Home Crime ಫಸ್ಟ್ ನೈಟ್‌ನಲ್ಲೇ ನರಕ ತೋರಿಸಿದ್ದನಂತೆ ಈ ಕಾಮಾಸುರ..!? ಪಾರ್ನ್ ಸ್ಟಾರ್ ನಂತೆ ಬೇಕಿತ್ತು ಆತನಿಗೆ ಸೆಕ್ಸ್..!...

ಫಸ್ಟ್ ನೈಟ್‌ನಲ್ಲೇ ನರಕ ತೋರಿಸಿದ್ದನಂತೆ ಈ ಕಾಮಾಸುರ..!? ಪಾರ್ನ್ ಸ್ಟಾರ್ ನಂತೆ ಬೇಕಿತ್ತು ಆತನಿಗೆ ಸೆಕ್ಸ್..! ಗಂಡನ ಕಿರುಕುಳ ತಾಳಲಾರದೆ ನವವಿವಾಹಿತೆ ಲೈವ್ ಸೂಸೈಡ್..!

4153
0
SHARE

ವ್ಙಾವ್….ಎಂತಹ ಸ್ನಿಗ್ಧ ಸೌಂದರ್ಯ. ಇವಳನ್ನ ನೋಡಿದ್ರೆ ಸಿನಿಮಾ ಹೀರೋಯಿನ್ ತರವೇ ಕಾಣ್ತಾಳೆ. 19ರ ಹರೆಯದ ಈ ಹುಡುಗಿಯ ಹೆಸರು ನೇಹಾ ಷರೀಫ್. ಇವಳ ಸೌಂದರ್ಯವನ್ನ ನೋಡಿದವರ್ಯಾರು ಇವಳ ಬದುಕಲ್ಲಿ ಇಂತಹದ್ದೊಂದು ಘೋರ ಅನ್ಯಾಯ ನಡೆಯುತ್ತೆ ಅಂತ ಅಂದುಕೊಂಡಿರಲಿಕ್ಕಿಲ್ಲ. ಇನ್ನು ತುಂಬು ಯೌವ್ವನದಲ್ಲಿದ್ದ ನೇಹಾಗೆ ಮದುವೆಯೊಂದು ಆಗದೇ ಇದ್ದಿದ್ರೆ ಆಕೆ ಇನ್ನೇನನ್ನೋ ಸಾಧಿಸ್ತಿದ್ಲೇನೋ. ಆದ್ರೆ ಮೇಲೆ ಕೂತು ಗೊಂಬೆಯಾಡ್ಸೋನ ಆಟವೇ ಬೇರೆಯಾಗಿತ್ತು. ನೋಡೋದಕ್ಕೆ ಅತಿ ಸೌಂದರ್ಯವತಿಯಾಗಿದ್ದವಳ ಬದುಕನ್ನ ಆ ಭಗವಂತ ಅಷ್ಟೇ ಬೇಗ ಮುಗಿಸಿಬಿಟ್ಟಿದ್ದ.

ಅವಳ ಬದುಕಲ್ಲಿ ಏನೆಲ್ಲಾ ಆಗಬಾರದಿತ್ತೋ ಅದೆಲ್ಲವೂ ಕೇವಲ 5ತಿಂಗಳಿಗೆ ನಡೆದು ಹೋಗಿತ್ತು. ಅದಕ್ಕೆ ಕಾರಣ ಆಕೆಯ ಸೌಂದರ್ಯ ಮತ್ತು ಮದುವೆ. ಈಕೆ ಇಷ್ಟೊಂದು ಕ್ಯೂಟ್ ಆಗಿ ಇರದೇ ಇದ್ದಿದ್ರೆ ಆಕೆಯ ಬದುಕು ನಾರ್ಮಲ್ ಆಗಿರ್ತಿತ್ತು. ಆಕೆಯ ಸೌಂದರ್ಯವೇ ಆಕೆ ಸಣ್ಣ ವಯಸ್ಸಲ್ಲಿ ನೋಡಬಾರದ್ದನ್ನ ನೋಡೋ ಹಾಗೆ ಮಾಡಿತ್ತು.ನೇಹಾ ಮೂಲತಃ ಹಾಸನದ ಗುಡ್ಡೇನಹಳ್ಳಿಯ ರೆಹಮಾನ್ ಷರೀಫ್ ಅವರ ಕಿರಿಯ ಮಗಳು. ಹಾಸನದಲ್ಲಿಯೇ ಬಿಎಸ್ಸಿ ಸೆಕೆಂಡ್ ಓದ್ತಾ ಇದ್ಲು. ಅವಳ ಓದು ಹಾಗೆ ಮುಂದುವರೆದಿದ್ರೆ ಅವಳ ಬಗ್ಗೆ ನಾವು ಇವತ್ತು ನಿಮಗೆ ಕತೆ ಹೇಳುವ ಪರಿಸ್ಥಿತಿ ಬರ್ತಿರಲಿಲ್ಲ ಅನ್ಸುತ್ತೆ. ಆದ್ರೆ ಹಾಗೆ ಆಗಿರಲಿಲ್ಲ. ಆಕೆ ಓದುತ್ತಿರುವಾಗಲೇ ಆಕೆಗೆ ಮದುವೆ ಪ್ರಪೋಸಲ್ ಬಂದಿತ್ತು. ಅವತ್ತು ನೇಹಾ ಅನ್ನೋ ಮುದ್ದು ಮುಖದ ಚೆಲುವೆಯನ್ನ ಮದುವೆ ಮಾಡಿಕೊಡಿ ಅಂತ ಮನೆಯಂಗಳಕ್ಕೆ ಬಂದು ನಿಂತವನೇ ಆದಿಲ್ ಶರೀಫ್.

ಸಕಲೇಶಪುರದ ನಿವಾಸಿಯಾದ ಆದಿಲ್ ದುಬೈನಲ್ಲಿದ್ದು ಬಂದಿದ್ದ. ಸೆಕೆಂಡ್ಸ್ ಕಾರ್ ಸೇಲ್ ಮಾಡ್ತಿದ್ದ ಶರೀಫ್ ತನ್ನ ಮನೆಯವರ ಜೊತೆ ಅವತ್ತು ನೇಹಾಳ ತಂದೆ ಎದುರು ಬಂದು ನಿಂತಿದ್ದ. ದೂರದ ಸಂಬಂಧಿಯಾಗಿದ್ದ ಕಾರಣ ಆದಿಲ್ ಶರೀಫ್ ನನ್ನ ಆದರದಿಂದಲೇ ಅವ್ರು ಮನೆಯೊಳಗೆ ಕರ್ಕೊಂಡು ಹೋಗಿದ್ರು. ಪಾಪಾ ಅವ್ರಿಗೆ ಮನೆಯೊಳಗೆ ಮಸಣದ ಮಾರಿಯನ್ನ ಕರ್ಕೊಂಡು ಬರ್ತಿದ್ದೀವಿ ಅನ್ನೋದು ಅವರಿಗೆ ಗೊತ್ತೇ ಇರಲಿಲ್ಲ. ಅವತ್ತು ಮನೆ ಬಾಗಿಲಿಗೆ ಬಂದವನನ್ನ ಹಾಗೆ ವಾಪಸ್ ಕಳುಹಿಸಿದ್ರೆ ಇವತ್ತು ನೇಹಾ ತನ್ನ ಎಲ್ಲಾ ಸ್ನೇಹಿತರಂತೆ ಕಾಲೇಜಿನಲ್ಲಿ ನಗುನಗುತ್ತಾ ಒಡಾಡಿಕೊಂಡಿರ್ತಿದ್ಲು.ಆದಿಲ್ ಅವತ್ತು ಮನೆ ಬಾಗಿಲಿಗೆ ಬಂದಿದ್ದು ನೇಹಾಳನ್ನ ಮದುವೆ ಮಾಡಿಕೊಡಿ ಅಂತ ಕೇಳೋದಕ್ಕೆ. ಯಾಕಂದ್ರೆ ಆಕೆಯ ಕಣ್ಣು ಕುಕ್ಕುವ ಚೆಲುವನ್ನ ಆದಿಲ್ ಅದೆಲ್ಲೋ ನೋಡಿದ್ದ. ಹೀಗಾಗಿ ಆಕೆಯ ಮನೆಯನ್ನ ಹುಡ್ಕೊಂಡು ಅವನು ಬಂದಿದ್ದ. ಆದ್ರೆ ಇವ್ರು ಹೆಣ್ಣು ಕೇಳ್ತಿದ್ದ ಹಾಗೆ ಅವ್ರು ಮದುವೆ ಮಾಡಿಕೊಡೋದಕ್ಕೆ ಒಪ್ಪಲಿಲ್ಲ.

ನನ್ನ ಮಗಳು ಇನ್ನು ಓದ್ತಿದ್ದಾಳೆ ಅವಳು ಓದಲಿ ಈಗ ಮದುವೆ ಮಾಡಿಕೊಡೋದಿಲ್ಲ ಅಂತ ಹೇಳಿ ಕಳುಹಿಸಿದ್ರು. ಆದ್ರೆ ಆದಿಲ್ ಸುಮ್ಮನಿರಲಿಲ್ಲ. ನಿಮ್ಮ ಮಗಳನ್ನ ರಾಣಿಯ ಹಾಗೆ ನೋಡಿಕೊಳ್ತೀನಿ. ನಿಮ್ಮ ಮಗಳಿಗೆ ಸೂರ್ಯನ ಬಿಸಿಲೇ ಬೀಳದ ಹಾಗೆ ಕಾಪಾಡ್ತೀನಿ ಅಂತೆಲ್ಲಾ ಅವರ ಮನೆಯವರಿಗೆ ಹೇಳಿ ಪೂಸಿ ಹೊಡೆದಿದ್ದ. ಅವನು ಅದೆಷ್ಟು ನಯವಾಗಿ ಮಾತನಾಡಿದ್ದ ಅಂದ್ರೆ ಬೆಣ್ಣಿಯಿಂದ ಕೂದಲು ತೆಗೆದ ಹಾಗಿತ್ತು ಆತನ ಮಾತು. ಅವನು ಆಡ್ತಿರೋ ಮಾತೆಲ್ಲಾ ನಿಜ ಅಂತಾನೆ ಹುಡುಗಿಯ ಮನೆಯವರು ತಿಳಿದಿದ್ರು. ಕೂಲಿ ಕೆಲಸ ಮಾಡ್ಕೊಂಡು ಹೊಟ್ಟೆ ಹೊರೆದುಕೊಳ್ಳೋರಿಗೆ ಮಗಳು ಒಂದೊಳ್ಳೆ ಮನೆ ಸೇರ್ತಾಳಲ್ಲ ಅನ್ನೋ ಖುಷಿಯಿತ್ತು. ಹೀಗಾಗಿ ಅವನು ಅಷ್ಟೆಲ್ಲಾ ದುಂಬಾಲು ಬಿದ್ದ ಮೇಲೆ ಸರಿ ನಡಿಯಪ್ಪ ನಾವು ನೇಹಾಳನ್ನ ನಿನ್ನ ಜೊತೆ ಮದುವೆ ಮಾಡಿಕೊಡ್ತೀನಿ ಅಂತ ಹೇಳಿದ್ರು.

ಬಿಎಸ್ಪಿ ಓದ್ತಿದ್ದ ನೇಹಾಗೆ ಮದುವೆ ಮಾಡಿಕೊಡೋದಕ್ಕೆ ಮನೆಯವರು ಸಕಲ ತಯಾರಿ ಮಾಡಿಕೊಳ್ಳತೊಡಗಿದ್ರು. ಆದರೆ ತಮ್ಮ ಮನೆಗೆ ಅಳಿಯನಾಗಿ ಬರೋ ಹುಡುಗನ ಯಾರು ಎಲ್ಲೂ ಕೂಡಾ ವಿಚಾರಿಸಲೇ ಇಲ್ಲ. ಮಗಳು ಒಳ್ಳೇ ಸ್ಥಿತಿವಂತರ ಮನೆ ಸೇರ್ತಾಳೆ ಅನ್ನೋ ಆಸೆಯಲ್ಲಿ ಭರದಲ್ಲಿ ಮದುವೆಗೆ ತಯಾರಿ ಮಾಡ್ಕೊಳ್ಳೋದಕ್ಕೆ ಶುರುಮಾಡಿದ್ರು. ಕೊನೆ ಮಗಳು ಆದ್ದರಿಂದ ಅದ್ದೂರಿಯಾಗಿ ಅಲ್ಲದಿದ್ರೂ ಚೆನ್ನಾಗಿಯೇ ಮದುವೆ ಮಾಡಿಕೊಡಬೇಕು ಅಂತ ತೀರ್ಮಾನಿಸಿದ್ರು. ಹೀಗಾಗಿ ಹುಡುಗನಿಗೆ 2ಲಕ್ಷ ಹಣ, ಚಿನ್ನಾಭರಣ, ಮನೆ ಬೇಕಾದ ವಸ್ತಗಳು ಎಲ್ಲವನ್ನ ಕೊಟ್ಟು ಮದುವೆ ಮಾಡೋದಕ್ಕೆ ಫೈನಲ್ ಸಿದ್ಧತೆ ಮಾಡಿಕೊಂಡಿದ್ರು. ಹಾಗೆ ಹಾಸನದ ತಣ್ಣೀರುಹಳ್ಳದ ಕಲ್ಯಾಣ ಮಂಟಪವೊಂದರಲ್ಲಿ ಚೆನ್ನಾಗಿಯೇ ಮದುವೆ ಮಾಡಿಕೊಟ್ಟಿದ್ರು. ಅಲ್ಲಿಗೆ ನೇಹಾ ಅನ್ನೋ ಚೆಲುವೆಯ ಬದುಕು ದುರಂತದ ಕಡೆಗೆ ಹೊರಳೋದಕ್ಕೆ ಪಥ ಬದಲಾಯಿಸಿ ಆಗಿತ್ತು. ಇಷ್ಟು ದಿನದ ಆಕೆಯ ಸುಖ ಸಂತೋಷಗಳೆಲ್ಲಾ ಆ ಮದುವೆ ಮಂಟಪದಲ್ಲಿಯೇ ಕೊನೆಯಾಗಿ ಹೋಗಿತ್ತು.

ಆದಿಲ್ ನೇಹಾಳನ್ನ ಮದುವೆಯಾಗಿದ್ದೇ ಆಕೆ ತುಂಬಾ ಚೆನ್ನಾಗಿದ್ದಾಳೆ ಅನ್ನೋ ಕಾರಣಕ್ಕೆ. ಅದೊಂದೇ ಕಾರಣವನ್ನ ಇಟ್ಕೊಂದು ಆತ ಆಕೆಯ ಮನೆಯವರನ್ನ ಕಾಡಿ ಬೇಡಿ ಮದುವೆಯಾಗಿದ್ದ. ಅದ್ಯಾವಾಗ ಇವರಿಬ್ಬರ ಫಸ್ಟ್ ನೈಟ್ ಮುಗಿತೋ ಅಲ್ಲಿಂದ ಆತ ತನ್ನ ಅಸಲಿ ಆಟವನ್ನ ಶುರುಮಾಡಿದ್ದ. ಅದೇನಪ್ಪಾ ಅಂದ್ರೆ ಆಕೆಯನ್ನ ಮಕರಂದ ಹೀರೋವಂತೆ ಹೀರಿದ್ದ ಆದಿಲ್ ನಿಧಾನವಾಗಿ ನಿಮ್ಮ ಮನೆಯಿಂದ ವರದಕ್ಷಿಣೆ ತಗೊಂಡು ಬಾ ಅಂತ ಹಿಂಸೆ ಕೊಡೋದಕ್ಕೆ ಶುರುಮಾಡಿದ. ಮೊದಲಿಗೆ ನೇಹಾ ಕೂಡಾ ಅದನ್ನ ನಂಬಲಿಲ್ಲ. ಆದ್ರೆ ದಿನ ಕಳೆಯುತ್ತಿದ್ದ ಹಾಗೆ ಆತ ಇದೇ ವಿಚಾರವಾಗಿ ಆಕೆಗೆ ಟಾರ್ಚರ್ ಮಾಡೋದಕ್ಕೆ ಶುರುಮಾಡಿದ. ಅಲ್ಲದೆ ಆಕೆಯ ಅತ್ತೆ, ಮೈದುನ, ನಾದಿನಿ ಎಲ್ಲಾ ಆಕೆಗೆ ಹಿಂಸೆ ಕೊಡೋದಕ್ಕೆ ಶುರುಮಾಡಿದ್ರು. ನೋಡೋದಕ್ಕೆ ಚೆಂದ ಇದ್ರೆ ಹೊಟ್ಟೆಗೆ ಅನ್ನ ಸಿಗೋದಿಲ್ಲ. ನಿಮ್ಮಪ್ಪನ ಮನೆಯಿಂದ ಹಣ ತಗೊಂಡು ಬಾ ಅಂತ ಹೊಡೆಯೋದಕ್ಕೆ ಶುರುಮಾಡಿದ್ಲು. ಮೊದಲಿಗೆ ನೇಹ ಅದನ್ನ ಯಾರಿಗೂ ಹೇಳಲೇ ಇಲ್ಲ. ಆದ್ರೆ ಅದ್ಯಾವಾಗ ಆಕೆಗೆ ದೈಹಿಕ ನೋವಿಗಿಂತ ಮಾನಸಿಕವಾಗಿ ನೋವಾಗೋದಕ್ಕೆ ಶುರುವಾಯ್ತೋ ಆಗ ತನ್ನ ಕಷ್ಟವನ್ನ ಅಪ್ಪನ ಮುಂದೆ ಹೇಳಿದ್ಲು.

ಆಗ ಕುಟುಂಬದ ಹಿರಿಯರೆಲ್ಲಾ ಸೇರಿ ಒಂದು ರಾಜಿ ಪಂಚಾಯ್ತಿನ್ನ ಮಾಡಿದ್ರು. ನಮ್ಮ ಹುಡುಗಿಯನ್ನ ಚೆನ್ನಾಗಿ ನೋಡ್ಕೊಳ್ತೀನಿ ಅಂತ ಮದುವೆ ಮಾಡ್ಕೊಂಡು ಈಗನೇಪ್ಪ ನಿನ್ನ ಹೊಸವರಸೆ ಅಂತ ಎಲ್ಲಾ ಆತನಿಗೆ ಚೆನ್ನಾಗಿ ಬೈದು ಬುದ್ದಿ ಹೇಳಿದ್ರು. ನಂತ್ರ ಇನ್ನು ಹೀಗೆ ಮಾಡೋದಿಲ್ಲ ಅಂತ ಆತ ಆಕೆಯನ್ನ ಮತ್ತೆ ಮನೆಗೆ ಕರ್ಕೊಂಡು ಹೋಗಿದ್ದ. ಆದ್ರೆ ನಾಯಿ ಬಾಲ ಡೊಂಕು  ಅನ್ನೋ ಹಾಗೆ ಆಕೆಯನ್ನ ಮತ್ತೆ ಹಿಂಸಿಸೋದಕ್ಕೆ ಶುರುಮಾಡಿದ್ದ. ಹೀಗಾಗಿ ಗಂಡ ಹೆಂಡತಿ ಜಗಳ ಪೊಲೀಸ್ ಸ್ಟೇಷನ್ ವರೆಗೂ ಹೋಗಿತ್ತು. ಆದ್ರೆ ಅಲ್ಲಿ ನೇಹಾಳಿಗೆ ನ್ಯಾಯ ಸಿಗಲಿಲ್ಲ. ಅಲ್ಲದೆ ಆಕೆಯನ್ನೇ ಆತನ ಪತಿಯ ಕಾಟವೂ ಅಲ್ಲಿಗೆ ನಿಲ್ಲಲಿಲ್ಲ. ಅತ್ತ ವರದಕ್ಷಿಣೆ ಕೊಡೋದಕ್ಕೆ ಆ ಬಡ ಮನೆಯಲ್ಲಿ ಯಾರಿಗೂ ಸಾಧ್ಯವೂ ಇರಲಿಲ್ಲ. ಹೀಗಾಗಿ ನೇಹಾ ಮದುವೆಯಾದ ಐದೇ ತಿಂಗಳಿಗೆ ಸಾಯೋ ನಿರ್ಧಾರ ಮಾಡಿದ್ಲು. 5ತಿಂಗಳಿಗೆ ಆಕೆಗೆ ಬದುಕು ಬೇಡ ಅಂತ ಅನಿಸಿಬಿಟ್ಟಿತ್ತು. ಆಕೆ ಹಾಗೆ ಸುಮ್ಮನೆ ಸಾಯಲಿಲ್ಲ. ಸಾಯುವ ಮೊದಲು ತಾನೇಕೆ ಸಾಯ್ತಿದ್ದೀನಿ, ನನ್ನ ಸಾವಿಗೆ ಕಾರಣ ಯಾರು ಅನ್ನೋದನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಲೈವ್ ಆಗಿಯೇ ಸೂಸೈಡ್ ಮಾಡ್ಕೊಂಡಿದ್ಲು.

ನೇಹಾ ಸಾಯುವ ಮೊದಲು ತನಗೆ ಐದು ತಿಂಗಳಲ್ಲಿ ಗಂಡ ಆದಿಲ್ ಪಾಷಾ ಏನೆಲ್ಲಾ ತೊಂದರೆ ಕೊಟ್ದಿದ್ದ ಅನ್ನೋದನ್ನ ಹೇಳಿದ್ಲು. ನಾನು ಮನುಷ್ಯನ ಜೊತೆ ಮದುವೆಯಾಗ್ತಿದ್ದೀನಿ ಅಂತ ಅಂದುಕೊಂಡಿದ್ದೆ. ಆದ್ರೆ ನಾನು ಮದುವೆಯಾಗಿದ್ದ ಮೃಗದ ಜೊತೆಗೆ ಅಂತ ಆಕೆ ಸಾಯುವ ಮುನ್ನ ಕಣ್ಣೀರು ಹಾಕ್ಕೊಂಡು ಹೇಳಿದ್ಲು. ನಾನು ಬದುಕಿರುವಾಗಂತು ಇಲ್ಲಿನ ನ್ಯಾಯ ವ್ಯವಸ್ಥೆ ನನಗೆ ನ್ಯಾಯ ಕೊಡಿಸಲಿಲ್ಲ. ನಾನು ಸತ್ತ ಮೇಲಾದ್ರು ನನಗೆ ನ್ಯಾಯ ಸಿಗಲಿ ಅಂತ ಕಣ್ಣೀರು ಹಾಕ್ಕೊಂಡು ಕೊನೆಯದಾಗಿ ಪರಿಪರಿಯಾಗಿ ಬೇಡಿಕೊಂಡಿದ್ಲು. ಹೀಗೆ ಕಣ್ಣೀರು ಹಾಕಿಕೊಂಡೇ ತನ್ನ ಮುಂದಿದ್ದ ವಿಷಯ ಬಾಟಲಿಯನ್ನ ಎತ್ಕೊಂಡು ಘಟ ಘಟ ಅಂತ ಕುಡಿದಿದ್ಲು. ಅಲ್ಲಿಗೆ ನೇಹಾ ಅನ್ನೋ ಬಡ ಚೆಲುವೆಯ ಬದುಕು ಕೊನೆಯಾಗಿ ಹೋಗಿತ್ತು.

ನೇಹಾ ಷರೀಫ್ ನನ್ನ ಮದುವೆಯಾಗೋದಕ್ಕೂ ಮೊದಲು ಅವಳಲ್ಲಿ ಮುಂದಿನ ಜೀವನದ ಬಗ್ಗೆ ಸಾವಿರಾರು ಕಲ್ಪನೆಗಳಿತ್ತು. ಆದ್ರೆ ಅದ್ಯಾವಾಗ ಮದುವೆಯ ನಂತ್ರ ಆತ ಮತ್ತು ಆಕೆಯ ಸಮ್ಮಿಲನಕ್ಕೆ ಮೊದಲ ರಾತ್ರಿಯ ಸಮಯ ಬಂತೋ ಅವತ್ತು ಆಕೆಗೆ ತಾನೆಂತಹ ಕ್ರೂರ ಪ್ರಪಂಚಕ್ಕೆ ಬಂದು ಬಿಟ್ಚಿದ್ದೇನೆ ಅಂತ ಅನಿಸಿತ್ತು. ಮೊದಲೇ ಹೇಳಿದ ಹಾಗೆ ಷರೀಫ್ ಆಕೆಯನ್ನ ಮದುವೆಯಾಗಿತ್ತು ಆಕೆಯ ಸೌಂದರ್ಯಕ್ಕಾಗಿ ಮಾತ್ರ. ಅದನ್ನ ಆತ ಮೊದಲ ರಾತ್ರಿಯಿಂದಲೇ ಹಿಂಡಿ ಬಸಿಯೋದಕ್ಕೆ ಶುರುಮಾಡಿದ್ದ. ಪತ್ನಿ ಅಂದ್ರೆ ಬೋಗದ ವಸ್ತು, ಹಾಸಿಗೆಯನ್ನ ಮಲಗಿದ ಮೇಲೆ ಆಕೆಯನ್ನ ಪ್ರಾಣಿಯಂತೆ ಭೋಗಿಸಬೇಕು ಅನ್ನೋದಷ್ಟೇ ಆತನ ಆಸೆಯಾಗಿತ್ತು. ತನ್ನ ಪತ್ನಿಗೂ ಮನಸ್ಸಿಗೆ ಆಕೆ ನನ್ನಂತೆ ಒಂದು ಜೀವ ಅನ್ನೋದನ್ನ ಮರೆತುಬಿಟ್ಟಿದ್ದ. ಮೊದಲ ರಾತ್ರಿಯೇ ಆಕೆಗೆ ರೌರವ ನರಕವನ್ನ ತೋರಿಸಿದ್ದ. ದುಬೈನಲ್ಲಿ ಇದ್ದು ಬಂದಿದ್ದ ಷರೀಫ್ ಥೇಟ್ ಪ್ರಾಣಿಯಂತೆ ಆಕೆಯನ್ನ ಉಪಯೋಗಿಸಿಕೊಂಡಿದ್ದ. ಅಲ್ಲಿದೆ ಒಂದೇ ರಾತ್ರಿಯಲ್ಲಿ ನನ್ನ ಮುಂದಿನ ಬದುಕು ಇವನ ಜೊತೆ ಹೇಗಿರುತ್ತೆ ಅಂತ ಆಕೆಗೆ ಗೊತ್ತಾಗಿ ಬಿಟ್ಟಿತ್ತು.

ಶರೀಫ್ ಗೆ ತನ್ನ ಪತ್ನಿ ಸೆಕ್ಸ್ ವೀಡಿಯೋದಲ್ಲಿ ನಟಿಸೋ ಹೀರೋಯಿನ್ ಗಳಂತೆ ಅಂತ ಅಂದುಕೊಂಡಿದ್ದ. ಹೀಗಾಗಿ ಆಕೆಯನ್ನ ಸೆಕ್ಸ್ ಗೆ ಅದೇ ರೀತಿಯಾಗಿ ಬಳಸಿಕೊಳ್ತಿದ್ದ. ಅವಕಾಶ ಸಿಕ್ಕಿದಾಗಲೆಲ್ಲಾ ಆಕೆಯ ಮೇಲೆ ಮುಗಿಬೀಳ್ತಿದ್ದ. ಅಲ್ಲದೆ ಆಕೆಯ ಕೈಕಾಲುಗಳನ್ನ ಕಟ್ಟಿಹಾಕಿ ಕಣ್ಣಿಗೆ ಬಟ್ಟೆ ಕಟ್ಟಿ ಸಂಭೋಗಿಸ್ತಿದ್ದ. ಅದನ್ನ ಆಕೆಯೇ ಸಾಯೋ ಮೊದಲು ವೀಡಿಯೋದಲ್ಲಿ ಹೇಳಿದ್ದಾಳೆ. ಅದ್ಯಾವ ಪರಿ ಆಕೆಯನ್ನ ಸೆಕ್ಸ್ ಗಾಗಿ ಬಳಸಿಕೊಂಡಿದ್ದ ಅಂದ್ರೆ ಆಕೆಯ ಗುಪ್ತಾಂಗವೆಲ್ಲಾ ಅಸಾಧಾರಣ ನೋವಿನಿಂದ ತುಂಬಿ ಹೋಗಿತ್ತು.

ಆಕೆಗೆ ಆ ನೋವು, ಮಾನಸಿಕ ಹಿಂಸೆ ಎಲ್ಲವೂ ಸಾವನ್ನ ಹತ್ತಿರ ಕರೆಯುವಂತೆ ಮಾಡಿತ್ತು. ಅಲ್ಲದೆ ಇದೇ ಸಮಯದಲ್ಲಿ ನೇಹಾ 4ತಿಂಗಳ ಗರ್ಭಿಣಿಯಾಗಿದ್ಲು. ಆಕೆಗೆ ಇವನ ಪೈಶಾಚಿಕ ಕೃತ್ಯವನ್ನ ತಡೆದುಕೊಂಡ್ರು ನಾನು ಅಮ್ಮನಾಗ್ತಿದ್ದೀನಿ ಅನ್ನೋ ಖುಷಿಯಿತ್ತು. ಆದ್ರೆ ಪತ್ನಿ ಗರ್ಭಿಣಿಯಾಗಿದ್ದಾಳೆ ಅನ್ನೋ ವಿಷಯ ಗೊತ್ತಾದಾಗ ಷರೀಫ್ ಮತ್ತೊಂದು ಹೊಸ ನಾಟಕ ಶುರುಮಾಡಿಬಿಟ್ಟಿದ್ದ. ಈ ಮಗು ನನ್ನದಲ್ಲ ಅನ್ನೋ ಹೊಸ ವರಸೆ ಶುರುಮಾಡ್ಕೊಂಡು ಆಕೆಗೆ ಮತ್ತೆ ಟಾರ್ಚರ್ ಮಾಡೋದಕ್ಕೆ ಪ್ರಾರಂಭಿಸಿದ್ದ.ಇದೀಗ ನೇಹಾ ಇಹಲೋಕ ತ್ಯಜಿಸಿದ್ದಾಳೆ. ನೇಹಾ ಸಾಯುವ ಮೊದಲು ತನ್ನ ಸಾವಿಗೆ ನ್ಯಾಯ ಕೇಳಿದ್ದಾಳೆ. ಆ ನ್ಯಾಯವನ್ನ ಪೊಲೀಸ್ ಇಲಾಕೆ ಕೊಡುತ್ತಾ ಅನ್ನೋದನ್ನ ಆಕೆಯ ಪೋಷಕರು ಕಾಯ್ತಿದ್ದಾರೆ.

LEAVE A REPLY

Please enter your comment!
Please enter your name here