Home Cinema ಫುಲ್ ಎಣ್ಣೆ ಏಟಲ್ಲಿ ತಮಿಳಿನ ಸೂಪರ್ ಸ್ಟಾರ್ ವಿಕ್ರಂ ಮಗ ಮಾಡಿದ್ದು ಎಂಥಾ ದೊಡ್ಡ ಅನಾಹುತ...

ಫುಲ್ ಎಣ್ಣೆ ಏಟಲ್ಲಿ ತಮಿಳಿನ ಸೂಪರ್ ಸ್ಟಾರ್ ವಿಕ್ರಂ ಮಗ ಮಾಡಿದ್ದು ಎಂಥಾ ದೊಡ್ಡ ಅನಾಹುತ ಗೊತ್ತಾ..?! ಸ್ಟೋರಿ ಓದಿ

1162
0
SHARE

ವಿಕ್ರಂ.. ಸೌಥ್ ಸಿನಿದುನಿಯಾದ ಓನ್ ಆಫ್ ದಿ ಲೀಡಿಂಗ್ ಸೂಪರ್ ಸ್ಟಾರ್..ಸಿನಿಮಾವನ್ನ ಅತೀವವಾಗಿ ಪ್ರೀತ್ಸುವ.. ಪಾತ್ರಕ್ಕಾಗಿ ಏನ್ ಬೇಕಾದ್ರೂ ಮಾಡುವ.. ವಿಕ್ರಂ, ಇದೀಗ ಮಗ ಮಾಡಿದ ಕೆಲ್ಸದಿಂದ ತಲೆ ತಗ್ಗಿಸುವಂತಾಗಿದೆ. ಹೌದು, ನಿನ್ನೆ ವಿಕ್ರಂ ಪುತ್ರ ಧ್ರುವ ಯದ್ವತದ್ವ ತಮ್ಮ ಕಾರನ್ನ ಡ್ರೈವ್ ಮಾಡಿದ್ದಾರೆ.

ಪರಿಣಾಮ ಮೂರು ಆಟೋಗಳು ಜಖಂ ಆಗಿವೆ. ಇಷ್ಟೇ ಅಲ್ಲ.. ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.ಅಸಲಿಗೆ ನಿನ್ನೆ, ತಮ್ಮ ಸ್ನೇಹಿತರೊಂದಿಗೆ ಪ್ರಯಾಣ ಮಾಡುತ್ತಿದ್ದ ವಿಕ್ರಂ ಪುತ್ರ.. ಎಣ್ಣೆ ಏಟಲ್ಲಿದ್ದರು. ಕುಡಿದುಕೊಂಡೇ ವಾಹವನ್ನ ಅತೀ ವೇಗದಲ್ಲಿ ಡ್ರೈವ್ ಮಾಡ್ತಿದ್ದ ಧ್ರುವಾ ಕಾರು, ಚೆನೈನ ತೈನಪೆಂಟ್ ಬಳಿ ಬಂದಾಗ ನಿಯಂತ್ರಣ ಕಳೆದುಕೊಂಡಿದೆ.

ಮೂರು ಆಟೋಗಳನ್ನ ಗುದ್ದಿದೆ.ಆಕ್ಸಿಡೆಂಟ್ ಆದ ಬಳಿಕನೂ, ತನ್ನ ತಪ್ಪಿನ ಅರಿವು ಮಾಡಿಕೊಳ್ಳದ ಧ್ರುವಾ ಇದೇ ವೇಳೆ ಪೊಲೀಸರ ಮೇಲೂ ದರ್ಪ ತೋರಿಸಿರೋದು ಇಲ್ಲಿನ ಇನ್ನೊಂದು ದುರಂತ. ಸೆಕ್ಷನ್ ೨೭೯ ಹಾಗೂ ೩೩೭ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಧ್ರುವಾನನ್ನ ಬಂಧಿಸಿದ್ದಾರೆ.

ಬಳಿಕ.. ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.ಸಾಮಾನ್ಯವಾಗಿ, ಸ್ಟಾರ್ ಮಕ್ಕಳಿಗೆ ಹಾಗೂ ಪೊಲಿಟಿಕಲ್ ಫೀಲ್ಡ್‌ನಲ್ಲಿನ ಮಕ್ಕಳ ದರ್ಪದ ಕಥೆಗಳು, ಅನೇಕ ಪ್ರಕರಣಗಳು ಕಣ್ಣಿಗೆ ಆಗಾಗ ಬೀಳ್ತಾನೇ ಇರುತ್ತೆ. ಇದೀಗ ಇದೇ ಸಾಲಿಗೆ ವಿಕ್ರಂ ಪುತ್ರ ಧ್ರುವಾ ಸೇರಿಕೊಂಡಿದ್ದಾನೆ. ಅಂದ ಹಾಗೇ ಧ್ರುವಾ ತಮಿಳಿನಲ್ಲಿ ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here