗೂ ಭಾವುಕ ವಿದಾಯ ನೀಡಿದೆ. ತಂಡದ ಆಟಗಾರರೊಂದಿಗೆ ಆತ್ಮೀಯವಾಗಿ ಬೆರೆತಿದ್ದ ಇಬ್ಬರೂ ನೆಚ್ಚಿನ ಆಟಗಾರನ್ನು ರಾಜಸ್ಥಾನ್ ರಾಯಲ್ಸ್ ಪ್ರೀತಿಯಿಂದ ಕಳುಹಿಸಿ ಕೊಟ್ಟಿದೆ…

ಆರ್ ಸಿಬಿಯಿಂದ ಹೊರನಡೆಯಲಿದ್ದಾರೆ ಕ್ರಿಸ್ ವೋಕ್ಸ್…
ರಾಯಲ್ ಚಾಲೆಂಜರ್ಸ್ ತಂಡದಲ್ಲೂ ಇಂಗ್ಲೆಂಡ್ ತಂಡದ ಆಟಗಾರಿದ್ದಾರೆ. ಆಲ್ರೌಂಡರ್ ಕ್ರಿಸ್ ವೋಕ್ಸ್ ಹಾಗೂ ಸ್ಪಿನ್ ಮಾಂತ್ರಿಕ ಮೋಯಿನ್ ಅಲಿ ಕೊಹ್ಲಿಸೈನ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ವೋಕ್ಸ್ ಮಾತ್ರ ಸೆಲೆಕ್ಟ್ ಆಗಿದ್ದು, ತವರಿಗೆ ತೆರಳಲಿದ್ದಾರೆ. ಆದ್ರೆ ಅಲಿ ಆರ್ ಸಿಬಿಯಲ್ಲಿ ತಮ್ಮ ಸೇವೆಯನ್ನ ಮುಂದುವರೆಸಲಿದ್ದಾರೆ…

ಚೆನ್ನೈ ತಂಡದಿಂದ ಮಾರ್ಕ್ ವುಡ್ ಕೂಡ ಮಿಸ್…
ಇನ್ನು ಸೀಸನ್ 11ರಲ್ಲಿ ಅಮೋಘ ಪ್ರದರ್ಶನ ನೀಡಿ ಪ್ಲೇ ಆಫ್ ತಲುಪಿರೋ ಸಿಎಸ್ ಕೆಯಿಂದ ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವುಡ್ ನಿರ್ಗಮಿಸಲಿದ್ದಾರೆ. ಮಾರ್ಕ್ ವುಡ್ ಸಿಎಸ್ ಕೆ ತಂಡದ ಪ್ಲೇಯಿಂಗ್ ಇಲೆವನ್ ನಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ .ಕೇವಲ ಬೇಂಜ್ ಸ್ಟ್ರೆಂತ್ ಆಗಿಯೇ ಉಳಿದುಕೊಂಡಿದ್ದರು…

ಒಟ್ಟಿನಲ್ಲಿ ಐಪಿಎಲ್ ಸೀಸನ್ 11ರ ಲೀಗ್ ಹಂತದ ಪಂದ್ಯಗಳು ಮುಗಿದು, ನಾಕೌಟ್ ಪಂದ್ಯಗಳು ಶುರುವಾಗುವ ಕಾಲ ಸನಿಹದಲ್ಲಿದೆ. ಇಂತಹ ಸಂದರ್ಭದಲ್ಲಿ ಸ್ಟಾರ್ ಪ್ಲೇಯರ್ ಗಳಂತೆ ಮೆರೆದಾಡಿದ ಇಂಗ್ಲೆಂಡ್ ಆಟಗಾರರು ತವರಿಗೆ ಹೋಗ್ತಿರೋದು, ಐಪಿಎಲ್ ತಂಡಗಳಿಗೆ ಬಿಗ್ ಶಾಕ್ ನೀಡಿದಂತು ಸುಳ್ಳಲ್ಲ…

LEAVE A REPLY

Please enter your comment!
Please enter your name here