ಬದಾಮಿಯಲ್ಲಿ ಸ್ಪರ್ದೆಗೆ ಮುಂದಾದ ಸಿಎಂ ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಹೆಚ್.ವೈ ಮೇಟಿ ಫುಲ್ ರಾಂಗ್ ಆಗಿದ್ದಾರೆ.
ಸಿಎಂ ಜಿಲ್ಲೆಗೆ ಬರುವಾಗಲೆ ನನಗೆ ಟಿಕೆಟ್ ತಪ್ಪಿಸೋ ಯತ್ನ ನಡೆಸುತ್ತಿರುವುದು ಯಾಕೆ ಅಂತ ಹೆಚ್.ವೈ.ಮೇಟಿ ಫುಲ್ ಗರಂ ಆಗಿದ್ದಾರೆ.
ನನ್ನ ಟಿಕೆಟ್ ಜವಾಬ್ದಾರಿ ಬಗ್ಗೆ ಸಿಎಂ ಖಚಿತ ಭರವಸೆ ಕೊಡಬೇಕು ಅಂತ ಮೇಟಿ ಪಟ್ಟು ಹಿಡಿದಿದ್ದಾರೆ. ಇತ್ತ ಕಳಂಕಿತರ ಹೆಸರಲ್ಲಿ ಮೇಟಿಗೆ ಬಾಗಲಕೋಟೆ ಟಿಕೆಟ್ ಡೌಟ್ ಎಂದು ಕಾಂಗ್ರೆಸ್ ಮೂಲಗಳಲ್ಲಿ ಸುದ್ದಿ ಹರಿದಾಡ್ತಿದೆ. ಜಿಲ್ಲೆಯಲ್ಲಿ ನಾನು ಸಮುದಾಯದ ಹಿರಿಯ ನಾಯಕ.
ನನಗೆ ಟಿಕೆಟ್ ತಪ್ಪಿದ್ರೆ ಸಿಎಂ ಬದಾಮಿ ಸ್ಪರ್ದೆ ಕಷ್ಟ ಆಗುತ್ತೆ ಅಂತ ಮೇಟಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ…