Home Crime ಫೇಸ್ ಬುಕ್‌‌ನಲ್ಲಿ ಚಾಟಿಂಗ್ ಮಾಡೋ ಮುನ್ನ ಎಚ್ಚರ..!!! ಪ್ರೀತಿ ಹೆಸರಲ್ಲಿ ಯುವಕರಿಗೆ ಗಾಳ ಹಾಕ್ತಾಳೆ ಚಾಲಾಕಿ...

ಫೇಸ್ ಬುಕ್‌‌ನಲ್ಲಿ ಚಾಟಿಂಗ್ ಮಾಡೋ ಮುನ್ನ ಎಚ್ಚರ..!!! ಪ್ರೀತಿ ಹೆಸರಲ್ಲಿ ಯುವಕರಿಗೆ ಗಾಳ ಹಾಕ್ತಾಳೆ ಚಾಲಾಕಿ ಚಿನಕುರುಳಿ…

4414
0
SHARE

ಇಂದಿನ ಯುವ ಫೀಳಿಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ನಲ್ಲಿ ಕಳೆದುಹೋಗಿದೆ. ಫೇಸ್ ಬುಕ್ಕೆ ಜೀವನ ಅಂದ್ಕೊಂಡು ಅದರಲ್ಲಿ ಕಾಣೋ ಅಂದದ ಹುಡುಗಿಯರ ಸ್ನೇಹ ಬೆಳೆಸಿ ಲವ್ವು-ಗಿವ್ವು ಅಂತ ಯಾಮಾರಿದವ್ರೇ ಹೆಚ್ಚು. ಇಲ್ಲೊಬ್ಬ ಯುವಕ ಕೂಡ ಇದೇ ಫೇಸ್ ಬುಕ್ ಲವ್ವಲ್ಲಿ ಬಿದ್ದು, ಲಕ್ಷ ಲಕ್ಷ ಹಣ ಕಳ್ಕೊಂಡು ಇದೀಗ ಮೂರು ನಾಮ ಹಾಕೊಂಡಿದ್ರೆ.. ಫೇಸ್ ಬುಕ್‌ನ ವಂಚಕಿ ಅಂದರ್ ಆಗಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಫೇಸ್ ಬುಕ್ ಮಯ ಆಗ್ಬಿಟ್ಟಿದೆ. ಆಲ್ ಮೋಸ್ಚ್ ಯಾವುದೇ ಲವರ್ಸ್‌ನ ನೀವು ಮೊದಲು ಎಲ್ಲಿ ಭೇಟಿಯಾಗಿದ್ದು ಎಂದು ಕೇಳಿದ್ರೆ ಫೇಸ್ ಬುಕ್‌ನಲ್ಲಿ ಅಂತಾರೆ. ಅಷ್ಟರ ಮಟ್ಟಿಗೆ ಫೇಸ್ ಬುಕ್ ಲವರ್ಸ್‌ಗಳಿಗೆ ಯೂಸ್ ಆಗ್ತಾ ಇದೆ. ಹೇಳ್ಬೇಕು ಅಂದ್ರೆ ಒಂಥರಾ ಪ್ರೀತಿಯ ಸೇತುವೆ ಇದ್ದ ಹಾಗೆ. ಲವ್ ಆದ್ರೂ ಫೇಸ್‌ಬುಕ್ ನಲ್ಲೇ ಬ್ರೇಕ್ ಅಪ್ ಆದ್ರೂ ಫೇಸ್ ಬುಕ್‌ನಲ್ಲೇ…

ಇನ್ನೂ ಹೇಳ್ಬೇಕು ಅಂದ್ರೆ ವಂಚಿಸಿ ಹಣ ಮಾಡ್ಕೊಳ್ಳೋರಿಗೆ ಫೇಸ್ ಬುಕ್ ಬ್ಯುಸಿನೆಸ್ ಪಾಯಿಂಟ್ ಆಗಿದೆ. ಪ್ರೀತಿ ಹೆಸರಲ್ಲಿ ಯುವತಿಯರು ಯುವಕರನ್ನಾ ಬಕ್ರಾ ಮಾಡಿ ಹಣ ಪೀಕಿಸಿ ನಂತರ ಜೂಟ್ ಆಗ್ತಾರೆ, ಇದೇ ರೀತಿ ಕುಂದಾನಗರಿಯಲ್ಲೊಂದು ಘಟನೆ ನಡೆದಿದೆ.ಹೀಗೆ ಸುಮಾ, ಸುಷ್ಮಾ, ಗೀತಾ, ಗಾನವಿ ಅಂತ ಫೇಸ್‌ಬುಕ್‌ನಲ್ಲಿ ಹತ್ತಾರು ಹೆಸರಿಡ್ಕೊಂಡು ಪ್ರೀತಿ ಗೀತಿ ಅಂತಾ ನಮ್ ಯಂಗ್ ಎನರ್ಜಿಟಿಕ್ ಹುಡುಗರಿಗೆ ಆಕಾಶದಲ್ಲಿ ನಕ್ಷತ್ರ ತೋರಿಸೋ ಈಕೆ ಹೆಸರು ರೂಪಾ ಪಾಟೀಲ್, ವಯಸ್ಸು 36 ವರ್ಷ.

ಫೆೇಸ್ ಬುಕ್‌ನಲ್ಲಿ ಯುವಕರನ್ನೇ ಟಾರ್ಗೆಟ್ ಮಾಡಿ ಮೊದಲು ಹಾಯ್ ಬಾಯ್ ಅಂತಾ ಚಾಟಿಂಗ್ ಮಾಡಿ ನಂತರ ಲವ್ ಗಿವ್ವ್ ಅಂತಾ ಬುರುಡೆ ಬಿಡ್ತಿದ್ಲು. ನಮ್ ಹುಡುಗ್ರಿಗೋ ಇಷ್ಟೇ ಸಾಕು ಹಿಂದೂ ಮುಂದೂ ನೋಡ್ದೆ ಫೇಸ್ ಬುಕ್ ಬಾಲೆಗೋಸ್ಕರ ಸರ್ವವನ್ನು ತ್ಯಾಗ ಮಾಡಲು ರೆಡಿ ಇರ್ತಾರೆ. ಇದನ್ನೇ ಫ್ಲೇ ಕಾರ್ಡ್ ಮಾಡಿಕೊಂಡ ಖತರ್ನಾಕ್ ರೂಪಾ ಪ್ರೀತಿ ಹೆಸರಲ್ಲಿ ಹಲವು ಯುವಕರ ಬಳಿ ಲಕ್ಷ ಲಕ್ಷ ಹಣ ಪೀಕಿಸಿ ವಂಚಿಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

ಹೀಗೆ ವಂಚಕಿ ರೂಪಾ ಫೇಸ್ ಬುಕ್ ಗೀಳಿಗೆ ಅಂಟಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸಂತೋಷ ಎಂಬ ಯುವಕ ಈಕೆಯನ್ನು ಭಗ್ನ ಪ್ರೇಮಿಯಂತೆ ಪ್ರೀತಿಸಿ ಆಕೆಗೆ ಲಕ್ಷ ಲಕ್ಷ ಹಣ ನೀಡಿದ್ದಾನೆ. ಅಷ್ಟೆ ಅಲ್ಲದೆ ಆಕೆಯ ಪ್ರೀತಿಯ ಹುಚ್ಚಿಗೆ ಈ ಸಂತೋಷ ಒಂದು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದನು. ಇದೀಗ ಈ ನಯವಂಚಕಿಯ ಬಣ್ಣ ಬಯಲಾಗಿದ್ದು, ಬೆಳಗಾವಿಯ ಎಸ್ಪಿ ಕಚೇರಿ ಬಳಿ ಸಿಕ್ಕ ವಂಚಕಿ ರೂಪಾ ಪಾಟೀಲಳನ್ನ, ವಂಚನೆಗೊಳಗಾದ ಸಂತೋಷ ಸೇರಿದಂತೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು, ಬೆಳಗಾವಿಯ ಮಾರ್ಕೇಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ವಂಚಕಿ ರೂಪಾ ವಿರುದ್ದ ಪ್ರಕರಣ ದಾಖಲಿಸಿಕೊಂಡ ಬೆಳಗಾವಿಯ ಮಾರ್ಕೆಟ್ ಪೊಲೀಸರು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನ ಹುಕ್ಕೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ. ಸದ್ಯ ಫೇಸ್ ಬುಕ್ ವಂಚನೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಂತಹ ಸ್ಟೋರಿಗಳನ್ನು ನೋಡಿದ ಮೇಲಾದ್ರು ಯುವಕರು ಎಚ್ಚೆತ್ತುಕೊಳ್ಳಬೇಕಿದೆ…

LEAVE A REPLY

Please enter your comment!
Please enter your name here