Home District ಬಣ್ಣದ ಲೋಕದಿಂದ ತಮಿಳು ನೆಲಕ್ಕೆ ಮತ್ತೊಬ್ಬ CM..? ಸಿನಿಮಾ ಬಿಟ್ಟ ಕಮಲ್ ಮುಂದಿನ ನಡೆಯೇ “ಮಕ್ಕಳ್...

ಬಣ್ಣದ ಲೋಕದಿಂದ ತಮಿಳು ನೆಲಕ್ಕೆ ಮತ್ತೊಬ್ಬ CM..? ಸಿನಿಮಾ ಬಿಟ್ಟ ಕಮಲ್ ಮುಂದಿನ ನಡೆಯೇ “ಮಕ್ಕಳ್ ನೀಧಿ ಮೈಯಂ”…

1586
0
SHARE

ಕಮಲ್ ಹಾಸನ್ ಈ ಹೆಸರು ಕೇಳಿದ್ರೆ ಚಿತ್ರ ಪ್ರೇಮಿಗಳಿಗೆ ಒಂದು ತರಹ ಥ್ರಿಲ್ . ತಮ್ಮ ನಟನೆಯಿಂದಲೇ ಭಾರತದ ತುಂಬಾ ತಮ್ಮ ಅಭಿಮಾನಿಗಳನ್ನ ಹೊಂದಿರುವ ನಟ  ಪಾತ್ರ ಯಾವುದೇ ಇರಲಿ ಅದ್ರಲ್ಲಿ ಕಮಲ್ ನಟನೆ ಅದ್ಬುತ . ಈ ಕಾರಣದಿಂದ ತಮಿಳು ಮಾತ್ರವಲ್ಲ ವಿಶ್ವದೆಲ್ಲೆಡೆ ಕಮಲ್ ಹೆಸರು ಮಾಡಿದೆ ಈ ನಡುವೆ ಹರಿದಾಡುತ್ತಿದ್ದ ಒಂದು ಸುದ್ದಿಗೆ ಕಮಲ್ ಸ್ಪಷ್ಟನೆ ಕೊಟ್ಟಿದ್ದಾರೆ.ಹೌದು  ಜಗತ್ತಿನಾದ್ಯಂತ ಹರಡಿಕೊಂಡಿರುವ ಅಸಂಖ್ಯಾತ ಕಮಲ್ ಹಾಸನ್ ಅಭಿಮಾನಿಗಳು ಇನ್ನು ಮುಂದೆ ಅವರನ್ನು ಬೆಳ್ಳಿ ತೆರೆ ಮೇಲೆ ಮಿಸ್ ಮಾಡಿಕೊಳ್ಳಲಿದ್ದಾರೆ. ರಾಜಕೀಯಕ್ಕಾಗಿ ಕಮಲ್ ಹಾಸನ್ ಸಿನಿಮಾ ನಟನೆ ತೊರೆಯಲು ನಿರ್ಧರಿಸಿದ್ದಾರೆ.ಕಮಲ ಹಾಸನ್‌ ಅವರ ಮಾತುಗಳಲ್ಲೇ ಇಂತಹ ಸ್ಪಷ್ಟ  ಸುಳಿವು ಸಿಕ್ಕಿದೆ. ‘ಪರಿಣಾಕಾರಿ ರಾಜಕಾರಣಿ’ ಯಾಗುವ ಉದ್ದೇಶದಿಂದ ತಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ ಎಂದು ಕಮಲ್‌ ಹೇಳಿದ್ದಾರೆ.

ಮಕ್ಕಳ್‌ ನೀತಿ ಮಯ್ಯಮ್‌ (ಎಂಎನ್‌ಎಂ) ಪಕ್ಷದ ಸ್ಥಾಪಕರಾಗಿರುವ ಕಮಲ ಹಾಸನ್‌ 1996ರಲ್ಲಿ “ಇಂಡಿಯನ್‌’ ಎಂಬ ಸೂಪರ್‌ ಹಿಟ್‌ ಚಿತ್ರ ನೀಡಿದ್ದರು. ಇದೀಗ ಇಂಡಿಯನ್‌-2 ಚಿತ್ರ ಬಹುತೇಕ ಅವರ ಕೊನೆಯ ಸಿನಿಮಾ ಆಗಲಿದೆ ಎನ್ನಲಾಗಿದೆ.ನೀವೊಬ್ಬ ಪರಿಣಾಮಕಾರಿ ರಾಜಕಾರಣಿ ಯಾಗಬೇಕಿದ್ದರೆ ನೀವು ನಿಮ್ಮ ಸಂಪೂರ್ಣ ಸಮಯವನ್ನು ರಾಜಕಾರಣಕ್ಕೆ ಕೊಡಬೇಕಾಗುತ್ತದೆ. ಹಾಗಾಗಿ ನಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ” ಎಂದು ಕಮಲ ಹಾಸನ್‌ ಹೇಳಿದರು. ತಮಿಳು ಚಿತ್ರೋದ್ಯಮದಲ್ಲಿ 58 ವರ್ಷಗಳ ಕಾಲ ಒಬ್ಬ ಪ್ರತಿಭಾವಂತ ಹಾಗೂ ಯಶಸ್ವಿ ನಟನಾಗಿ ಗುರುತಿಸಿಕೊಂಡಿದ್ದ ಕಮಲ್ ಹಾಸನ್ ಅವರು ಈಗ ರಾಜಕೀಯದಲ್ಲೂ ಯಶಸ್ಸು ಕಾಣಲು ಯತ್ನಿಸುತ್ತಿದ್ದಾರೆ.ತಮಿಳುನಾಡಿನಲ್ಲಿ ರಾಜಕೀಯ ವ್ಯವಸ್ಥೆ ಸಂಪೂರ್ಣ ದುರ್ಬಲವಾಗಿದೆ ಮತ್ತು ಭ್ರಷ್ಟಗೊಂಡಿದ್ದು. ರಾಜ್ಯದಲ್ಲಿ ಮತ್ತೆ ರಾಜಕೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನನ್ನ ಕರ್ತವ್ಯವಾಗಿದೆ ಎಂದು ತಾನು ಭಾವಿಸಿರುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

ನಟನೆ ಮತ್ತು ರಾಜಕೀಯ ಎರಡನ್ನು ಯಶಸ್ವಿಯಾಗಿ ನಿಭಾಸುವುದು ಕಷ್ಟ ಮತ್ತು ಪಕ್ಷದ ಮುಖಂಡನಾಗಿ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಹೀಗಾಗಿ ಪಕ್ಷದ ಕಡೆಗೆ ಹೆಚ್ಚು ಗಮನಹರಿಸಲು ನಟನಗೆ ವಿದಾಯ ಹೇಳುತ್ತಿರುವುದಾಗಿ ಕಮಲ್ ತಿಳಿಸಿದ್ದಾರೆ.’ಹಾಗಿದ್ದರೂ ನನ್ನ ಪ್ರೊಡಕ್ಷನ್‌ ಕಂಪೆನಿ ಮುಂದುವರಿಯುತ್ತದೆ. ನನ್ನ ಬದಲು ಬೇರೊಬ್ಬರು ಅದನ್ನು ನಡೆಸುತ್ತಾರೆ” ಎಂದು 64ರ ಹರೆಯದ ನಟ-ರಾಜಕಾರಣಿ ಕಮಲ ಹಾಸನ್‌ ಅವರು  ಹೇಳಿದರು. ಇಂಡಿಯನ್‌-2 ಅಲ್ಲದೆ ಕಮಲ ಹಾಸನ್‌ ಅವರ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಅವೆಂದರೆ ಸ್ವಂತ ನಿರ್ದೇಶನದ ತ್ರಿಭಾಷಾ ಚಿತ್ರ ಶಾಬಾಷ್‌ ನಾಯ್ಡು  ಮತ್ತು ಹೆಸರಿಡದ ಇನ್ನೊಂದು ಚಿತ್ರ. ಇವುಗಳ ಬಳಿಕ ಬೇರೆ ಯಾವುದೇ ಹೊಸ ಚಿತ್ರಕ್ಕೆ ಕಮಲ ಹಾಸನ್‌ ಸಹಿ ಮಾಡುವುದಿಲ್ಲ ಎಂದು ಅವರಿಗೆ ನಿಕಟವಿರುವ ಚೆನ್ನೈ ಮೂಲಗಳು ತಿಳಿಸಿವೆ.

“ಇನ್ನೇನು ಬಿಡುಗಡೆಯಾಗಲಿರುವ ಇಂಡಿಯನ್ ೨ ಸಿನಿಮಾ ಹೊರತುಪಡಿಸಿ ನನ್ನ ಬೇರಾವ ಸಿನಿಮಾಗಳೂ ಬರುವುದಿಲ್ಲ ಕಮಲ್ ನಟನೆಯ ಇಂಡಿಯನ್ ೨ ಇನ್ನೇನು ಬಿಡುಗಡೆಯಾಗಬೇಕಿದೆ . ಅಷ್ಟರಲ್ಲಾಗಲೇ ಇದು ನನ್ನ ಕೊನೆಯ ಸಿನಿಮಾ ಎಂದು ಹೇಳಿ ನಟನೆಗೆ ಗುಡ್ ಬೈ ಹೇಳಿದ್ದಾರೆ ಕಮಲ್ ಹಾಸನ್ . ಇದು ಕಮಲ್ ನಟನೆಯ ಕೊನೆ ಚಿತ್ರ ಅನ್ನೋದು ಅಭಿಮಾನಿಗಳಿಗೆ ಬೇಸರದ ಸಂಗತಿ.ದಕ್ಷಿಣ ಭಾರತದಲ್ಲಿ ಅದ್ದೂರಿ ಸಿನಿಮಾಗಳ ನಿರ್ದೇಶಕ ಎನ್ನಿಸಿಕೊಂಡಿರುವ ಶಂಕರ್  ಈ ಚಿತ್ರವನ್ನ ನಿರ್ದೇಶಿಸಿದ್ದಾರೆ ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ತೆರೆಗೆ ತರುತ್ತಿದ್ದು ಉಳಿದ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ ಎಂದಿದ್ದಾರೆ ದಿಲ್ ರಾಜು ವಕ್ತಾರ.

ತಮಿಳು ನಾಡಿನ ರಾಜಕೀಯದಲ್ಲಿ ಚಿತ್ರರಂಗದಿಂದ ಬಂದು ನಾಯಕರಾಗಿ ಬೆಳುದು , ಮುಖ್ಯ ಮಂತ್ರಿಯಾಗಿ ಆಳಿದವರೇ ಹೆಚ್ಚು . ಅದ್ರಲ್ಲಿ ಮೊದಲಿಗರು ಎಂ ಜಿ ಆರ್ . ತಮಿಳು ಚಿತ್ರರಂಗದ ಖ್ಯಾತ ನಟರಾಗಿದ್ದ ಇವರು ಅಣ್ಣ ದೊರೈ ಅವರ ಮೂಲಕ ರಾಜಕೀಯಕ್ಕೆ ಪ್ರವೇಶಿಸಿ ನಂತ್ರ ತಮಿಳುನಾಡಿನ ಚುಕ್ಕಾಣಿಯನ್ನ ಹಿಡಿದವರು . ನಂತರ ೧೯೭೭ ರಲ್ಲಿ ಮುಖ್ಯ ಮಂತ್ರಿಯಾಗಿ ಆಯ್ಕೆ ಯಾಗಿ ಹತ್ತು ವರ್ಷಗಳಲ್ಲಿ ಮೂರು ಬಾರಿ ಸಿಎಂ ಗದ್ದುಗೆಯಲ್ಲಿ ಕುಳಿತವರು.ಎಂ ಜಿ ಆರ್ ನಂತ್ರ ಅವರ ಪರಮ ಶಿಷ್ಯೆಯಾಗಿದ್ದ ಜಯಲಿತಾ ಮುಖ್ಯಮಂತ್ರಿಯಾಗಿ ತಮಿಳುನಾಡಿನಲ್ಲಿ ಹೊಸ ಅಲೆಯನ್ನ ತಂದವರು . ಹಾಗೆ ನೋಡೋದಾದ್ರೆ ಜಯಲಿಲತಾ ಕೂಡಾ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದವರು . ಚಿತ್ರರಂಗದಲ್ಲಿ ತಮಗಿದ್ದ ವರ್ಚಸ್ಸು ಹಾಗು ಅಭಿಮಾನಿವನ್ನ ಬಳಿಸಿಕೊಂಡು ತಮಿಳುನಾಡಿನ ಸಿಎಂ ಆಗಿ ಮೆರೆದವರು ಜಯಲಿಲತ.

ತಮಿಳುನಾಡಿನ ಸಿಎಂ ಪಟ್ಟಿಯಲ್ಲಿ ಎದ್ದು ಕಾಣುವ ಮತ್ತೊಂದು ಹೆಸರು ಅಂದ್ರೆ ಕರುಣಾ ನಿಧಿ ಇವರು ಕೂಡಾ ಚಿತ್ರರಂಗದವರು ಅನ್ನೋದು ಗಮನಾರ್ಹ . ಆದ್ರೆ ಕರುಣಾನಿಧಿ ತೆರೆಯ ಹಿಂದೆ ಹೆಚ್ಚು ಕೆಲಸ ಮಾಡಿದ್ದಾರೆ . ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ ಚಿತ್ರಕಥೆ ರಚಿಸಿದವರು . ಇವರು ಕೂಡಾ ಜಯಲಿತಾ ಅವರ ವಿರೋಧಿ ಪಕ್ಷದಲ್ಲಿದ್ದು ತಮಿಳು ನಾಡಿನ ಮುಖ್ಯ ಮಂತ್ರಿಯಾಗಿ ಹೆಸರು ಮಾಡಿದವರು. ಅದ್ರಂತೆ ಇತ್ತೀಚಿಗೆ  ತಮಿಳು ರಾಜಕೀಯದಲ್ಲಿ ಜಯಲಿಲತ ಹಾಗು ಕರುಣಾನಿಧಿ ನಿಧನದಿಂದ ರಾಜಕೀಯಕ್ಕೆ ಚಿತ್ರರಂಗದವರು ಇಲ್ಲದಂತೆ ಆಗಿದ್ದ ಕಾಲದಲ್ಲಿ ನಾನು ಸಕ್ರಿಯ ರಾಜಕಾರಣ ಪ್ರವೇಶ ಮಾಡಲು ಇದು ಸಕಾಲ. ಯಾಕೆಂದರೆ, ಇವತ್ತು ಪ್ರತಿಯೊಂದೂ ತಪ್ಪು ಹಾದಿಯಲ್ಲೇ ಸಾಗುತ್ತಿದೆ. ಉತ್ತಮ ಆಡಳಿತದ ಅಗತ್ಯ ನಮಗಿದೆ’ ಎನ್ನುತ್ತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು ಕಮಲ್ ಹಾಸನ್  . ತಮಿಳುನಾಡಿಗೆ ಮಾತ್ರ ಯಾಕೆ ಸೀಮಿತ? ರಾಷ್ಟ್ರಮಟ್ಟದಲ್ಲಿ ಯಾಕಿಲ್ಲ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು, ‘ಪಕ್ಕದ ಮನೆಯನ್ನು ಕ್ಲೀನ್‌ ಮಾಡುವ ಮೊದಲು ನನ್ನ ಮನೆಯನ್ನು ಕ್ಲೀನ್‌ ಮಾಡಬೇಕಿದೆ’ ಎಂದೂ ಮಾರ್ಮಿಕವಾಗಿ ಹೇಳಿ ರಾಜಕೀಯ ಪ್ರವೇಶ ಮಾಡಿದ್ದರು

ಕಮಲ್‌ ಹಾಸನ್‌ ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ತರುವ ಆಶಯ ಹೊಂದಿದ್ದಾರೆ. ‘ತಮಿಳುನಾಡಿನ ರಾಜಕಾರಣ ಬದಲಾಗುವುದ ಸಾಧ್ಯವಿದೆ. ಆ ಬದಲಾವಣೆಯನ್ನು ನಾನು ತರಲು ಇಚ್ಛಿಸುತ್ತೇನೆ. ಅದು ಎಷ್ಟು ನಿಧಾನವಾದರೂ ಪರವಾಗಿಲ್ಲ. ಪ್ರತಿಯೊಂದು ತಪ್ಪಾಗಿ ನಡೆಯುವ ಸಾಧ್ಯತೆಗಳು ಕಾಣುತ್ತಿದೆ. ಉತ್ತಮ ಅಡಳಿತದ ಅಗತ್ಯ ಇದೆ. ತತ್‌ಕ್ಷಣದ ಪರಿಹಾರವನ್ನು ನಾನು ನೀಡುತ್ತೇನೆ ಎಂದು ಪ್ರಾಮಿಸ್‌ ಮಾಡೋಲ್ಲ. ಆದರೆ, ಬದಲಾವಣೆ ಪ್ರಾರಂಭ ಮಾಡುವೆ ಎಂದು ವಚನ ನೀಡುವೆ. ನನ್ನ ಜೀವಮಾನದಲ್ಲೆ ಎಲ್ಲವೂ ಬದಲಾಗುತ್ತೆ ಎಂದು ಹೇಳಲಾರೆ. ಆದರೆ ಸ್ವಚ್ಛತೆಯ ಕೆಲಸವನ್ನು ಇನ್ಯಾರಾದರೂ ಮುಂದುವರಿಸುವರೆಂಬ ಭರವಸೆ ಇದೆ’ ಎಂದು ಖಚಿತವಾಗಿ ಹೇಳುತ್ತಾರೆ.ರಾಜಕೀಯದಿಂದ ಭ್ರಷ್ಟಾಚಾರ ತೊಲಗಬೇಕು ಅಥವಾ ನಾನು ಹೊರ ಹೋಗಬೇಕು. ಆದರೆ, ಎರಡೂ ಒಟ್ಟಿಗೆ ಇರೋದು ಸಾಧ್ಯವಿಲ್ಲ ಎಂದಿದ್ದಾರೆ. ಕಮಲ್‌ ರಾಜಕೀಯ ಪ್ರವೇಶ ತಮಿಳು ನಾಡಿನಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದೆ. 62ರ ಹರೆಯದ ನಟ ಕಮಲ ಹಾಸನ್‌ ತಮಿಳುನಾಡಿನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದು, ತಾವು ಹೊಸ ಪಕ್ಷವೊಂದನ್ನು ಕಟ್ಟುವುದರ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿರುವುದಾಗಿ ಹೇಳಿಕೊಂಡಿದ್ದ ಕಮಲ್

‘ರಾಜಕೀಯದಲ್ಲಿ ನನ್ನ ಐಡಿಯಾಲಜಿಯನ್ನು ಹೊಂದುವ ಅಥವಾ ನನ್ನ ಗುರಿಯನ್ನು ತಲುಪಲು ಸೂಕ್ತ ವೇದಿಕೆ ಒದಗಿಸುವ ಯಾವ ರಾಜಕೀಯ ಪಕ್ಷ ಇದೆ? ಹಾಗಾಗಿ ನಾನು ಹೊಸ ಪಕ್ಷವನ್ನು ಕಟ್ಟುವ ಬಗ್ಗೆ ಆಲೋಚಿಸುತ್ತಿದ್ದ ಕಮಲ್. ತಮ್ಮದೇ ಹೊಸ ಪಕ್ಷ ಕಟ್ಟಿ ದ್ರಾವಿಡರ ನಾಡಿನ ರಾಜಕೀಯ ಪ್ರವೇಶಿಸಿದರು ಈ ಮೂಲಕ ಕಮಲ್‌ ಹಾಸನ್‌ ಅವರ ಹೊಸ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂತು . ತಮಿಳುನಾಡಿನ ರಾಜಕೀಯ ರಾಜಧಾನಿ ಎಂದೇ ಹೆಸರಾದ ಮಧುರೈನಲ್ಲಿ ಕಮಲ್‌ ಹಾಸನ್‌ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದು, “ಮಕ್ಕಳ್‌ ನೀಧಿ ಮಯ್ಯಂ'(ಜನತಾ ನ್ಯಾಯ ಕೇಂದ್ರ) ಎಂಬುದೇ ತಮ್ಮ ಪಕ್ಷದ ಹೆಸರು ಎಂದು ಘೋಷಿಸಿ ಕೊಂಡರು.ರಜನೀಕಾಂತ್. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ.ತನ್ನ ವಿಭಿನ್ನ ಶೈಲಿಯ ನಟನೆಯಿಂದಲೇ ಮನೆಮಾತಾದ ಈ ಕಬಾಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದೇಶದ ಏಕೈಕ ಚಿತ್ರ ನಟ. ಕನ್ನಡ ನಾಡಿನಲ್ಲಿ ಜನಿಸಿ ಕನ್ನಡ ಚಿತ್ರರಂಗದಲ್ಲೇ ಮಿಂಚಿ ನಂತರ ಸಾಹಸಸಿಂಹ ವಿಷ್ಣುವರ್ಧನ್ ಸಲಹೆಯ ಮೇರೆಗೆ ತಮಿಳು ಚಿತ್ರರಂಗ ಪ್ರವೇಶಿಸಿದ ಈ ನಟ ಈಗ ಕೋಟ್ಯಾಂತರ ಅಭಿಮಾನಿಗಳ ಪಾಲಿನ ಹಾಟ್ ಫೇವರೇಟ್…

ಈ ನಟ ಸುಧ್ಧಿಯಲ್ಲಿರುವುದು ರಾಜಕೀಯ ಕಾರಣಕ್ಕಾಗಿ. ಅದೆಷ್ಟೋ ವರ್ಷಗಳಿಂದ ರಜನೀಕಾಂತ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುಧ್ಧಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇನ್ನೇನು ರಜನೀಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಟ್ಟೇ ಬಿಟ್ಟರು ಎನ್ನುವ ಸುದ್ಧಿಯೂ ಪ್ರಸಾರವಾಗುತ್ತಿತ್ತು ಸೂಪರ್‌ಸ್ಟಾ ರ್‌ ರಜನೀಕಾಂತ್‌ ಅವರು ಡಿ.12ರ ತಮ್ಮ ಹುಟ್ಟುಹಬ್ಬದ ದಿನ ರಾಜಕೀಯ ರಂಗವನ್ನು ಪ್ರವೇಶಿಸಲಿದ್ದಾರೆ.ರಜನೀಕಾಂತ್‌ ಎಡ – ಬಲ ಮುಂತಾಗಿ ಯಾವುದೇ ಪಕ್ಷವನ್ನು ಸೇರುವುದಿಲ್ಲ; ಬದಲು ತಮ್ಮದೇ ಪಕ್ಷವನ್ನು ಆರಂಬಿಸಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ತಾನು ರಾಜಕೀಯ ಪ್ರವೇಶಿಸಲಿದ್ದೇನೆ ಎಂಬುದಾಗಿ ರಜನೀಕಾಂತ್‌ ಅವರು ಕಳೆದ ಆಗಸ್ಟ್‌ ತಿಂಗಳಲ್ಲೇ ಹೇಳಿದ್ದರು.

LEAVE A REPLY

Please enter your comment!
Please enter your name here