Home Crime ಫೇಸ್‌ಬುಕ್‌ನಲ್ಲಿ ಯುವತಿಗೆ ನೀಲಿ ಚಿತ್ರ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದವನನ್ನು ಸಲುಗೆಯಿಂದಲೇ ಮನೆಗೆ ಕರೆಸಿಕೊಂಡು ಧರ್ಮದೇಟು ಕೊಡಿಸಿದ...

ಫೇಸ್‌ಬುಕ್‌ನಲ್ಲಿ ಯುವತಿಗೆ ನೀಲಿ ಚಿತ್ರ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದವನನ್ನು ಸಲುಗೆಯಿಂದಲೇ ಮನೆಗೆ ಕರೆಸಿಕೊಂಡು ಧರ್ಮದೇಟು ಕೊಡಿಸಿದ ಯುವತಿ…

595
0
SHARE

ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಧರ್ಮದೆಟು… ಬಸವೇಶ್ವರ ನಗರ ನಿವಾಸಿ ರೇಖಾ ಅನ್ನೋ ಯುವತಿಗೆ ಫೇಸ್ ಬುಕ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ನಕಲಿ ಫೇಸ್ ಬುಕ್ ಅಕೌಂಟ್ ನಿಂದ ಮೆಸೇಜ್ ‌ಮಾಡುತ್ತಿದ್ದ ಮೈಸೂರಿನ ಸಿದ್ದು ಗೌಡ.ಯುವತಿಗೆ ಅಶ್ಲೀಲವಾಗಿ ಮೇಸೆಜ್ ‌ಮಾಡಿದ್ದಾನೆ.

ಸಿದ್ದು ರಮ್ಯ ಗೌಡ ಅನ್ನೋ ನಕಲಿ ಅಕೌಂಟ್ ನಿಂದ ಯುವತಿಗೆ ಅಶ್ಲೀಲ ಮೆಸೇಜ್ ‌ಗಳು ನೀಲಿ ವಿಡಿಯೋಗಳನ್ನು ಸೆಂಡ್ ಮಾಡಿದ್ದಾನೆ…ಅದಕ್ಕೆ ರೇಖಾ ರಿಪ್ಲೇ ಮಾಡದೇ ಇದ್ದಾಗ ರೇಖಾ ಪೋಟೋ ವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಅಶ್ಲೀಲ ಪದಗಳನ್ನು ಬಳಸಿದ್ದಾನೆ..ಮತ್ತೆ ಒಂದು ತಿಂಗಳ ಹಿಂದೆ ಮೇಸೆಜ್ ‌ಮಾಡಲು ಆರಂಭಿಸಿದ್ದಾನೆ ..ಮತ್ತೆ ಈ ವಿಚಾರವನ್ನು ಸೈಬರ್ ಕ್ರೈಮ್ ದೂರು ದಾಖಲಿಸಿದ್ದಾಳೆ..

ಪೋಲಿಸರು ಅವನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ರು.. ‌ಆದನಂತರ ಯುವತಿ ಅವನನ್ನು ಹೇಗಾದರೂ ಮಾಡಿ ಪೋಲಿಸರಿಗೆ ಒಪ್ಪಿಸಬೇಕು ಅಂತ ಅವನ ಜೊತೆ ಸಲಿಗೆಯಿಂದ ಮಾತಾನಾಡಿ ಅವನನ್ನು ಬಸವೇಶ್ವರ ನಗರಕ್ಕೆ ಕರೆಸಿಕೊಂಡಿದ್ದಾಳೆ… ಸಿದ್ದು ಗೌಡ ನಾನು ನಿಮ್ಮ ಮನಗೆ ಬರ್ತಿನಿ ಆದ್ರೆ ನನಗೆ ಮಟನ್ ಸಾಂಬಾರ್, ಬಿಯರ್ ಬೇಕು ನಾನು ನಿನ್ನ ಜೊತೆ ಮಜಾ ಮಾಡಬೇಕು ಎಂದು ಬೇಡಿಬೇಡಿಕೆ ಇಟ್ಟಿದ್ದಾನೆ..

ಇದಕ್ಕೆ ಒಪ್ಪುವಂತೆ ಮಾಡಿದ ಯುವತಿ ಅವನನ್ನು ಕೆರೆಸಿಕೊಂಡಿದ್ದಾಳೆ ಕರ್ನಾಟಕ ನವ ನಿರ್ಮಾಣ ವೇದಿಕೆಗೆ ಕರೆ ಮಾಡಿ ಸಹಾಯ ಕೊರಿದ್ದಾಳೆ ವೇದಿಕೆಯು ಯುವತಿಯ ಸಹಾಯಕ್ಕೆ ಧಾವಿಸಿ ಅವನನ್ನು ಬಸವೇಶ್ವರ ನಗರ ಹೋಟೆಲ್ ಗೆ ಕೆರೆಸಿ ಅವನಿಗೆ ಧರ್ಮದೆಟು ನೀಡಿ ನಂತರ ಅವನನ್ನು ಬಸವೇಶ್ವರ ನಗರ ಪೋಲಿಸರಿಗೆ ಒಪ್ಪಿಸಿದ್ರು…

LEAVE A REPLY

Please enter your comment!
Please enter your name here