Home Cinema ಫ್ಯಾನ್ಸ್‌ಗೆ ಒಂದೇ ದಿನ 2 ಸ್ವೀಟ್ ನ್ಯೂಸ್ ಕೊಟ್ಟರಲ್ಲ ತಲೈವಾ ರಜಿನಿಕಾಂತ್.! ವ್ಹಾ ವ್ಹಾ..! ಪಿಟ್ಟಾ...

ಫ್ಯಾನ್ಸ್‌ಗೆ ಒಂದೇ ದಿನ 2 ಸ್ವೀಟ್ ನ್ಯೂಸ್ ಕೊಟ್ಟರಲ್ಲ ತಲೈವಾ ರಜಿನಿಕಾಂತ್.! ವ್ಹಾ ವ್ಹಾ..! ಪಿಟ್ಟಾ ಹಾರಾಟಕ್ಕೆ ಅಭಿಮಾನಿಗಳ ದಿಲ್ ಖುಷ್ ಹುವಾ..!

400
0
SHARE

ಸೂಪರ್ ಸ್ಟಾರ್ ರಜಿನಿಕಾಂತ್, ತಲೈವಾ ರಜಿನಿಕಾಂತ್ ನೋಡಲು ಅಭಿಮಾನಿಗಳು ಕಣ್ಣಿಗೆ ಎಣ್ಣೆಬಿಕ್ಟೊಂಡು ಕಾಯ್ತಾರೆ…ರಜಿನಿಯ ಅಂದ್ರೆ ಸಾಕು ಅಂತ ಹಾತೋರೆಯುತಿರುತ್ತಿರೊ ಅಭಿಮಾನಿಗಳು ಅದೆಷ್ಟೊಮಂದಿ ಇದ್ದಾರೆ…ಅಂತಾದ್ರಲ್ಲಿ ತಲೈವಾ ದಿಡೀರನೆ ತೆರೆಮೇಲೆ ಬಂದ್ರೆ ಕೇಳ್ಬೇಕಾ…ಅಬ್ಬಾ..ಅವ್ರ ಖುಷಿಯೆ ಪಾರವೆ ಇಲ್ಲ..ಸದ್ಯ ಆಗಿರೋದು ಅದೆ.. ಅಭಿಮಾನಿಗಳ ಪ್ರೀತಿಯ ಆರಾಧ್ಯ ದೈವ ರಜಿನಿ ದಿಡೀರನೆ ಚಿತ್ರಾಭಿಮಾನಿಗಳ ಮುಂದೆ ಬಂದಿದ್ದು ನೋಡಿ ಅಭಿಮಾನಿಗಳು ಒಮ್ಮೆಗೆ ಶಾಕ್ ಆಗಿದ್ದಾರೆ…ಅದೂ ಪಕ್ಕಾ ಲೋಕಲ್ ರಜಿನಿಯಾಗಿ ಪಿಟ್ಟಾನ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ..

ಹೌದು, ರಜಿನಿಕಾಂತ್ ಅಭಿನಯದ ಬಹುನಿರೀಕ್ಷೆಯ ಪಿಟ್ಟಾ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಜಾತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..ಪಿಟ್ಟಾ ಅವತಾರದಲ್ಲಿ ರಜಿನಿಯನ್ನು ನೋಡೋದೆ ಒಂದು ಅಭಿಮಾನಿಗಳಿಗೆ ದೊಡ್ಡ ಸಂಭ್ರಮ..ದೊಡ್ಡ ಬಾಗಿಲು ತೆರೆದು ಚರ್ಚ್ ಒಳಗೆ ಎಂಟ್ರಿ ಕೊಡುವ ರಜಿನಿ ನೋಡಿ ಅಭಿಮಾನಿಗಳು ಕಣ್ತುಂಬಿಕೊಳ್ಳುತಿದ್ದಾರೆ.. ಉರಿಯುತ್ತಿರುವ ಕ್ಯಾಂಡಲ್ ಹಿಡಿದು ಬರುವ ರಜಿನಿ ಸ್ಟೈಲ್ ಅಂಡ್ ವಾಕ್‌ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ…

ಇತ್ತೀಚಿಗೆ ಕಬಾಲಿ ಮತ್ತು ಕಾಲ ಅಂತಹ ಡಾನ್ ಪಾತ್ರಗಳಲ್ಲಿ ಅಬ್ಬರಿಸಿದ್ದ ರಜಿನಿ ಈಗ ಪಿಟ್ಟಾ ಮೂಲಕ ಪಂಟರ್ ಆಗಿ ಮತ್ತಷ್ಟು ಸ್ಟೈಲೀಶ್ ಆಗಿ ಬರ್ತಿರೋದು ರಜಿನಿಯನ್ನ ಕಣ್ತುಂಬಿಕೊಂಡು ಆನಂದಿಸುತಿದ್ದಾರೆ ಅಭಿಮಾನಿಗಳು.ಅಂದಹಾಗೆ ಪಿಟ್ಟಾ, ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಸಾರಥ್ಯದಲ್ಲಿ ಮೂಡಿಬಂದಿರೊ ಚಿತ್ರ..ಸುಬ್ಬರಾಜ್ ರಜಿನಿಯ ಅಪ್ಪಟ ಅಭಿಮಾನಿ…ಅಂದ್ಮೇಲೆ ಅಭಿಮಾನಿಗಳು ಇಷ್ಟಪಡೊ ಎಲ್ಲಾ ಅಂಶಗಳು ಪಿಟ್ಟಾದಲ್ಲಿರುತ್ತೆ ಅನ್ನೋದು ಚಿತ್ರಾಭಿಮಾನಿಗಳ ಬಯಕೆ..

ಇನ್ನು ವಿಶೇಷ ಅಂದ್ರೆ ಈಗಾಗಲೆ ಪಿಟ್ಟಾ ಸಿನಿಮಾದ ಚಿತ್ರೀಕರಣ ಸಹ ಶುರುವಾಗಿದ್ದು ಸೈಲೆಂಟ್ ಆಗೆ ಸಾಕಷ್ಟು ಭಾಗ ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ..ಕಳೆದ ಮೂರು ತಿಂಗಳಿಂದ ಉತ್ತರ ಭಾರತದ ಸುಂದರತಾಣಗಳಾದ ಡಾರ್ಜಿಲಿಂಗ್, ಡೆಹ್ರಡೂನ್ ಸೇರಿದಂತೆ ಸಾಕಷ್ಟು ಭಾಗಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿರೊ ಚಿತ್ರತಂಡ ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿದೆ..ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ದೊಡ್ಡ ದೊಡ್ಡ ಕಲಾವಿದರ ದಂಡೆ ಇದೆ..ವಿಜಯ್ ಸೇತುಪತಿ, ನವಾಜುದ್ದೀನ್ ಸಿದ್ದಕ್ಕಿ, ಸಿಮ್ರನ್ ಮತ್ತು ತ್ರಿಶಾ ಸೇರಿದಂತೆ ದೊಡ್ಡ ತಾರಾಬಳಗವೆ ಚಿತ್ರದಲ್ಲಿದೆ..

ಒಂದೆಡೆ ಪಿಟ್ಟಾನ್ನು ನೋಡಿ ಅಭಿಮಾನಿಗಳು ಕುಣಿದುಕುಪ್ಪಳಿಸುತಿದ್ರೆ ಮತ್ತೊಂದೆಡೆ ಚಿಟ್ಟಿ ಅವತಾರದಲ್ಲಿ ದರ್ಶನ ನೀಡಲು ರಜಿನಿ ಸಜ್ಜಾಗಿದ್ದಾರೆ..ಯೆಸ್, ಇಡೀ ವಿಶ್ವವೆ ಕಾತುರದಿಂದ ಕಾಯ್ತಿರುವ ೨.೦ ಚಿತ್ರದ ಟೀಸರ್ ರಿಲೀಸ್‌ಗೆ ಸಮಯ ನಿಗದಿಯಾಗಿದೆ..ಈ ಮೂಲಕ ಸೂಪರ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಕ್ಕಂತಾಗಿದೆ..ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮತ್ತು ತಲೈವಾ ರಜಿನಿಕಾಂತ್ ಅಭಿನಯದ ೨.೦ ಸಿನಿಮಾ ಹುಟ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ…

ಜಾತಕ ಪಕ್ಷಿಯಂತೆ ಕಾಯುತ್ತಿರುವ ಅಭಿಮಾನಿಗಳಿಗೆ ೨.೦ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ..ಬಹುನಿರೀಕ್ಷೆಯ ಚಿತ್ರದ ಟೀಸರ್‌ನ್ನು ಗಣಪತಿ ಹಬ್ಬಕ್ಕೆ ಗಿಫ್ಟಾಗಿ ನೀಡುತ್ತಿದೆ ಚಿತ್ರತಂಡ..ಯೆಸ್, ಇದೆ ತಿಂಗಳು ಅಂದ್ರೆ ೧೩ರಂದು ಚಿತ್ರದ ಟೀಸರ್ ಚಿತ್ರಾಭಿಮಾನಿಗಳ ಮುಂದೆ ಬರಲಿದೆ..ಈ ಬಗ್ಗೆ ಸ್ವತಹ ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ..

ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ೨.೦ ಚಿತ್ರಕ್ಕೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ..ಕೊಟಿ ಕೋಟಿ ವ್ಯಚ್ಚದಲ್ಲಿ ತಯಾರಾಗುತ್ತಿರುವ ೨.೦ ನೋಡಲು ಚಿತ್ರರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ..ಆದ್ರೆ ಸಿನಿಮಾ ಯಾವತ್ತು ರಿಲೀಸ್ ಆಗುತ್ತೆ ಅಂತ ತುಟಿ ಬಿಚ್ಚದ ಚಿತ್ರತಂಡ ಸದ್ಯ ಟೀಸರ್ ರಿಲೀಸ್ ಮೂಲಕ ಎಂಟ್ರಿ ಕೊಡ್ತಿದ್ದಾರೆ..ಒಟ್ನಲ್ಲಿ ಒಂದೆ ದಿನ ಎರೆಡೆರಡು ಸಿಹಿ ಸುದ್ದಿಗಳನ್ನು ಕೇಳಿ ತಲೈವ ಅಭಿಮಾನಿಗಳು ಲುಂಗಿ ಡ್ಯಾನ್ಸ್ ಮಾಡ್ತಿದ್ದಾರೆ…

LEAVE A REPLY

Please enter your comment!
Please enter your name here