Home Crime ಬಯಲ ಹೊಲದಲ್ಲಿ ನಡೆದಿತ್ತು ಅವರಿಬ್ಬರ ಸಮ್ಮಿಲನ..! ಹಣಕ್ಕಾಗಿ ಮಗಳನ್ನೇ ಬೆತ್ತಲಾಗಿಸಿದ್ರು ಕಿರಾತಕ ಪೋಷಕರು..! ಆಕೆಯ ತೆಕ್ಕೆಯಲ್ಲಿ...

ಬಯಲ ಹೊಲದಲ್ಲಿ ನಡೆದಿತ್ತು ಅವರಿಬ್ಬರ ಸಮ್ಮಿಲನ..! ಹಣಕ್ಕಾಗಿ ಮಗಳನ್ನೇ ಬೆತ್ತಲಾಗಿಸಿದ್ರು ಕಿರಾತಕ ಪೋಷಕರು..! ಆಕೆಯ ತೆಕ್ಕೆಯಲ್ಲಿ ಸಿಕ್ಕಿಬಿದ್ದವನು ಕಳೆದುಕೊಂಡಿದ್ದ ಸರ್ವಸ್ವ..!

11548
0
SHARE

ಇವತ್ತಿನ ಕಥೆಯ ಹೀರೋ ಈ ಯುವಕ. ಇವನ ಹೆಸರು ಮಂಜುನಾಥ ಏಣಗಿ ಅಂತ. ಬೆಳಗಾವಿ ಜಿಲ್ಲೆಯ ಬೈಲುಹೊಂಗಲದ ಕೊರವಿಕೊಪ್ಪ ಅನ್ನೋಗ್ರಾಮದವನು. ನಿಮಗೆ ಬೈಲು ಹೊಂಗಲ ಅಂದ್ರೆ ಗೊತ್ತಾಗೋದಿಲ್ಲ ಅಂತ ಅನ್ಸುತ್ತೆ. ವೀರ ರಾಣಿ ಕಿತ್ತೂರು ಚೆನ್ನಮ್ಮನ ನಾಡು ಅಂದ್ರೆ ಬೇಗ ಅರ್ಥವಾಗುತ್ತೆ. ಇವತ್ತು ಈ ವೀರ ನಾಡಿನ ಯುವಕನೊಬ್ಬ ಮೋಸ ಪ್ರೀತಿಯೊಂದನ್ನ ನಂಬಿ ಕೆಟ್ಟು ತನ್ನ ಜೀವವನ್ನ ತೆಗೆದುಕೊಂಡ ಕಥೆಯ ಸಂಪೂರ್ಣ ವಿವರವನ್ನ ಹೇಳ್ತೀವಿ. ಈ ಮಂಜುನಾಥ್ ಕೊರವಿಕೊಪ್ಪದ ರೈತ. ತನಗಿರೋ 3ಎಕರೆ ಜಮೀನಿನಲ್ಲಿ ಕೃಷಿ ಮಾಡ್ತಾನೆ. ಅಲ್ಲದೆ ಒಂದಿಷ್ಟು ಜಮೀನನ್ನ ಲೀಸ್ ಗೆ ತೆಗೆದುಕೊಂಡು ಅಲ್ಲೂ ಕೃಷಿ ಮಾಡ್ತಿದ್ದ. ಒಲ್ಳೆ ನೀರಾವರಿ ಜಮೀನು ಆಗಿದ್ರಿಂದ ಮಂಜುನಾಥ್ ಮಣ್ಣಿನಲ್ಲಿ ಚಿನ್ನ ತೆಗೆಯೋದನ್ನ ಕರಗತ ಮಾಡಿಕೊಂಡಿದ್ದ.ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಈ ಮಂಜುನಾಥ್ ಯಶಸ್ವಿ ಕೃಷಿಕ.

ಇವನ ಮನೆಯವರು ಸಹ ಕೃಷಿ ವೃತ್ತಿಯನ್ನೇ ಮಾಡ್ಕೊಂಡಿದ್ದಾರೆ. ಹೀಗಾಗಿ ಕೃಷಿ ಆತನಿಗೆ ರಕ್ತಗತವಾಗಿ ಬಂದಿದೆ. ಇದೇ ಮಂಜುನಾಥ್ ಏಣಗಿ ಪ್ರೀತಿಯ ಬೆಂಕಿಯಲ್ಲಿ ಬಿದ್ದು ಹೆಣವಾಗಿದ್ದಾನೆ. ನಾನೊಬ್ಬ ಯಶಸ್ವಿ ಕೃಷಿಕನಾಗಬೇಕು ಅಂತ ಕನಸುಕಟ್ಟಿಕೊಂಡಿದ್ದವನು. ಈಗ ತನ್ನದೇ ಹೊಲದಲ್ಲಿ ಗೋರಿಯಾಗಿದ್ದಾನೆ. ಮಂಜುನಾಥ್ ಗೆ ಮಣ್ಣು ಕೈ ಹಿಡಿದಿತ್ತು. ಅವನು ಏನೇ ಹೊಲದಲ್ಲಿ ಬಿತ್ತಿದ್ರು ಅದು ಚಿನ್ನದ ರೂಪದಲ್ಲಿ ಅವನ ಕೈ ಸೇರ್ತಿತ್ತು. ಇದೇ ಊರಿನಲ್ಲಿ ಗೂಳಪ್ಪ ಅನ್ನೋರ ಕುಟುಂಬವು ಇದೆ. ಈ ಫ್ಯಾಮಿಲಿಗೆ ಮಂಜುನಾಥ್ ತೀರಾ ಹತ್ತಿರದವನಾಗಿದ್ದ. ಅಲ್ಲದೆ ಗೂಳಪ್ಪನ ಜೊತೆ ಮಂಜುನಾಥ್ ನಿಗೆ ಸ್ನೇಹವಿತ್ತು. ಮಂಜುನಾಥ್ ಕೈಯಲ್ಲಿ ಒಂದಿಷ್ಟು ದುಡ್ಡು ಓಡಾಡ್ತಿದ್ದರಿಂದ ಊರಿನಲ್ಲಿ ದೊಡ್ಡ ಮನುಷ್ಯರ ಹಾಗೆ ಓಡಾಡಿಕೊಂಡಿದ್ದ. ಪಾರ್ಟಿ ಗೀರ್ಟಿ ಅಂತ ಮಾಡಿಕೊಂಡು ತನ್ನ ಹೊಲದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡ್ಕೊಂಡು ನೆಮ್ಮದಿಯಾಗಿದ್ದ.

ಮಂಜುನಾಥ್ ಮತ್ತು ಗೂಳಪ್ಪರ ಸ್ನೇಹ ಚೆನ್ನಾಗಿದ್ದಿದ್ರಿಂದ ಆಗಾಗ ಅವರ ಮನೆಗೂ ಮಂಜು ಹೋಗಿ ಬರ್ತಿದ್ದ. ಈಗಲೇ ನೋಡಿ ಮಂಜುನಾಥನ ಲೈಫ್ ಹಾಳಾಗೋದಕ್ಕೆ ಶುರುವಾಗಿದ್ದು. ಆ ಮನೆಯಲ್ಲಿ 17ವರ್ಷದ ಹುಡುಗಿಯೊಬ್ಬಳು ಇದ್ಲು. ಮಂಜುನಾಥ ಆಗಾಗ ಮನೆ ಹತ್ತಿರ ಹೋಗಿ ಬರ್ತಿದ್ದರಿಂದ ಆತನಿಗೆ ಆ ಹುಡುಗಿಯ ಮೇಲೆ ಲವ್ ಆಗಿತ್ತು. ಆಕೆ ಕೂಡಾ ಇವನನ್ನ ಹಚ್ಚಿಕೊಂಡಿದ್ಲು. ಇಬ್ಬರು ಕಣ್ಣಲ್ಲಿ ಪ್ರೀತಿಯನ್ನ ಶೇರ್ ಮಾಡ್ಕೊಂಡು ಹುಚ್ಚು ಲವ್ ಅನ್ನೋ ಮೋಹದಲ್ಲಿ ಸಿಲುಕಿಬಿಟ್ಟಿದ್ರು. ಆಗಾಗ ಮಂಜನು ಅಲ್ಲಿಗೆ ಹೋಗ್ತಿದ್ದ ಹುಡುಗಿಯು ಅಲ್ಲಿ ಸಿಕ್ತಿದ್ಲು. ಒಂದಿಷ್ಟು ಮಾತುಕತೆ ಹರಟೆ ಎಲ್ಲಾ ಮಾಡ್ಕೊಂಡು ಚೆನ್ನಾಗಿಯೇ ಇದ್ರು. ಈ ಅಪ್ರಾಪ್ತೆ ಬೈಲುಹೊಂಗಲದ ಖಾಸಗಿ ಕಾಲೇಜ್ ಒಂದರಲ್ಲಿ ಫಸ್ಟ್ ಪಿಯುಸಿ ಓದ್ತಿದ್ಲು. ಆಗಾಗ ಮಂಜನು ಅಲ್ಲಿಗೆ ಹೋಗಿ ಆಕೆಯನ್ನ ಮಾತನಾಡಿಸಿಕೊಂಡು ಬರ್ತಿದ್ದ. ಹೀಗೆ ಇವರಿಬ್ಬರ ಪ್ರೀತಿಯ ದೋಣಿ ಸಾಗೋದಕ್ಕೆ ಶುರುವಾಗಿತ್ತು.

ಮಂಜುನಾಥ್ ಗೆ ಆ ಹುಡುಗಿ ಅಂದ್ರೆ ತುಂಬಾ ಪ್ರೀತಿ. ಹೀಗಾಗಿ ಆಕೆ ಏನು ಕೇಳಿದ್ರು ಇಲ್ಲ ಅಂತ ಹೇಳ್ತಿರಲಿಲ್ಲ. ಆಕೆ ಮನಸ್ಸಲ್ಲಿ ಅಂದುಕೊಂಡಿದ್ದನ್ನ ತಂದು ಆಕೆಯ ಎದುರು ಇಡ್ತಿದ್ದ. ಎಷ್ಟಂದರೂ ಮುಂದೆ ಮದುವೆಯಾಗೋ ಹುಡುಗಿ, ಹೀಗಾಗಿ ಆಕೆ ಕೇಳಿದ್ದನ್ನ ಇಲ್ಲ ಅನ್ನಬಾರದು ಅಂತ ಆತ ಅಂದುಕೊಂಡಿದ್ದ. ಎಲ್ಲವೂ ಒಂದು ಹಂತದವರೆಗೆ ಚೆನ್ನಾಗಿಯೇ ಇತ್ತು. ಆದ್ರೆ ಕೆಲವೊಮ್ಮೆ ಟೈಂ ಇದೆಯಲ್ಲ ಅದು ಆಟವಾಡೋದಕ್ಕೆ ಶುರುಮಾಡಿಬಿಡುತ್ತೆ. ಎಲ್ಲವೂ ಚೆನ್ನಾಗಿದೆ ಅಂತ ಅಂದುಕೊಳ್ಳವಾಗಲೇ ಏನಾದರೂ ಒಂದು ಯಡವಟ್ಟಾಗುತ್ತೆ. ಇದೇ ರೀತಿ ಮಂಜುನಾಥನ ಜೀವನದಲ್ಲೂ ಆಗಿತ್ತು. ಮಂಜುನಾಥ್ ಕೃಷಿಯ ಜೊತೆಗೆ ತನ್ನ ಪ್ರೀತಿಗೂ ನೀರು ಗೊಬ್ಬರ ಹಾಕಿ ಬೆಳೆಸ್ತಿದ್ದ. ಆದ್ರೆ ಅದ್ಯಾಕೋ ಗೊಬ್ಬರ ಜಾಸ್ತಿನೇ ಆಯ್ತು ಅಂತ ಕಾಣುತ್ತೆ ಅದಕ್ಕೆ ಅವನ ಪ್ರೀತಿಯ ಬೆಳೆ ಸುಟ್ಟು ಹೋಗೋದಕ್ಕೆ ಶುರುವಾಗಿತ್ತು.

ಮಂಜುನಾಥ್ ಇನ್ನೇನು ನನ್ನ ಲೈಫ್ ನಲ್ಲಿ ಎಲ್ಲಾ ಸರಿಯಾಗ್ತಿದೆ. ಎಲ್ಲವೂ ನಾನು ಅಂದುಕೊಂಡ ಹಾಗೆಯೇ ನಡೆಯುತ್ತಿದೆ ಇನ್ನು ನನ್ನ ಲೈಫ್ ನಲ್ಲಿ ನಾನು ಒಂದು ಹಂತಕ್ಕೆ ಹೋಗಿ ಸೇರ್ತಿನಿ. ಆಗ ಆಕೆಯ ಮನೆಯವರನ್ನ ಒಪ್ಪಿಸಿ ಮದುವೆಯಾದ್ರೆ ಆಯ್ತು ಅಂತ ಅಂದುಕೊಂಡಿದ್ದ. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಆ ಹುಡುಗಿ ಪ್ರೀತಿ ಮಾಡ್ತಿದ್ದಾಳೆ ಅಂತ ಇವನು ಅಂದುಕೊಂಡಿದ್ರೆ, ಆಕೆಯನ್ನ ಇನ್ನೇನು ಪ್ಲಾನ್ ಆಗಿತ್ತು. ಸಣ್ಣ ವಯಸ್ಸಲ್ಲಿ ಆಕೆಯ ಜೀವನ ಇನ್ನೊಂದು ದಿಕ್ಕಿನತ್ತ ಹೊರಟಿತ್ತು. ಮನೆಯಲ್ಲಿ ವಯಸ್ಸಿಗೆ ಬಂದ ಮಗಳು ಏನು ಮಾಡ್ತಿದ್ದಾಳೆ ಅನ್ನೋದು ಅವರಿಗೂ ಗೊತ್ತಿದ್ದು ಸುಮ್ಮನಿದ್ರು ಅಂದ್ರೆ ಅಲ್ಲಿ ಬೇರೆಯೇನೋ ನಡೆಯುತ್ತಿದೆ ಅನ್ನೋದು ಗೊತ್ತಿರಬೇಕು. ಎಲ್ಲಾ ಗೊತ್ತಿದ್ದು ಸುಮ್ಮನಿದ್ರೆ ಅದು ಸಮ್ಮತಿಯ ಲಕ್ಷಣವಲ್ಲ ಅಲ್ಲಿ ಬೇರೆಯದ್ದೇ ತಂತ್ರಗಾರಿಕೆ ನಡೆಯುತ್ತೆ ಅನ್ನೋದು ಪಾಪಾ ಮಂಜುನಾಥನಿಗೆ ಗೊತ್ತೇ ಇರಲಿಲ್ಲ.

ಮಂಜುನಾಥ್ ಮತ್ತು ಈ ಹುಡುಗಿಯ ಪ್ರೀತಿ ಬಹಳ ಜೋರಾಗಿಯೇ ನಡೆಯುತ್ತಿತ್ತು. ಅಲ್ಲದೆ ಆಕೆ ಕೂಡಾ ಇವನೇ ನನ್ನ ಗಂಡ ಅನ್ನೋ ಸಲುಗೆಯಲ್ಲಿ ತನಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನ ಆತನಿಂದ ಕೇಳಿ ಪಡೆಯುತ್ತಿದ್ಲು. ಅದ್ರಲ್ಲೂ ಇಬ್ಬರು ವಯಸ್ಸಿಗೆ ಬಂದವರು ಪ್ರೀತಿ ಪ್ರೇಮ ಅಂತ ಕೈ ಕೈ ಹಿಡಿದು ಓಡಾಡಿದ ಮೇಲೆ ಮೈಗೆ ಹತ್ತಿದ ಶಾಖ ಸುಮ್ಮನಿರುತ್ತಾ ಹೇಳಿ. ಮೈ ಮೈ ಹತ್ತಿಸಿ ಓಡಾಡುವಾಗ ಇಬ್ಬರ ಮೈಯೊಳಗೆ ಇರುವೆ ಬಿಟ್ಟ ಹಾಗೆ ಆಗಿದೆ. ಇಲ್ಲೇ ನೋಡಿ ಯಡವಟ್ಟಾಗಿದ್ದು. ಮೈಯೊಳೆ ಮುಲ ಮುಲ ಅಂತ ಅನ್ನದೇ ಇದ್ದಿದ್ರೆ ಮಂಜುನಾಥ ಬದುಕ್ತಿದ್ದ. ಏನು ಮಾಡೋದು ಉಪ್ಪ ಖಾರ ತಿಂದ ಮೈ ಆಕೆ ಬೇರೆ ಜೊತೆಗಿದ್ದಾಳೆ ಅಂದ ಮೇಲೆ ಮೈ ಮರೆಯೋದು ಸಹಜವೆ ಅಲ್ವಾ.

ಹೀಗೆ ಅಲ್ಲಿ ಇಲ್ಲಿ ಅಂತ ಮೈಕೈ ಅಂಟಿಕೊಂಡು ಕೂರ್ತಿದ್ದವರು ಈಗ ಮೊದಲ ಅನುಭವಕ್ಕಾಗಿ ಇಬ್ಬರು ಕಾದಿದ್ರು. ಅದಕ್ಕಾಗಿ ಇಬ್ಬರು ಮಾತನಾಡಿಕೊಂಡಿದ್ರು. ಒಂದು ದಿನ ಇದ್ದಕ್ಕಿದ್ದ ಹಾಗೆ ಆ ಹುಡುಗಿ ಮಂಜುನಾಥ್ ಗೆ ಫೋನ್ ಮಾಡಿ ಇವತ್ತು ನಾವಿಬ್ಬರು ಸೇರಿ ವ್ಯವಸಾಯ ಮಾಡೋಣ ಬಾ ಅಂತ ಕರೆದಿದ್ದಾಳೆ. ಅಯ್ಯೋ ನನ್ನ ಹುಡುಗಿ ನನ್ನನ್ನ ಕರೆಯುತ್ತಿದ್ದಾಳೆ ಅಂತ ಇವನು ರೋಮಾಂಚಿತನಾಗಿ ಬಿಟ್ಟಿದ್ದ. ಇವತ್ತು ನಮ್ಮಿಬ್ಬರಿಗೂ ಸ್ವರ್ಗ ಮೂರೇ ಗೇಣು ಅಂತ ಅವನು ಅಂದುಕೊಂಡಿದ್ದ. ಹೀಗಾಗಿ ಆತ ಅವಳು ಕರೆಯುತ್ತಿದ್ದ ಹಾಗೆ ಕುದುರೆಯ ಹಾಗೆ ಛಂಗನೆ ನೆಗೆದು ಅವರ ಹೊಲದ ಕಡೆಗೆ ಓಡಿದ್ದ. ಅಲ್ಲಿಗೆ ಇವನಿಗೋಸ್ಕರ ಪ್ರಿಯತಮೆ ಕಾದು ಕೂತಿದ್ಲು.

ಮಂಜುನಾಥ್ ಹೊಲಕ್ಕೆ ಹೋಗ್ತಿದ್ದ ಹಾಗೆ ನಾವು ಓಪನ್ ಪ್ಲೇಸ್ ನಲ್ಲಿದ್ದೀವಿ ಅನ್ನೋದನ್ನ ಮರೆತು ಇಬ್ಬರು ತಮ್ಮ ಕೆಲಸ ಶುರು ಹಚ್ಚಿಕೊಂಡಿದ್ರು. ಆದ್ರೆ ಇಲ್ಲಿ ನಾನು ಟ್ರ್ಯಾಪ್ ಆಗ್ತಿದ್ದೀನಿ ಅಂತ ಮಂಜುನಾಥ್ ಗೆ ಗೊತ್ತೇ ಇರಲಿಲ್ಲ. ಯಾಕಂದ್ರೆ ಅವನಿಗೆ ತನ್ನ ಹುಡುಗಿ ಇವತ್ತು ಸ್ವರ್ಗ ತೋರಿಸ್ತಾಳೆ ಅಂತ ಬಂದಿದ್ದ. ಆದ್ರೆ ಅಲ್ಲಿ ನರಕ ದರ್ಶನವಾಗುತ್ತೆ ಅಂತ ಅವನು ಅಂದುಕೊಂಡಿರಲಿಲ್ಲ. ಇಬ್ಬರು ಆ ಬಯಲು ಹೊಲದಲ್ಲಿ ತಮ್ಮನ್ನ ತಾವು ಮರೆತು ಬೆತ್ತಲಾಗಿದ್ರು. ಮದವೇರಿದ ಮನಸ್ಸು, ಹುಚ್ಚೆಬ್ಬಿಸೋ ವಯಸ್ಸು ಅವರಿಬ್ಬರಿಗೆ ಅಮಲು ಹತ್ತಿಸಿಬಿಟ್ಟಿತ್ತು. ಇಬ್ಬರು ಬೆತ್ತಲಾಗಿ ಒಬ್ಬರಿಗೊಬ್ಬರು ಸೇರ್ತಿದ್ದ ಹಾಗೆ ಅಲ್ಲಿ ಮಂಜುನಾತ್ ಕನಸಿನಲ್ಲಿಯೂ ಅಂದುಕೊಳ್ಳದ ಘಟನೆಯೊಂದು ನಡೆದು ಹೋಗಿತ್ತು.

ಬರಿ ಮೈನಲ್ಲಿದ್ದ ಮಂಜುನಾಥ್ ನನ್ನ ಯಾರೋ ಹಿಂದಿನಿಂದ ಹಿಡಿದು ಎಬ್ಬಿಸಿದ್ರು. ಯಾರು ಅಂತ ನೋಡಿದ್ರೆ ಅದು ಆ ಹುಡುಗಿಯ ಪೋಷಕರು. ಅಲ್ಲಿತನಕ ಸೂರ್ಯನ ಹಾಗೆ ಕಾವೇರಿಸಿಕೊಂಡಿದ್ದ ಮಂಜುನಾಥ ಶಾಖವೆಲ್ಲ ಇಳಿದು ಹೋಗಿತ್ತು. ಅಲ್ಲಿ ಹುಡುಗಿಯ ಅಪ್ಪ ಗೂಳಪ್ಪ ಹೋಳಿ. ಅವರ ಸಂಬಂಧಿಗಳಾದ ನಾಗಪ್ಪ ಹೋಳಿ,  ವೀರಭದ್ರಪ್ಪ ಹೋಳಿ ಮತ್ತು  ಮಲ್ಲಿಕಾರ್ಜುನ್ ಹೋಳಿ ಬಂದು ನಿಂತಿದ್ರು. ಬಂದವರೇ ಏಕಾಏಕಿ ಮಂಜುನಾಥಗೆ ಹಲ್ಲೆ ನಡೆಸಿದ್ದಾರೆ. ಏನು ಗೊತ್ತಿಲ್ಲದ ನಮ್ಮ ಹುಡುಗಿಯ ತಲೆತಿರುಗಿಸಿ ಈಗ ಅವಳ ಜೊತೆ ಮಲಕ್ಕೊಂಡಿದ್ದೀಯಾ ಅಂತ ಚೆನ್ನಾಗಿ ಬಾರಿಸಿದ್ದಾರೆ. ಹುಡುಗಿಯ ಅಪ್ಪನ ಕೈಯಲ್ಲೇ ಹೀಗೆ ಸಿಕ್ಕಿಬಿದ್ದ ಮೇಲೆ ಯಾವ ಗಂಡಸು ತಾನೇ ಧ್ವನಿ ಏರಿಸಿ ಮಾತನಾಡ್ತಾನೆ ಹೇಳಿ.

ಹೀಗೆ ಮಂಜುನಾಥ್ ಕೂಡಾ ಅವ್ರ ಕೊಟ್ಟ ಒದೆಯನ್ನ ತಿಂದು ತಲೆ ತಗ್ಗಿಸಿ ನಿಂತಿದ್ದ. ಅಲ್ಲದೆ ಹುಡುಗಿ ನನ್ನದೇನು ತಪ್ಪಿಲ್ಲ ಇವನೇ ಮಾಡಿದ್ದ ಅನ್ನೋ ಹಾಗೆ ಪೋಷಕರ ಬಳಿ ನಿಂತಿದ್ಲು. ಅಂದ್ರೆ ಇವರೆಲ್ಲಾ ಸೇರಿ ಪಕ್ಕಾ ಪ್ಲಾನ್ ಮಾಡ್ಕೊಂಡು ಆಕೆಯನ್ನ ಮುಂದೆ ಕಳುಹಿಸಿದ್ರು. ಆಗ ಎಲ್ಲಾ ಸೇರಿ ನಮಗೆ 10ಲಕ್ಷ ಹಣ ಕೊಡು ಅಂತ ಕೇಳಿದ್ದಾರೆ. ಇಲ್ಲದಿದ್ರೆ ಈ ವಿಷಯ ಊರಿಗೆ ತಿಳಿಸ್ತೀವಿ ಅಂತ ಹೆದರಿಸಿದ್ದಾರೆ. ಅದಕ್ಕೆ ಹೆದರಿಸಿ ಮಂಜು  7ಲಕ್ಷ ಕೊಡೋದಕ್ಕೆ ಒಪ್ಪಿದ್ದ.ನಂತ್ರ ಅಲ್ಲಿಂದ ಮಂಜುನಾಥ್ ವಾಪಸ್ ಮನೆಗೆ ಬಂದು ಅವರು ಹೇಳಿದ ಹಾಗೆ 7 ಲಕ್ಷ ಹಣ ಕೊಟ್ಟು ತನ್ನ ಪಾಡಿಗೆ ತಾನು ಇದ್ದ. ಇನ್ನು ಆ ಹುಡುಗಿ ಸಹವಾಸ ಬೇಡ ಅಂತ ಅಂದುಕೊಂಡಿದ್ದ. ಯಾಕಂದ್ರೆ ಒಂದು ಸಾರಿ ಸ್ವರ್ಗ ನೋಡೋದಕ್ಕೆ ಹೋಗಿದ್ದಕ್ಕೆ  7 ಲಕ್ಷ ಕಳ್ಕೊಂಡೆ ಅಂತ ಹೆದರಿಕೊಂಡು ಸುಮ್ಮನಾಗಿದ್ದ. ಅಲ್ಲದೆ ಆ ಹಣವನ್ನ ಹ್ಯಾಗೆ ವಾಪಸ್ ಮನೆಯಲ್ಲಿಡೋದು ಅನ್ನೋದು ಅವನ ಚಿಂತೆಯಾಗಿತ್ತು. ಯಾಕಂದ್ರೆ ಬೆಳೆ ಮಾರಾಟ ಮಾಡಿದ್ದ ಹಣವನ್ನೇ ಆತ ತಂದು ಗೂಳಪ್ಪನಿಗೆ ನೀಡಿದ್ದ. ಹೀಗಾಗಿ ಈಗ ಹ್ಯಾಗೆ ಇವರಿಗೆ ಹಣ ವಾಪಸ್ ಕೊಡೋದು ಅನ್ನೋದು ಅವನಿಗೆ ಟೆನ್ ಷನ್ ಶುರುವಾಗಿತ್ತು.

7ಲಕ್ಷ ಹಣ ಕೊಟ್ಟ ಮೇಲೆ ಗೂಳುಪ್ಪ ಮತ್ತವನ ಫ್ಯಾಮಿಲಿ ಸುಮ್ಮನಿರುತ್ತೆ ಅಂತ ಮಂಜುನಾಥ್ ಭಾವಿಸಿದ್ದ. ಆದ್ರೆ ಆತ ತನ್ನ ಮಗಳ ಸೌಂದರ್ಯವನ್ನ ಸವಿದವನ ಹತ್ತಿರ ಇನ್ನಷ್ಟು ಹಣ ಕೀಳೋದಕ್ಕೆ ಸ್ಕೆಚ್ ಹಾಕ್ಕೊಂಡಿದ್ದ. ಕೆಚ್ಚಲಲ್ಲಿ ಹಾಲು ಇರೋವಾಗ್ಲೇ ಕರ್ಕೊಂಡು ಬಿಡಬೇಕು ಅಂತ ಅವನು ಅಂದುಕೊಂಡು ಮತ್ತೊಮ್ಮೆ ಮಂಜುನಾಥ್ ಏಕಾಂಗಿಯಾಗಿ ಸಿಕ್ಕಾಗ ಅವನ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ ಇನ್ನು 3ಲಕ್ಷ ಹಣ ಕೊಡಲಿಲ್ಲ ಅಂದ್ರೆ ನಿಮ್ಮ ಅಣ್ಣನನ್ನ ಕೊಲೆ ಮಾಡ್ತೀವಿ ಅಂತ ಬೆದರಿಕೆ ಹಾಕಿದದ್ರು.ಹೀಗೆ ಅದ್ಯಾವಾಗ ಅಣ್ಣ ಶಿವಾನಂದನನ್ನ ಕೊಲೆ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ರೋ ಆಗ ಮಂಜುನಾಥ ನಡುಗಿ ಹೋಗಿದ್ದ. ಈ ಗೂಳಪ್ಪ ಮತ್ತವನ ಫ್ಯಾಮಿಲಿ ಮೊದಲೇ ಸರಿಯಿಲ್ಲ. ಅವ್ರು ಹಣಕ್ಕಾಗಿ ಏನು ಮಾಡೋದಕ್ಕೂ ಹೇಸೋದಿಲ್ಲ. ಇಂಥವರು ನಮ್ಮ ಅಣ್ಣನನ್ನ ಕೊಂದರು ಕೊಲ್ಲಬಹುದು ಅಂತ ಆತಂಕಗೊಂಡಿದ್ದ.

ಮಂಜುನಾಥ್ ಗೆ ಅದ್ಯಾಕೆ ನಾನು ಆ ಹುಡುಗಿಯ ಸಹವಾಸ ಮಾಡಿದೆ ಅಂತ ಅನಿಸಿಬಿಟ್ಟಿತ್ತು. ಯಾಕಂದ್ರೆ ಅವನು ಅದಾಗ್ಲೇ  ಆಕೆಯಿಂದ ಸಾಕಷ್ಟು ಲಾಸ್ ಮಾಡ್ಕೊಂಡಿದ್ದ. ಅವಳು ನಿಜವಾಗ್ಲೂ ನನ್ನನ್ನ ಪ್ರೀತಿಸ್ತಿದ್ದಾಳೆ. ಅವನು ಮದುವೆಯಾಗ್ತಾಳೆ ಅಂತ ಅವನು ಆಕೆಯ ಜೊತೆ ಅವತ್ತು ಬೆತ್ತಲಾಗಿದ್ದ. ಆದ್ರೆ ಆಕೆಯ ಮತ್ತು ಆಕೆಯ ಮನೆಯವರು ಹಣಕ್ಕಾಗಿ ಈ ರೀತಿ ಪ್ಲಾನ್ ಮಾಡಿದ್ದಾರೆ ಅನ್ನೋದು ಆತನಿಗೆ ಗೊತ್ತೇ ಆಗಲಿಲ್ಲ. ಹೀಗಾಗಿ ಇನ್ನು ಇವರ ಸಹವಾಸ ಬೇಡ ಅಂತ ಇದ್ದ. ಆದ್ರೆ ಅವರು ಮಾತ್ರ ಇನ್ನು ಮೂರು ಲಕ್ಷ ಹಣ ಕೊಟ್ಟಿಲ್ಲ ಅಂದ್ರೆ ಅಣ್ಣನನ್ನ ಕೊಲೆ ಮಾಡ್ತೀವಿ ಅಂತ ಹೆದರಿಸಿ ಮತ್ತೆ ಅವನಲ್ಲಿ ದಿಗಿಲು ಹುಟ್ಟಿಸಿದ್ರು.

ಒಂದು ಕಡೆ 7ಲಕ್ಷ ಹಣ ಬೇರೆ ಕಳ್ಕೊಂಡಿದ್ದ ಮಂಜುನಾಥ್ ಈ ಸಾರಿ ದೀಪಾವಳಿ ಹಬ್ಬದಲ್ಲಿ ಜೂಜಾಡಿ ಆ ಹಣವನ್ನ ವಾಪಸ್ ಮನೆಯಲ್ಲಿ ತಂದು ಇಡೋದಕ್ಕೆ ಯೋಚಿಸಿದ್ದ. ಕಳೆದ ವರ್ಷವೇ ಜೂಜಾಡೋದಕ್ಕೆ ಹೋಗಿ 1ಲಕ್ಷ ಸಾಲ ಮಾಡಿದ್ದ. ಈ ಬಾರಿ 7 ಲಕ್ಷ ಕಳ್ಕೊಂಡಿದ್ರಿಂದ ಜೂಜಾಡಿ ಹಣ ಸಂಪಾದನೆ ಮಾಡಬೇಕು ಅಂತ ಅವನು ಯೋಚನೆ ಮಾಡಿದ್ದ. ಹೀಗೆರೋವಾಗ ಮತ್ತೆ 3ಲಕ್ಷ ಹಣ ತಂದು ಕೊಡು ಅಂದಿದ್ದು ಅವನಿಗೆ ಏನು ಮಾಡಬೇಕು ಅಂತ ಗೊತ್ತೇ ಆಗದ ಹಾಗೆ ಮಾಡಿತ್ತು. ಹೀಗಾಗಿ ತನಗಾಗಿರೋ ಅನ್ಯಾಯವನ್ನ ವೀಡಿಯೋ ಮಾಡಿ ಅದನ್ನ ವಾಟ್ಸಾಪ್ ನಲ್ಲಿ ಎಲ್ಲರಿಗೂ ಶೇರ್ ಮಾಡಿದ್ದ. ಅಷ್ಟೇ ಅಲ್ಲದೆ ನನ್ನ ಸಾವಿಗೆ ಈ ಮೂವರೇ ಕಾರಣ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯನ್ನ ಕೊಡಿಸಿ ಅಂತ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದ.ಮಂಜುನಾಥ್ ತಾನೊಬ್ಬ ಯಶಸ್ವಿ ಕೃಷಿಕನಾಗಿ ನಾಲ್ಕು ಕಾಸು ಸಂಪಾದನೆ ಮಾಡಬೇಕು ಅನ್ನೋ ಬಯಕೆ ಇಟ್ಕೊಂಡಿದ್ದ. ಅಲ್ಲದೆ ಒಂದೊಳ್ಳೆ ಬದುಕು ಕಟ್ಟಿಕೊಳ್ಳಬೇಕು ಅಂತಾನು ಅಂದುಕೊಂಡಿದ್ದ. ಆದ್ರೆ ವಿಧಿಯಾಟದ ಮುಂದೆ ಆತ ಸೋತು ಹೋಗಿದ್ದಾನೆ.

LEAVE A REPLY

Please enter your comment!
Please enter your name here