Home Crime ಫೇಸ್ ಬುಕ್ ನಲ್ಲಿ “ಫ್ಯಾಮಿಲಿ ಕರ್ಕೊಂಡು ದೇವಸ್ಥಾನಾಕ್ಕೆ ಹೋಗ್ತಿದ್ದೀನಿ” ಅಂತಾ ಸ್ಟೇಟಸ್ ಹಾಕಿದ್ದರಿಂದ ಮನೆ ಗುಡಿಸಿ...

ಫೇಸ್ ಬುಕ್ ನಲ್ಲಿ “ಫ್ಯಾಮಿಲಿ ಕರ್ಕೊಂಡು ದೇವಸ್ಥಾನಾಕ್ಕೆ ಹೋಗ್ತಿದ್ದೀನಿ” ಅಂತಾ ಸ್ಟೇಟಸ್ ಹಾಕಿದ್ದರಿಂದ ಮನೆ ಗುಡಿಸಿ ಗುಂಡಾಂತರ ಮಾಡಿದ್ದಾರೆ ಕಳ್ಳರು. ಸ್ಟೇಟಸ್‌ಗೂ-ಕಳ್ಳತನಕ್ಕೂ ಏನ್ ಸಂಬಂಧ..?! ಸ್ಟೋರಿ ಓದಿ…

2119
0
SHARE

ಫೇಸ್ ಬುಕ್ ನಲ್ಲಿ ಇನ್ಯಾವತ್ತು ಕುಟುಂಬ ಸಮೇತವಾಗಿ ಊರಿಗೆ ಹೋಗ್ತೀನಿ, ಗಂಡ ಮಕ್ಕಳ ಜೊತೆ ಟೂರ್ ಗೆ ಹೋಗ್ತಿದ್ದೀನಿ.. ಫ್ಯಾಮಿಲಿ ಕರ್ಕೊಂಡು ದೇವಸ್ಥಾನಾಕ್ಕೆ ಹೋಗ್ತಿದ್ದೀನಿ ಅಂತಾ ಸ್ಟೇಟಸ್ ಹಾಕಿ ಕಳ್ಳರಿಗೆ ದಾರಿ ಮಾಡಕೊಡ್ಬೇಡಿ ಬೆಂಗಳೂರಿಗರೇ…ಈಗ ಕಳ್ಳರು ಮನೆ ಕಳ್ಳತನ ಮಾಡೋದಕ್ಕೆ ಮನೆ ಮನೆ ಹುಡ್ಕುತ್ತಿಲ್ಲ…

ನಿಮ್ಮ ಫೇಸ್ ಬುಕ್ ಸ್ಟೇಟಸ್ ಗಳನ್ನಾ ಫಾಲೋ ಮಾಡ್ತಿದ್ದಾರೆ. ಅಕಸ್ಮಾತ್ ಏನಾದ್ರೂ ನೀವು ಊರಿಗೆ ಹೋಯ್ತಿದ್ದೀನಿ ಅಂತಾ ಸ್ಟೇಟಸ್ ಹಾಕಿಕೊಂಡ್ರೆ ನಿಮ್ಮ ಮನೆ ಕ್ಲೀನ್ ಕೃಷ್ಣಪ್ಪ ಆಗೋದು ಗ್ಯಾರೆಂಟಿ. ಯಾಕೆಂದ್ರೆ ಕಳ್ಳರೀಗ ಫೇಕ್ ಅಕೌಂಟ್ ಗಳನ್ನಾ ಕ್ರಿಯೇಟ್ ಮಾಡ್ಕೊಂಡು ನಿಮ್ಮ ಜೊತೆ ಫೇಸ್ ಬುಕ್ ಫ್ರೆಂಡ್ಸ್ ಗಳಾಗಿ ಇರ್ತಾರೆ….

ಅಕಸ್ಮಾತ್ ಸ್ಟೇಟಸ್ ನಲ್ಲಿ ಏನಾದ್ರೂ ಮನೆ ಬೀಗ ಹಾಕೊಂಡು ಹೋಗ್ತಿದ್ದೀರಾ ಅಂತಾ ಏನಾದ್ರೂ ಟಿಪ್ಸ್ ಕೊಟ್ರೆ ಮುಗಿದೇ ಹೋಯ್ತು ನಿಮ್ಮ ಕಥೆ..ಬೆಂಗಳೂರಿನ ಆರ್.ಟಿ.ನಗರದಲ್ಲಿ ಪ್ರೇಮ ಲತಾ ಅನ್ನೋರು ಫ್ಯಾಮಿಲಿ ಜೊತೆ ತಮಿಳುನಾಡಿನ ಊರಿಗೆ ಹೋಗ್ತಿದ್ದೀನಿ ಅಂತಾ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ರು….

ಎರಡು ದಿನ ಬಿಟ್ಟು ಬಂದು ನೋಡಿದ್ರೆ ಮನೆಯನ್ನಾ ಗುಡ್ಸಿ ಗುಂಡಾತರ ಮಾಡಿದ್ದಾರೆ ಕಳ್ಳರು. ಫೇಸ್ ಬುಕ್ ನಲ್ಲೇ ಫ್ರೆಂಡ್ ಆಗಿರೋ ಕಳ್ರು ಮನೆಯನ್ನಾ ದೋಚಿ ಸಗಣಿ ಸಾರ್ಸಿ ರಂಗೋಲಿ ಇಟ್ಟು ಹೋಗವ್ರೇ…ಸದ್ಯ ಪ್ರೇಮಲತಾ ಅವರು ಸಾರ್ ಸ್ಟೇಟಸ್ ಹಾಕಿದ್ದು ನೋಡಿ ಯಾರೋ ಕಳ್ಳತನ ಮಾಡ್ಕೊಂಡು ಹೋಗವ್ರೇ ಅಂತಾ ಆರ್.ಟಿನಗರ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಕೊಟ್ಟಿದ್ದಾರೆ…

LEAVE A REPLY

Please enter your comment!
Please enter your name here