Home Crime ಫೇಸ್‌ಬುಕ್‌ನಲ್ಲಿ ಹುಡುಗಿ ಹೆಸರಲ್ಲಿ ನಕಲಿ ಅಕೌಂಟ್, ಮಾಡ್ಯುಲೇಶನ್ ಆಪ್ ಸಹಾಯದಿಂದ ಹುಡುಗಿಯಂತೆ ಮಾತನಾಡಿ ಸಿಕ್ಕ...

ಫೇಸ್‌ಬುಕ್‌ನಲ್ಲಿ ಹುಡುಗಿ ಹೆಸರಲ್ಲಿ ನಕಲಿ ಅಕೌಂಟ್, ಮಾಡ್ಯುಲೇಶನ್ ಆಪ್ ಸಹಾಯದಿಂದ ಹುಡುಗಿಯಂತೆ ಮಾತನಾಡಿ ಸಿಕ್ಕ ಸಿಕ್ಕವರಿಗೆ ರಿಕ್ವೆಸ್ಟ್ ಕಳಿಸಿ ಹಾಕ್ತಿದ್ದ ಟೋಪಿ…

699
0
SHARE

ಯುವತಿಯರೇ ಮಹಿಳೆಯರೇ ಫೇಸ್‌ಬುಕ್ ನಲ್ಲಿ ಬರೋ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ಎಚ್ಚರವಿರಲಿ.ಹುಡುಗಿ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡುವ ಪುರುಷರು ಬ್ಲ್ಯಾಕ್ ಮಾಡುವ ಸಾಧ್ಯತೆಗಳಿವೆ.

ಹೀಗೆ ಯುವತಿಯರ ವೈಯಕ್ತಿಕ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆಸಾಮಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಮಾಡ್ಯುಲೇಶನ್ ಆಪ್ ಸಹಾಯದಿಂದ ಹುಡುಗಿಯಂತೆ ಮಾತನಾಡಿ ಯುವತಿಯರನ್ನು ನಂಬಿಸುತ್ತಿದ್ದದ್ದು ಬಹಿರಂಗವಾಗಿದೆ.ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ , ವಾಟ್ಸಾಪ್ ಅಂತ ಸಾಮಾಜಿಕ ಜಾಲತಾಣಗಳನ್ನ ಬಳಸಿ ಹೊಸ ಹೊಸ ಸ್ನೇಹಿತರನ್ನ ಮಾಡ್ಕೊಳ್ಳೋದು ತುಂಬಾನೇ ಕಾಮನ್. ಅದರಲ್ಲೂ ತಾನಾಗೆ ಯಾರಾದ್ರು ಹುಡುಗೀರು ರಿಕ್ವೇಸ್ಟ್ ಕಳುಸಿದ್ರಂತೂ ಹುಡುಗರು ಯೋಚನೆ ಮಾಡದೆ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ತಾರೆ. ಇಲ್ಲೊಬ್ಬ ಭೂಪ ಇದನ್ನ ಬಂಡವಾಳ ಮಾಡಿಕೊಂಡು ಹಣ ಮಾಡಲು ಹೊರಟು ಪೋಲೀಸ್ರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಈ ಪೋಟೋದಲ್ಲಿರುವ ವ್ಯಕ್ತಿಯನ್ನೊಮ್ಮೆ ನೋಡಿ. ಈತನ ಹೆಸ್ರು ಪ್ರಖ್ಯಾತ್. ಮೂಲತಹ ತುಮಕೂರಿನ ಶಿರಾದ  ಕೆಎಚ್ ಬಿ ಕಾಲೋನಿಯ ನಿವಾಸಿ. ಫೇಸ್ ಬುಕ್, ಇನ್ಸ್ಟಾ ಗ್ರಾಮ್, ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಚೆಂದ ಚೆಂದದ ಹುಡುಗಿಯರ ಪೋಟೋ ಹಾಕಿ ಅಕೌಂಟ್ ಕ್ರಿಯೆಟ್ ಮಾಡ್ತಿದ್ದ. ಹೀಗೆ ಅಕೌಂಟ್ ಕ್ರಿಯೆಟ್ ಮಾಡೋ ಈತ , ನಂತರ ಹುಡುಗರಿಗೆ ರಿಕ್ವೆಸ್ಟ್  ಕಳುಹಿಸ್ತಿದ್ದ. ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋ ಹುಡುಗರ ಜೊತೆ ವಾಯ್ಸ್ ಮಾಡ್ಯಲೇಶನ್ ಮಾಡೊ ಆಪ್ ಬಳಸಿ ಸಲುಗೆಯಿಂದ ಮಾತನಾಡುತ್ತಿದ್ದ. ನಂತರ ಅವರ ವ್ಯಯಕ್ತಿಕ ಪೋಟೋಗಳನ್ನ ಸಂಗ್ರಹಿಸಿ ಅದನ್ನ ಕುಟುಂಬಸ್ಥರಿಗೆ ಹಾಗೂ ಹಲವು ಸಾಮಾಜಿಕ ಅಪ್ ಲೋಡ್ ಮಾಡುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ.

ಇನ್ನೂ ಈ ಪ್ರಖ್ಯಾತ್ ಈ ಹಿಂದೆ ಕೋಳಿ ಅಂಗಡಿ ಇಟ್ಟುಕೊಂಡಿದ್ದ. ಕುದುರೆ ಜೂಜಿನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಇಂದೊಮ್ಮೆ ಸ್ನೇಹಿತನಿಗೆ ವಾಯ್ಸ್ ಮಾಡುಲೇಶನ್ ಆ್ಯಪ್ ಬಳಸಿ ಹುಡುಗಿಯಂತೆ ಯಾಮಾರಿಸಿದ್ದ. ಇದನ್ನೆ ಬಂಡವಾಳ ಮಾಡಿಕೊಂಡು ಕೃತ್ಯವೆಸಗುತ್ತಿದ್ದದ್ದು ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನ ಬಂಧಿಸಿದ್ದು , ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್ ಹಾಗೂ 2 ಲಕ್ಷ ಹಣವನ್ನ ವಶಪಡಿಸಿಕೊಂಡಿದ್ದಾರೆ..

ಅದೇನೆ ಇರ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜೊತೆ ಸಲುಗೆಯಿಂದ ಮಾತನಾಡುವ ಮುನ್ನ ಸ್ವಲ್ಪ ಎಚ್ಚರದಿಂದಿದ್ರೆ ಇಂತಹ ವಂಚಕರ ಜಾಲಕ್ಕೆ ಬೀಳುವುದನ್ನ ತಡೆಯಬಹುದು.

LEAVE A REPLY

Please enter your comment!
Please enter your name here