Home KARNATAKA ಫುಲ್ ವೈರಲ್ ಹಾಗ್ತಿದೆ ರಾಹುಲ್-ಪಾಂಡ್ಯ ಜೆರ್ಸಿ ಎಕ್ಚೇಂಜ್ ಫ್ರೆಂಡ್‌ಶಿಪ್…ಮತ್ತೆ ನಿರೂಪಿಸಿದ್ರು ಕೊಹ್ಲಿ-ಗೇಲ್ ದೋಸ್ತಿ ಎಂತದ್ದಂತಾ…

ಫುಲ್ ವೈರಲ್ ಹಾಗ್ತಿದೆ ರಾಹುಲ್-ಪಾಂಡ್ಯ ಜೆರ್ಸಿ ಎಕ್ಚೇಂಜ್ ಫ್ರೆಂಡ್‌ಶಿಪ್…ಮತ್ತೆ ನಿರೂಪಿಸಿದ್ರು ಕೊಹ್ಲಿ-ಗೇಲ್ ದೋಸ್ತಿ ಎಂತದ್ದಂತಾ…

6234
0
SHARE

ಒಂದೇ ತಂಡದ ಪರವಾಗಿ ಆಡ್ತಿದ್ದ ಆಟಗಾರರು ಐಪಿಎಲ್ ನಲ್ಲಿ ಬೇರೆ ಬೇರೆಯಾಗಿ ಆಡುವ ಅನಿವಾರ್ಯತೆ ಉಂಟಾಗುತ್ತೆ. ಫ್ರಾಂಚೈಸಿ ಲೀಗ್ ನಲ್ಲಿ ಆಟಗಾರರು ವಿವಿಧ ತಂಡಗಳಲ್ಲಿ ಗುರ್ತಿಸಿಕೊಂಡು ಮಿಂಚುತ್ತಿದ್ದಾರೆ. ಅಲ್ಲದೇ ಐಪಿಎಲ್ ಸೀಸನ್ 11 ರಲ್ಲಿ ಕೆಲವೊಂದು ಘಟನೆಗಳು ಅಭಿಮಾನಿಗಳ ಮನದಲ್ಲಿ ಉಳಿಯಂತೆ ಮಾಡಿದೆ…

ಕಿಂಗ್ಸ್ ಇಲೆವನ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆದಿದ್ದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯಾ ನಡೆದುಕೊಂಡ ರೀತಿಗೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ…
ಏ ದೋಸ್ತಿ ಹಂ ನಹೀ ತೋಡೆಂಗೆ ಅಂತಿದ್ದಾರೆ ಕ್ರಿಕೆಟರ್ಸ್..ಬೇರೆ ಬೇರೆ ತಂಡದಲ್ಲಿದ್ದರೂ ಇವ್ರು ತೋರಿಸಿದ್ದಾರೆ ಫ್ರೆಂಡ್ ಶಿಪ್..ಸಾಮಾನ್ಯವಾಗಿ ಫುಟ್ಬಾಲ್ ಕ್ರೀಡೆಯಲ್ಲಿ ಇಂತಹ ದೃಶ್ಯಗಳ ದರ್ಶನವಾಗುತ್ತದೆ. ವಿಜೇತ ತಂಡದ ಆಟಗಾರರು ಪರಾಜಿತ ಆಟಗಾರರ ಜೆರ್ಸಿಯನ್ನು ಪರಸ್ಪರ ಬದಲಾಯಿಸಿಕೊಂಡು ಗೌರವ ಸೂಚಿಸುತ್ತಾರೆ… ಇದೇ ರೀತಿಯ ದೃಷ್ಟಾಂತ ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲೂ ಕಾಣಿಸಿಕೊಂಡಿದೆ. ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬಯಿ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಡುವಣ ರೋಚಕ ಕದನದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪರಸ್ಪರ ಜೆರ್ಸಿ ಎಕ್ಸ್ ಚೇಂಜ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ…
ಟೀಮ್ ಇಂಡಿಯಾ ಆಟಗಾರರಾಗಿರುವ ರಾಹುಲ್ ಹಾಗೂ ಪಾಂಡ್ಯ ಉತ್ತಮ ಗೆಳೆತನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಐಪಿಎಲ್‌ನಲ್ಲೂ ತಮ್ಮ ತಮ್ಮ ತಂಡಗಳ ಗೆಲುವಿಗಾಗಿ ಹೋರಾಡುತ್ತಿದ್ದರೂ ಪಂದ್ಯದ ಬಳಿಕ ಮತ್ತೆ ಒಂದಾಗಿದ್ದರು.. ಪಂಜಾಬ್ ವಿರುದ್ಧ 3 ರನ್ ಅಂತರದ ರೋಚಕ ಗೆಲುವು ದಾಖಲಿಸಿದ ಮುಂಬಯಿ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು…

ಕಿಂಗ್ಸ್ ಪರ ಏಕಾಂಕಿ ಹೋರಾಟವನ್ನು ನೀಡಿದ್ದ ರಾಹುಲ್ 60 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 94 ರನ್ ಗಳಿಸಿದ್ದರು. ಪಂದ್ಯದ ಬಳಿಕ ರಾಹುಲ್ ತುಂಬಾನೇ ನಿರಾಸೆಗೊಂಡಿತ್ತು. ಆದರೆ ವಿರುದ್ಧ ತಂಡದಲ್ಲಿ ಆಡುತ್ತಿರುವ ತಮ್ಮ ಗೆಳೆಯ ಹಾರ್ದಿಕ್ ಪಾಂಡ್ಯ ಅವರ ಬಳಿ ತೆರಳಿ ಅಭಿನಂದನೆಯನ್ನ ಸಲ್ಲಿಸಿದ್ದಾರೆ…ಗೆಳೆತನದ ಪರಾಕಾಷ್ಠೆಯನ್ನ ತೋರಿಸಿದ್ದರು ಕೊಹ್ಲಿ-ಗೇಲ್…
ಗೆಲುವಿನ ಲಯ ಕಂಡುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದೋರ್ನಲ್ಲಿ ಪಂಜಾಬ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು.ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕೇವಲ 15.1 ಓವರ್ಗಳಲ್ಲಿ ಕೇವಲ 88 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು…
ಇನ್ನು ಕಿಂಗ್ಸ್ ಇಲೆವೆನ್ ನೀಡಿದ ಗುರಿಯನ್ನು ಬೆನ್ನತ್ತಿದ್ದ ನಮ್ಮ ಬೆಂಗಳೂರು ತಂಡ ಇನ್ನು 11.5 ಒವರಗಳು ಬಾಕಿ ಇರುವಂತೆಯೆ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾರ್ಥಿವ್ ಪಟೇಲ್ 92 ಗಳ ಜೊತೆಯಾಟದ ಮೂಲಕ ಗೆಲುವಿನ ಪತಾಕೆ ಹಾರಿಸಿದ್ರು. ಕೊಹ್ಲಿ ಅಜೇಯ 48 ರನ್ ಗಳಿಸಿದ್ರೆ, ಪಾರ್ಥಿವ್ ಅಜೇಯ 40 ರನ್ ಕಲೆ ಹಾಕಿದ್ರು… ಇದೇ ಸಂದರ್ಭದಲ್ಲಿ ಉಭಯ ತಂಡಗಳು ಶುಭವನ್ನ ಕೋರಿಕೊಳ್ಳಲು ಮೈದಾನದಲ್ಲಿ ಸೇರಿದ್ದರು. ಆ ವೇಳೆಯಲ್ಲಿ ಕೊಹ್ಲಿ ಹಾಗೂ ಗೇಲ್ ತಮ್ಮದೇ ಆದ ಸ್ಟೈಲ್ ನಲ್ಲಿ ಪರಸ್ಪರ ಶುಭವನ್ನ ಕೋರಿಕೊಂಡ್ರು. ಮತ್ತು ತಮ್ಮ ಗೆಳೆತನ ಎಂತದ್ದು ಅನ್ನೋದನ್ನ ನಿರೂಪಿಸಿದ್ದರು.ಒಟ್ಟಿನಲ್ಲಿ ಕ್ರಿಕೆಟ್ ಆಟಗಾರರು ತಾವು ಬೇರೆ ತಂಡದ ಪರವಾಗಿ ಆಡ್ತಿದ್ದರೂ ತಮ್ಮ ಫ್ರೆಂಡ್ ಶಿಪ್ ಗೆ ಯಾವುದೇ ಅಡ್ಡಿಯಾಗೋದಿಲ್ಲ ಅನ್ನೋದನ್ನ ತೋರಿಸಿದ್ದಾರೆ. ಕ್ರಿಕೆಟ್ ನಲ್ಲಿ ಕ್ರೀಡಾ ಸ್ಫೂರ್ತಿಯನ್ನ ಮೆರೆಸಬೇಕು ಅನ್ನೋದನ್ನು ಸಹ ಈ ಆಟಗಾರರು ಪ್ರೂವ್ ಮಾಡಿದ್ದಾರೆ…

LEAVE A REPLY

Please enter your comment!
Please enter your name here