Home Crime ಬಗೆದಷ್ಟು ಹೊರಬರುತ್ತಿದೆ ಬಿಲ್ಡರ್ ಪ್ರಸಾದ್‌ನ ಕರ್ಮಕಾಂಡ..!? ಅಕ್ರಮ ಬಯಲು ಮಾಡಿದ ಪ್ರಜಾ ಟಿವಿ ವರದಿಗೆ ಹೈಕೋರ್ಟ್...

ಬಗೆದಷ್ಟು ಹೊರಬರುತ್ತಿದೆ ಬಿಲ್ಡರ್ ಪ್ರಸಾದ್‌ನ ಕರ್ಮಕಾಂಡ..!? ಅಕ್ರಮ ಬಯಲು ಮಾಡಿದ ಪ್ರಜಾ ಟಿವಿ ವರದಿಗೆ ಹೈಕೋರ್ಟ್ ಶ್ಲಾಘನೆ…

1793
0
SHARE

ಭ್ರಷ್ಟರ ವಿರುದ್ಧ ಪ್ರಜಾ ಟಿವಿಯ ಹೋರಾಟ ಮುಂದುವರೆದಿದೆ. ದಲಿತರ ಶೋಷಕ ಕೆ.ವಿ. ಪ್ರಸಾದ್ ವಿರುದ್ಧ ಪ್ರಜಾ ಟಿವಿ ಹೋರಾಟವನ್ನೇ ನಡೆಸಿತ್ತು. ಇದೀಗ ಸಿಟಿಸಿವಿಲ್ ಕೋರ್ಟ್ ಕೂಡಾ ಪ್ರಜಾ ಟಿವಿಯ ವರದಿಯನ್ನ ಶ್ಲಾಘಿಸಿದೆ. ಬಿಲ್ಡರ್ ಕೆ.ವಿ. ಪ್ರಸಾದ್ ಸರ್ಜಾಪುರ ರಸ್ತೆಯಲ್ಲಿರೋ ಮುಳ್ಳೂರಿನಲ್ಲಿ ದಲಿತರಿಗೆ ಹಂಚಿಕೆಯಾಗಬೇಕಿದ್ದ 14 ಎಕರೆ ಭೂಮಿಯನ್ನ ವಂಚಿಸಿದ್ದ.

ಈ ಬಗ್ಗೆ ಪ್ರಜಾ ಟಿವಿ ನಿರಂತರ ವರದಿ ಪ್ರಸಾರ ಮಾಡಿತ್ತು. ಪ್ರಜಾ ಟಿವಿ ವರದಿ ಪ್ರಸಾರ ಮಾಡ್ತಿದ್ದ ಹಾಗೆ ಪ್ರಸಾದ್ ನ ಬಂಡವಾಳ ಹೊರಗೆ ಬರೋದಕ್ಕೆ ಶುರುವಾಗಿತ್ತು. ಹೀಗಾಗಿ ವರದಿ ನಿಲ್ಲಿಸುವಂತೆ ಪ್ರಸಾದ್ ಕೋರ್ಟ್ ಮೆಟ್ಟಿಲೇರಿದ್ದ. ಅಲ್ಲದೆ ‌ಕೋರ್ಟ್‌ಗೂ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ. ಪ್ರಸಾದ್ ಸಲ್ಲಿಸಿದ್ದ ದಾಖಲೆಗಳನ್ನ ಪರಿಶೀಲಿಸಿದ ಸಿಟಿಸಿವಿಲ್ ಕೋರ್ಟ್, ಮೇಲ್ನೋಟಕ್ಕೆ ಪ್ರಸಾದ್ ದಲಿತರಿಗೆ ವಂಚನೆ ಮಾಡಿರೋದು ಸ್ಪಷ್ಟವಾಗಿದೆ.

ಹೀಗಾಗಿ ವರದಿ ನಿಲ್ಲಿಸಲು ತಡೆ ನೀಡಲು ನಿರಾಕರಿಸಿದೆ. ಅಲ್ಲದೆ ಸರ್ಕಾರಿ ಕಚೇರಿಗಳಲ್ಲೇ ಇಲ್ಲದ ದಾಖಲೆಗಳು ಪ್ರಸಾದ್ ಗೆ ಹೇಗೆ ಸಿಕ್ಕಿದೆ ಅನ್ನೋದರ ಬಗ್ಗೆಯೂ ಕೋರ್ಟ್ ಅನುಮಾನ ವ್ಯಕ್ತಪಡಿಸಿದೆ. ಕೇವಲ ಜೆರಾಕ್ಸ್ ಕಾಪಿ ಇಟ್ಕೊಂಡು 337 ಜನ ದಲಿತರಿಗೆ ವಂಚಿಸಿರುವ ಪ್ರಸಾದ್ ವಿರುದ್ಧ ಸಿಟಿಸಿವಿಲ್ ಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ.

ಇನ್ನು ಈ ಬಗ್ಗೆ ನಮ್ಮ ಪ್ರತಿನಿಧಿ ಗಣೇಶ್ ವಕೀಲ ಪ್ರಕಾಶ್ ಜೊತೆ ನಡೆಸಿರೋ ಚಿಟ್ ಚಾಟ್ ಇಲ್ಲಿದೆ.
ಕೆವಿ ಪ್ರಸಾದ ವಿರುದ್ಧದ ದಲಿತರ ಅಕ್ರಮ ಭೂಕಬಳಿಕೆ ಪ್ರಕರಣ ಪ್ರಸಾದ್ ವಿರುದ್ಧದ ಸುದ್ದಿ ಪ್ರಸಾರಕ್ಕೆ ಮಧ್ಯಂತರ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ…ಅರ್ಜಿ ವಜಾಗೊಳಿಸಿದ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಲಯ.

ಪ್ರಜಾ ಟಿವಿ ಭೂ ಕಬಳಿಕೆಯ ಬಗ್ಗೆ ಸಮಗ್ರ ವರದಿ ಮಾಡುತ್ತಿದೆ….ಮತ್ತು ವರದಿಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ….ಆದರೆ ಅರ್ಜಿದಾರರಾದ ಕೆವಿ ಪ್ರಸಾದ್ ಕೇವಲ ಮೌಖಿಕವಾದ ವಾದ ಮಂಡಿಸುತ್ತಿದ್ದಾರೆ ಹೊರತು ಪ್ರಾಥಮಿಕ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.

ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿ ಉಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ತಮ್ಮ ಕೆಲಸವನ್ನು ನಿರ್ವಹಿಸುವಾಗಸೂಕ್ತ ದಾಖಲೆಗಳು ಇಲ್ಲದೆ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.ನೀವು ಭೂ ಕಬಳಿಕೆಯ ಆರೋಪದ ಬಗ್ಗೆ ನೀವು ಮಾಡಿಲ್ಲ ಎಂದು ಸ್ಪಷ್ಟಪಡಿಸಲು ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿಲ್ಲ.

ಭ್ರಷ್ಟಾಚಾರ ಮತ್ತು ಸಾಮಾಜಿಕ ಕಳಕಳಿ ಸುದ್ದಿ ಬಿತ್ತರಿಸುವಾಗ ಮಧ್ಯಂತರ ಮಧ್ಯಂತರ ತಡೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಕೂಡ ಸಾಕಷ್ಟು ಆದೇಶಗಳಲ್ಲಿ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.ತಾವು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಸಂಪೂರ್ಣ ವಿಚಾರಣೆ ಆಗುವವರೆಗೂ..ಹಾಗೂ ಭೂ ಕಬಳಿಕೆ ತಾವು ಮಾಡಿಲ್ಲ ಎಂಬುದರ ಬಗ್ಗೆ ಸೂಕ್ತ ದಾಖಲೆ ಒದಗಿಸಿ ನಂತರ ತಡೆ ನೀಡುವ ಬಗ್ಗೆ ನ್ಯಾಯಾಲಯ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.ಮಧ್ಯಂತರ ಅರ್ಜಿ ವಜಾಗೊಳಿಸಿವಿಚಾರಣೆ ಮುಂದೂಡಿದ ಸಿಟಿ ಸಿವಿಲ್ ನ್ಯಾಯಾಲಯ.

LEAVE A REPLY

Please enter your comment!
Please enter your name here