Home Crime ಫಿಲ್ಮಿಂ ಸ್ಟೈಲ್ ನಲ್ಲಿ ನಡೆದೇ ಹೋಯ್ತು ಒನ್ ಮರ್ಡರ್..!! ಮದಿರೆ ಮತ್ತಿನಲ್ಲಿ ಶುರುವಾಯ್ತು ಇಬ್ಬರ ನಡುವೆ...

ಫಿಲ್ಮಿಂ ಸ್ಟೈಲ್ ನಲ್ಲಿ ನಡೆದೇ ಹೋಯ್ತು ಒನ್ ಮರ್ಡರ್..!! ಮದಿರೆ ಮತ್ತಿನಲ್ಲಿ ಶುರುವಾಯ್ತು ಇಬ್ಬರ ನಡುವೆ ಕಿರಿಕ್…

854
0
SHARE

ಎಣ್ಣೆ ಏಟಲ್ಲಿ ಅಲ್ಲಿ ಶುರುವಾಗಿತ್ತು ಎರಡು ಗುಂಪಿನ ನಡುವೆ ವಾರ್. ನೋಡ್ ನೋಡ್ತಿದ್ದಾಗೆ ಅಲ್ಲಿ ನ ಬಿಯರ್ ಬಾಟಲಿಗಳು ಪೀಸ್ ಆಗೋದ್ರ ಜೊತೆಗೆ ಒಬ್ಬನ ಹೆಣವೇ ಅಲ್ಲಿ ಬಿದ್ದಿತ್ತು. ಕುಡಿದ ಮತ್ತಿನಲ್ಲಿದ್ದ ಅವರಿಬ್ಬರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿತ್ತು…
ಬಾರ್ ನಲ್ಲಿ ಜಗಳ ಆಗೋದು ಕಾಮನ್. ಕುಡುಕರ ಜಗಳ ತಾನೆ ಅಂತ ಕೆಲವರು ಸುಮ್ನೆ ಆಗ್ತಾರೆ. ಆದರೆ ಇಲ್ಲೊಂದು ಗ್ಯಾಂಗ್ ಕುಡಿದು ಸುಮ್ನೆ ಹೋಗದೆ ಕ್ಷುಲಕ ಕಾರಣಕ್ಕೆ ಜಗಳ ತೆಗೆದು ಕೊನೆಗೆ ಬಾಟಲ್ ನಲ್ಲಿ ಹೊಡೆದು ಸಾಯ್ಸೇ ಬಿಟ್ಟಿದ್ದಾರೆ. ಹಾಗೆ ಕುಡುಕರ ಕೃತ್ಯಕ್ಕೆ ಕೊನೆಯುಸಿರೆಳೆದವ್ನೇ ಈ ಚಂದ್ರು…
ಡಿ.ಜೆ ಹಳ್ಳಿ ನಿವಾಸಿಯಾದ ಚಂದ್ರು ವೃತ್ತಿಯಲ್ಲಿ ಪೇಂಟರ್. ಕೆಲ್ಸಕ್ಕೆ ಹೋಗೋ ಮುನ್ನವೇ ಒಂದ್ ಪೆಗ್ ಹಾಕ್ಕೊಂಡ್ ಹೋಗೋಣ ಅಂತ ಸಮೀಪದ ಪ್ರೀಯ ಬಾರ್ ಗೆ ಬಂದಿದ್ದಾನೆ. ತನಗೆ ಬೇಕಾದ ಎಣ್ಣೆ ತಗೊಂಡು ಕುಡಿತಾ ಇರ್ಬೇಕಾದ್ರೆ ಗ್ಯಾಂಗ್ ಒಂದು ಬಂದಿದ್ದು, ಸಿಲ್ಲಿ ರೀಸನ್ ಗೆ ಕಾಲ್ ಕೆರೆದುಕೊಂಡು ಜಗಳ ತೆಗೆದಿದ್ದಾರೆ…

ಆ ಟೈಮ್ ನಲ್ಲಿ ಚಂದ್ರು ನು ನಾನೇನು ಕಮ್ಮಿ ಅಂತ ಎದುರುತ್ತರ ಕೊಟ್ಟಿದ್ದಾನೆ. ಈ ವೇಳೆ ಎಣ್ಣೆ ಮತ್ತಿನಲ್ಲಿದ್ದ ಎದುರಾಳಿಗಳೂ ಅಲ್ಲೆ ಇದ್ದ ಬಿಯರ್ ಬಾಟಲ್ ನಿಂದ ಸಿನಿಮಾ ಸ್ಚೈಲ್ ನಲ್ಲಿ ದಾಳಿ ಮಾಡಿ ಕುತ್ತಿಗೆಗೆ ಬಲವಾಗಿ ಇರಿದಿದ್ದಾರೆ. ಯಾವಾಗ ಬಾಟೆಲ್ ಕುತ್ತಿಗೆ ಒಳ ನುಗ್ಗಿತೋ ಚಂದ್ರು ಅಲ್ಲೇ ಕೊನೆಯುಸಿರೆಳೆದಿದ್ದಾನೆ…
ಆದ್ರೆ, ಹಲ್ಲೆ ನಡೆಸಿ, ಹತ್ಯೆ ಮಾಡಿದವ್ರು ಯಾರೆಂಬ ಸುಳಿವು ಸಿಕ್ಕಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆ.ಜಿ.ಹಳ್ಳಿ ಪೋಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸ್ತಿದ್ದಾರೆ…

LEAVE A REPLY

Please enter your comment!
Please enter your name here